ಭಾರತದ ಅತೀ ದುಬಾರಿ ಕಾರು ನಂಬರ್ ಪ್ಲೇಟ್ ಮಾಲೀಕ ಯಾರು? ಅಂಬಾನಿ, ಸಿಂಘಾನಿಯಾ ಅಲ್ಲ
ಅಂಬಾನಿ, ಗೌತಮ್ ಸಿಂಘಾನಿಯಾ, ಅದಾನಿ ಸೇರಿದಂತೆ ಹಲವು ಉದ್ಯಮಿಗಳಲ್ಲಿ ಐಷಾರಾಮಿ ಕಾರುಗಳಿವೆ. ತಮ್ಮಿಷ್ಟದ ನಂಬರ್ ಹರಾಜಿನ ಮೂಲಕ ಖರೀದಿಸಿದ್ದಾರೆ. ಆದರೆ ಭಾರತದ ಅತೀ ದುಬಾರಿ ಕಾರು ರಿಜಿಸ್ಟ್ರೇಶನ್ ನಂಬರ್ ಹೊಂದಿದ ಮಾಲೀಕ ಇವರಲ್ಲ. ಯಾರ ಬಳಿ ಇದೆ ದುಬಾರಿ ನಂಬರ್ ಪ್ಲೇಟ್?

ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಕಾರು ಹಾಗೂ ನಂಬರ್ ಪ್ಲೇಟ್ ಮೇಲೆ ಹೆಚ್ಚಿನ ಗಮನಹರಿಸುತ್ತಾರೆ. ಭಾರತದಲ್ಲಿ ತಮ್ಮ ಇಷ್ಟದ, ಅದೃಷ್ಠದ ನಂಬರ್ ಪ್ಲೇಟ್ ಪಡೆಯಲು ದುಬಾರಿ ಮೊತ್ತ ಪಾವತಿಸುತ್ತಾರೆ. ಮುಕೇಶ್ ಅಂಬಾನಿ ತಮ್ಮ ಐಷಾರಾಮಿ ಕಾರುಗಳಿಗೆ ಒಂದೇ ರೀತಿಯ ರಿಜಿಸ್ಟ್ರೇಶನ್ ನಂಬರ್ ಖರೀದಿಸುತ್ತಾರೆ. ಭಾರತದಲ್ಲಿ ಅತೀ ದುಬಾರಿ ನಂಬರ್ ಪ್ಲೇಟ್ ಯಾರ ಬಳಿ ಇದೆ? ಈ ನಂಬರ್‌ಗಾಗಿ ಎಷ್ಟು ಪಾವತಿ ಮಾಡಿದ್ದಾರೆ, ಈ ದುಬಾರಿ ನಂಬರ್ ಯಾವುದು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಹಲವು ಉದ್ಯಮಿಗಳು ಅದೃಷ್ಠದ, ಫ್ಯಾಶನ್ ನಂಬರ್‌ಗೆ ದುಬಾರಿ ಮೊತ್ತ ನೀಡಿದ್ದಾರೆ. ಆದರೆ ಈ ಪೈಕಿ ಮೊದಲ ಸ್ಥಾನದಲ್ಲಿರುವ ವ್ಯಕ್ತಿ ಮುಕೇಶ್ ಅಂಬಾನಿಯಾಗಲಿ, ಗೌತಮ್ ಅದಾನಿಯಾಗಲಿ, ಗೌತಮ್ ಸಿಂಘಾನಿಯಾ ಸೇರಿದಂತೆ ಟಾಪ್ ರಿಚೆಸ್ಟ್ ಉದ್ಯಮಿಗಳಲ್ಲ. ಇದು ಟೆಕ್ ಕಂಪನಿ ಸಿಇಒ, ಕೇರಳ ಮೂಲದ ವೇಣು ಗೋಪಾಲಕೃಷ್ಣನ್. ಭಾರತದಲ್ಲಿ ಅತೀ ದುಬಾರಿ ಮೊತ್ತ ಪಾವತಿ ಮಾಡಿ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ ಹೆಗ್ಗಳಿಕೆಗೆ ವೇಣು ಗೋಪಾಲಕೃಷ್ಣನ್‌ಗೆ ಸಲ್ಲಲಿದೆ.
ವೇಣು ಗೋಪಾಲ್ ಕೃಷ್ಣನ್್ ಲಿಟ್‌ಮಸ್7 ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೇಣು ಗೋಪಾಲ್ ಬಳಿ ರೋಲ್ಸ್ ರಾಯ್ಸ್, ಮರ್ಸಿಡೀಸ್, ಫೆರಾರಿ ಸೇರಿದಂತೆ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಈ ಪೈಕಿ ಲ್ಯಾಂಬೋರ್ಗಿನಿ ಉರುಸ್ ಕಾರು ಅತೀ ದುಬಾರಿ ನಂಬರ್ ಪ್ಲೇಟ್ ಹೊಂದಿದೆ. ಈ ನಂಬರ್ ಭಾರತದಲ್ಲಿ ಅತೀ ದುಬಾರಿ ಎನಿಸಿಕೊಂಡಿದೆ.
ಲ್ಯಾಂಬೋರ್ಗಿನಿ ಉರುಸ್ ಕಾರಿಗೆ ವೇಣು ಗೋಪಾಲಕೃಷ್ಣನ್ ಬರೋಬ್ಬರಿ 47 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಇದು ಕೇವಲ ತಮ್ಮ ಇಷ್ಟದ ಹಾಗೂ ಅದೃಷ್ಠದ ನಂಬರ್‌ಗಾಗಿ ಪಾವತಿಸಿದ ಮೊತ್ತವಾಗಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ಸರಿಸುಮಾರು ನಾಲ್ಕುವರೆ ಕೋಟಿ ರೂಪಾಯಿ. ಇನ್ನು ರಿಜಿಸ್ಟ್ರೇಶನ್, ವಿಮೆ ಸೇರದಂತೆ ಇತರ ವೆಚ್ಚಗಳು ಸೇರಿದಂತೆ 5 ರಿಂದ 5.30 ಕೋಟಿ ರೂಪಾಯಿ ಆಗಲಿದೆ. ಇದರ ಮೇಲೆ 47 ಲಕ್ಷ ರೂಪಾಯಿ ಮೊತ್ತವನ್ನು ಕೇರಳ ಆರ್‌ಟಿಒ ಕಚೇರಿಗೆ ನೀಡಿ ರಿಜಿಸ್ಟ್ರೇಶನ್ ನಂಬರ್ ಹರಾಜಿನ ಮೂಲಕ ಖರೀದಿಸಿದ್ದಾರೆ.
KL 07 DG 0007 ನಂಬರ್‌ಗಾಗಿ ಈ ದುಬಾರಿ ಮೊತ್ತ ಪಾವತಿಸಿದ್ದಾರೆ. 7 ನಂಬರ್ ವೇಣು ಗೋಪಾಲಕೃಷ್ಣನ್ ಅವರ ಅದೃಷ್ಠದ ನಂಬರ್ ಇವರ ಲಿಟ್‌ಮಸ್7 ಕಂಪನಿಯ ಹೆಸರಿನಲ್ಲೂ 7 ಸಂಖ್ಯೆ ಇದೆ. ಹೀಗಾಗಿ ಇವರ ಬಹುತೇಕ ಎಲ್ಲಾ ಐಷಾರಾಮಿ ಕಾರುಗಳ ನಂಬರ್ ಪ್ಲೇಟ್ ಕೂಡ 7 ನಂಬರ್ ಇದೆ. ಆದರೆ ಲ್ಯಾಂಬೋರ್ಗಿನಿ ಉರುಸ್ ಕಾರಿಗೆ ಈ ನಂಬರ್ ಪಡೆಯಲು ಭಾರಿ ಪೈಪೋಟಿ ನಡೆಸಿದ್ದರು. ಹರಾಜಿನ ಮೂಲಕ ಈ ನಂಬರ್ ಖರೀದಿಸಿದ್ದಾರೆ.
ಇತ್ತೀಚೆಗೆ ವೇಣು ಗೋಪಾಲಕೃಷ್ಣನ್ ಹೊಚ್ಚ ಹೊಸ ಮರ್ಸಿಡೀಸ್ ಬೆಂಜ್ G63 AMG ಕಾರು ಖರೀದಿಸಿದ್ದಾರೆ. ಇದರ ಬೆಲೆ 3 ರಿಂದ 4 ಕೋಟಿ ರೂಪಾಯಿ (ಎಕ್ಸ್ ಶೋ ರೂಂ). ವೇಣು ಗೋಪಾಲಕೃಷ್ಣನ್ ತಮ್ಮ ಕುಟುಂಬದ ಜೊತೆ ಹೊಸ ಕಾರು ಡೆಲಿವರಿ ಪಡೆದಿದ್ದಾರೆ. ಅತೀವ ಸಂಭ್ರಮ ಹಂಚಿಕೊಂಡಿದ್ದಾರೆ. ಹೊಚ್ಚ ಹೊಸ ಕಾರು ಖರೀದಿಸಿದ ವೇಣು ಗೋಪಾಲ್ ಬಳಿ ಹಲವು ದುಬಾರಿ ಕಾರುಗಳಿವೆ.ಇನ್ನು ಬೇಕ್ ಕ್ರೇಜ್ ಕೂಡ ಹೆಚ್ಚಿದೆ. ಹೀಗಾಗಿ BMW ಸೇರಿದಂತೆ ಹಲವು ದುಬಾರಿ ಬೈಕ್‌ಗಳು ಇವರ ಬಳಿ ಇದೆ.