ಕಾರವಾರ: ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ರೂಪುರೇಷ, ಅಭಿವೃದ್ಧಿ ಮತ್ತು ಅನುಷ್ಠಾನದ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಇದರಲ್ಲಿ ಕೇಂದ್ರ ಸರ್ಕಾರದ್ದು, ಕೇವಲ ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹಾತ್ಮಕ ನೆರವಿಗೆ ಮಾತ್ರ ಕೇಂದ್ರದ ಪಾತ್ರವಿರುತ್ತದೆ ಎಂದು ತಿಳಿಸಿದ್ದಾರೆ. ಡಿಪಿಆರ್ ಸ್ಥಗಿತ ಹಾಗೂ ಯೋಜನೆ ತಡೆಗೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಲ್ಲಿಸಿದ್ದ ಮನವಿಗೆ ಸಚಿವರು ಲಿಖಿತ ಉತ್ತರ ಕೊಟ್ಟಿದ್ದಾರೆ.
ನೀರಾವರಿ ಹಾಗೂ ನದಿ ಜೋಡಣೆ ಯೋಜನೆಗಳ ರೂಪಿಸುವಿಕೆ, ಅಭಿವೃದ್ಧಿ ಮತ್ತು ನಿರ್ವಹಣೆ ಆಯಾ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತವೆ. ರಾಜ್ಯ ಸರ್ಕಾರಗಳ ಆಡಳಿತಾತ್ಮಕ ಆದ್ಯತೆ ಮತ್ತು ಸಂಪನ್ಮೂಲಗಳ ಲಭ್ಯತೆಯ ಆಧಾರದ ಮೇಲೆ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸಂಬಂಧಪಟ್ಟ ರಾಜ್ಯ ಸರ್ಕಾರದ ಪ್ರಸ್ತಾವನೆ ಬಂದಾಗ ನಿಯಮಾನುಸಾರ ತಾಂತ್ರಿಕ ಮಾರ್ಗದರ್ಶನ ಹಾಗೂ ಸಲಹೆ ನೀಡುವುದನ್ನು ಹೊರತುಪಡಿಸಿ, ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರಕ್ಕೆ ನೇರ ಹೊಣೆಗಾರಿಕೆ ಇರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
10:24 PM (IST) Oct 27
ಬೆಂಗಳೂರಿನ ಯಲಹಂಕದಲ್ಲಿ ದೇಶದ ಮೊದಲ ಸಂಪೂರ್ಣ ಎಲಿವೇಟೆಡ್ ರೈಲ್ವೆ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗಲಿದೆ. 6,000 ಕೋಟಿ ರೂ. ವೆಚ್ಚದ ಈ ಬೃಹತ್ ಯೋಜನೆಗೆ ಡಿಪಿಆರ್ ಸಿದ್ಧಪಡಿಸುವ ಜವಾಬ್ದಾರಿಯನ್ನು ಆರ್‌ವಿ ಅಸೋಸಿಯೇಟ್ಸ್ ಸಂಸ್ಥೆಗೆ ವಹಿಸುವ ಸಾಧ್ಯತೆಯಿದೆ.
10:22 PM (IST) Oct 27
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯದ ವೇಳೆ ರನೌಟ್ ಅವಕಾಶ ಕೈತಪ್ಪಿದ್ದರಿಂದ ಅಕ್ಷರ್ ಪಟೇಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಪ್ರಿನ್ಸ್ ಯಾದವ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿದೆ.
09:49 PM (IST) Oct 27
ಕಲಬುರಗಿ ವಿಭಾಗದ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಭರ್ಜರಿ ಜಯ ಸಾಧಿಸಿದ್ದಾರೆ. 3,296 ಮತಗಳ ಅಂತರದಿಂದ ಗೆಲ್ಲುವ ಮೂಲಕ ಅವರು 5ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
09:49 PM (IST) Oct 27
09:02 PM (IST) Oct 27
08:36 PM (IST) Oct 27
ಜಯಪ್ರಕಾಶ್ ಅಭಿನಯದ 'ಬನ' ತುಳು ಸಿನಿಮಾ ಅಕ್ಟೋಬರ್ 23ರಂದು ತೆರೆಕಂಡು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆಡಂಬರವಿಲ್ಲದ ಸರಳ ನಿರೂಪಣೆ ಮತ್ತು ಭಾವನಾತ್ಮಕ ಕಥೆಯು ಎಲ್ಲ ಧರ್ಮದ ಪ್ರೇಕ್ಷಕರ ಮನಗೆದ್ದಿದೆ.
08:20 PM (IST) Oct 27
ಚಂದನ್ ಶೆಟ್ಟಿ ಬಿಡುಗಡೆ ಮಾಡಿರುವ ಹೊಸ 'ಮೈಮಾಟ' ರ‍್ಯಾಪ್ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬ್ರೇಕಪ್ ಹಾಡಿಗೆ ಪ್ರತಿಕ್ರಿಯಿಸಿರುವ ಅವರ ಮಾಜಿ ಪತ್ನಿ ನಿವೇದಿತಾ ಗೌಡ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
08:13 PM (IST) Oct 27
ಸಾಂಬಾರ್ ಸೊಪ್ಪಿನ ಗಿಡವನ್ನು ಮನೆಯ ಅಂಗಳದಲ್ಲಿ ಅಥವಾ ಸೂಕ್ತ ಕುಂಡದಲ್ಲಿ ಬೆಳೆಸಬಹುದು. ಗಿಡಕ್ಕೆ ಸಾಕಷ್ಟು ಬೆಳಕು ದೊರೆಯುವಂತೆ ನೋಡಿಕೊಳ್ಳಬೇಕು. ನೀರು ಸುಲಭವಾಗಿ ಹರಿದುಹೋಗುವ ಮಣ್ಣನ್ನು ಬಳಸಬೇಕು. ಈ ಎಲೆಯನ್ನು ಏನೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಬಳಸಬಹುದು ನೋಡಿ!
08:03 PM (IST) Oct 27
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಅವರು ಕಾಂಗ್ರೆಸ್‌ನ ಪುಟ್ಟಣ್ಣ ವಿರುದ್ಧ 908 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 6ನೇ ಬಾರಿಗೆ ಮೇಲ್ಮನೆ ಪ್ರವೇಶಿಸುವ ಪುಟ್ಟಣ್ಣ ಅವರ ಕನಸು ಭಗ್ನಗೊಂಡಿದ್ದು, ಕಾಂಗ್ರೆಸ್ ಸಿದ್ಧಪಡಿಸಿದ್ದ ವಿಜಯೋತ್ಸವದ ವಾಹನ ಹಾಗೆಯೇ ಉಳಿಯಿತು.
07:27 PM (IST) Oct 27
ನಟ ಝೈದ್ ಖಾನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ದರ್ಶನ್ ಅವರು ತಾವು ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ಕಳುಹಿಸಿದ್ದಾರೆ. ಏನದು? ಸ್ಟೋರಿ ಓದಿ..
07:02 PM (IST) Oct 27
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಅವರು ಕಾಂಗ್ರೆಸ್‌ನ ಪುಟ್ಟಣ್ಣ ವಿರುದ್ಧ 908 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶವು ಆಡಳಿತಾರೂಢ ಕಾಂಗ್ರೆಸ್‌ಗೆ ತೀವ್ರ ಮುಖಭಂಗ ತಂದಿದೆ.
06:40 PM (IST) Oct 27
06:11 PM (IST) Oct 27
ನಿದ್ರೆಯಲ್ಲಿ ಕೆಲವೊಮ್ಮೆ ಜೊಲ್ಲು ಸುರಿಯುವುದು ಸಾಮಾನ್ಯವಾಗಿರಬಹುದು. ಆದರೆ ಈ ಸಮಸ್ಯೆ ನಿರಂತರವಾಗಿ ಕಾಣಿಸಿಕೊಂಡರೆ ಅಥವಾ ಇತರ ಲಕ್ಷಣಗಳೂ ಜೊತೆಯಾದರೆ ನಿರ್ಲಕ್ಷಿಸಬೇಡಿ. ಸರಿಯಾದ ಕಾರಣವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲೇಬೇಕು. ಇಲ್ಲದಿದ್ರೆ ಏನಾಗುತ್ತೆ ಅಪಾಯ? ನೋಡಿ..
06:06 PM (IST) Oct 27
06:04 PM (IST) Oct 27
05:44 PM (IST) Oct 27
05:04 PM (IST) Oct 27
04:14 PM (IST) Oct 27
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ತನಿಖೆಗಾಗಿ ಜೆಡಿಎಸ್ ಕಾರ್ಯಕರ್ತನ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದಾಗ ಮಹಿಳಾ ಇನ್ಸ್‌ಪೆಕ್ಟರ್‌ರ ಚಿನ್ನದ ಬ್ರೇಸ್‌ಲೈಟ್ ಕಳುವಾಗಿದೆ. ಈ ಬಗ್ಗೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೇ ವೇಳೆ ಸ್ಟಿಂಗ್ ಹಿಂದಿನ ರೂವಾರಿಗಳ ಪತ್ತೆಗೆ ಯತೀಂದ್ರ ಆಗ್ರಹಿಸಿದ್ದು, ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
03:34 PM (IST) Oct 27
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಏಕಾಏಕಿ ಹೃದಯ ಬಡಿತ ಹೆಚ್ಚಾದ ಕಾರಣ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಯ ನಂತರ ವೈದ್ಯರು ಹೇಳಿದ್ದೇನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
03:21 PM (IST) Oct 27
02:56 PM (IST) Oct 27
“ನನಗೆ ಆ ಯಮ್ಮ ಡೈರೆಕ್ಟ್ ಫೋನ್ ಮಾಡಲಿ ಸರ್, ದುಡ್ಡು ತಂದು ಬಿಸಾಕ್ತೀನಿ” ಎಂಬ ಮಾತುಗಳು ಧನ್ವೀರ್ ಬಾಯಿಂದ ಬಂದಿದ್ದು ನಿಜವೇ? ಹಾಗಾದರೆ ಈ ಹಣಕಾಸಿನ ವಿವಾದದ ಹಿನ್ನೆಲೆ ಏನು? ಧನ್ವೀರ್ ಮತ್ತು ವಿಜಯಲಕ್ಷ್ಮೀ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವ ಮಾತುಗಳಿಗೆ ಕಾರಣವೇನು? ಈ ಬೆಳವಣಿಗೆ ಹಿಂದೆ ಏನಿದೆ?
02:55 PM (IST) Oct 27
02:01 PM (IST) Oct 27
01:46 PM (IST) Oct 27
DCM G Parameshwara Hospitalised ಕರ್ನಾಟಕದ ಡಿಸಿಎಂ ಜಿ. ಪರಮೇಶ್ವರ್ ಅವರು ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
01:28 PM (IST) Oct 27
01:27 PM (IST) Oct 27
‘ಕೆಜಿಎಫ್’ ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯಶ್, ಈಗ ‘ರಾಮಾಯಣ’ ಚಿತ್ರದ ಮೂಲಕ ಮತ್ತೊಮ್ಮೆ ದೊಡ್ಡ ಮಟ್ಟದ ಸಿನಿಮಾ ಅನುಭವ ನೀಡಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಅವರು ಲಂಕಾಧಿಪತಿ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.
01:14 PM (IST) Oct 27
12:39 PM (IST) Oct 27
12:32 PM (IST) Oct 27
ಇಂದು ಮದ್ಯಾನ್ಹ 3 ಗಂಟೆಗೆ ವಿಜಯಲಕ್ಷ್ಮೀ ಹಾಗೂ ಝೈದ್ ಖಾನ್ ಜೈಲಿನಲ್ಲಿ ನಟ ದರ್ಶನ್ ಭೇಟಿಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಕುತೂಹಲ ಹುಟ್ಟಿಸಿದೆ. ಕಾರಣ, ಸದ್ಯಕ್ಕೆ ನಟ ಧನ್ವೀರ್ ಗೌಡ ವಿರುದ್ಧ ವಿಜಯಲಕ್ಷ್ಮೀ ಸೇರಿದಂತೆ, ದರ್ಶನ್ ಆಪ್ತಬಳಗದ ಝೈದ್ ಖಾನ್, ಅರ್ಜುನ ರಮೇಶ್ ಸೇರಿದಂತೆ ಹಲವರು ತಿರುಗಿಬಿದ್ದಿದ್ದಾರೆ. ಮುಂದೇನು..?
12:15 PM (IST) Oct 27
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಗೆ ನಟ ದರ್ಶನ್ ಪರ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿದ್ದಾನೆ. ಪ್ರತ್ಯಕ್ಷ ಸಾಕ್ಷಿ ಪುನೀತ್ ಗೈರುಹಾಜರಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
11:52 AM (IST) Oct 27
11:05 AM (IST) Oct 27
10:58 AM (IST) Oct 27
10:30 AM (IST) Oct 27
10:01 AM (IST) Oct 27
ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ನೀಲಿ ಮಾರ್ಗ ಯೋಜನೆಯ ಕಾಮಗಾರಿ ಮುಂದುವರಿಸಲು ಸುಪ್ರೀಂ ಕೋರ್ಟ್ ಸ್ಪಷ್ಟ ಅನುಮತಿ ನೀಡಿದೆ. ಕೆ.ಆರ್. ಪುರಂನಿಂದ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಈ ಯೋಜನೆಯ ಶೇ.84ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
09:10 AM (IST) Oct 27
ಮಂಗಳೂರು ವಿಮಾನ ನಿಲ್ದಾಣದಿಂದ ಯುಎಇ ದೇಶದ ರಸ್ ಅಲ್ ಖೈಮಾಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ವಿಮಾನ ಸೇವೆ ಆರಂಭಿಸಿದೆ. ರಸ್ ಅಲ್ ಖೈಮಾ ಪ್ರದೇಶವು ದುಬೈ ಮತ್ತು ಶಾರ್ಜಾಗೆ ಸಮೀಪದಲ್ಲಿದೆ ಈ ಸೇವೆ ಉಪಯೋಗವಾಗಲಿದೆ. ಐಎಕ್ಸ್ 871 ವಿಮಾನವು ಪ್ರತಿ ಸೋಮವಾರ ಮತ್ತು ಶನಿವಾರ ವಿಮಾನ ಸೇವೆ ಒದಗಿಸಲಿದೆ. ಮಂಗಳೂರಿನಿಂದ ಬೆಳಿಗ್ಗೆ 9.30ಕ್ಕೆ ವಿಮಾನ ಹೊರಡಲಿದ್ದು, ರಾಸ್ ಅಲ್ ಖೈಮಾದಿಂದ ಸಂಜೆ 6.25ಕ್ಕೆ ಮಂಗಳೂರು ತಲುಪಲಿದೆ.
08:47 AM (IST) Oct 27
08:33 AM (IST) Oct 27
08:01 AM (IST) Oct 27
ಕನ್ನಡದ ಕಲ್ಟ್ ಕ್ಲಾಸಿಕ್ 'ಎ' ಸಿನಿಮಾದ ನಿರ್ಮಾಪಕ ಬಿ. ಜಿ. ಮಂಜುನಾಥ್ ಅಲಿಯಾಸ್ ಸಿಲ್ಕ್ ಮಂಜು ಅವರು ಅನಾರೋಗ್ಯದಿಂದ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬಟ್ಟೆ ವ್ಯಾಪಾರಿಯಾಗಿದ್ದ ಇವರು ಚಿತ್ರರಂಗಕ್ಕೆ ಬಂದು 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದರು. ಕೊನೆಯ ದಿನಗಳಲ್ಲಿ ಅವರು ತೀವ್ರ ಆರ್ಥಿಕ ಸಂಕಷ್ಟ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರು.
07:52 AM (IST) Oct 27