Annamalai Kollur temple visit: ದಸರಾ ಹಬ್ಬದ ಪ್ರಯುಕ್ತ ಬಿಜೆಪಿ ಮುಖಂಡ ಮತ್ತು ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಹಿಂದೆ ಉಡುಪಿಯಲ್ಲಿ ಎಸ್ಪಿಯಾಗಿದ್ದರು. ದೇವಾಲಯದಲ್ಲಿ ಭಕ್ತರೊಂದಿಗೆ ಸರಳತೆಯಿಮದ ಬೆರೆತರು..

ಉಡುಪಿ (ಅ.2): ದಸರಾ ಹಬ್ಬದ ಸಂಭ್ರಮದ ನಡುವೆ ಬಿಜೆಪಿ ಮುಖಂಡ ಮತ್ತು ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಜಯದಶಮಿಯ ಪವಿತ್ರ ಸಂದರ್ಭದಲ್ಲಿ ಅವರು ಮುಂಜಾನೆಯೇ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಆಡಳಿತ ಮಂಡಳಿಯು ಅಣ್ಣಾಮಲೈ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ವಿಶೇಷ ಗೌರವ ಸಮರ್ಪಿಸಿತು.

ಇದನ್ನೂ ಓದಿ: ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು

ಈ ಹಿಂದೆ ಉಡುಪಿಯಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ ಅವರ ಆಗಮನದಿಂದ ಸ್ಥಳೀಯರು ಖುಷಿಗೊಂಡರು. ದೇವಾಲಯದಲ್ಲಿ ಸರದಿಯ ಸಾಲಿನಲ್ಲಿ ನಿಂತಿದ್ದ ಭಕ್ತರೊಂದಿಗೆ ಅವರು ಕೆಲಕಾಲ ಮಾತುಕತೆ ನಡೆಸಿದರು. 

ಇದನ್ನೂ ಓದಿ:Davanagere: ವಿಜಯದಶಮಿ ಶೋಭಾಯಾತ್ರೆಗೆ ಬೆಣ್ಣೆನಗರಿ ಸಜ್ಜು, ಎಲ್ಲೆಲ್ಲೂ ಕೇಸರಿಮಯ, ಪೊಲೀಸ್ ಸರ್ಪಗಾವಲು

ಭಕ್ತರು ಅಣ್ಣಾಮಲೈ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಣ್ಣಾಮಲೈ ಅವರ ಸರಳತೆ ಮತ್ತು ಆತ್ಮೀಯತೆ ಕಂಡು ಸ್ಥಳೀಯರು ಸಂತಸಗೊಂಡರು . ದೇವಿಯ ಆಶೀರ್ವಾದ ಪಡೆದು ತೆರಳಿದ ಅಣ್ಣಾಮಲೈ, ದೇವಾಲಯದ ಸಂಪ್ರದಾಯಕ್ಕೆ ಗೌರವ ಸೂಚಿಸಿದರು.