ವಿಳಾಸ ಬದಲಾವಣೆ, ತಪ್ಪಾಗಿರುವ ಸ್ಪೆಲ್ಲಿಂಗ್ ಸರಿಪಡಿಸುವುದು ಸೇರಿದಂತೆ ಯಾವುದೇ ಆಧಾರ್ ಅಪ್‌ಡೇಟ್ ಇನ್ನು ಫ್ರೀಯಾಗಿ ಸಿಗಲ್ಲ. ಜೂನ್ 14ರ ಬಳಿಕ ಪ್ರತಿ ಆಧಾರ್ ಅಪ್‌ಡೇಟ್‌ಗೆ ಶುಲ್ಕ ವಿಧಿಸಲಾಗುತ್ತದೆ. ಎಷ್ಟು ಪಾವತಿ ಮಾಡಬೇಕು. ಜೂನ್ 14ರ ಮೊದಲು ಉಚಿತವಾಗಿ ಮಾಡಬಹುದಾ?

ನವದೆಹಲ(ಜೂ.02) ಆಧಾರ್ ಅತೀ ಮುಖ್ಯ ಹಾಗೂ ಅತ್ಯವಶ್ಯಕ ಡಾಕ್ಯುಮೆಂಟ್. ಸರ್ಕಾರದ ಯಾವುದೇ ಸವಲತ್ತು ಪಡೆಯಲು, ರಿಜಿಸ್ಟ್ರೇಶನ್ ಸೇರಿದಂತೆ ಇತರೆಡೆ ಪ್ರಮುಖ ದಾಖಲೆಯಾಗಿ ಆಧಾರ್ ಕಾರ್ಡ್ ಪಡೆಯುತ್ತಾರೆ. 10 ವರ್ಷಕ್ಕಿಂತ ಹಳೇ ಆಧಾರ್ ಅಪ್‌ಡೇಟ್, ವಿಳಾಸ ಬದಲು, ಸ್ಪೆಲ್ಲಿಂಗ್ ಮಿಸ್ಟೇಕ್ ಸರಿಪಿಡಿಸುವುದು ಸೇರಿದಂತೆ ಆಧಾರ್ ಅಪ್‌ಡೇಟ್ ಮಾಡುವ ಅನಿವಾರ್ಯತೆ ಪ್ರತಿಯೊಬ್ಬರಿಗೂ ಎದುರಾಗಲಿದೆ. ಇದುವರೆಗೆ ಆಧಾರ್ ಅಪ್‌ಡೇಟ್ ಎಷ್ಟು ಬಾರಿ ಮಾಡಿದರೂ ಉಚಿತವಾಗಿತ್ತು. ಆದರೆ ಇನ್ನು ಮುಂದೆ ಆಧಾರ್ ಅಪ್‌ಡೇಟ್ ಮಾಡುವುದು ಉಚಿತವಲ್ಲ. ಸರ್ಕಾರಕ್ಕೆ ಶುಲ್ಕ ಪಾವತಿಸಬೇಕು. ಜೂನ್ 14ರ ಬಳಿಕ ಪ್ರತಿ ಆಧಾರ್ ಅಪ್‌ಡೇಟ್‌ಗೆ ಶುಲ್ಕ ಪಾವತಿಸಬೇಕು.

ಜೂನ್ 14ರ ವರೆಗೆ ಉಚಿತ, ಬಳಿಕ ಶುಲ್ಕ

ಆಧಾರ್ ಅಪ್‌ಡೇಟ್ ಮಾಡಲು ಬಾಕಿ ಇರುವವರು ಜೂನ್ 14ರ ವರೆಗೆ ಉಚಿತವಾಗಿ ಅಪ್‌ಡೇಟ್ ಮಾಡಲು ಸಮಯವಿದೆ. ಜೂನ್ 14ರ ವರೆಗೆ ವಿಳಾಸ ಸೇರಿದಂತೆ ಯಾವುದೇ ಅಪ್‌ಡೇಟ್ ಇದ್ದರೂ ಶುಲ್ಕ ಪಾವತಿಸದೇ ಮಾಡಲು ಸಾಧ್ಯವಿದೆ. ಹೀಗಾಗಿ ಆಧಾರ್ ಅಪ್‌ಡೇಟ್ ಉಚಿತವಾಗಿ ಮಾಡಬೇಕು ಎಂದರೆ ಜೂನ್ 14ರೊಳಗೆ ಮಾತ್ರ ಅವಕಾಶ.

ಪ್ರತಿ ಅಪ್‌ಡೇಟ್‌ಗೆ ವಿಧಿಸುವ ಶುಲ್ಕ ಎಷ್ಟು?

ಜೂನ್ 14ರ ರ ಬಳಿಕ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಶುಲ್ಕ ವಿಧಿಸಾಗುತ್ತದೆ. ಪ್ರತಿ ಅಪ್‌ಡೇಟ್‌ಗೆ 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇದು ಯುನಿಕ್ ಐಂಡಿಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಕೇಂದ್ರಕ್ಕೆ ಈ ಶುಲ್ಕ ಪಾವತಿಸಬೇಕು. ನೀವು ಆನ್‌ಲೈನ್ ಮೂಲಕ ಯಾರ ಸಹಾಯವೂ ಇಲ್ಲದೆ ಆಧಾರ್ ಅಪ್‌ಡೇಟ್ ಮಾಡಿದರೂ ಶುಲ್ಕ ಪಾವತಿಸಬೇಕು. ಇನ್ನು ಬೆಂಗಳೂರು ಒನ್, ಗ್ರಾಮ ಒನ್ ಸೇರಿದಂತೆ ಇತರ ಸೈಬರ್ ಕೇಂದ್ರಗಲ್ಲಿ ಆಧಾರ್ ಅಪ್‌ಡೇಟ್ ಮಾಡಿದರೆ UIDAI ಶುಲ್ಕ 50 ರೂಪಾಯಿ ಹಾಗೂ ಕೆಲಸ ಮಾಡಿಕೊಟ್ಟ ಆಯಾ ಕೇಂದ್ರಗಳ ಚಾರ್ಜ್ ಪಾವತಿಸಬೇಕು.

ಪ್ರತಿ 10 ವರ್ಷಕ್ಕೆ ಆಧಾರ್ ಅಪ್‌ಡೇಟ್ ಕಡ್ಡಾಯ

ಪ್ರತಿ 10 ವರ್ಷಕ್ಕೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ. ಈ ವೇಳೆ ವಿಳಾಸ ಬದಲಾಗಿದ್ದರೆ, ಪ್ರಸ್ತುತ ವಿಳಾಸ ನೀಡಿ ಅಪ್‌ಡೇಟ್ ಮಾಡಿಕೊಳ್ಳಬೇಕು. ಹೊಸ ವಿಳಾಸ ಅಪ್‌ಡೇಟ್ ಮಾಡಲು ಪ್ರಸ್ತುತ ವಿಳಾಸದ ದಾಖಲೆ ನೀಡಬೇಕು. ಇನ್ನು ಫೋಟೋ, ಬಯೋಮೆಟ್ರಿಕ್, ಥಂಬ್ ಸೇರಿದಂತೆ ಇತರ ಪ್ರಮುಖ ದಾಖಲೆಗಳ ಬದಲಾವಣೆಗೆ ಆಧಾರ್ ಕೇಂದ್ರಕ್ಕೆ ತೆರಳಬೇಕು.

ಆನ್‌ಲೈನ್ ಮೂಲಕ ಆಧಾರ್ ಅಪ್‌ಡೇಟ್ ಮಾಡುವುದು ಹೇಗೆ?

UIDAI ವೆಬ್‌ಸೈಟ್ ಕ್ಲಿಕ್ ಮಾಡಿ ಮೈ ಆಧಾರ್ ಪೋರ್ಟಲ್‌ಗೆ ತೆರಳಬೇಕು

ಇಲ್ಲಿ 12 ಸಂಖ್ಯೆಯ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿಬೇಕು, ಬಳಿಕ ಕ್ಯಾಪ್ಚಾ ಕೋಡ್ ಹಾಕಬೇಕು

ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ವೆರಿಫೈ ಮಾಡಿಕೊಳ್ಳಬೇಕು

ಪ್ರೂಫ್ ಆಫ್ ಐಡೆಂಟಿಟಿ, ಪ್ರೂಫ್ ಆಫ್ ಅಡ್ರೆಸ್ ಸೇರಿದಂತೆ ಅಪ್‌ಡೇಟ್ ಮಾಡಬೇಕಾದ ವಿಭಾಗದ ಡಾಕ್ಯುಮೆಂಟ್ ಅಪ್‌ಡೇಟ್ ಕ್ಲಿಕ್ ಮಾಡಬೇಕು

ಯಾವ ದಾಖಲೆ ಅಪ್‌ಡೇಟ್ ಮಾಡಬೇಕು ಅನ್ನೋದು ಕ್ಲಿಕ್ ಮಾಡಿ ಅದಕ್ಕೆ ಪೂರಕವಾದ ದಾಖಲೆ ಅಪ್‌ಡೇಟ್ ಮಾಡಬೇಕು. ಉದಾಹರಣೆ ವಿಳಾಸ ಬದಲಾವಣೆ ಆಗಿದ್ದರೆ ವಿಳಾಸದ ದಾಖಲೆಯ ಸ್ಕ್ಯಾನ್ ಫೋಟೋ ಮಾಡಿ ಅಪ್ಲೋಡ್ ಮಾಡಬೇಕು. ಬಳಿಕ ಸಬ್‌ಮಿಟ್ ಮಾಡಿದರೆ ವಿಳಾಸ ಅಪ್‌ಡೇಟ್ ಆಗಲಿದೆ.

ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿದರೆ ಇದ್ದರೆ ತಕ್ಷಣೇ ಮಾಡಿಕೊಳ್ಳುವುದು ಉತ್ತಮ. ಇದರಿಂದ ಅಂತಿಮ ಹಂತದಲ್ಲಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ಎದುರಾಗುವ ಸಮಸ್ಯೆ, ಕಿರಿಕಿರಿ ತಪ್ಪಿಸಬಹುದು.