MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಟರ್ಕಿಶ್ ನಿರ್ವಹಣಾ ಸೇವೆಯನ್ನು ಕೈಬಿಡಲು ನಿರ್ಧರಿಸಿದ ಏರ್ ಇಂಡಿಯಾ

ಟರ್ಕಿಶ್ ನಿರ್ವಹಣಾ ಸೇವೆಯನ್ನು ಕೈಬಿಡಲು ನಿರ್ಧರಿಸಿದ ಏರ್ ಇಂಡಿಯಾ

ರಾಜಕೀಯ ಮತ್ತು ಭದ್ರತಾ ಕಾರಣಗಳಿಗಾಗಿ ಏರ್ ಇಂಡಿಯಾ ತನ್ನ ಬೋಯಿಂಗ್ 777 ವಿಮಾನಗಳ ನಿರ್ವಹಣೆಗಾಗಿ ಟರ್ಕಿಶ್ ಟೆಕ್ನಿಕ್ ಜೊತೆಗಿನ ಸಂಬಂಧ ಕಡಿದುಕೊಳ್ಳುತ್ತಿದೆ. ಏರ್ ಇಂಡಿಯಾ ತನ್ನ ವಿಮಾನಗಳನ್ನು ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ ಮತ್ತು ಅಮೆರಿಕದಲ್ಲಿರುವ MRO ಕೇಂದ್ರಗಳಿಗೆ ಕಳುಹಿಸುತ್ತದೆ.

2 Min read
Gowthami K
Published : Jun 02 2025, 11:42 AM IST| Updated : Jun 02 2025, 11:45 AM IST
Share this Photo Gallery
  • FB
  • TW
  • Linkdin
  • Whatsapp
17
Image Credit : Getty

ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ, ತನ್ನ ಫ್ಲೀಟ್‌ನಲ್ಲಿ ಬೋಯಿಂಗ್ 777 ವಿಮಾನಗಳಿಗೆ ಸಮಗ್ರ ನಿರ್ವಹಣೆಯನ್ನು ಒದಗಿಸುವ ಪ್ರಮುಖ ಜಾಗತಿಕ ವಾಯುಯಾನ ಸೇವಾ ಪೂರೈಕೆದಾರ ಟರ್ಕಿಶ್ ಟೆಕ್ನಿಕ್ ಜೊತೆಗಿನ ತನ್ನ ಸಂಬಂಧವನ್ನು ಕೊನೆಗೊಳಿಸಲು ಸಜ್ಜಾಗಿದೆ. ತನ್ನ ವೈಡ್-ಬಾಡಿ ವಿಮಾನಗಳ (ಅಂದರೆ ಬೃಹತ್ ದೂರದೂರದ ವಿಮಾನಗಳ) ನಿರ್ವಹಣೆಗೆ ಟರ್ಕಿಯ ಕಂಪನಿಯಾದ ಟರ್ಕಿಶ್ ಟೆಕ್ನಿಕ್ ಮೇಲೆ ಇರುವ ಅವಲಂಬನೆಯನ್ನು ನಿಧಾನವಾಗಿ ಕಡಿಮೆ ಮಾಡುತ್ತಿರುವುದಾಗಿ ಘೋಷಿಸಿದ್ದು, ಈ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ ಇತ್ತೀಚೆಗೆ ಭಾರತ ಮತ್ತು ಟರ್ಕಿಯ ನಡುವೆ ಉಂಟಾದ ರಾಜಕೀಯ ವಿಷಯಗಳು ಮತ್ತು ಭದ್ರತಾ ಸಂಬಂಧಿ ವಿಚಾರಗಳಾಗಿವೆ.

27
Image Credit : our own

ಈ ಬಗ್ಗೆ ಸ್ಪಷ್ಟನೆ ನೀಡಿರುವ ಏರ್ ಇಂಡಿಯಾದ ಸಿಇಒ ಮತ್ತು ಎಂಡಿ ಕ್ಯಾಂಪ್‌ಬೆಲ್ ವಿಲ್ಸನ್ ಈ ರೀತಿಯಲ್ಲಿ ವ್ಯವಹಾರ ಮುಂದುವರಿಸುವ ಬಗ್ಗೆ ಕಾಳಜಿ ಇದ್ದರೆ, ನಾವು ಪರ್ಯಾಯಗಳನ್ನು ಕಂಡುಕೊಳ್ಳುತ್ತೇವೆ.ನಾವು ಸಾರ್ವಜನಿಕ ಭಾವನೆಗಳನ್ನು ಗೌರವಿಸಲು ಬಯಸುತ್ತೇವೆ ಎಂದಿದ್ದಾರೆ. ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋಗೆ, ಟರ್ಕಿಶ್ ಏರ್‌ಲೈನ್ಸ್‌ನಿಂದ ಮೂರು ತಿಂಗಳಿಗಿಂತ ಹೆಚ್ಚು ಕಾಲ ವೆಟ್-ಲೀಸ್ ಪಡೆದಿರುವ ಎರಡು ವಿಮಾನಗಳನ್ನು ನಿರ್ವಹಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದ ಕೆಲವೇ ದಿನಗಳಲ್ಲಿ ಏರ್ ಇಂಡಿಯಾ ತನ್ನ ಕಠಿಣ ನಿರ್ಧಾರವನ್ನು ಪ್ರಕಟಿಸಿದೆ. ಇದಕ್ಕೂ ಮೊದಲು, ದೇಶದ ಒಂಬತ್ತು ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಟರ್ಕಿ-ಸಂಬಂಧಿತ ವಾಯುಯಾನ ಭೂ ನಿರ್ವಹಣೆ ಸೇವೆಗಳ ಕಂಪನಿಯಾದ ಸೆಲೆಬಿಯ ಭದ್ರತಾ ಅನುಮತಿಯನ್ನು ಸರ್ಕಾರ ರದ್ದು ಮಾಡಿತ್ತು.

37
Image Credit : google

ಮೇ 2025 ರಲ್ಲಿ, ಟರ್ಕಿಯ ಸರ್ಕಾರ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿತು ಮತ್ತು ಭಾರತದ ಭಯೋತ್ಪಾದನೆ ವಿರುದ್ಧದ ಕ್ರಮಗಳನ್ನು ಟೀಕಿಸಿತು. ಈ ನಡೆಯು ಭಾರತದ ರಾಜಕೀಯ ವಲಯದಲ್ಲಿ ವಿರೋಧಕ್ಕೆ ಗುರಿಯಾಯಿತು. ಪರಿಣಾಮವಾಗಿ, ಭಾರತದ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಮೇ 15ರಂದು ಟರ್ಕಿಯ ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಭದ್ರತಾ ಅನುಮತಿಯನ್ನು ರದ್ದುಮಾಡಿತು.

47
Image Credit : our own

ಏರ್ ಇಂಡಿಯಾ ಕ್ರಮಕ್ಕೆ ಏನು ಕಾರಣ?

ಈ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ, ಏರ್ ಇಂಡಿಯಾ ಸಂಸ್ಥೆಯ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರು, "ಭಾರತದ ಭಾವನೆ ಮತ್ತು ದೇಶದ ಭದ್ರತೆ ನಮ್ಮಿಗೆ ಮುಖ್ಯ" ಎಂದು ಹೇಳಿದರು. ಟರ್ಕಿಶ್ ಟೆಕ್ನಿಕ್ ಪ್ರಸ್ತುತ ಏರ್ ಇಂಡಿಯಾದ ಬೋಯಿಂಗ್ 777 ಮತ್ತು 787 ವಿಮಾನಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಇನ್ನು ಮುಂದೆ ಈ ಕೆಲಸವನ್ನು ಇತರೆ ದೇಶಗಳ MRO (Maintenance, Repair and Overhaul) ಸೌಲಭ್ಯಗಳಿಗೆ ಮರುನಿರ್ದೇಶಿಸಲು ಏರ್ ಇಂಡಿಯಾ ಯೋಜಿಸಿದೆ.

57
Image Credit : our own

ಟರ್ಕಿಯ ಬದಲಿಗೆ ಎಲ್ಲಿ?

ವಿಲ್ಸನ್ ಅವರ ಪ್ರಕಾರ, ಅಂತರಾಲದಲ್ಲಿ ಏರ್ ಇಂಡಿಯಾ ತನ್ನ ವಿಮಾನಗಳನ್ನು ಮಧ್ಯಪ್ರಾಚ್ಯ, ಆಗ್ನೇಯ ಏಷ್ಯಾ, ಅಮೆರಿಕಾದಂತಹ ಸ್ಥಳಗಳಲ್ಲಿ ಇರುವ MRO ಕೇಂದ್ರಗಳಿಗೆ ಕಳುಹಿಸುತ್ತದೆ. ಇದನ್ನು ತಾತ್ಕಾಲಿಕವಾಗಿ ಮಾಡಲಾಗುತ್ತಿದ್ದು, ಈ ನಡುವೆಯೇ ಭಾರತದಲ್ಲಿಯೇ ಸ್ವಂತ ನಿರ್ವಹಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ.

67
Image Credit : our own

ಇತ್ತೀಚೆಗಷ್ಟೆ, DGCA (ನಾಗರಿಕ ವಿಮಾನಯಾನ ನಿರ್ದೇಶನಾಲಯ) ಇಂಡಿಗೋಗೆ, ಟರ್ಕಿಶ್ ಏರ್‌ಲೈನ್ಸ್‌ನಿಂದ ಲೀಸ್ ಮಾಡಿಕೊಳ್ಳಲಾದ 2 ಬೋಯಿಂಗ್ 777 ವಿಮಾನಗಳ ನಿರ್ವಹಣೆಗೆ ಮೂರು ತಿಂಗಳ ವಿಸ್ತರಣೆಯನ್ನು ನೀಡಿದೆ. ಈ ಅವಧಿ ಆಗಸ್ಟ್ 31, 2025ರ ತನಕ ಇರುತ್ತದೆ. ಇದಲ್ಲದೆ, ಇಂಡಿಗೋ ಸಂಸ್ಥೆ ಕೂಡ 30 ಹೊಸ ಏರ್‌ಬಸ್ A350 ವೈಡ್-ಬಾಡಿ ವಿಮಾನಗಳ ಆರ್ಡರ್ ನೀಡಿದ್ದು, ಭಾರತದಲ್ಲಿ ದೊಡ್ಡ ವಿಮಾನಗಳ ಬಳಕೆ ಹೆಚ್ಚು ಆಗುತ್ತಿರುವುದನ್ನು ಸೂಚಿಸುತ್ತದೆ. ಇದೀಗ ಏರ್ ಇಂಡಿಯಾ ಬಳಿ 64 ವೈಡ್-ಬಾಡಿ ವಿಮಾನಗಳು ಸೇರಿದಂತೆ ಒಟ್ಟು 191 ವಿಮಾನಗಳ ಫ್ಲೀಟ್ ಇದೆ.

77
Image Credit : our own

ಏರ್ ಇಂಡಿಯಾದ ಆರ್ಥಿಕ ಬೆಳವಣಿಗೆ

ಸಿಇಒ ವಿಲ್ಸನ್ ಅವರ ಪ್ರಕಾರ, ಖಾಸಗೀಕರಣದ ನಂತರ ಏರ್ ಇಂಡಿಯಾ ಉತ್ತಮ ಬೆಳವಣಿಗೆಯನ್ನು ಸಾಧಿಸುತ್ತಿದೆ. ಪ್ರಯಾಣಿಕರ ಆದಾಯ ಎರಡು ಪಟ್ಟು ಹೆಚ್ಚಿದ್ದು, ಸರಕು ಸಾಗಣೆಯಲ್ಲಿ ಆದಾಯ ಮೂರು ಪಟ್ಟು ಹೆಚ್ಚಾಗಿದೆ. ಉತ್ತಮ ವ್ಯವಸ್ಥಿತ ವ್ಯವಸ್ಥೆ, ವಿಶ್ವಾಸಾರ್ಹ ಸರಕು ಸಾಗಣೆ ಮತ್ತು ಉತ್ತಮ ಉತ್ಪನ್ನ ವಿತರಣೆಯೊಂದಿಗೆ ನಾವು ಗಟ್ಟಿಯಾದ ಪ್ರತಿಸ್ಪರ್ಧಿಗಳಾಗಿ ಹೊರಹೊಮ್ಮುತ್ತಿದ್ದೇವೆ ಎಂದು ಅವರು ಹೇಳಿದರು.

ಟರ್ಕಿಯ ರಾಜಕೀಯ ನಿಲುವು ಮತ್ತು ಭದ್ರತಾ ಕಳವಳಗಳ ಹಿನ್ನೆಲೆಯಲ್ಲಿ, ಏರ್ ಇಂಡಿಯಾ ತನ್ನ ವಿಮಾನಗಳ ನಿರ್ವಹಣೆಯಲ್ಲಿ ಹೊಸ ಮಾರ್ಗವನ್ನು ಅನುಸರಿಸುತ್ತಿದೆ. ಇದು ತಾತ್ಕಾಲಿಕವಾಗಿ ಇತರೆ ದೇಶಗಳಲ್ಲಿ ಸೇವೆ ಪಡೆಯುವ ಮೂಲಕ ನಡೆಯುತ್ತಿದ್ದು, ಭವಿಷ್ಯದಲ್ಲಿ ಭಾರತದಲ್ಲಿಯೇ ಶಕ್ತಿಯಾದ ನಿರ್ವಹಣಾ ವ್ಯವಸ್ಥೆ ನಿರ್ಮಿಸಲು ಪ್ರೇರಣೆ ನೀಡುತ್ತದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ವಿಮಾನಯಾನ ಸಂಸ್ಥೆಗಳು
ಪ್ರವಾಸ
ಟರ್ಕಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved