ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಕಾಂತರಾ ಚಾಪ್ಟರ್ 1 ಫಸ್ಟ್ ಡೇ ಫಸ್ಟ್ ಶೋ ಆರಂಭಗೊಂಡಿದೆ. ರಾಜ್ಯಾದ್ಯಂತ ಬೆಳಗಿನ ಜಾವವೇ ಶೋ ಆರಂಭಗೊಂಡಿದೆ. ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳಲ್ಲಿ ಒಂದು ವಾರಕ್ಕೆ ಮುಂಚೆಯೇ ಜನರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದರು. ಹಾಗಾಗಿ ಕಾಂತಾರ ಚಾಪ್ಟರ್ 1 ಪ್ರದರ್ಶನ ಕಾಣುತ್ತಿರುವ ಥಿಯೇಟರ್ ಮುಂದೆ ಹೌಸ್ ಫುಲ್ ಪ್ರದರ್ಶನ ಫಲಕಗಳು ಕಾಣುತ್ತಿವೆ.

12:06 AM (IST) Oct 03
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಕೆಲವರು ಜಗಳ ಆಡಿದರೆ ಮಾತ್ರ ಇಲ್ಲಿ ಉಳಿಯುತ್ತೇನೆ ಎಂದು ನಂಬಿಕೊಂಡು ಬಂದಹಾಗಿದೆ. ಕೆಲವರು ಫ್ಲರ್ಟ್ ಮಾಡಬೇಕು ಅಂತ ಅಂದುಕೊಂಡರೆ, ಮಲ್ಲಮ್ಮ ಜೊತೆಗಿದ್ದರೆ ನಾವು ಕ್ಯಾಮರಾ ಕಣ್ಣಿಗೆ ಬೀಳ್ತೀವಿ ಅಂದುಕೊಂಡಿದ್ದಾರೆ. ಹೀಗಿರುವಾಗ ಓರ್ವ ನಟಿ ಮಾತ್ರ ಎಲ್ಲಿಯೂ ಕಾಣುತ್ತಿಲ್ಲ.
11:41 PM (IST) Oct 02
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ನಾಲ್ಕನೇ ದಿನಕ್ಕೆ ದೊಡ್ಡ ಜಗಳ ಆಗಿದೆ. ವಿಷಯ ಸಣ್ಣದೇ ಆಗಿರಲಿ, ಎಲ್ಲರೂ ಜಗಳ ಆಡುತ್ತಿದ್ದಾರೆ. ಈ ದಿನ ಯಾಕೆ, ಯಾರೆಲ್ಲ ಜಗಳ ಆಡಿಕೊಂಡರು?
10:56 PM (IST) Oct 02
10:29 PM (IST) Oct 02
10:13 PM (IST) Oct 02
ಹಾವೇರಿಯ ಚಿತ್ರಮಂದಿರದಲ್ಲಿ 'ಕಾಂತಾರ: ಚಾಪ್ಟರ್ 1' ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರು, ರಿಷಬ್ ಶೆಟ್ಟಿಯವರ ದೈವದ ದೃಶ್ಯದ ವೇಳೆ ಮೈಮೇಲೆ ದೇವರು ಬಂದಂತೆ ವರ್ತಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿತ್ರದ ತೀವ್ರ ಭಾವನಾತ್ಮಕ ಪ್ರಭಾವವನ್ನು ತೋರಿಸಿದೆ
09:40 PM (IST) Oct 02
ವಿಜಯಪುರದಲ್ಲಿ ಹತ್ಯೆಯಾದ ಭೀಮನಗೌಡ ಬಿರಾದಾರ್ ಅವರ ಪುತ್ರನನ್ನು, ಹತ್ಯೆಯ ಆರೋಪಿಯೇ ಅಪಹರಿಸಲು ಯತ್ನಿಸಿದ್ದಾನೆ. ಬನ್ನಿ ಕೊಡುವ ನೆಪದಲ್ಲಿ ಮನೆಗೆ ಬಂದ ಆರೋಪಿ ಸುನೀಲ್, 'ನಿನ್ನಪ್ಪನಂತೆ ನಿನ್ನನ್ನೂ ಕೊಲ್ಲುತ್ತೇವೆ' ಎಂದು ಬೆದರಿಸಿ ಅಪಹರಣಕ್ಕೆ ಯತ್ನಿಸಿದ್ದು, ಕುಟುಂಬಸ್ಥರು ಮಗುವನ್ನು ರಕ್ಷಿಸಿದ್ದಾರೆ.
09:33 PM (IST) Oct 02
ದೇಶದ ಆರ್ಥಿಕ ಸ್ಥಿತಿಯನ್ನು ಜಿಡಿಪಿಯಂತಹ ಗಂಭೀರ ಅಂಕಿಅಂಶಗಳಲ್ಲದೆ, ಮಹಿಳೆಯರ ಸ್ಕರ್ಟ್‌ನ ಉದ್ದ, ಕಸದ ಬುಟ್ಟಿ ಹಾಗೂ ಪುರುಷರು ಚಡ್ಡಿ ಖರೀದಿ ಮಾಡುವ ಸಾಮರ್ಥ್ಯದ ಮೂಲಕವೂ ಊಹಿಸಬಹುದು. ಈ ಲೇಖನವು ಆರ್ಥಿಕ ಹಿಂಜರಿತವನ್ನು ಸೂಚಿಸುವ 5 ಅಸಾಮಾನ್ಯ ಮತ್ತು ಆಘಾತಕಾರಿ ಸೂಚ್ಯಂಕಗಳನ್ನು ವಿವರಿಸುತ್ತದೆ.
09:03 PM (IST) Oct 02
Fact Check: ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡುತ್ತಿದೆ ಎಂದು ಹೇಳುವ ನಕಲಿ ಲಿಂಕ್‌ನೊಂದಿಗೆ ಒಂದು ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಫ್ಯಾಕ್ಟ್ ಚೆಕ್‌ನಲ್ಲಿ ಈ ಸಂದೇಶ ಸಂಪೂರ್ಣವಾಗಿ ನಕಲಿ ಎಂದು ತಿಳಿದುಬಂದಿದೆ. ಇಂತಹ ಯಾವುದೇ ಯೋಜನೆ ಸದ್ಯಕ್ಕೆ ಇಲ್ಲ.
08:35 PM (IST) Oct 02
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಕಲಿ ವೈದ್ಯನೊಬ್ಬ ಜ್ವರಕ್ಕೆ ನೀಡಿದ ಹೈ ಡೋಸ್ ಇಂಜೆಕ್ಷನ್‌ನಿಂದ 8 ವರ್ಷದ ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಳೆ. ಈ ಘಟನೆಯು ಗ್ರಾಮೀಣ ಪ್ರದೇಶಗಳಲ್ಲಿನ ನಕಲಿ ವೈದ್ಯರ ಹಾವಳಿಯ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
07:39 PM (IST) Oct 02
Kola Superdeep Borehole facts: ಭೂಮಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ಅಗೆದು ಹೋಗುವುದು ಅಸಾಧ್ಯ. ಭೂಮಿಯ ಒಳರಚನೆ, ಅಧಿಕ ತಾಪಮಾನ ಮತ್ತು ಒತ್ತಡ ಇದಕ್ಕೆ ಪ್ರಮುಖ ಅಡೆತಡೆಗಳಾಗಿವೆ. ಕೋಲಾ ಸೂಪರ್‌ಡೀಪ್ ಬೋರ್‌ಹೋಲ್‌ನಂತಹ ಯೋಜನೆಗಳು ಸಹ ಸೀಮಿತ ಯಶಸ್ಸನ್ನು ಕಂಡಿವೆ. ತಾಂತ್ರಿಕ ಸವಾಲಾಗಿಯೇ ಉಳಿದಿದೆ
07:38 PM (IST) Oct 02
2025ರ ಬ್ಲಾಕ್ ಬಸ್ಟರ್ ಚಿತ್ರ 'ಸು ಪ್ರೇಮ್ ಸೋ' ಇದೀಗ ಕಿರುತೆರೆಗೆ ಬರಲು ಸಿದ್ಧವಾಗಿದೆ. ರಾಜ್ ಬಿ ಶೆಟ್ಟಿ ನಿರ್ಮಾಣದ, ಕರಾವಳಿ ಸಂಸ್ಕೃತಿಯ ಹಾಸ್ಯಮಯ ಕಥೆಯುಳ್ಳ ಈ ಚಿತ್ರವು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ.
07:08 PM (IST) Oct 02
ಕೇರಳದಲ್ಲಿ ಹಲವಾರು ರೋಮಾಂಚಕಾರಿ ಟ್ರೆಕ್ಕಿಂಗ್ ದಾರಿಗಳಿವೆ. ವೀಕೆಂಡ್ ಟ್ರಿಪ್‌ನ ಭಾಗವಾಗಿ ಸಾಹಸವನ್ನು ಇಷ್ಟಪಡುವವರನ್ನು ಆಕರ್ಷಿಸುವ ಕೆಲವು ಟ್ರೆಕ್ಕಿಂಗ್ ಕೇಂದ್ರಗಳ ಬಗ್ಗೆ ಇಲ್ಲಿ ಹೇಳಲಾಗಿದೆ.
06:47 PM (IST) Oct 02
ನಟ ಯಶ್ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಹಿಂದಿ ಭಾಷೆಯಲ್ಲಿನ ಲಿಂಗ ಸಂಬೋಧನೆಯ ಗೊಂದಲದಿಂದಾಗಿ ತಾನು ಹಿಂದಿ ಮಾತನಾಡಲು ಹಿಂಜರಿಯುವುದಾಗಿ ಹೇಳಿಕೊಂಡಿದ್ದಾರೆ. ಅದರ ವಿಡಿಯೋ ಈಗ ವೈರಲ್ ಆಗಿದೆ.
06:31 PM (IST) Oct 02
ಬೆಂಗಳೂರು ಕೇವಲ ಟ್ರಾಫಿಕ್‌ಗೆ ಅಷ್ಟೇ ಅಲ್ಲ, ಮಾನವೀಯತೆಯಲ್ಲಿಯೂ ಅದ್ಭುತವೆಂದು ಹಿಂದಿ ಭಾಷಿಕ ಟೆಕ್ಕಿಯೊಬ್ಬರು ಹೇಳಿದ್ದಾರೆ. ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ಪರದಾಡುತ್ತಿದ್ದ ಟೆಕ್ಕಿಗೆ, ಸಹಾಯ ಕೇಳದಿದ್ದರೂ ರಾಪಿಡೋ ಚಾಲಕ ತನ್ನ ಬೈಕ್‌ನಿಂದ ಪೆಟ್ರೋಲ್ ತೆಗದುಕೊಟ್ಟು, ಹಣ ಪಡೆಯದೇ ಸಹಾಯ ಮಾಡಿದ್ದಾರೆ.
06:29 PM (IST) Oct 02
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮಲ್ಲಮ್ಮ ಅವರು ಸ್ಪರ್ಧಿ. 58ನೇ ವಯಸ್ಸಿನಲ್ಲಿಯೂ ಮಲ್ಲಮ್ಮ ಅವರು ಆಕ್ಟಿವ್ ಆಗಿದ್ದು, ಎಲ್ಲರಿಗೂ ಮೆಚ್ಚುವಂತೆ ನಡೆದುಕೊಳ್ಳುತ್ತಿದ್ದಾರೆ. ಇವರನ್ನು ಫೇಮಸ್ ಮಾಡಿದ್ದು ಕನ್ನಡ ಧಾರಾವಾಹಿ ನಟ ಅಂತೆ. ಯಾರದು?
06:23 PM (IST) Oct 02
Homeowner harasses maid in Honnavar: ಹೊನ್ನಾವರದಲ್ಲಿ ಮನೆಗೆಲಸಕ್ಕೆ ಬಂದ ಮಹಿಳೆಗೆ ಮಾಲೀಕ ಪ್ರದೀಪ್ ನಾಯ್ಕ್ ಲೈ೧ಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆತನ ವಿಕೃತಿಗೆ ವಿರೋಧ, ಮಹಿಳೆಯ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾನೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
05:56 PM (IST) Oct 02
H125 Helicopters in Kolar Karnataka ಏರ್‌ಬಸ್ ಕಂಪನಿಯ, ಮೌಂಟ್ ಎವರೆಸ್ಟ್‌ನಲ್ಲಿ ಲ್ಯಾಂಡ್ ಆದ ವಿಶ್ವದ ಮೊದಲ H125 ಹೆಲಿಕಾಪ್ಟರ್ ಅನ್ನು ಇನ್ನು ಮುಂದೆ ಕರ್ನಾಟಕದ ಕೋಲಾರದಲ್ಲಿ ತಯಾರಿಸಲಾಗುತ್ತದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಈ ಅಸೆಂಬ್ಲಿ ಲೈನ್ ಅನ್ನು ನಿರ್ಮಿಸಲಿದೆ.
05:36 PM (IST) Oct 02
Gadag Shirahatti group clash: ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಸಿಗರೇಟ್ ಬಾಕಿ ಹಣದ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಘರ್ಷಣೆ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ತಿರುಗಿ, ಆರು ಜನರು ಗಾಯ.. ಸದ್ಯ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
05:25 PM (IST) Oct 02
Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಈಗ ಆಟ ಶುರು ಮಾಡಿದ್ದಾರೆ, ಮೊದಲ ದಿನ ಅಶ್ವಿನಿ ಗೌಡ ಕಾಲಿಗೆ ಬೀಳ್ತೀನಿ ಎಂದು ಹೇಳಿದ್ದ ಅವರೀಗ ಕಾಲೆಳೆಯೋಕೆ ಶುರು ಮಾಡಿದ್ದಾರೆ.
05:17 PM (IST) Oct 02
Cough Syrup Tragedy: ಮಧ್ಯಪ್ರದೇಶದ ಚಿಂದ್ವಾರದಲ್ಲಿ, ಕೆಮ್ಮಿನ ಸಿರಪ್ ಸೇವಿಸಿದ ನಂತರ ಆರು ಮಕ್ಕಳು ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಎರಡು ನಿರ್ದಿಷ್ಟ ಸಿರಪ್‌ಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ.
05:11 PM (IST) Oct 02
'ಕಾಂತಾರ: ಅಧ್ಯಾಯ 1' ಚಿತ್ರವು ಭರ್ಜರಿ ಯಶಸ್ಸು ಕಾಣುತ್ತಿದ್ದು, ಮೊದಲ ದಿನವೇ ಉತ್ತಮ ಕಲೆಕ್ಷನ್ ಮಾಡಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಚಿತ್ರದ ಕಥೆಯನ್ನು ತಮ್ಮ ಪಿಯುಸಿ ದಿನಗಳಲ್ಲೇ ಬರೆದಿದ್ದಾಗಿ ಬಹಿರಂಗಪಡಿಸಿದ್ದಾರೆ.
05:00 PM (IST) Oct 02
04:58 PM (IST) Oct 02
Annamalai Kollur temple visit: ದಸರಾ ಹಬ್ಬದ ಪ್ರಯುಕ್ತ ಬಿಜೆಪಿ ಮುಖಂಡ ಮತ್ತು ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಹಿಂದೆ ಉಡುಪಿಯಲ್ಲಿ ಎಸ್ಪಿಯಾಗಿದ್ದರು. ದೇವಾಲಯದಲ್ಲಿ ಭಕ್ತರೊಂದಿಗೆ ಸರಳತೆಯಿಮದ ಬೆರೆತರು..
04:33 PM (IST) Oct 02
ಕೊಡಗಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಛೇದನ ನೀಡಿದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿದ್ದಾನೆ. ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಹೋಗುತ್ತಾ, ಬ್ಯಾರೆಲ್‌ನಲ್ಲಿದ್ದ ಹಾಲನ್ನು ಸುರಿದುಕೊಂಡು ಸ್ನಾನ ಮಾಡಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
04:32 PM (IST) Oct 02
03:48 PM (IST) Oct 02
'ಕೂಲಿ' ಚಿತ್ರದಲ್ಲಿ ಖಳನಾಯಕಿ ಕಲ್ಯಾಣಿ ಪಾತ್ರದ ಮೂಲಕ ಗಮನ ಸೆಳೆದಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಅಕ್ಟೋಬರ್ 3 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು, ಅವರು ತಮ್ಮ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಿಸಲು ಆಹ್ವಾನ ನೀಡಿದ್ದಾರೆ.
03:40 PM (IST) Oct 02
ನಟಿ ನಿವೇದಿತಾ ಗೌಡ ಇತ್ತೀಚೆಗೆ ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಬೀದಿಯಲ್ಲಿ ರಾತ್ರಿ ವೇಳೆ ಕಣ್ಣೀರು ಹಾಕುತ್ತಿರುವ ಅವರ ವಿಡಿಯೋ ವೈರಲ್ ಆಗಿದ್ದು, ಅಳುವಿಗೆ ನಿಖರ ಕಾರಣ ನಿಗೂಢವಾಗಿದೆ. ತಮ್ಮ ಪ್ರವಾಸದ ಹಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
03:39 PM (IST) Oct 02
Dhruva Sarja Recalls Emotional Moment ಟಿವಿ ಶೋ ಒಂದರಲ್ಲಿ ನಟ ಧ್ರುವ ಸರ್ಜಾ, ಅಣ್ಣ ಚಿರಂಜೀವಿ ಸರ್ಜಾ ಮದುವೆಯ ನಂತರ ತಾನು ಪೊಸೆಸಿವ್ ಆಗಿದ್ದನ್ನು ನೆನಪಿಸಿಕೊಂಡರು. ಅಣ್ಣ ಸಮಾಧಾನ ಮಾಡಿದ್ದನ್ನುಅವರು ಹೇಳಿದ್ದಾರೆ.
02:47 PM (IST) Oct 02
ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಕಥಾಹಂದರವು ವೀಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಗೌತಮ್ ಅವಳಿ ಮಕ್ಕಳ ಸತ್ಯವನ್ನು ಮುಚ್ಚಿಟ್ಟಿದ್ದಕ್ಕೆ ಭೂಮಿಕಾ ಮನೆಬಿಟ್ಟು ಹೋಗಿರುವುದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಅವಳಿ ಮಕ್ಕಳ ಎಐ-ರಚಿತ ಫೋಟೋವೊಂದು ವೈರಲ್ ಆಗಿದೆ.
02:20 PM (IST) Oct 02
ಗೌತಮ್ ಮತ್ತು ಭೂಮಿಕಾ ಒಂದಾಗುವ ನಿರೀಕ್ಷೆ ಹುಸಿಯಾಗಿದೆ. ಎಂಎಲ್ಎಯಿಂದಾದ ತೊಂದರೆಯಿಂದಾಗಿ ಭೂಮಿಕಾ ಬೆಂಗಳೂರಿಗೆ ತೆರಳಿದ್ದಾಳೆ. ಈ ಮಧ್ಯೆ, ಕಮಿಷನರ್ಗೆ ಎಂಎಲ್ಎಯನ್ನು ತೆಗೆದುಹಾಕುವ ಅಧಿಕಾರವಿದೆ ಎಂದು ತೋರಿಸಿದ್ದಕ್ಕೆ ಸೀರಿಯಲ್ ಟ್ರೋಲ್ ಆಗುತ್ತಿದೆ.
02:00 PM (IST) Oct 02
ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್‌ನಲ್ಲಿ ಫರಾ ಖಾನ್ ಅವರನ್ನು ಅನ್‌ಫಾಲೋ ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ಈ ಮೊದಲೇ ಅವರು ನಾಗ್ ಅಶ್ವಿನ್‌ನಿಂದ ಹಿಡಿದು ಕಂಗನಾ ರನೌತ್‌ವರೆಗೆ ವಿವಾದಗಳಲ್ಲಿ ಸಿಲುಕಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ಅವರ ಈ ಅಂತರ ಚರ್ಚೆಗೆ ಕಾರಣವಾಗಿದೆ.
01:36 PM (IST) Oct 02
‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಸೆಟ್‌ಗೆ ಕಿಚ್ಚ ಸುದೀಪ್ ಭೇಟಿ ನೀಡಿದ್ದಾರೆ. ಸೆಟ್‌ನಲ್ಲಿ ಸುದೀಪ್ ಆತ್ಮೀಯವಾಗಿ ಬೆರೆತ ಕ್ಷಣಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
01:18 PM (IST) Oct 02
ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ಗಾಂಧಿ ಜಯಂತಿಯಂದು ಆರ್‌ಎಸ್‌ಎಸ್ ಶತಮಾನೋತ್ಸವ ಆಚರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಗಾಂಧೀಜಿಯನ್ನು ಹತ್ಯೆ ಮಾಡಿದ ಸಂಘಟನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿರುವುದು ದೇಶಕ್ಕೆ ಮಾಡಿದ ಅವಮಾನ ಎಂದು ಅವರು ಟೀಕಿಸಿದ್ದಾರೆ.
01:13 PM (IST) Oct 02
ತನ್ನ ಅಧಿಕಾರ ಉಳಿಸಿಕೊಳ್ಳಲು ಹಾಗೂ ಜನರ ನಡುವೆ ಬೆಂಕಿ ಹಚ್ಚಿ ಗಮನ ಬೇರೆಡೆ ಸೆಳೆಯಲು ಜಾತಿ ಸಮೀಕ್ಷೆ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.
01:02 PM (IST) Oct 02
ಬಿಗ್ ಬಾಸ್ ಮನೆಯಲ್ಲಿ 58 ವರ್ಷದ ಸ್ಪರ್ಧಿ ಮಲ್ಲಮ್ಮ ತಮ್ಮ ಉತ್ತರ ಕರ್ನಾಟಕ ಶೈಲಿಯಿಂದ ಗಮನ ಸೆಳೆಯುತ್ತಿದ್ದಾರೆ. ಬಿಗ್ಬಾಸ್ನಲ್ಲಿ ಸೆಲೆಕ್ಟ್ ಆಗೋದಕ್ಕೂ ಮುನ್ನ ಇದರ ಬಗ್ಗೆ ಮಲ್ಲಮ್ಮ ಹೇಳಿದ್ದೇನು ಕೇಳಿ. ಇದನ್ನು ಕೇಳಿದ್ರೆ ಬಿದ್ದೂ ಬಿದ್ದೂ ನಗುವಂತಿದೆ!
12:48 PM (IST) Oct 02
Bigg Boss team task loss: ಬಿಗ್‌ಬಾಸ್ ಮನೆಯಲ್ಲಿ ನಡೆದ ಟಾಸ್ಕ್‌ನಲ್ಲಿ ಜಂಟಿ ತಂಡ ಸೋತಿದ್ದಕ್ಕೆ ಕರಿಬಸಪ್ಪ ಮತ್ತು ಅಭಿಷೇಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಸೋಲಿನ ಹತಾಶೆಯಿಂದ ಅಭಿಷೇಕ್ ವಿರುದ್ಧ ಕೊಂಕು ನುಡಿದ ಕರಿಬಸಪ್ಪಗೆ, ಅಶ್ವಿನಿ ಮಧ್ಯ ಪ್ರವೇಶಿಸಿ ಬುದ್ಧಿವಾದ ಹೇಳಿದ್ದಾರೆ.
12:33 PM (IST) Oct 02
ರಾಜ್ಯದಲ್ಲಿನ ಪವರ್ ಶೇರಿಂಗ್ ಚರ್ಚೆಗಳ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡುವುದು ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
12:30 PM (IST) Oct 02
ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ನಿಗದಿತ ಅವಧಿಯಲ್ಲಿ ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
11:58 AM (IST) Oct 02
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸುತ್ತಿರುವ ಅಲ್ಲು ಅರ್ಜುನ್, ಅನೇಕ ಹಿರಿಯ ಸ್ಟಾರ್‌ಗಳೊಂದಿಗೆ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಆದರೆ ಅವರು ಒಬ್ಬ ಸ್ಟಾರ್ ಹಿರಿಯ ನಟನ ಕೆನ್ನೆಗೆ ಬಾರಿಸಿದ್ದರು ಎಂಬುದು ನಿಮಗೆ ಗೊತ್ತಾ?
11:57 AM (IST) Oct 02
Bulandshahr jewelry store theft: ಆಭರಣದ ಅಂಗಡಿಗೆ ಬಂದ ದಂಪತಿ ಅಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ದಂಪತಿಯೊಬ್ಬರು ಜ್ಯುವೆಲ್ಲರಿ ಶಾಪ್‌ಗೆ ಭೇಟಿ ನೀಡಿ, 6 ಲಕ್ಷ ಮೌಲ್ಯದ ಚಿನ್ನದ ನೆಕ್ಲೇಸನ್ನು ಕದ್ದಿದ್ದಾರೆ. ಈ ಕೃತ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ.