ಬರುತ್ತಿದೆ ಕೇವಲ 1 ಲಕ್ಷ ರೂ.ಗೆ ಲಿಜಿಯರ್ ಮಿನಿ ಎಲೆಕ್ಟ್ರಿಕ್ ಕಾರು, 192 ಕಿ.ಮಿ ಮೈಲೇಜ್
ಭಾರತದಲ್ಲಿ ಲಿಡಿಯರ್ ಮಿನಿ ಎಲೆಕ್ಟ್ರಿಕ್ ಕಾರು ರೋಡ್ ಟೆಸ್ಟಿಂಗ್ ಪೂರ್ಣಗೊಳಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರ ಬೆಲೆ ಕೇವಲ 1 ಲಕ್ಷ ರೂಪಾಯಿ. ಬಿಡುಗಡೆ ವೇಳೆ 30 ರಿಂದ 40 ಸಾವಿರ ರೂ ಹೆಚ್ಚಾಗಬಹುದು. ಆದರೆ 192 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಭಾರತದಲ್ಲಿ ಕಳೆದೆರಡು ವರ್ಷಗಳಿಂದ ಹಲವು ಟೆಸ್ಟಿಂಗ್ ಪೂರ್ಣಗೊಳಿಸಿದ ಫ್ರೆಂಚ್ ಕಾರು ಲಿಜಿಯರ್ ಗುಡ್ ನ್ಯೂಸ್ ನೀಡಿದೆ. ಶೀಘ್ರದಲ್ಲೇ ಲಿಜಿಯರ್ ಮಿನಿ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಫ್ರೆಂಚ್ ಆಟೋಮೊಬೈಲ್ ಕಂಪನಿಯ ಈ ಕಾರು ವಿಶ್ವದ ಅತೀ ಕಡಿಮೆ ಬೆಲೆಯ ಕಾರು ಹಾಗೂ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರಾಗಿದೆ. ಈ ಕಾರು ಸದ್ಯ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಂಜಿ ಕಾಮೆಟ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.
ಲಿಜಿಯರ್ ಮಿನಿ EV, ಫ್ರೆಂಚ್ ಆಟೋಮೊಬೈಲ್ ಕಂಪನಿಯ ಟು ಡೋರ್ ಹ್ಯಾಚ್‌ಬ್ಯಾಕ್ ಕಾರಾಗಿದೆ..ಭಾರತದಲ್ಲಿ ಇದೀಗ ರೋಡ್ ಟೆಸ್ಟಿಂಗ್ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಎಲ್ಲರನ್ನು ಅಚ್ಚರಿಗೊಳಿಸಿರುವುದು ಇದರ ಬೆಲೆ ಕಾರಣ ಕಂಪನಿ ಈ ಕಾರನ್ನು 1 ಲಕ್ಷ ರೂಪಾಯಿಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಆದರೆ ಈಗಾಗಲೇ ಬಿಡುಗಡೆ ವಿಳಂಬವಾಗಿರುವ ಕಾರಣ ಈ ಕಾರಿನ ಬೆಲೆ 50 ಸಾವಿರ ರೂ ವರೆಗೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾದಲ್ಲಿ ಲಿಜಿಯರ್ ಮಿನಿ ಎಲೆಕ್ಟ್ರಿಕ್ ಕಾರಿನ ಬೆಲೆ 1.5 ಲಕ್ಷ ರೂಪಾಯಿಿಗೆ ಏರಿಕೆಯಾಗಲಿದೆ.
ಲಿಜಿಯರ್ ಮಿನಿ EVಯಲ್ಲಿ ಆ್ಯಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇದೆ. ರಿವರ್ಸ್ ಕ್ಯಾಮೆರಾ, ABS ಮತ್ತು ಏರ್‌ಬ್ಯಾಗ್‌ಗಳಂತಹ ಸೇಫ್ಟಿ ಫೀಚರ್ಸ್ ಕೂಡ ಇದೆ. ಲಿಜಿಯರ್ ಮಿನಿ EV ಬೇರೆ ಬೇರೆ ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ. ಟಾಪ್ ಮಾಡೆಲ್ 12.42 kWh ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 192 ಕಿ.ಮೀ ವರೆಗೆ ಹೋಗುತ್ತದೆ. ಕಡಿಮೆ ಬೆಲೆಯ ಮಾಡೆಲ್‌ಗಳು 63 ಕಿ.ಮೀ ಮತ್ತು 123 ಕಿ.ಮೀ ಮಾತ್ರ ಮೈಲೇಜ್ ನೀಡಲಿದೆ.
ಬೆಲೆ ಬಗ್ಗೆ ಎಲ್ಲರ ಪ್ರಶ್ನೆ
ಲಿಜಿಯರ್ ಮಿನಿ ಕಾರಿನ ಕುರಿತು ಹಲವರು ಪ್ರಶ್ನಿಸುತ್ತಿದ್ದಾರೆ. ಎಂಜಿ ಕಾಮೆಟ್ ಕಾರಿಗೆ ಪ್ರತಿಸ್ಪರ್ಧಿ ಎಂದೇ ಗುರುತಿಸಿಕೊಂಡಿರುವ ಲಿಜಿಯರ್ ಇಷ್ಟು ಕಡಿಮೆ ಬೆಲೆಗೆ ಸಿಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಎಂಜಿ ಕಾಮೆಟ್ ಕಾರಿನ ಬೆಲೆ 6.50 ಲಕ್ಷ ರೂಪಾಯಿಯಿಂದ 8.75 ಲಕ್ಷ ರೂ ವರೆಗೆ ಇದೆ. ಹೀಗಾಗಿ ಲಿಜಿಯರ್ ಮಿನಿ ಕಾರಿನ ಆರಂಭಿಕ ಬೆಲೆ 6 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಆದರೆ ಲಿಜಿಯರ್ ಮಿನಿ ಕಾರಿನ ಬೆಲೆ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.
ಬಿಡುಗಡೆ ಯಾವಾಗ
ಲಿಜಿಯರ್ ಮಿನಿ ಕಾರು ಬಿಡುಗಡೆ ದಿನಾಂಕ ಸ್ಪಷ್ಟವಿಲ್ಲ. 2024ರಿಂದ ಕಾರು ಅಭಿವದ್ಧಿಪಡಿಸಲಾಗುತ್ತಿದೆ. ಹಲವು ರೀತಿ ಟೆಸ್ಟಿಂಗ್ ಪೂರ್ಣಗೊಳಿಸಿದೆ. ಇದರ 2025ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿತ್ತು. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ.