ನಟ ಝೈದ್ ಖಾನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ದರ್ಶನ್ ಅವರು ತಾವು ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ಕಳುಹಿಸಿದ್ದಾರೆ. ಏನದು? ಸ್ಟೋರಿ ಓದಿ..
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು ಇವತ್ತು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ಝೈದ್ ಖಾನ್ ಭೇಟಿಯಾದರು. ಝೈದ್ ಖಾನ್ ಅವರು ವಿಜಯಲಕ್ಷ್ಮೀ ದರ್ಶನ್ ಜೊತೆ ಜೈಲಿಗೆ ಆಗಮಿಸಿದ್ದರು. ಈ ವೇಳೆ ಧನ್ವೀರ್ ಗೌಡ ಪ್ರಕರಣವನ್ನು ದರ್ಶನ್ ಮುಂದೆ ಚರ್ಚೆ ಮಾಡಲಾಗಿದೆ.
ಅಭಿಮಾನಿಗಳಿಗೆ ಸಂದೇಶ ಏನು?
ಆಗ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಝೈದ್ ಖಾನ್ ಮೂಲಕ ವಿಶೇಷ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಖುದ್ದು ಝೈದ್ ಖಾನ್ ಅವರೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಅಭಿಮಾನಿಗಳಿಗೆ ವಿಷಯ ಹೇಗೆ ಮುಟ್ಟಿಸುತ್ತಿಯೋ ಗೊತ್ತಿಲ್ಲ. ಅಭಿಮಾನಿಗಳು ಯಾವುದೇ ಕಾರಣಕ್ಕೂ ಟೆನ್ಷನ್ ಮಾಡಿಕೊಳ್ಳೋದು ಬೇಡ ಅಂತಾ ಹೇಳು. ನಾನು ಆರಾಮಾಗಿ ಇದ್ದೀನಿ. ಆದಷ್ಟು ಬೇಗ ಆಚೆ ಬರುತ್ತೀನಿ. ಅವನಿಗೆ ಧಮ್ ಇದ್ದರೆ ನಾನು ಆಚೆ ಬಂದ್ಮೇಲೆ ನನ್ನನ್ನ ಫೇಸ್ ಮಾಡು ಎಂಬ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಝೈದ್ ಖಾನ್ ತಿಳಿಸಿದ್ದಾರೆ.
ಎಲ್ಲೋ ಕುಳಿತುಕೊಂಡು ಫೋನ್ ಕಾಲ್ ಮಾಡುವುದೆಲ್ಲ ತಪ್ಪು. ಫೋನ್ ಮೂಲಕ ಮಾತನ್ನಾಡಿ ಏನೇನೋ ಸುದ್ದಿ ಹಬ್ಬಿಸುವುದು ತಪ್ಪು. ನನ್ನ ಅಭಿಮಾನಿಗಳಿಗೆ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ, ಪ್ರಕರಣವನ್ನು ಡೈವರ್ಟ್ ಮಾಡುವುದು ತಪ್ಪು. ಹೀಗೆಲ್ಲ ಮಾಡಿರೋದು ತಪ್ಪು ಎಂದು ದರ್ಶನ್ ಹೇಳಿದ್ದಾರೆ ಎಂದರು.
ನಂತರ ಝೈದ್ ಖಾನ್ ವಾಗ್ದಾಳಿ ನಡೆಸಿ.. ಈಗ ಯಾರೋ ಒಬ್ಬ ವ್ಯಕ್ತಿ ನಾನು ಮಾಡಿದೆ. ನಾನು ಸಹಾಯ ಮಾಡಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನಲ್ಲ. ಅವನಿಗೆ ಅಕ್ಕ ಅಥವಾ ದರ್ಶನ್ ಅವರು ಬಂದು ಸಹಾಯ ಮಾಡು ಎಂದು ಕೇಳಿಕೊಂಡಿದ್ರಾ? ಅವ್ನೆ ನಾನು ಸಹಾಯ ಮಾಡುತ್ತೀನಿ ಎಂದು ಮನೆಗೆ ನುಗ್ಗಿ ಮನೆ ಹಾಳು ಕೆಲ್ಸ ಮಾಡ್ತಿದ್ದಾನೆ. ದರ್ಶನ್ ಅವರು ಹೆಂಡ್ತಿ, ಮಕ್ಕಳನ್ನು ಪ್ರೀತಿ ಮಾಡ್ತಾರೆ. ಆದರೆ ಅವರ ಕುಟುಂಬದ ಬಗ್ಗೆ ಮಾತನಾಡೋದು ಎಷ್ಟು ಸರಿ? ಕ್ರೆಡಿಟ್ ತಗೆದುಕೊಳ್ಳೋಕೆ ಇದೆಲ್ಲ ನಡೆಯುತ್ತಿದೆ. ದರ್ಶನ್ ಜೈಲಿನಿಂದಲೇ ದೂರು ದಾಖಲಿಸುವ ಚಿಂತನೆ ಇದೆ. ಖಂಡಿತ ಈ ಬಗ್ಗೆ ಕಾನೂನು ಕ್ರಮ ಆಗಲಿದೆ ಎಂದರು.
ಈ ಹಿಂದೆಯೂ ನಾನು ದರ್ಶನ್ ಜೊತೆ ಇದ್ದೆ. ಮುಂದೆಯೂ ಇರುತ್ತೇನೆ. ನಾನು ಇರಲಿ, ಇರದೇ ಹೋಗಲಿ.. ನನ್ನಿಂದ ಏನೆಲ್ಲ ಸಹಾಯ ಆಗುತ್ತೋ ಅದನ್ನು ಖಂಡಿತ ಮಾಡುತ್ತೇನೆ. ಕಷ್ಟದ ಕಾಲದಲ್ಲಿ ಒಳ್ಳೆಯದು ಮಾಡ್ತೀನಿ ಅಂತಾ ಬಂದುಬಿಟ್ಟು ಮೋಸ ಮಾಡಿದ್ರೆ.. ಅಣ್ಣಂಗೆ ಆ ನಂಬಿಕೆಯೇ ಮುಳ್ಳಾಗಿದೆ. ಅದನ್ನು ದರ್ಶನ್ ಬಾಯಲ್ಲೇ ಬಂದಿದೆ. ಧನ್ವೀರ್ ಒಬ್ಬ ಚಿಲ್ಲರೆ ಮನುಷ್ಯ. ನನ್ನ ಬಾಯಿಂದ ಅವನ ಹೆಸರು ಹೇಳೋಕೆ ಇಷ್ಟಪಡಲ್ಲ. ಅವರ ಸೆಲ್ಫ್ ಐಡೆಂಟಿಟಿ ಏನಿದೆ? ಮೊದಲು ಅವನು ನನ್ನ ಲೇವೆಲ್ಗೆ ಬರಲಿ. ಆಮೇಲೆ ಆತನ ಹೇಳಿಕೆಗೆ ನಾನು ಪ್ರತಿಕ್ರಿಯಿಸುತ್ತೇನೆ ಎಂದರು.






