ಇಸ್ರೋದಿಂದ ಭರ್ಜರಿ ಕೊಡುಗೆ, ಸ್ಪೇಸ್ ಟೆಕ್ ಕುರಿತು ಉಚಿತ ಆನ್‌ಲೈನ್ ಕೋರ್ಸ್
ಇಸ್ರೋ ಭರ್ಜರಿ ಕೊಡುಗೆ ನೀಡುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಕುರಿತು ಇಸ್ರೋ ಇದೀಗ ಉಚಿತ ಆನ್‌ಲೈನ್ ಕೋರ್ಸ್ ಆರಂಭಿಸುತ್ತಿದೆ.
- FB
- TW
- Linkdin
Follow Us
)
ಇಸ್ರೋ ಉಚಿತ ಆನ್‌ಲೈನ್ ಕೋರ್ಸ್
ವಿಶ್ವದ ಬಾಹ್ಯಾಕಾಶ ಸಂಸ್ಥೆಗಳ ಪೈಕಿ ಇಸ್ರೋಗೆ ಪ್ರಮುಖ ಸ್ಥಾನವಿದೆ. ಚಂದ್ರಯಾನ ಯಶಸ್ವಿಯಾದ ಬಳಿಕ ಇಸ್ರೋ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಇಸ್ರೋ ಇದೀಗ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಇದರ ನಡುವೆ ಇಸ್ರೋ ಮಹತ್ವದ ಕೊಡುಗೆ ಘೋಷಿಸಿದೆ. ಸ್ಪೇಸ್ ಟೆಕ್ನಾಲಜಿ, ಸ್ಪೇಸ್ ಸೈನ್ಸ್ ಕುರಿತು ಉಚಿತ ಆನ್‌ಲೈನ್ ಕೋರ್ಸ್ ನೀಡುತ್ತಿದೆ.
ವಿಜ್ಞಾನದ ಮೂಲಭೂತ ಅಂಶಗಳು!
ಇಸ್ರೋ, SETU 2025 ಅಡಿಯಲ್ಲಿ 'ವಿಜ್ಞಾನ ತಂತ್ರಜ್ಞಾನ ಮತ್ತು ಅದರ ಬಳಕೆ' ವಿಷಯದ ಮೇಲೆ ತರಬೇತಿ ನೀಡಲಿದೆ. 9 ರಿಂದ 12 ನೇ ತರಗತಿಯ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ಈ ಐದು ದಿನಗಳ ತರಬೇತಿಯು ಶಿಕ್ಷಕರಿಗೆ ವಿಜ್ಞಾನ ತಂತ್ರಜ್ಞಾನ ಮತ್ತು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
ಅರ್ಹತೆ ಮತ್ತು ಪ್ರಮಾಣಪತ್ರ ಪಡೆಯುವುದು ಹೇಗೆ?
ವಿಜ್ಞಾನ, ಗಣಿತ, ಭೂಗೋಳ, ಕಂಪ್ಯೂಟರ್ ವಿಜ್ಞಾನ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ತರಬೇತಿಯಲ್ಲಿ 50% ಅಂಕ ಗಳಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು. ಶಿಕ್ಷಕು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ಇದು ನೆರವಾಗಲಿದೆ. ಮೂಲಕ ಭವಿಷ್ಯದ ವಿಜ್ಞಾನಿಗಳನ್ನು ಸೃಷ್ಟಿಸುಲ ಇಸ್ರೋ ಪ್ಲಾನ್ ಮಾಡಿದೆ.
ಪ್ರಾಯೋಗಿಕ ಜ್ಞಾನ ನೀಡುವ ತರಬೇತಿ!
ಉಪಗ್ರಹ ಚಿತ್ರಗಳಿಂದ ಮಾಹಿತಿಯನ್ನು ಹೊರತೆಗೆಯಲು ಮತ್ತು GIS ಬಳಸಿ ಸಮಸ್ಯೆ ಪರಿಹರಿಸಲು ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಬಾಹ್ಯಾಕಾಶ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲವಿಲ್ಲದೆ ಪಾಠ ಮಾಡಲು ಶಿಕ್ಷಕರಿಗೆ ಸಾಧ್ಯವಾಗಲಿದೆ.
ಪಠ್ಯಕ್ರಮ ಮತ್ತು ದಿನಾಂಕಗಳು!
ಜೂನ್ 6 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಆನ್‌ಲೈನ್ ತರಬೇತಿ ಜೂನ್ 9 ರಿಂದ 13 ರವರೆಗೆ ನಡೆಯಲಿದೆ. ಅಲ್ಪಾವದಿ ಕೋರ್ಸ್ ಇದಾಗಿದೆ. ಕೆಲ ಪ್ರಮುಖ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ. ಪಠ್ಯ ಕ್ರಮದಲ್ಲಿ ಬರುವ ಹಲವು ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿಯೂ ಶಿಕ್ಷಕರಿಗೆ ನೀಡಲಾಗುತ್ತದೆ.
ವಿಜ್ಞಾನ ತಂತ್ರಜ್ಞಾನ ಮತ್ತು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ, ವಿಮಾನ ವ್ಯವಸ್ಥೆಗಳ ಅವಲೋಕನ, ಮಾನವ ಬಾಹ್ಯಾಕಾಶ ಯಾನ, ಸೌರವ್ಯೂಹದ ಅಧ್ಯಯನ, ಭೂಮಿಯ ಹೊರಗಿನ ಜೀವನ ಸೇರಿದಂತೆ ಹಲವು ವಿಷಯಗಳು ಇದರಲ್ಲಿ ಸೇರಿವೆ.