Published : Jun 02, 2025, 06:36 AM ISTUpdated : Jun 02, 2025, 11:43 PM IST

Karnataka News Live: ಇಸ್ರೋದಿಂದ ಭರ್ಜರಿ ಕೊಡುಗೆ, ಸ್ಪೇಸ್ ಟೆಕ್ ಕುರಿತು ಉಚಿತ ಆನ್‌ಲೈನ್ ಕೋರ್ಸ್

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ನೀಡುವ ಸಂಬಂಧ ಮೇ 5ರಿಂದ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಭಾನುವಾರ ಮುಕ್ತಾಯವಾಗಿದ್ದು, ಅಂದಾಜು 1.04 ಕೋಟಿಗಿಂತ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಭಾಗಿಯಾಗುವ ಮೂಲಕ ಶೇ.90ಕ್ಕಿಂತ ಹೆಚ್ಚು ಗಣತಿಯಾಗಿದೆ. 2011ರ ಜನಗಣತಿ ಆಧರಿಸಿ ಪ್ರಸ್ತುತ ರಾಜ್ಯದಲ್ಲಿ 1.16 ಕೋಟಿ ಪರಿಶಿಷ್ಟ ಜಾತಿ ಸಮುದಾಯದವರು ಇರಬಹುದೆಂದು ಆಯೋಗ ಅಂದಾಜಿಸಿ ಸಮೀಕ್ಷೆ ಆರಂಭಿಸಿದೆ. ಈವರೆಗೆ ಬಹುತೇಕ ಜಿಲ್ಲೆಗಳಲ್ಲಿ ಸಮೀಕ್ಷೆ ಉತ್ತಮವಾಗಿ ನಡೆದಿದೆ. ಆದರೆ ಬಿಬಿಎಂಪಿಯಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಜನ ಭಾಗಿಯಾಗಿಲ್ಲ. ಮನೆ ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಆಗದವರಿಗಾಗಿ ಆನ್ ಲೈನ್ ಮೂಲಕ ಕುಟುಂಬದ ವಿವರಗಳನ್ನು ಸಲ್ಲಿಸಲು ಅವಕಾಶವಿದ್ದು, ಈವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸ್ವಯಂ ಘೋಷಣೆ ಮಾಡಿಕೊಂಡಿವೆ. ಈ ನಡುವೆ ವಿಶೇಷ ಶಿಬಿರಗಳ ಮೂಲಕ ಗಣತಿ ನಡೆಯು ತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚು ಮತಗಟ್ಟೆ ಇರುವ ಕಡೆ ಇಬ್ಬರನ್ನು ನಿಯೋಜಿಸಿ ಗಣತಿ ಕಾರ್ಯ ನಡೆಸಲಾಗುತ್ತಿದೆ.

11:43 PM (IST) Jun 02

ಇಸ್ರೋದಿಂದ ಭರ್ಜರಿ ಕೊಡುಗೆ, ಸ್ಪೇಸ್ ಟೆಕ್ ಕುರಿತು ಉಚಿತ ಆನ್‌ಲೈನ್ ಕೋರ್ಸ್

ಇಸ್ರೋ ಭರ್ಜರಿ ಕೊಡುಗೆ ನೀಡುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಕುರಿತು ಇಸ್ರೋ ಇದೀಗ ಉಚಿತ ಆನ್‌ಲೈನ್ ಕೋರ್ಸ್ ಆರಂಭಿಸುತ್ತಿದೆ. 

Read Full Story

11:23 PM (IST) Jun 02

ಉಗ್ರರ ಬುಲೆಟ್‌ಗೆ ಬೈಕ್ ಪ್ರಿಯರ್ ಬುಲೆಟ್ ರ‍್ಯಾಲಿ ಉತ್ತರ, ಕೇರಳದಿಂದ ಕಾಶ್ಮೀರಕ್ಕೆ ಚಲೋ LoC ರೈಡ್

ಪೆಹಲ್ಗಾಂನಲ್ಲಿ ಉಗ್ರರ ದಾಳಿಗೆ 26 ಅಮಾಯಕರು ಮೃತಪಟ್ಟ ಘಟನೆ ನೋವು ಮಾಸುತ್ತಿಲ್ಲ. ಇದರ ನಡುವೆ ಉಗ್ರರ ಈ ದಾಳಿಯಿಂದ ಭಾರತೀಯರನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಇದೀಗ ಬೃಹತ್ ಬುಲೆಟ್ ಬೈಕ್ ರ‍್ಯಾಲಿ ಸಾಗುತ್ತಿದೆ. ಇದು ಕೇರಳದಿಂದ ಕೇರಳದ ಕಾಲಡಿಯಿಂದ ಕಾಶ್ಮೀರದ ವರೆಗೆ ಚಲೋ ಎಲ್ಒಸಿ ಬುಲೆಟ್ ಬೈಕ್ ರ್ಯಾಲಿ.

Read Full Story

10:41 PM (IST) Jun 02

ಭಾರತದಲ್ಲಿ 4 ಸಾವಿರ ಗಡಿ ಸನಿಹಕ್ಕೆ ಕೋವಿಡ್ ಕೇಸ್, 22ರ ಯುವತಿ ಸೇರಿ ಇಂದು ನಾಲ್ಕು ಸಾವು

ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ದಿಢೀರ್ ಏರಿಕೆಯಾಗುತ್ತಿದೆ. ಇದರ ನಡುವೆ ಸಾವು ವರದಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಇಂದು ಒಂದೇ ದಿನ 22 ವರ್ಷದ ಯುವತಿ, 25 ವರ್ಷದ ಯುವಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

Read Full Story

09:53 PM (IST) Jun 02

ಆರ್‌ಸಿಬಿ ಚಾಂಪಿಯನ್ ಆದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಹೋಳಿಗೆ ಊಟ

ಆರ್‌ಸಿಬಿ ಟ್ರೋಫಿ ಗೆಲ್ಲಲು ಅಭಿಮಾನಿಗಳ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಮಹತ್ವದ ಘೋಷಣೆ ಹೊರಬಿದ್ದಿದೆ. ಆರ್‌ಸಿಬಿ ಪ್ರಶಸ್ತಿ ಗೆದ್ದರೆ ಜಿಲ್ಲೆಯ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಹೋಳಿಗೆ ಊಟ ವಿತರಿಸಲಾಗುತ್ತದೆ.

Read Full Story

08:50 PM (IST) Jun 02

ಮಲೆನಾಡು ಜನರಿಗೆ ಹೊಸ ಅರಣ್ಯ ಕಾಯ್ದೆ ಭೀತಿ; ಸರ್ಕಾರದ ವಿರುದ್ಧ ತೊಡೆ ತಟ್ಟಲು ಸಜ್ಜಾದ ಜನತೆ!

ಮಲೆನಾಡಿನಲ್ಲಿ ಅರಣ್ಯ ಇಲಾಖೆ ಹೊಸ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ಈ ಕಾಯ್ದೆಯಿಂದ ಕೃಷಿ ಭೂಮಿಗಳು ಅರಣ್ಯ ಭೂಮಿ ಎಂದು ಘೋಷಣೆಯಾಗುವ ಭೀತಿ ಎದುರಾಗಿದೆ. ಜನರು, ಶಾಸಕರು ಮತ್ತು ಸಂಸದರು ಸಭೆ ನಡೆಸಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
Read Full Story

08:46 PM (IST) Jun 02

ಸಾರಾ ಆಲಿ ಖಾನ್ ಜೊತೆ ನಟಿಸೋ ನಟರಿಗೆ ಶಾದಿ ಭಾಗ್ಯ ಗ್ಯಾರಂಟಿ

ನಿಮಗೆ ಗೊತ್ತಾ ನಟಿ ಸಾರಾ ಆಲಿ ಖಾನ್ ಯಾವ ನಟರ ಜೊತೆಗೆ ನಟಿಸಿದ್ದಾರೋ ಅ ನಟರಿಗೆ ಶೀಘ್ರದಲ್ಲೇ ಮದ್ವೇ ಆಗುತ್ತೆ ಅಂತೆ, ಹಾಗಂತ ಸ್ವತಃ ಸಾರಾ ಆಲಿ ಖಾನ್ ಹೇಳಿದ್ದಾರೆ.

Read Full Story

08:40 PM (IST) Jun 02

ಭಾರತದ ಮೈಲಿಗಲ್ಲು, ಶೇ.15ರಷ್ಟು ಮಹಿಳಾ ಪೈಲೆಟ್ ಹೊಂದಿದೆ ಏಕೈಕ ದೇಶ

ಭಾರತ ಅತೀ ಹೆಚ್ಚು ಮಹಿಳಾ ಪೈಲೆಟ್ ಹೊಂದಿದ ದೇಶವಾಗಿದೆ. ಪೈಲೆಟ್ ಪೈಕಿ ಶೇಕಡಾ 15ರಷ್ಟು ಮಹಿಳಾ ಪೈಲೆಟ್ ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುರಿತು ವಿಮಾನಯಾನ ಸಚಿವ ಮಾತನಾಡಿದ್ದಾರೆ.

Read Full Story

08:28 PM (IST) Jun 02

ಕಬ್ಬನ್ ಪಾರ್ಕ್ ಮಾದರಿಯಲ್ಲಿಯೇ ಬೆಂಗಳೂರಲ್ಲಿ 154 ಎಕರೆ ವಿಸ್ತೀರ್ಣದಲ್ಲಿ ಮತ್ತೊಂದು ಉದ್ಯಾನವನ ನಿರ್ಮಾಣ!

ಕಬ್ಬನ್ ಪಾರ್ಕ್ ಮಾದರಿಯಲ್ಲಿ ಬೆಂಗಳೂರಿನ 153 ಎಕರೆ ವಿಸ್ತೀರ್ಣದಲ್ಲಿ ಮತ್ತೊಂದು ಬೃಹತ್ ಉದ್ಯಾನವನ ನಿರ್ಮಾಣವಾಗಲಿದೆ. ಈ ಉದ್ಯಾನವನದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸ್ಥಳೀಯ ಪ್ರಭೇದದ ಸಸ್ಯಗಳನ್ನು ಬೆಳೆಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Read Full Story

07:53 PM (IST) Jun 02

ಆರ್‌ಸಿಬಿ ಟ್ರೋಫಿ ಗೆದ್ರೆ ಐಪಿಎಲ್‌ಗೂ ನಿವೃತ್ತಿ ಹೇಳ್ತಾರಾ ಕೊಹ್ಲಿ? IPL ಚೇರ್ಮನ್ ಮನವಿ ಮಾಡಿದ್ದೇಕೆ?

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳಿ ಶಾಕ್ ಕೊಟ್ಟಿದ್ದಾರೆ. ಇದೀಗ ಐಪಿಎಲ್ ಟೂರ್ನಿಗೂ ನಿವೃತ್ತಿ ಹೇಳುತ್ತಾರಾ? ಐಪಿಎಲ್ ಚೇರ್ಮನ್ ವಿರಾಟ್ ಕೊಹ್ಲಿಗೆ ಮಾಡಿದ ವಿಶೇಷ ಮನವಿ ಈ ಆತಂಕ ಹೆಚ್ಚಿಸಿದೆ. ಈ ಮನವಿ, ಕೊಹ್ಲಿ ನಿವೃತ್ತಿ ಸುಳಿವು ನೀಡುತ್ತಿದೆಯಾ?

Read Full Story

07:49 PM (IST) Jun 02

ನೀವು ಆದಾಯ ತೆರಿಗೆ ಪಾವತಿಸುತ್ತೀರಾ? ಜೂನ್ ತಿಂಗಳ ಈ ದಿನಾಂಕ ಮಿಸ್ ಮಾಡಿದ್ರೆ ಭಾರೀ ದಂಡ ಖಚಿತ!

2025 ರ ಜೂನ್ ತಿಂಗಳಲ್ಲಿ ಹಲವಾರು ಪ್ರಮುಖ ಆದಾಯ ತೆರಿಗೆ ಗಡುವುಗಳಿವೆ. ಟಿಡಿಎಸ್, ಟಿಸಿಎಸ್, ಜಿಎಸ್‌ಟಿ ಮತ್ತು ಮುಂಗಡ ತೆರಿಗೆ ಪಾವತಿಗಳಿಗೆ ಗಡುವುಗಳನ್ನು ಒಳಗೊಂಡಿದೆ. ತೆರಿಗೆದಾರರು ದಂಡ ಮತ್ತು ತೊಂದರೆಗಳನ್ನು ತಪ್ಪಿಸಲು ಈ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.
Read Full Story

07:28 PM (IST) Jun 02

SBI ಲಾಕರ್​ನಲ್ಲಿದ್ದ 12 ಲಕ್ಷದ ಚಿನ್ನಾಭರಣ ಗಾಯಬ್​? ಬ್ಯಾಂಕ್ ಉಡಾಫೆ ಉತ್ತರ- ಪೊಲೀಸರಿಗೆ ದೂರು!

ಬೆಂಗಳೂರಿನ ಎಸ್​ಬಿಐ ಲಾಕರ್​ ಒಂದರಲ್ಲಿ ಇಟ್ಟಿದ್ದ 12 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಆಗಿದ್ದೇನು?

Read Full Story

07:19 PM (IST) Jun 02

ಕೆಎಸ್‌ಡಿಎಲ್‌ ವತಿಯಿಂದ 10 ಸಾವಿರ ಅರಣ್ಯ ರಕ್ಷಕರಿಗೆ ಸುರಕ್ಷಾ ಕಿಟ್ ವಿತರಣೆ!

ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (ಕೆಎಸ್ ಡಿಎಲ್) ವತಿಯಿಂದ ರಾಜ್ಯದ 10 ಸಾವಿರ ಅರಣ್ಯ ರಕ್ಷಕರು/ವೀಕ್ಷಕರು, ಕಾವಾಡಿಗಳು, ಮಾವುತರು ಮತ್ತು ಚಾಲಕರಿಗೆ ಸುರಕ್ಷಾ ಕಿಟ್ ವಿತರಿಸಲಾಗುವುದು.

Read Full Story

06:37 PM (IST) Jun 02

ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ, ಮ್ಯಾಚ್ ರದ್ದಾದರೆ ಚಾಂಪಿಯನ್ ಕಿರೀಟ ಯಾರಿಗೆ?

ಆರ್‌ಸಿಬಿ-ಪಂಜಾಬ್ ನಡುವಿನ ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಈಗಾಗಲೇ ಅಹಮ್ಮದಾಬಾದ್‌ನಲ್ಲಿ ಉತ್ತಮ ಮಳೆಯಾಗುತ್ತಿದೆ. ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಚಾಂಪಿಯನ್ ಕಿರೀಟ ಯಾರಿಗೆ?

Read Full Story

05:44 PM (IST) Jun 02

ತಮಿಳುನಾಡು ಚುನಾವಣೆ ಹೊಸ್ತಿಲಲ್ಲೇ ಎಐಎಡಿಎಂಕೆ ಮೈತ್ರಿಕೂಟಕ್ಕೆ ಡಿಎಂಡಿಕೆ ವಿದಾಯ,ಡಿಎಂಕೆ ಮೌನ!

ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೇವಲ 10 ತಿಂಗಳು ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಮೈತ್ರಿ ಲೆಕ್ಕಾಚಾರ  ಆರಂಭಿಸಿವೆ. ಡಿಎಂಕೆ ಮೈತ್ರಿಕೂಟದಲ್ಲಿ ಹಲವು ಪಕ್ಷಗಳಿದ್ದರೆ, ಎಐಎಡಿಎಂಕೆ ಮಹಾಮೈತ್ರಿ ರಚಿಸಲು ಯತ್ನಿಸುತ್ತಿದೆ. ಡಿಎಂಡಿಕೆ ತನ್ನ ಮೈತ್ರಿ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.

Read Full Story

05:41 PM (IST) Jun 02

ವಿಳಾಸ, ಮಿಸ್ಟೇಕ್ ಸೇರಿದಂತೆ ಯಾವುದೇ ಆಧಾರ್ ಅಪ್‌ಡೇಟ್ ಜೂ.14ರ ಬಳಿಕ ಶುಲ್ಕ

ವಿಳಾಸ ಬದಲಾವಣೆ, ತಪ್ಪಾಗಿರುವ ಸ್ಪೆಲ್ಲಿಂಗ್ ಸರಿಪಡಿಸುವುದು ಸೇರಿದಂತೆ ಯಾವುದೇ ಆಧಾರ್ ಅಪ್‌ಡೇಟ್ ಇನ್ನು ಫ್ರೀಯಾಗಿ ಸಿಗಲ್ಲ. ಜೂನ್ 14ರ ಬಳಿಕ ಪ್ರತಿ ಆಧಾರ್ ಅಪ್‌ಡೇಟ್‌ಗೆ ಶುಲ್ಕ ವಿಧಿಸಲಾಗುತ್ತದೆ. ಎಷ್ಟು ಪಾವತಿ ಮಾಡಬೇಕು. ಜೂನ್ 14ರ ಮೊದಲು ಉಚಿತವಾಗಿ ಮಾಡಬಹುದಾ?

Read Full Story

05:34 PM (IST) Jun 02

ಶಿವಕಾರ್ತಿಕೇಯನ್ ಮಗ ಪವನ್ ಮೊಟ್ಟಮೊದಲ ಹುಟ್ಟುಹಬ್ಬ ಆಚರಣೆ

ನಟ ಶಿವಕಾರ್ತಿಕೇಯನ್ ತಮ್ಮ ಕಿರಿಯ ಮಗ ಪವನ್‌ನ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Read Full Story

05:19 PM (IST) Jun 02

ಹೆಪ್ಪುಗಟ್ಟಿದ ಸಮುದ್ರದೊಳಗೆ 164 ವರ್ಷ ಹಳೆಯ ಬಂಗಾರದ ಪಾಕೆಟ್ ಗಡಿಯಾರ ಪತ್ತೆ!

ಲೇಡಿ ಎಲ್ಜಿನ್ ಹಡಗು ಮುಳುಗಿದ 164 ವರ್ಷಗಳ ನಂತರ, ಹಡಗಿನಲ್ಲಿದ್ದ ಬ್ರಿಟಿಷ್ ಪತ್ರಕರ್ತ ಹರ್ಬರ್ಟ್ ಇಂಗ್ರಾಮ್ ಅವರ ಚಿನ್ನದ ಪಾಕೆಟ್ ಗಡಿಯಾರ ಅವರ ಊರಿಗೆ ವಾಪಸ್ ಬಂದಿದೆ. 1860 ರಲ್ಲಿ ಮಿಚಿಗನ್ ಸರೋವರದಲ್ಲಿ ಸಂಭವಿಸಿದ ದುರಂತದಲ್ಲಿ ಹಡಗು ಮುಳುಗಿತ್ತು, ಸ್ಕೂಬಾ ಡೈವರ್‌ಗಳು ಗಡಿಯಾರ ಕಂಡುಹಿಡಿದರು.

Read Full Story

05:14 PM (IST) Jun 02

ಜೂನ್‌ನಲ್ಲಿ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ, ಇಲ್ಲಿದೆ 12 ರಜೆಯ ಪೂರ್ಣ ಪಟ್ಟಿ

2025ರ ಜೂನ್‌ನಲ್ಲಿ ಒಟ್ಟು 12 ಬ್ಯಾಂಕ್ ರಜಾದಿನಗಳಿವೆ. ರಜಾದಿನಗಳ ಪಟ್ಟಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಣಕಾಸು ವ್ಯವಹಾರಗಳಿಗೆ ಮೊದಲು ರಜಾ ಪಟ್ಟಿ ಪರಿಶೀಲಿಸಿ

Read Full Story

05:08 PM (IST) Jun 02

ಸೌದಿಯಲ್ಲಿ ಒಂದೇ ವಾರದಲ್ಲಿ 12,129 ಮಂದಿ ಬಂಧನ, ಕಾರಣ ಇದು

ಸೌದಿ ಅರೇಬಿಯಾದಲ್ಲಿ ದೇಶದ ವಾಸ್ತವ್ಯ ಮತ್ತು ಉದ್ಯೋಗ ಕಾನೂನುಗಳನ್ನು ಉಲ್ಲಂಘಿಸಿದವರನ್ನು ಮತ್ತು ಗಡಿ ಭದ್ರತಾ ನಿಯಮಗಳನ್ನು ಮುರಿದವರನ್ನು ಬಂಧಿಸಲಾಗಿದೆ.

Read Full Story

05:00 PM (IST) Jun 02

ಬರುತ್ತಿದೆ ಕೇವಲ 1 ಲಕ್ಷ ರೂ.ಗೆ ಲಿಜಿಯರ್ ಮಿನಿ ಎಲೆಕ್ಟ್ರಿಕ್ ಕಾರು, 192 ಕಿ.ಮಿ ಮೈಲೇಜ್

ಭಾರತದಲ್ಲಿ ಲಿಡಿಯರ್ ಮಿನಿ ಎಲೆಕ್ಟ್ರಿಕ್ ಕಾರು ರೋಡ್ ಟೆಸ್ಟಿಂಗ್ ಪೂರ್ಣಗೊಳಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರ ಬೆಲೆ ಕೇವಲ 1 ಲಕ್ಷ ರೂಪಾಯಿ. ಬಿಡುಗಡೆ ವೇಳೆ 30 ರಿಂದ 40 ಸಾವಿರ ರೂ ಹೆಚ್ಚಾಗಬಹುದು. ಆದರೆ 192 ಕಿಲೋಮೀಟರ್ ಮೈಲೇಜ್ ನೀಡಲಿದೆ.

Read Full Story

04:26 PM (IST) Jun 02

ಚೆನ್ನೈ ಮೆಟ್ರೋದಲ್ಲಿ ಭಾರತದ ಮೊದಲ ಅತಿ ಉದ್ದದ U-ಗಿರ್ಡರ್ ನಿರ್ಮಾಣ!

ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL), ರಾಮಪುರಂನಲ್ಲಿ 33.33 ಮೀಟರ್ ಉದ್ದದ U-ಗಿರ್ಡರ್ ಅನ್ನು ಯಶಸ್ವಿಯಾಗಿ ನಿರ್ಮಿಸಿದೆ. ಈ ಗಿರ್ಡರ್ ಭಾರತದ ಮೆಟ್ರೋ ಯೋಜನೆಗಳಲ್ಲಿ ಬಳಸಲಾದ ಅತಿ ಉದ್ದದ U-ಗಿರ್ಡರ್ ಆಗಿದೆ ಮತ್ತು ಇದನ್ನು ಕಾರಿಡಾರ್-5ರ ಎರಡನೇ ಹಂತದ ಯೋಜನೆಯ ಭಾಗವಾಗಿ ನಿರ್ಮಿಸಲಾಗಿದೆ.
Read Full Story

04:16 PM (IST) Jun 02

ಮ್ಯಾಕ್ಸ್‌ವೆಲ್ ಬಳಿಕ ಮತ್ತೋರ್ವ ಸ್ಪೋಟಕ ಬ್ಯಾಟರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್‌ಬೈ!

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಆದರೆ, ಟಿ20 ಲೀಗ್‌ಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.
Read Full Story

04:16 PM (IST) Jun 02

ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡಿದ ನಟ ಕಮಲ್ ಹಾಸನ್ ತಿರು*ಬೋಕಿ; ಪ್ರತಾಪ್ ಸಿಂಹ

ಕನ್ನಡ ಭಾಷೆಯ ಮೂಲದ ಬಗ್ಗೆ ಕಮಲ್ ಹಾಸನ್ ನೀಡಿರುವ ಹೇಳಿಕೆಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ. ಕನ್ನಡ ನಮ್ಮ ಅಸ್ಮಿತೆ, ಸಂಸ್ಕೃತಿ ಎಂದಿರುವ ಅವರು, ಕಮಲ್ ಹಾಸನ್ ಅವರನ್ನು ತಿರುಬೋಕಿ ಎಂದು ಕರೆದಿದ್ದಾರೆ. ಹಿಂದೂ ಮುಖಂಡರ ವಿರುದ್ಧದ ಕ್ರಮವನ್ನೂ ಪ್ರಶ್ನಿಸಿದ್ದಾರೆ.
Read Full Story

03:55 PM (IST) Jun 02

ಶಾರುಖ್ ಖಾನ್ ಬಾಯಿಗೆ ಈ ಲಡ್ಡು ಬಿದ್ದಿದ್ದು ನಿಜಾನಾ? ಫ್ಯಾನ್ಸ್ ಫುಲ್ ಖುಷ್ ಹುವಾ..!

ಕಳೆದ ವರ್ಷ ತಮಿಳಿನಲ್ಲಿ ಭರ್ಜರಿ ಗೆಲುವು ಸಾಧಿಸಿದ ಚಿತ್ರ 'ಲಬ್ಬರ್ ಪಂದು'. ಈ ಚಿತ್ರವನ್ನು ಹಿಂದಿಯಲ್ಲಿ ರೀಮೇಕ್ ಮಾಡಲಾಗುತ್ತಿದೆ ಎಂಬ ವದಂತಿ ಹಾಗೂ ಅದರಲ್ಲಿ ನಟಿಸಲಿರುವ ನಟರ ಬಗ್ಗೆ ಮಾಹಿತಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ.

Read Full Story

03:55 PM (IST) Jun 02

ಮುಂಬೈ vs ಪಂಜಾಬ್ ಪಂದ್ಯ ನೋಡಲು ಮುಖ ಮರೆಸಿಕೊಂಡ ಬಂದ ನಿಗೂಢ ವ್ಯಕ್ತಿ ಯಾರು?

ಐಪಿಎಲ್‌ನಲ್ಲಿ ಪಂಜಾಬ್-ಮುಂಬೈ ಪಂದ್ಯದ ವೇಳೆ ಮುಖ ಮರೆಸಿಕೊಂಡು ಆರ್‌ಸಿಬಿ ಟೋಪಿ ಹಾಕಿಕೊಂಡು ಕುಳಿತಿದ್ದ ವ್ಯಕ್ತಿ ಕೊಹ್ಲಿಯೋ ಅಥವಾ ಆರ್‌ಸಿಬಿ ಗೂಢಚಾರನೋ ಎಂಬ ಚರ್ಚೆ ನಡೆಯುತ್ತಿದೆ. ಪಂಜಾಬ್ ತಂತ್ರಗಳನ್ನು ತಿಳಿದುಕೊಳ್ಳಲು ಬಂದ ಗೂಢಚಾರ ಇವನು ಎಂದು ಕೆಲವು ಅಭಿಮಾನಿಗಳು ಹೇಳಿದ್ದಾರೆ  

Read Full Story

03:54 PM (IST) Jun 02

ಭಾರತದ ಅತೀ ದುಬಾರಿ ಕಾರು ನಂಬರ್ ಪ್ಲೇಟ್ ಮಾಲೀಕ ಯಾರು? ಅಂಬಾನಿ, ಸಿಂಘಾನಿಯಾ ಅಲ್ಲ

ಅಂಬಾನಿ, ಗೌತಮ್ ಸಿಂಘಾನಿಯಾ, ಅದಾನಿ ಸೇರಿದಂತೆ ಹಲವು ಉದ್ಯಮಿಗಳಲ್ಲಿ ಐಷಾರಾಮಿ ಕಾರುಗಳಿವೆ. ತಮ್ಮಿಷ್ಟದ ನಂಬರ್ ಹರಾಜಿನ ಮೂಲಕ ಖರೀದಿಸಿದ್ದಾರೆ. ಆದರೆ ಭಾರತದ ಅತೀ ದುಬಾರಿ ಕಾರು ರಿಜಿಸ್ಟ್ರೇಶನ್ ನಂಬರ್ ಹೊಂದಿದ ಮಾಲೀಕ ಇವರಲ್ಲ. ಯಾರ ಬಳಿ ಇದೆ ದುಬಾರಿ ನಂಬರ್ ಪ್ಲೇಟ್?

Read Full Story

03:51 PM (IST) Jun 02

ಬೆಂಗಳೂರು 3BHK ಫ್ಲಾಟ್‌ಗೆ ಮಾಸಿಕ ₹2.7 ಲಕ್ಷ ಬಾಡಿಗೆ! ನೋಬ್ರೋಕರ್ ಪೋಸ್ಟ್ ವೈರಲ್!

ಬೆಂಗಳೂರಿನ ಹರಳೂರಿನಲ್ಲಿ 3 BHK ಫ್ಲಾಟ್ ಗೆ 2.7 ಲಕ್ಷ ರೂ. ಮಾಸಿಕ ಬಾಡಿಗೆಗೆ ನೀಡಲಾಗುತ್ತಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಾಡಿಗೆ ದರದ ಬಗ್ಗೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Read Full Story

03:49 PM (IST) Jun 02

ಬ್ರೆಜಿಲ್ ಆರ್ಥಿಕತೆಯನ್ನೇ ಬದಲಿಸಿದ ಭಾರತೀಯ ದೇಸಿ ಗೋವು ಇದು - ಅಲ್ಲಿ ಇದರ ಹೆಸರಲ್ಲಿದೆ ನಾಣ್ಯ, ಸ್ಮಾರಕ

ಅದು 1940ರ ಸಮಯ 10 ವರ್ಷದ ಕೃಷ್ಣ ಗುಜರಾತ್‌ನ ಭಾವನಗರದಿಂದ ಬ್ರೆಜಿಲ್‌ಗೆ ಪ್ರಯಾಣ ಬೆಳೆಸಿದ್ದ, ಹಾಗೂ ಅಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಯಾವುದೋ ವ್ಯಕ್ತಿ ಬಗ್ಗೆ ಮಾತನಾಡುತ್ತಿಲ್ಲ, ಇದು ಗುಜರಾತ್‌ನ ಗಿರ್ ಎತ್ತೊಂದರ ಕತೆ.

Read Full Story

03:44 PM (IST) Jun 02

ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಧನುಷ್; 'ಒಂದು ಇಟ್ಟಿಗೆಯೂ ಅಲುಗಾಡಲ್ಲ' ಎಂದಿದ್ಯಾಕೆ?

ನಟ ಧನುಷ್ ನಟಿಸಿರುವ 'ಕುಬೇರ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅವರ ಭಾಷಣ ಸಂಚಲನ ಮೂಡಿಸಿದೆ.

Read Full Story

03:24 PM (IST) Jun 02

ಪಹಲ್ಗಾಮ್ ದಾಳಿ ಖಂಡಿಸಿ ಭಾರತದ ಸಂಯಮ ಶ್ಲಾಘಿಸಿದ ಮಲೇಷ್ಯಾ

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಮಲೇಷ್ಯಾ ಖಂಡಿಸಿದೆ ಮತ್ತು ಭಾರತದ ಸಂಯಮವನ್ನು ಶ್ಲಾಘಿಸಿದೆ. ಭಾರತದ ಸರ್ವಪಕ್ಷ ಸಂಸದೀಯ ನಿಯೋಗವು ಮಲೇಷ್ಯಾದ ರಾಜಕೀಯ ನಾಯಕರನ್ನು ಭೇಟಿ ಮಾಡಿ ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಬೆಂಬಲವನ್ನು ಕೋರಿದೆ.
Read Full Story

03:06 PM (IST) Jun 02

ತಾವರಗೇರಾ ಪಟ್ಟಣದ ಸರ್ಕಲ್‌ನಲ್ಲಿ ಯುವಕನ ಕೊಚ್ಚಿ ಕೊಲೆ; ಮಹಿಳೆ ಸೇರಿ 8 ಮಂದಿ ಬಂಧನ

ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಹಳೆಯ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು 8 ಜನರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
Read Full Story

02:39 PM (IST) Jun 02

IPL ಫೈನಲ್ ಪ್ರವೇಶಿಸಿದ ಪಂಜಾಬ್, ದಿಢೀರ್ ನಿವೃತ್ತಿ ಘೋಷಿಸಿದ ಆಸೀಸ್ ಸ್ಟಾರ್ ಕ್ರಿಕೆಟರ್!

ಪಂಜಾಬ್ ಕಿಂಗ್ಸ್ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. 

Read Full Story

01:12 PM (IST) Jun 02

ಬಿಜೆಪಿಯ ಅರುಣ್‌ ಪುತ್ತಿಲ ಕಲಬುರಗಿಗೆ ಗಡಿಪಾರು, ದಕ್ಷಿಣ ಕನ್ನಡದ ಪೊಲೀಸ್ ಕ್ರಮಕ್ಕೆ ಹಿಂದೂ ಕಾರ್ಯಕರ್ತರ ಕಿಡಿ

ಪುತ್ತೂರಿನ ಬಿಜೆಪಿ ಮುಖಂಡ ಅರುಣ್ ಪುತ್ತಿಲಗೆ ಗಡಿಪಾರು ನೋಟಿಸ್ ಜಾರಿ. ಹಿಂದೂ ಕಾರ್ಯಕರ್ತರ ಮನೆಗಳಿಗೆ ಪೊಲೀಸರ ಭೇಟಿ, ಮಾಹಿತಿ ಸಂಗ್ರಹಕ್ಕೆ ಆಕ್ರೋಶ. ವಿಎಚ್‌ಪಿ ಸೇರಿದಂತೆ ಹಿಂದೂ ಸಂಘಟನೆಗಳಿಂದ ಖಂಡನೆ.
Read Full Story

01:09 PM (IST) Jun 02

ಸಂತಾನೋತ್ಪತ್ತಿಗೆ ಬಂದ ಕಪ್ಪೆಗಳ ಕಲರ್​ಫುಲ್​ ಲೋಕ! ಅಬ್ಬಬ್ಬಾ ಏನೀ ವಿಸ್ಮಯ?

ಕಪ್ಪೆಗಳ ಕುತೂಹಲದ ಲೋಕದಲ್ಲೊಂದು ಇಂಡಿಯನ್​ ಬುಲ್​ಫ್ರಾಗ್​. ಮುಂಗಾರು ಮಳೆಯಲ್ಲಿ ಸಂತಾನೋತ್ಪತ್ತಿ ಮಾಡುವ ಸಮಯದಲ್ಲಿನ ಕಲರ್​ಫುಲ್​ ಲೋಕದ ವಿಡಿಯೋ ಇಲ್ಲಿದೆ...

Read Full Story

12:52 PM (IST) Jun 02

ಈಶಾನ್ಯ ಭಾರತದಲ್ಲಿ ಮಳೆಯ ರೌದ್ರನರ್ತನ - ಕಣ್ಣ ಮುಂದೆಯೇ ಕೊಚ್ಚಿ ಹೋದ ಮನೆ

ಈಶಾನ್ಯ ಭಾರತದಲ್ಲಿ ಮಳೆಯಿಂದಾಗಿ ಭಯಾನಕ ಪ್ರವಾಹ ಉಂಟಾಗಿದ್ದು, ಮನೆಗಳು ಕೊಚ್ಚಿ ಹೋಗಿವೆ.

Read Full Story

12:25 PM (IST) Jun 02

ಗುಕೇಶ್ ಗೆಲುಮ್ಯಾಗ್ನಸ್ ಕಾರ್ಲ್‌ಸನ್ ಸೋಲಿಸಿದ ಗುಕೇಶ್! ವಿಶ್ವ ನಂ.1 ಆಟಗಾರನಿಂದ ಚೆಸ್‌ ಬೋರ್ಡ್‌ಗೆ ಪಂಚ್, ವಿಡಿಯೋ ವೈರಲ್

19 ವರ್ಷದ ಭಾರತದ ಯುವ ಚೆಸ್ ಚಾಂಪಿಯನ್ ಡಿ.ಗುಕೇಶ್, ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಮೊದಲ ಕ್ಲಾಸಿಕಲ್ ಗೆಲುವು ದಾಖಲಿಸಿದ್ದಾರೆ. ಈ ಸೋಲಿನಿಂದ ಕಾರ್ಲ್‌ಸನ್ ಬೋರ್ಡ್‌ಗೆ ಪಂಚ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು ಟ್ರೋಲ್‌ಗೆ ಒಳಗಾಗಿದ್ದಾರೆ. 

Read Full Story

12:25 PM (IST) Jun 02

ಕಮಲ್ ಹಾಸನ್ 'ಥಗ್ ಲೈಫ್' ಸಿನಿಮಾ ಮುಂಗಡ ಬುಕ್ಕಿಂಗ್ ಆರಂಭ, ಆದರೆ ಕರ್ನಾಟಕದಲ್ಲಿ ಇಲ್ಲ!

'ನಾಯಗನ್' ಎಂಬ ಸಾರ್ವಕಾಲಿಕ ಕ್ಲಾಸಿಕ್ ಚಿತ್ರವನ್ನು ನೀಡಿದ ಕಮಲ್ ಹಾಸನ್ ಮತ್ತು ಮಣಿರತ್ನಂ ಜೋಡಿ, ಸುಮಾರು ಮೂರೂವರೆ ದಶಕಗಳ ನಂತರ ಮತ್ತೆ ಒಂದಾಗಿರುವುದು ಸಿನಿ ರಸಿಕರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಚಿತ್ರವು ಕೇವಲ ಒಂದು ಮನರಂಜನಾತ್ಮಕ ಚಿತ್ರವಾಗಿರದೇ

Read Full Story

12:17 PM (IST) Jun 02

ಉಕ್ರೇನ್‌ನ 162 ಡ್ರೋನ್‌ ಹೊಡೆದುರುಳಿಸಲಾಗಿದೆ ಎಂದ ರಷ್ಯಾ, ಇಸ್ತಾನ್‌ಬುಲ್ ಮಾತುಕತೆ ಮೇಲೆ ಎಲ್ಲರ ಚಿತ್ತ

ಮುಂದುವರಿದ ಹೋರಾಟ ಮತ್ತು ನಿಂತುಹೋದ ಮಾತುಕತೆಗಳ ನಡುವೆ ಇಸ್ತಾನ್‌ಬುಲ್‌ನಲ್ಲಿ ಹೊಸ ಶಾಂತಿ ಮಾತುಕತೆಗಳು ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು ರಷ್ಯಾ 162 ಉಕ್ರೇನಿಯನ್ ಡ್ರೋನ್‌ಗಳನ್ನು ತಡೆದಿದೆ ಎಂದು ಹೇಳಿಕೊಂಡಿದೆ.

Read Full Story

12:11 PM (IST) Jun 02

ಫಾರಿನ್‌ನಲ್ಲಿ ಓದಿದ ಕನ್ನಡಪ್ರಭ ರೈತರತ್ನ ವಿಜೇತನ ಪುತ್ರಿಗೆ ಹೊಲದಲ್ಲಿ ವಿವಾಹ!

ಮದುವೆಗಾಗಿ ಪಟ್ಟಣ, ನಗರ ಪ್ರದೇಶದ ಛತ್ರಗಳಿಗೆ ಎಡತಾಕುವವರ ನಡುವೆ ಜಮೀನಿನಲ್ಲೇ ಅದ್ಧೂರಿಯಾಗಿ ಮದುವೆ‌ ಮಾಡುವುದು ಹೇಗೆ ಎಂದು ಈ ರೈತ ತೋರಿಸಿದ್ದಾರೆ.

Read Full Story

11:42 AM (IST) Jun 02

ಟರ್ಕಿಶ್ ನಿರ್ವಹಣಾ ಸೇವೆಯನ್ನು ಕೈಬಿಡಲು ನಿರ್ಧರಿಸಿದ ಏರ್ ಇಂಡಿಯಾ

ರಾಜಕೀಯ ಮತ್ತು ಭದ್ರತಾ ಕಾರಣಗಳಿಗಾಗಿ ಏರ್ ಇಂಡಿಯಾ ತನ್ನ ಬೋಯಿಂಗ್ 777 ವಿಮಾನಗಳ ನಿರ್ವಹಣೆಗಾಗಿ ಟರ್ಕಿಶ್ ಟೆಕ್ನಿಕ್ ಜೊತೆಗಿನ ಸಂಬಂಧ ಕಡಿದುಕೊಳ್ಳುತ್ತಿದೆ. ಏರ್ ಇಂಡಿಯಾ ತನ್ನ ವಿಮಾನಗಳನ್ನು ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ ಮತ್ತು ಅಮೆರಿಕದಲ್ಲಿರುವ MRO ಕೇಂದ್ರಗಳಿಗೆ ಕಳುಹಿಸುತ್ತದೆ.

Read Full Story

More Trending News