- Home
- Entertainment
- Sandalwood
- 666 ಆಪರೇಷನ್ ಡ್ರೀಮ್ ಥಿಯೇಟರ್ ಸೆಟ್‌ಗೆ ಕಿಚ್ಚ ಸುದೀಪ್ ಭೇಟಿ: ಡಾಲಿ ಧನಂಜಯ ಹೇಳಿದ್ದೇನು?
666 ಆಪರೇಷನ್ ಡ್ರೀಮ್ ಥಿಯೇಟರ್ ಸೆಟ್‌ಗೆ ಕಿಚ್ಚ ಸುದೀಪ್ ಭೇಟಿ: ಡಾಲಿ ಧನಂಜಯ ಹೇಳಿದ್ದೇನು?
‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಸೆಟ್‌ಗೆ ಕಿಚ್ಚ ಸುದೀಪ್ ಭೇಟಿ ನೀಡಿದ್ದಾರೆ. ಸೆಟ್‌ನಲ್ಲಿ ಸುದೀಪ್ ಆತ್ಮೀಯವಾಗಿ ಬೆರೆತ ಕ್ಷಣಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಸೆಟ್‌ನಲ್ಲಿ ಸುದೀಪ್ ಆತ್ಮೀಯ
ಡಾಲಿ ಧನಂಜಯ ನಟನೆಯ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಸೆಟ್‌ಗೆ ಕಿಚ್ಚ ಸುದೀಪ್ ಭೇಟಿ ನೀಡಿದ್ದಾರೆ. ಸೆಟ್‌ನಲ್ಲಿ ಸುದೀಪ್ ಆತ್ಮೀಯವಾಗಿ ಬೆರೆತ ಕ್ಷಣಗಳನ್ನು ಚಿತ್ರತಂಡ ಹಂಚಿಕೊಂಡಿದೆ.
ನಮ್ಮ ಸೆಟ್‌ಗೆ ಭೇಟಿ ನೀಡಿದ ಸೂಪರ್‌ಸ್ಟಾರ್
ಈ ಕುರಿತು ಧನಂಜಯ, ‘ಇದಕ್ಕಿಂತ ಖುಷಿ ಇನ್ನೇನಿದೆ, ನನ್ನ ಸಹೋದರ, ಸೂಪರ್‌ಸ್ಟಾರ್ ಇವತ್ತು ನಮ್ಮ ಸೆಟ್‌ಗೆ ಭೇಟಿ ನೀಡಿದರು. ಅವರ ಚೈತನ್ಯವನ್ನು ನಮಗೆಲ್ಲ ಹಂಚಿದರು. ಪ್ರೀತಿ, ಅಪ್ಪುಗೆ, ನಗು ತುಂಬಿದ ಖುಷಿಯ ಕ್ಷಣಗಳಿಗೆ ನಾವೆಲ್ಲ ಸಾಕ್ಷಿಯಾದೆವು’ ಎಂದು ಹೇಳಿದ್ದಾರೆ.
ಮುಖ್ಯ ಪಾತ್ರದಲ್ಲಿ ಶಿವರಾಜ್ ಕುಮಾರ್
ಹೇಮಂತ್ ರಾವ್ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವೈಶಾಖ್ ಜೆ ಗೌಡ ಈ ಸಿನಿಮಾದ ನಿರ್ಮಾಪಕರು.
ದೃಷ್ಟಿಕೋನ ಮತ್ತು ಸಿನಿಮಾದ ಬಗ್ಗೆ ಉತ್ಸಾಹ
ಈ ಹಿಂದೆ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಡಾಲಿ ಧನಂಜಯ್, ಓರ್ವ ಕಲಾವಿದ ದೊಡ್ಡ ದೃಷ್ಟಿಕೋನ ಮತ್ತು ಸಿನಿಮಾದ ಬಗ್ಗೆ ಉತ್ಸಾಹ ಹೊಂದಿರುವ ನಿರ್ದೇಶಕರನ್ನು ಕಂಡುಕೊಂಡಾಗ, ಮಗುವಿನಂತೆ ನಟರು ನಟನಾ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ನನಗೆ ಸಂತೋಷವಾಗಿದೆ
ತಂಡವು ತಮ್ಮ ಸಿನಿಮಾಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿದಾಗ ಆ ನಟ ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಾನೆ. ನಿರ್ದೇಶಕ ಹೇಮಂತ್ ಎಂ ರಾವ್, ನಿರ್ಮಾಪಕ ವೈಶಾಕ್ ಜೆ ಗೌಡ ಸಿನಿ ಉತ್ಸಾಹಿ ವ್ಯಕ್ತಿಗಳು. ಚರಣ್ ರಾಜ್ ಮತ್ತು ಅದ್ವೈತ ಗುರುಮೂರ್ತಿ ಅಂತಹ ಒಂದು ತಂಡದೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ' ಎಂದು ತಿಳಿಸಿದರು.