ಪೆಹಲ್ಗಾಂನಲ್ಲಿ ಉಗ್ರರ ದಾಳಿಗೆ 26 ಅಮಾಯಕರು ಮೃತಪಟ್ಟ ಘಟನೆ ನೋವು ಮಾಸುತ್ತಿಲ್ಲ. ಇದರ ನಡುವೆ ಉಗ್ರರ ಈ ದಾಳಿಯಿಂದ ಭಾರತೀಯರನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಇದೀಗ ಬೃಹತ್ ಬುಲೆಟ್ ಬೈಕ್ ರ‍್ಯಾಲಿ ಸಾಗುತ್ತಿದೆ. ಇದು ಕೇರಳದಿಂದ ಕೇರಳದ ಕಾಲಡಿಯಿಂದ ಕಾಶ್ಮೀರದ ವರೆಗೆ ಚಲೋ ಎಲ್ಒಸಿ ಬುಲೆಟ್ ಬೈಕ್ ರ್ಯಾಲಿ.

ನವದೆಹಲಿ(ಜೂ.02) ಪೆಹಲ್ಗಾಂನಲ್ಲಿ ನಡೆದ ಉಗ್ರ ದಾಳಿಗೆ ಭಾರತ ಬೆಚ್ಚಿ ಬಿದ್ದಿದಿತ್ತು. ಆದರೆ ಉಗ್ರರಿಗೆ ತಕ್ಕ ಪಾಠ ಕಲಿಸಲು ಭಾರತ ಶಕ್ತವಾಗಿ ತಿರುಗೇಟು ನೀಡಿದೆ. ಕಾಶ್ಮೀರವನ್ನು ಸದಾ ಆತಂಕದಲ್ಲಿಡುವುದು, ಕಾಶ್ಮೀರ ಅಭಿವೃದ್ಧಿಯಾಗದಂತೆ ನೋಡಕೊಂಡು ತಮ್ಮ ಅಡ್ಡೆ ಮಾಡಲು ಹೊರಟ ಉಗ್ರರಿಗೆ ಇದೀಗ ಬೈಕ್ ಪ್ರೀಯರು ರ್ಯಾಲಿ ಮೂಲಕ ಉತ್ತರ ನೀಡುತ್ತಿದ್ದಾರೆ. ಆದಿಶಂಕರರ ಜನ್ಮಸ್ಥಳವಾದ ಕಾಲಡಿಯಿಂದ ಕಾಶ್ಮೀರಕ್ಕೆ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳ ರ‍್ಯಾಲಿ ಆರಂಭಗೊಂಡಿದೆ. ಈ ರ‍್ಯಾಲಿ ಇದೀಗ ಬೆಂಗಳೂರು ತಲುಪಿದೆ. ನಗರದ ನಿವಾಸಿ ಪ್ರಶಾಂತ್ ರಾವ್, ಸಮನ್ವಯ ಟ್ರಸ್ಟ್ ತಂಡದ ಸದಸ್ಯರೊಂದಿಗೆ ಬುಲೆಟ್ ರ‍್ಯಾಲಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ.

ಬೆಂಗಳೂರಿನ ಸರ್ಜಾಪುರ ಬಳಿ ಎಲ್ಒಸಿ ಚಲೋ ಬೈಕ್ ರ‍್ಯಾಲಿಗೆ ಪ್ರಶಾಂತ್ ರಾವ್ ಹಾಗೂ ಸಮನ್ವಯ ಟ್ರಸ್ಟ್ ಸದಸ್ಯರು ಸ್ವಾಗತ ನೀಡಿದ್ದಾರೆ. ಈ ಬೈಕ್ ರ‍್ಯಾಲಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೂನ್ 1 ರಂದು ಕಾಲಡಿಯಲ್ಲಿ ಆರಂಭಗೊಂಡ ಈ ರ‍್ಯಾಲಿ ಇದೀಗ ಬೆಂಗೂರ ತಲುಪಿದ್ದು. ಮತ್ತಷ್ಟು ಬೈಕ್ ಪ್ರೀಯರ ಜೊತೆ ಪ್ರಯಾಣ ಮುಂದುವರಿಯಲಿದೆ.

ಉಗ್ರರು ಬುಲೆಟ್ ಮೂಲಕ ದಾಳಿ ಮಾಡಿದರೆ, ಇದೀಗ ಬೈಕ್ ಪ್ರೀಯರು ಬುಲೆಟ್ ಬೈಕ್ ಮೂಕ ಕಾಶ್ಮೀರದತ್ತ ಹೊರಟಿದ್ದಾರೆ. ನೂರಾರು ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳು ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದೆ. ಆದಿಶಂಕರರ ನಾಡಾದ ಕಾಲಡಿಯಿಂದ ಸುಮಾರು 100 ಬುಲೆಟ್‌ಗಳು 3600 ಕಿ.ಮೀ. ಪ್ರಯಾಣಿಸಲಿವೆ. ಈ ಯಾತ್ರೆಯ ಘೋಷಣೆ "ಬುಲೆಟ್ ವಿರುದ್ದ ಬುಲೆಟ್". ಕಾಶ್ಮೀರದ ತೀತ್ವಾಲ್‌ನಲ್ಲಿರುವ ಶಾರದಾ ದೇವಸ್ಥಾನದವರೆಗೆ ಈ ಹೆಮ್ಮೆ ಮತ್ತು ಪ್ರತಿರೋಧದ ಸಂಕೇತವಾದ ಯಾತ್ರೆ ನಡೆಯಲಿದೆ.

ಅಭಿನವಗುಪ್ತ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಪಿರಿಚ್ಯುಯಲ್ ಸ್ಟಡೀಸ್ ನಿರ್ದೇಶಕರೂ, ಕೇರಳದ ಆಧ್ಯಾತ್ಮಿಕ ಗುರು ಆಗಿರುವ ಡಾ. ಆರ್. ರಾಮಾನಂದ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಬೈಕ್‌ಗಳು ಈ ಐತಿಹಾಸಿಕ ಯಾತ್ರೆ ಆರಂಭಿಸಿದೆ. ಆದಿಶಂಕರರು ನಡೆದ ಹಾದಿಯಲ್ಲಿ ಅಭಿನವಗುಪ್ತರ ಕಾಶ್ಮೀರದತ್ತ ಭಾರತದ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳು ಧಾವಿಸಲಿವೆ

ಪಹಲ್ಗಾಮ್‌ನ ದುಃಖದಿಂದ ಹುಟ್ಟಿದ ಧೈರ್ಯವೇ ಈ ಯಾತ್ರೆಗೆ ಕಾರಣ ಎನ್ನುತ್ತಾರೆ ಡಾ. ರಾಮಾನಂದ್. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಭಯೋತ್ಪಾದಕ ದಾಳಿಯ ಎರಡು ವಾರಗಳ ಮೊದಲು ಕೂಡ ಅವರು ಕಾಶ್ಮೀರದಲ್ಲಿದ್ದರು. ದಾಳಿಯ ನಂತರ ದೇಶಕ್ಕಾಗಿ ತಾನೇನು ಮಾಡಬಹುದು ಎಂಬ ಚಿಂತನೆಯೇ ಈ ಯಾತ್ರೆಗೆ ಪ್ರೇರಣೆ ಎನ್ನುತ್ತಾರೆ.

ಭಯೋತ್ಪಾದಕರ ಬುಲೆಟ್‌ಗಳ ವಿರುದ್ಧ ಪ್ರಜಾಪ್ರಭುತ್ವದ ಬುಲೆಟ್ ಎಂಬ ಚಿಂತನೆ ಹೀಗೆ ಹುಟ್ಟಿಕೊಂಡಿತು. ನಮ್ಮದೇ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳ ಮೂಲಕ ಪ್ರಜಾಪ್ರಭುತ್ವದ ರೀತಿಯಲ್ಲಿ ಪ್ರತಿಭಟನೆ. ಇದಕ್ಕಾಗಿ ವಾಟ್ಸಾಪ್ ಗುಂಪು "ಚಲೋ ಎಲ್‌ಒಸಿ" ರಚಿಸಲಾಯಿತು. ಸಾವಿರಾರು ದೇಶಪ್ರೇಮಿಗಳು ಈ ಗುಂಪಿಗೆ ಸೇರಿದರು. ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು, ತೃತೀಯ ಲಿಂಗಿಗಳು ಸೇರಿದಂತೆ ಸಾವಿರಾರು ಜನರು ಭಾರತ ಎಂಬ ಒಂದೇ ಭಾವನೆಯಲ್ಲಿ ಒಂದಾದರು ಎನ್ನುತ್ತಾರೆ ರಾಮಾನಂದ್. ಇವರಲ್ಲಿ ಆಯ್ದ ನೂರು ಜನರು ಈ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.

ಯಾತ್ರಿಕರಲ್ಲಿ 15 ಮಹಿಳೆಯರಿದ್ದಾರೆ. 20 ರಿಂದ 65 ವರ್ಷ ವಯಸ್ಸಿನವರು ಈ ಯಾತ್ರೆಯಲ್ಲಿದ್ದಾರೆ. ರೈತರು, ಐಟಿ ವೃತ್ತಿಪರರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವರ್ಗದ ಜನರಿದ್ದಾರೆ. ಯಾರ ಬಳಿಯೂ ಹಣ ಕೇಳಿಲ್ಲ. ಒಬ್ಬರಿಗೆ 60,000 ರೂ. ಖರ್ಚಾಗಬಹುದು. ಆದರೂ 3600 ಕಿ.ಮೀ. ಅಪಾಯಕಾರಿ ಬೈಕ್ ಯಾತ್ರೆಯಲ್ಲಿ ಭಾಗವಹಿಸಲು ಇನ್ನೂ ಅನೇಕ ದೇಶಪ್ರೇಮಿಗಳು ಸಿದ್ಧರಿದ್ದಾರೆ ಎನ್ನುತ್ತಾರೆ ಡಾ. ರಾಮಾನಂದ್.