ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಏಕಾಏಕಿ ಹೃದಯ ಬಡಿತ ಹೆಚ್ಚಾದ ಕಾರಣ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಯ ನಂತರ ವೈದ್ಯರು ಹೇಳಿದ್ದೇನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಇಂದು ರಾಜ್ಯದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಅನಾರೋಗ್ಯದ ಕಾರಣ ಇಂದು ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಅವರ ಆರೋಗ್ಯದ ಕುರಿತು ವೈದ್ಯ ವಿ.ಕೆ.ಶ್ರೀನಿವಾಸ್ ನೀಡಿರುವ ಪ್ರಮುಖ ಮಾಹಿತಿ ನೀಡಿದ್ದಾರೆ. ಅಲ್ಲದೇ ಹೃದಯ ಸಂಬಂಧಿ ಕಾಯಿಲೆ ಅಂಥ ಸುದ್ದಿ ಆಗಿದ್ದರು, ವೈದ್ಯರು ಹೇಳಿದ್ದೇನು? ಈ ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಆಸ್ಪತ್ರೆಗೆ ದಾಖಲು!

ರಾಜ್ಯದ ಡಿಸಿಎಂ ಡಾ. ಜಿ. ಪರಮೇಶ್ವರ ಅವರು ಏಕಾಏಕಿ ಹೃದಯ ಬಡಿತ ಹೆಚ್ಚಾದ ಹಿನ್ನೆಲೆಯಲ್ಲಿ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಪ್ರಕಾರ, ಸದ್ಯ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಯಾವುದೇ ಪ್ರಾಣಾಪಾಯ ಅಥವಾ ಆತಂಕಪಡುವ ಅಗತ್ಯವಿಲ್ಲ. ಅವರಿಗೆ ಯಾವುದೇ ರೀತಿಯ ಎದೆನೋವು ಕಾಣಿಸಿಕೊಂಡಿರಲಿಲ್ಲ. ಕೇವಲ ಹೃದಯದ ಬಡಿತ ಏಕಾಏಕಿ ವೇಗವಾಗುವುದು ಮತ್ತು ಲಘು ಉಸಿರಾಟದ ತೊಂದರೆ ಮಾತ್ರ ಇತ್ತು ಎನ್ನುವ ಮಾಹಿತಿ ಬಂದಿದೆ.

ತಕ್ಷಣದ ಚಿಕಿತ್ಸೆ!

ಆಸ್ಪತ್ರೆಗೆ ಬಂದ ತಕ್ಷಣ ಈಸಿಜಿ ಮತ್ತು ಮಾನಿಟರಿಂಗ್ ಮಾಡಲಾಗಿದ್ದು, ಸೂಕ್ತ ಔಷಧಗಳನ್ನು ನೀಡುವ ಮೂಲಕ ಕೆಲವೇ ನಿಮಿಷಗಳಲ್ಲಿ ಹೃದಯ ಬಡಿತವನ್ನು ನಾರ್ಮಲ್ ಮಾಡಲಾಗಿದೆ. ಸದ್ಯ ಅವರು ಆರಾಮದಾಯಕವಾಗಿದ್ದು, ಸಹಜವಾಗಿ ಮಾತಾಡುತ್ತಾ ಊಟವನ್ನೂ ಮಾಡಿದ್ದಾರೆ. ವೈದ್ಯಕೀಯವಾಗಿ ಅವರು ಈಗಲೇ ಡಿಸ್ಚಾರ್ಜ್ ಆಗಲು ಸಿದ್ಧರಾಗಿದ್ದಾರೆ. ಸ್ವಲ್ಪ ಸಮಯ ವಿಶ್ರಾಂತಿ ಪಡೆದು, ಅವರ ಅನುಕೂಲಕ್ಕೆ ತಕ್ಕಂತೆ ಇಂದೇ ಮನೆಗೆ ಮರಳಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಹೃದಯದ ಶಾರ್ಟ್ ಸರ್ಕ್ಯೂಟ್ ಮಾದರಿ ಸ್ಥಿತಿ!

ಏಕಾಏಕಿ ಹೃದಯ ಬಡಿತದ ವೇಗ ಹೆಚ್ಚಾದಾಗ ಹೃದಯದಲ್ಲಿ ಒಂದು ರೀತಿಯ ಶಾರ್ಟ್ ಸರ್ಕ್ಯೂಟ್ ಆದಂತಹ ಅನುಭವ ಉಂಟಾಗುತ್ತದೆ. ಸಾಮಾನ್ಯ ಹೃದಯ ಬಡಿತಕ್ಕಿಂತ (60-70) ವೇಗವಾಗಿ ಬಡಿದುಕೊಳ್ಳುತ್ತಿದ್ದ ರೇಟ್ ಅನ್ನು ತಕ್ಷಣವೇ ನಿಯಂತ್ರಣಕ್ಕೆ ತರಲಾಗಿದೆ. ಚಿಕಿತ್ಸೆ ನಂತರ ಹೃದಯ ಬಡಿತ ನಾರ್ಮಲ್ ಆಗಿದ್ದರೂ ಸಹ, ಈ ಸಮಸ್ಯೆ ಮತ್ತೆ ಮರುಕಳಿಸಬಾರದು ಎಂಬ ಮುನ್ನೆಚ್ಚರಿಕೆಯಿಂದ ಸದ್ಯ ಅವರನ್ನು ವೈದ್ಯರ ನಿಗಾದಲ್ಲಿ ಇರಿಸಲಾಗಿದೆ.

ಹಿಂದಿನ ಆರೋಗ್ಯ ಇತಿಹಾಸ!

ವೈದ್ಯರ ಪ್ರಕಾರ ಡಾ. ಜಿ. ಪರಮೇಶ್ವರ ಅವರಿಗೆ ಈ ಹಿಂದೆ ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆಗಳಾಗಲಿ ಅಥವಾ ಇಂತಹ ಆರೋಗ್ಯದ ತೊಂದರೆಗಳಾಗಲಿ ಇರಲಿಲ್ಲ. ಅವರು ಎಂದಿನಂತೆ ಅತ್ಯಂತ ಸಹಜವಾಗಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದ ಸಂದರ್ಭದಲ್ಲೇ ಈ ರೀತಿಯ ಪ್ಯಾಲ್ಪಿಟೇಷನ್ (ಹೃದಯ ಬಡಿತದ ಏರಿಳಿತ) ಕಾಣಿಸಿಕೊಂಡಿದೆ ಎನ್ನುವುದನ್ನು ವೈದ್ಯರು ತಿಳಿಸಿದ್ದಾರೆ.