ಭಾರತ ಅತೀ ಹೆಚ್ಚು ಮಹಿಳಾ ಪೈಲೆಟ್ ಹೊಂದಿದ ದೇಶವಾಗಿದೆ. ಪೈಲೆಟ್ ಪೈಕಿ ಶೇಕಡಾ 15ರಷ್ಟು ಮಹಿಳಾ ಪೈಲೆಟ್ ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುರಿತು ವಿಮಾನಯಾನ ಸಚಿವ ಮಾತನಾಡಿದ್ದಾರೆ.

ನವದೆಹಲಿ(ಜೂ.02) ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಭಾರತದಲ್ಲಿ ಮಹಿಳಾ ಪೈಲೆಟ್ ಸಂಖ್ಯೆ ಶೇಕಡಾ 15. ಇದು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ಅತೀ ಹೆಚ್ಚು. ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಸರಾಸರಿ ಮಹಿಳಾ ಪೈಲೆಟ್ ಸಂಖ್ಯೆ ಶೇಕಡಾ 5 ಮಾತ್ರ. ಭಾರತದಲ್ಲಿ 17,726 ನೋಂದಾಯಿತ ಪೈಲೆಟ್ ಕಾರ್ಯನಿರ್ವಹಿಸತ್ತಿದ್ದರೆ. ಈ ಪೈಕಿ 2,764 ಪೈಲೆಟ್ ಮಹಿಳೆಯರಾಗಿದ್ದಾರೆ.

ಈ ಕುರಿತು ಮಾತನಾಡಿದ ನಾಗರೀಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಸಂತಸ ವ್ಯಕ್ತಪಡಿಸಿದ್ದಾರೆ. 2024ರ ವೇಳೆಗೆ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೈಲೆಟ್ ಪೈಕಿ ಶೇಕಡಾ 15 ರಷ್ಟು ಮಹಿಳಾ ಪೈಲೆಟ್ ಆಗಿದ್ದರೆ. ಯಾವ ಭೂಮಿಯಲ್ಲಿ ಮಹಿಳೆಯನ್ನು ಪೂಜಿಸಲಾಗುತ್ತದೋ, ಅದೇ ದೇಶ ಪ್ರತಿ ಕ್ಷೇತ್ರದಲ್ಲೂ ಮಹಿಳಾ ಪ್ರಾತಿನಿಧ್ಯ ನೀಡಿರುವ ಸ್ಪಷ್ಟ ಉದಾಹರಣೆ ಇದು. ಇದು ಭಾರತದ ಸಾಧಿಸಿದ ಮೈಲಿಗಲ್ಲು ಎಂದು ವಿಮಾನಯಾನ ಸಚಿವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಸರಾಸರಿ ಮಹಿಳಾ ಪೈಲೆಟ್ ಶೇಕಡಾ 5ರಷ್ಟು ಮಾತ್ರ ಇದೆ. ಈ ಮಟ್ಟಕ್ಕೆ ಹೋಲಿಸಿದರೆ ಭಾರತದ ಸಾಕಷ್ಟ ಮುಂದೆ ಬಂದಿದೆ ಎಂದು ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ರಾಮ್ ಮೋಹನ್ ನಾಯ್ಡು ಭಾರತದ ವಿಮಾನಯಾನ ಸಚಿವಾಲಯದ ಪ್ರಗತಿ ಕುರಿತು ಮಾತನಾಡಿದ್ದಾರೆ.

ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಮುಂದು

ಭಾರತದಲ್ಲಿ ಪ್ರತಿ ಕ್ಷೇತ್ರದಲ್ಲೂ ಮಹಿಳರೆಯರಿಗೆ ಹೆಚ್ಚಿನಪ್ರೋತ್ಸಾಹ ನೀಡಲಾಗಿದೆ. ಬಹುತೇಕ ಕ್ಷೇತ್ರದಲ್ಲಿ ಮೀಸಲಾತಿ ನೀಡಲಾಗಿದೆ. ಇದೀಗ ವಿಮಾನದ ಪೈಲೆಟ್ ಮೂಲಕವೂ ಮಹಿಳೆಯರ ಸಾಧನೆಗೆ ರಾಮ್ ಮೋಹನ್ ನಾಯ್ಡು ಕೊಂಡಾಡಿದ್ದಾರೆ.