ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳಿ ಶಾಕ್ ಕೊಟ್ಟಿದ್ದಾರೆ. ಇದೀಗ ಐಪಿಎಲ್ ಟೂರ್ನಿಗೂ ನಿವೃತ್ತಿ ಹೇಳುತ್ತಾರಾ? ಐಪಿಎಲ್ ಚೇರ್ಮನ್ ವಿರಾಟ್ ಕೊಹ್ಲಿಗೆ ಮಾಡಿದ ವಿಶೇಷ ಮನವಿ ಈ ಆತಂಕ ಹೆಚ್ಚಿಸಿದೆ. ಈ ಮನವಿ, ಕೊಹ್ಲಿ ನಿವೃತ್ತಿ ಸುಳಿವು ನೀಡುತ್ತಿದೆಯಾ?

ಮುಂಬೈ(ಜೂ.02) ಐಪಿಎಲ್ ಟೂರ್ನಿ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಹೋರಾಟ ನಡೆಲಿದೆ. ಜೂನ್ 3ರಂದು ಅಹಮ್ಮದಾಬಾದ್‌ನಲ್ಲಿ ಈ ಫೈನಲ್ ಪಂದ್ಯ ನಡೆಯಲಿದೆ. ಆರ್‌ಸಿಬಿ ಅಭಿಮಾನಿಗಳು ಈಗಾಗಲೇ ಸಂಭ್ರಮಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆದ್ದೇ ಗೆಲ್ಲಲಿದೆ ಅನ್ನೋ ವಿಶ್ವಾಸದಲ್ಲಿದ್ದಾರೆ. ಆದರೆ ಇದರ ನಡುವೆ ಐಪಿಎಲ್ ಚೇರ್ಮನ್ ಇದೀಗ ವಿರಾಟ್ ಕೊಹ್ಲಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಆದರೆ ಈ ಮನವಿ ಕ್ರಿಕೆಟ್ ಅಭಿಮಾನಿಗಳ ಆತಂಕ ಹೆಚ್ಚಿಸಿದೆ. ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಹೇಳಿದಂತೆ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಗೂ ವಿದಾಯ ಹೇಳುತ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಐಪಿಎಲ್ ಚೇರ್ಮನ್ ಮಾಡಿದ ಮನವಿಯೇನು?

ಐಪಿಎಲ್‌ಗೆ ನಿವೃತ್ತಿ ಹೇಳದಂತೆ ಕೊಹ್ಲಿಗೆ ಮನವಿ ಮಾಡಿದ ಐಪಿಎಲ್ ಚೇರ್ಮನ್

ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ಫೈನಲ್ ಪಂದ್ಯದಲ್ಲಿ ಒಂದು ವೇಳೆ ಉತ್ತಮ ಹೋರಾಟ ನೀಡಿ ಆರ್‌ಸಿಬಿ ಟ್ರೋಫಿ ಗೆದ್ದರೂ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಮುಂದುವರಿಯಬೇಕು. ನಿವೃತ್ತಿ ಹೇಳಬಾರದು ಎಂದು ಅರುಣ್ ಧುಮಾಲ್ ಹೇಳಿದ್ದಾರೆ. ಕೊಹ್ಲಿ ಐಪಿಎಲ್ ಟೂರ್ನಿಗೂ ನಿವೃತ್ತಿ ಹೇಳುವ ಸೂಚನೆ ಸಿಕ್ಕಿರುವ ಕಾರಣ ಈ ಮಾತು ಹೇಳಿದ್ದಾರಾ? ಅನ್ನೋ ಚರ್ಚೆ ಶುರುವಾಗಿದೆ.

ಟೆಸ್ಟ್ ನಿವೃತ್ತಿಯನ್ನು ಮರುಪರಿಶೀಲಿಸಲು ಕೊಹ್ಲಿಗೆ ಮನವಿ

ವಿರಾಟ್ ಕೊಹ್ಲಿ ಕುರಿತು ಮಾತನಾಡಿದ ಅರುಣ್ ಧುಮಾಲ್, ಕೊಹ್ಲಿ ಫಿಟ್ನೆಸ್ ಯಾರಿಗೂ ಮ್ಯಾಚ್ ಮಾಡಲು ಸಾಧ್ಯವಿಲ್ಲ. ಕೊಹ್ಲಿ ಐಪಿಎಲ್ ಟೂರ್ನಿ 1ಕ್ಕಿಂತ ಹೆಚ್ಚು ಫಿಟ್ ಆಗಿದ್ದಾರೆ. ಆರ್‌ಸಿಬಿ ಟ್ರೋಫಿ ಗೆದ್ದರೂ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಮುಂದುವರಿಯಬೇಕು. ಇದೇ ವೇಳೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನೀಡಿದ ನಿವೃತ್ತಿ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಅರುಣ್ ಧುಮಾಲ್ ಮನವಿ ಮಾಡಿದ್ದಾರೆ. ಐಪಿಎಲ್ ಟೂರ್ನಿಯಿಂದ ಕೊಹ್ಲಿ ನಿವೃತ್ತಿ ಹೇಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಕಾರಣ ವಿರಾಟ್ ಕೊಹ್ಲಿ ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ರಾಯಭಾರಿ. ಟೆನ್ನಿಸ್‌ನಲ್ಲಿ ರೋಜರ್ ಫೆಡರರ್ ಅಥಾ ನೋವಾಕ್ ಡೋಕೋವಿಚ್ ಹೇಗೋ, ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಎಂದು ಅರುಣ್ ಧುಮಾಲ್ ಹೇಳಿದ್ದಾರೆ.

Scroll to load tweet…

ಆರ್‌ಸಿಬಿ ಫೈನಲ್ ಪಂದ್ಯದ ಬೆನ್ನಲ್ಲೇ ಅಭಿಮಾನಿಗಳಿಗೆ ಆತಂಕ

ಆರ್‌ಸಿಬಿ ಫೈನಲ್ ಪಂದ್ಯಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿ ವಿದಾಯದ ಮಾತುಗಳು ಅಭಿಮಾನಿಗಳ ಆತಂಕ ಹೆಚ್ಚಿಸಿದೆ. ಈಗಾಗಲೇ ಕೊಹ್ಲಿ ತಮ್ಮ ಕಟುಂಬಕ್ಕೆ ಹೆಚ್ಚಿನ ಸಮಯ ನೀಡಲು ನಿರ್ಧರಿಸಿದ್ದಾರೆ. ಕುಟುಂಬದ ಜೊತೆ ಲಂಡನ್‌ನಲ್ಲಿ ನೆಲೆಸುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೀಗ ಐಪಿಎಲ್ ಟೂರ್ನಿಗೂ ವಿದಾಯ ಹೇಳಿ ಕೇವಲ ಏಕದಿನದಲ್ಲಿ ಮಾತ್ರ ಮುಂದುವರಿಯುತ್ತಾರಾ ಅನ್ನೋ ಚರ್ಚೆಗಳು ಶುರುವಾಗಿದೆ.

ಟ್ರೋಫಿಗಾಗಿ ಕಾಯುತ್ತಿರುವ ವಿರಾಟ್ ಕೊಹ್ಲಿ

ಆರ್‌ಸಿಬಿ ತಂಡದಲ್ಲಿ ಎಲ್ಲರು ಬದಲಾಗಿದ್ದಾರೆ. ಮೊದಲ ಆವೃತ್ತಿಯಲ್ಲಿದ್ದ ಆಟಗಾರರು ಈಗಿಲ್ಲ. ಹೆಚ್ಚೆಂದರೆ ಒಂದೆರೆಡು ಸೀಸನ್ ಅಥವಾ 5 ಸೀಸನ್ ಜೊತೆಯಾಗಿ ಆಡಿರುತ್ತಾರೆ. ಬಳಿಕ ಬದಲಾಗಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಬದಲಾಗಿಲ್ಲ. ಆರಂಭದಿಂದ ಇದುವರೆಗೂ ವಿರಾಟ್ ಕೊಹ್ಲಿ ಆರ್‌ಸಿಬಿಯಲ್ಲಿ ಆಡುತ್ತಿದ್ದಾರೆ. ಆರ್‌ಸಿಬಿ ಫ್ರಾಂಚೈಸಿ ಮಾಲೀಕ, ಮ್ಯಾನೇಜ್ಮೆಂಟ್, ತಂಡ, ನಾಯಕ, ಕೋಚ್ ಸೇರಿದಂತೆ ಎಲ್ಲವೂ ಬದಲಾದರೂ ಕೊಹ್ಲಿ ಮಾತ್ರ ಆರ್‌ಸಿಬಿ ಭಾಗವಾಗಿದ್ದಾರೆ. 18 ವರ್ಷಗಳಿಂದ ಆರ್‌ಸಿಬಿ ಟ್ರೋಫಿಗಾಗಿ ಕಾಯುತ್ತಿದೆ. ಈ ಬಾರಿ ಆರ್‌ಸಿಬಿಗೆ ಟ್ರೋಫಿ ಗೆಲ್ಲುವ ಉತ್ತಮ ಅವಕಾಶವಿದೆ.