ಚಂದನ್ ಶೆಟ್ಟಿ ಬಿಡುಗಡೆ ಮಾಡಿರುವ ಹೊಸ 'ಮೈಮಾಟ' ರ‍್ಯಾಪ್ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬ್ರೇಕಪ್ ಹಾಡಿಗೆ ಪ್ರತಿಕ್ರಿಯಿಸಿರುವ ಅವರ ಮಾಜಿ ಪತ್ನಿ ನಿವೇದಿತಾ ಗೌಡ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಅ.27): ಕನ್ನಡದ ಪ್ರಸಿದ್ಧ ರ‍್ಯಾಪರ್ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿರುವ ಹೊಸ ಆಲ್ಬಮ್ ಸಾಂಗ್ "ಮೈಮಾಟ" (Maimata) ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಪ್ರೀತಿಸಿ, ಅದ್ಧೂರಿಯಾಗಿ ಮದುವೆಯಾಗಿ ವರ್ಷಗಳ ಿಂದೆ ಪರಸ್ಪರ ಸಮ್ಮತಿಯಿಂದ ವಿಚ್ಛೇದನ (Divorce) ಪಡೆದಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ (Niveditha Gowda) ದಂಪತಿಯ ಹಳೆಯ ನೆನಪುಗಳು ಈ ಹಾಡಿನ ಮೂಲಕ ಮತ್ತೆ ಮುನ್ನೆಲೆಗೆ ಬಂದಿವೆ.
ಹಾಡು ಬಿಡುಗಡೆಯಾದ ಎರಡೇ ದಿನಗಳಲ್ಲಿ ಚಂದನ್ ಶೆಟ್ಟಿ ಅವರ ಮಾಜಿ ಪತ್ನಿ, ನಟಿ ನಿವೇದಿತಾ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿರುವ ವೀಡಿಯೊ ಹಾಗೂ ಅದರ ಸಾಲುಗಳು ಈಗ ನೆಟ್ಟಿಗರ ಗಮನ ಸೆಳೆದಿದ್ದು, ಇದು ಚಂದನ್ ಶೆಟ್ಟಿಯವರ ಹಾಡಿಗೆ ನಿವೇದಿತಾ ನೀಡಿದ ಪ್ರತಿಕ್ರಿಯೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಹಾಡಿನಲ್ಲಿ ಚಂದನ್ ಶೆಟ್ಟಿ ಬ್ರೇಕಪ್ ನೋವಿನ ರ‍್ಯಾಪ್
ಚಂದನ್ ಶೆಟ್ಟಿ ಬರೆದು, ಸಂಗೀತ ಸಂಯೋಜಿಸಿ ಹಾಡಿರುವ "ಮೈಮಾಟ" ರ‍್ಯಾಪ್ ಸಾಂಗ್ ಸಂಪೂರ್ಣವಾಗಿ ಪ್ರೀತಿಯಲ್ಲಾದ ವಂಚನೆ, ಬ್ರೇಕಪ್ ನಂತರದ ನೋವು ಹಾಗೂ ಅದರಿಂದ ಹೊರಬಂದು ಸ್ವತಂತ್ರವಾಗಿ ಬೆಳೆಯುವ ಆತ್ಮವಿಶ್ವಾಸದ ಕಥೆಯನ್ನು ಹೊಂದಿದೆ.
ಹಾಡಿನಲ್ಲಿ ಬರುವ ಪ್ರಮುಖ ಸಾಲುಗಳು ಹೀಗಿವೆ
"ಏನೇ ನಿನ್ನ ಮೈಮಾಟದಾಟ, ಇನ್ ಏಳು ಜನುಮಕ್ಕೂ ಕಲಿಸಿಯ ಪಾಠ...
ನೀ ಹೋದಮೇಲೆ ನಾ ಸೋತಿಲ್ಲ, ಬದಲಾದೆ! ನನ್ನ ಪ್ರೀತಿ ಸೋತಿರಬಹುದು ಆದರೆ ನಾ ಸೋತಿಲ್ಲ..."
ಈ ಹಾಡು ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿದ್ದಂತೆ, ಹಾಡಿನ ಸಾಲುಗಳು ಸಂಪೂರ್ಣವಾಗಿ ನಿವೇದಿತಾ ಗೌಡ ಅವರನ್ನು ಗುರಿಯಾಗಿಸಿಕೊಂಡೇ ಬರೆಯಲಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಲು ಪ್ರಾರಂಭಿಸಿದರು. ಹಾಡಿಗೆ ಬಂದಿರುವ ಬಹುತೇಕ ಕಮೆಂಟ್ಸ್‌ಗಳಲ್ಲಿ ನಿವೇದಿತಾ ಅವರನ್ನೇ ಟಾರ್ಗೆಟ್ ಮಾಡಲಾಗಿತ್ತು.
"ಹಳೆಯ ದೆವ್ವ ನನ್ನನ್ನು ಬಿಡುತ್ತಿಲ್ಲ!" - ನಿವೇದಿತಾ ಗೌಡ ಇನ್‌ಸ್ಟಾಗ್ರಾಮ್ ಟಾಂಗ್
ತಮ್ಮ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ನಿರಂತರ ಟ್ರೋಲ್ ಹಾಗೂ ಚರ್ಚೆಗಳು ಆರಂಭವಾಗುತ್ತಿದ್ದಂತೆಯೇ, ನಿವೇದಿತಾ ಗೌಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇಂಗ್ಲಿಷ್‌ನಲ್ಲಿ ಕೋಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ನಿವೇದಿತಾ ತಮ್ಮ ಪೋಸ್ಟ್‌ನಲ್ಲಿ
'ನನ್ನ ಗತಕಾಲ ಎನ್ನುವ ದೆವ್ವ... ಅದ್ಭುತ ಸ್ನೇಹಿತರನ್ನು ಹೊಂದಿರುವ, ಮಹತ್ವಾಕಾಂಕ್ಷೆಯುಳ್ಳ ಹಾಗೂ ಪ್ರೀತಿಯಲ್ಲಿ ದುರದೃಷ್ಟವಂತೆಯಾಗಿರುವ ಹುಡುಗಿಯ ಜೀವನವು ರೊಮ್ಯಾಂಟಿಕ್ ಕಾಮಿಡಿಯಂತೆ ಇರುತ್ತದೆ ಎಂದು ಎಲ್ಲೋ ಓದಿದ್ದೆ. ಆದರೆ ನನ್ನ ಜೀವನ ಮಾತ್ರ ಸಂಪೂರ್ಣ ಹಾರರ್ ಸ್ಟೋರಿಯಾಗಿದೆ (Horror Story)! ಸ್ಪಷ್ಟವಾಗಿ ಹೇಳುವುದಾದರೆ, ನನ್ನ ಗತಕಾಲದ ನೆನಪುಗಳು (The Past) ನನ್ನನ್ನು ಒಂಟಿಯಾಗಿ ಬಿಡುತ್ತಲೇ ಇಲ್ಲ...' ಎಂದು ಬರೆದುಕೊಂಡಿದ್ದಾರೆ.
ನಿವೇದಿತಾ ಗೌಡ ಅವರ ಈ ಪೋಸ್ಟ್ ಬಹಿರಂಗವಾಗುತ್ತಿದ್ದಂತೆಯೇ, "ಮೈಮಾಟ ಸಾಂಗ್‌ಗೆ ನಿವೇದಿತಾ ನೀಡಿದ ಉತ್ತರವೇ ಇದು" ಎಂದು ಫ್ಯಾನ್ಸ್ ಚರ್ಚಿಸುತ್ತಿದ್ದಾರೆ. ಚಂದನ್ ಶೆಟ್ಟಿ ತಮ್ಮ ಸಾಂಗ್‌ನಲ್ಲಿ "ನನ್ನ ಪ್ರೀತಿ ಸೋತಿರಬಹುದು ಆದರೆ ನಾ ಸೋತಿಲ್ಲ, ಅಸಲಿ ಆಟ ಇನ್ನೇ ಶುರು" ಎಂದು ಸವಾಲು ಹಾಕಿದ್ದರೆ, ಇತ್ತ ನಿವೇದಿತಾ "ನನ್ನ ಹಳೆಯ ಗತಕಾಲ ಎನ್ನುವ ದೆವ್ವ ನನ್ನನ್ನು ಇಂದಿಗೂ ಬಿಡುತ್ತಿಲ್ಲ" ಎಂದು ಬೇಸರ ಹಾಗೂ ಟಾಂಗ್ ಬೆರೆಸಿದ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ವಿಚ್ಛೇದನದ ಬಳಿಕ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದಲ್ಲಿ ಬ್ಯಸಿಯಾಗಿದ್ದರೂ, ಚಂದನ್ ಅವರ ಈ ಹೊಸ ಆಲ್ಬಮ್ ಸಾಂಗ್ ಹಾಗೂ ನಿವೇದಿತಾ ಅವರ ರಿಯಾಕ್ಷನ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ವಿವಾದ ಮತ್ತು ರಾಜಕೀಯ-ಮನರಂಜನಾ ಚರ್ಚೆಗೆ ಹಾದಿಮಾಡಿಕೊಟ್ಟಿದೆ.
ಮೈಮಾಟ ಸಾಂಗ್‌ನ ಪೂರ್ತಿ ಲಿರಿಕ್ಸ್
ಏನೇ ನಿನ್ನ
ಏನೇ ನಿನ್ನ
ಏನೇ ನಿನ್ನ
ಮೈಮಾಟ ಮೈಮಾಟ ಮೈಮಾಟದಾಟ
ಏನೇ ನಿನ್ನ ಮೈಮಟಾದ ಆಟ
ಇನ್ ಏಳ ಜನುಮಕ ಕಲಿಸಿಯ ಪಾಠ
ನೂರೆಂಟ ಹುಡುಗೀರ ಕೊಡತಿದ್ರು ಕಾಟ
ನೀ ಬಂದ ಕಿತ್ವಾಗೆದಿ ಇದ್ದೊಂದ ಹಾರ್ಟ ..
ಏನೇ ನಿನ್ನ ಮೈಮಾಟದಾಟ
ಇನ್ ಏಳ ಜನುಮಕ ಕಲಿಸಿಯ ಪಾಠ
ನೂರೆಂಟ ಹುಡುಗೀರ ಕೊಡತಿದ್ರ ಕಾಟ
ನೀ ಬಂದ ಕಿತ್ವಾಗೆದಿ ಇದ್ದೊಂದ ಹಾರ್ಟ ..
ಕಣ್ಣಲ್ಲೇ ಬಾ ಅಂತ ಕರೀತಾ ಇದ್ದೆ
ನಾ ಬಂದಾಗ ವಲ್ಲೆ ಅಂತ ಸರಿತಾ ಇದ್ದೆ
ನೀ ನನ್ನೊಳು ಅಂತ ನಾ ಮೆರಿತಾ ಇದ್ದೆ
ನನ್ನ ಮುಗಿಸೋಕೆ ನೀ ಪ್ಲಾನ ಬರಿತಾ ಇದ್ದೆ
ನಿನ್ನ ಮ್ಯಾಗ ನಾ ದುಡ್ಡ ಸುರಿತಾ ಇದ್ದೆ
ನೀ ನಗನಗತ ಎದೆ ಮ್ಯಾಗ ಒದೆಯಾತಿದ್ದೆ
ನಾ ಬ್ಯಾಡಂದ್ರ ನೀನಾಗ ಸಿಗಿತಾ ಇದ್ದೆ
ಬೆನ್ ಹಿಂದೆ ನನ್ ಗೇಲಿ ಮಾಡಿ ನಗತಾ ಇದ್ದೆ
ಏನ ನ ನಿನ್ನ ಮೈಮಾಟದಾಟ
ಇನ್ ಏಳ ಜನುಮಕ ಕಲಿಸಿಯ ಪಾಠ
ನೂರೆಂಟ ಹುಡುಗೀರ ಕೊಡತಿದ್ರು ಕಾಟ
ನೀ ಬಂದ ಕಿತ್ವಾಗೆದಿ ಇದ್ದೊಂದ ಹಾರ್ಟ..
ಏನೇ ನಿನ್ನ ಮೈಮಟಾದ ಆಟ
ಇನ್ ಏಳ ಜನುಮಕ ಕಲಿಸಿಯ ಪಾಠ
ನೂರೆಂಟ ಹುಡುಗೀರ ಕೊಡತಿದ್ರು ಕಾಟ
ನೀ ಬಂದ ಕಿತ್ವಾಗೆದಿ ಇದ್ದೊಂದ ಹಾರ್ಟ
ಮೊದ ಮೊದಲ ನಾ ಹೇಳಿದ ಕೇಳ್ತಾ ಇದ್ದೆ
ಕೊನಗೆ ನೀ ಹೇಳಿದ್ದೆಲ್ಲ ನಾನ ಮಾಡ್ತಾ ಇದ್ದೆ
ಕೆಲಸ ಆಗಬೇಕಂದಾಗ ನುಲಿಯಾತಿದ್ದೆ
ಉದ್ದುದ್ದ ಉದರಾಗ ಎದೆ ಮ್ಯಾಗ ಕೆರಿಯದಿದ್ದೆ
ಕಂಡವರ ಮಾತನ್ನ ಕೇಳ್ತಾ ಇದ್ದೆ
ನೀ ನನ್ನನ್ನ ನಾಯಿಯಂಗ ನೋಡ್ತಾ ಇದ್ದೆ
ನಾ ಲಾಯಕ್ಕಾ ಇಲ್ಲ ಅಂತ ಹೇಳ್ತಾ ಇದ್ದೆ
ಆದ ಗಾಯಕ ನೀ ಉಪ್ಪ ಸುರಿತಾಗಿದ್ದೆ
ಏನೇ ನಿನ್ನ ಮೈಮಾಟದಾಟ
ಇನ್ ಏಳ ಜನುಮಕ ಕಲಸಿಯ ಪಾಠ
ನೂರೆಂಟ ಹುಡಗಿರ ಕೊಡತಿದ್ರ ಕಾಟ
ನೀ ಬಂದಕಿತ್ವಗದಿ ಇದ್ದೊಂದ ಹಾರ್ಟ .
ಏನೇ ನಿನ್ನ ಮೈಮಾಟದಾಟ
ಇನ್ ಏಳ ಜನುಮಕ ಕಲಿಸಿಯ ಪಾಠ
ನೂರೆಂಟ ಹುಡುಗೀರ ಕೊಡತಿದ್ರು ಕಾಟ
ನೀ ಬಂದ ಕಿತ್ವಾಗೆದಿ ಇದ್ದೊಂದ ಹಾರ್ಟ ..
ನೀ ಹೊದ್ಮೇಲೆ ನಾ ಸೋತಿಲ್ಲ ಬದಲಾದೆ!
ನನ್ನ ಪ್ರೀತಿ ಸೋತಿರಬಹುದು ಆದರೆ ನಾ ಸೋತಿಲ್ಲ..
ನೀ ಬಿಟ್ಟು ಹೋದ ಜಾಗ ಈಗ ಖಾಲಿ ಇಲ್ಲ..
ಅಲ್ಲಿ ಬರಿ ನನ್ನ ಕನಸುಗಳ ತುಂಬಿವೆ
ನನ್ನ ಕಥೆ ಮುಗಿತು ಅಂದುಕೊಂಡೆ
ಆದ್ರೆ ಅಸಲಿ ಆಟ ..ಇನ್ನ ಶುರುನೇ ಆಗಿಲ್ಲ
ಏನೇ ನಿನ್ನ ಮೈಮಾಟದಾಟ
ಇನ್ನೆಳ ಜನಮಕ ಕಲಸಿಯ ಪಾಠ
ನೂರೆಂಟ ಹುಡಗಿರ ಕೊಡತಿದ್ರ ಕಾಟ
ನೀ ಬಂದ ಕಿತ್ವಗದಿ ಇದ್ದೊಂದ ಹಾರ್ಟ
ಏನೇ ನಿನ್ನ ಮೈಮಾಟದಾಟ
ಇನ್ನೆಳ ಜನಮಕ ಕಲಸಿಯ ಪಾಠ
ನೂರೆಂಟ ಹುಡಗಿರ ಕೊಡತಿದ್ರು ಕಾಟ
ನೀ ಬಂದ ಕಿತ್ವಗದಿ ಇದ್ದೊಂದ ಹಾರ್ಟ
ದಿಸ್ ಇಸ್ ಕನ್ನಡ ರಾಪರ್ ಚಂದನ್ ಶೆಟ್ಟಿ SHABAASH!






