ಬೆಂಗಳೂರು: ರಾಜ್ಯದಲ್ಲಿ ತೀವ್ರ ಮುಂಗಾರು ಕೊರತೆ ಹಿನ್ನೆಲೆಯಲ್ಲೇ ಕಾವೇರಿ ಜಲ ಸಂಘರ್ಷ ಆರಂಭವಾಗುವ ಆತಂಕ ಎದುರಾಗಿದೆ.
ದೆಹಲಿಯಲ್ಲಿ ಮಂಗಳವಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ದ ಸಭೆ ನಡೆಯಲಿದ್ದು, ಸಿಡಬ್ಲ್ಯುಎಂಎ ಮುಖ್ಯಸ್ಥ ಎಸ್.ಕೆ.ಹಲ್ದಾರ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಭೆಯಲ್ಲಿ ಕಾವೇರಿ ಜಲನಿಗಮದ ಎಂಡಿ ಭಾಗಿಯಾಗಲಿದ್ದಾರೆ. ಮುಂಗಾರು ಮುನ್ಸೂಚನೆ, ಮಳೆಯ ಪ್ರಮಾಣ, ಕರ್ನಾಟಕ ಮತ್ತು ತಮಿಳುನಾಡಿನ ಡ್ಯಾಂಗಳಲ್ಲಿ ಪ್ರಸ್ತುತ ಇರುವ ನೀರಿನ ಪ್ರಮಾಣ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಆದರೆ, ಮೇಕೆದಾಟು ಕುಡಿಯುವ ನೀರಿನ ಯೋಜನೆ ಕುರಿತು ಸಭೆಯಲ್ಲಿ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ತಮಿಳುನಾಡು ಮತ್ತೆ ಕಾವೇರಿ ನದಿ ನೀರಿಗೆ ಬೇಡಿಕೆ ಇಡುವ ಸಾಧ್ಯತೆಯಿದೆ. ಜೂನ್ ತಿಂಗಳಲ್ಲಿ ಒಟ್ಟಾರೆ 9.19 ಟಿಎಂಸಿಯಷ್ಟು ನೀರನ್ನು ತಮಿಳುನಾಡಿಗೆ ಕರ್ನಾಟಕ ಬಿಡುಗಡೆ ಮಾಡಬೇಕಿದ್ದು, ಜೂನ್ 18ರ ತನಕ 2 ಟಿಎಂಸಿ ನೀರು ಬಿಡುಗಡೆಯಾಗಿದೆ.
10:38 PM (IST) Jun 24
ಕರ್ನಾಟಕ ಸರ್ಕಾರವು ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಮತ್ತು ಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು 'ಪ್ರಜಾಸೇವಾ ಇಲಾಖೆ'ಯನ್ನು ಹೊಸದಾಗಿ ಸ್ಥಾಪಿಸಿದೆ. ಆಡಳಿತ ಸುಧಾರಣೆ, ಸಾರ್ವಜನಿಕ ಕುಂದುಕೊರತೆ ವಿಭಾಗ ಮತ್ತು ಸಕಾಲ ಮಿಷನ್ ಅನ್ನು ವಿಲೀನಗೊಳಿಸಲಾಗಿದೆ.
09:18 PM (IST) Jun 24
08:59 PM (IST) Jun 24
ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್‌ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ.
08:36 PM (IST) Jun 24
Love Cheating Allegation: ಪ್ರೀತಿಯ ಹೆಸರಿನಲ್ಲಿ ನಡೆದಿತ್ತಾ ವಂಚನೆ? ಅಪ್ರಾಪ್ತೆಯ ಡೆತ್ ನೋಟ್‌ನಲ್ಲಿ ಬಹಿರಂಗವಾದ ಆರೋಪಗಳೇನು? ಕರಾವಳಿಯನ್ನು ಬೆಚ್ಚಿಬೀಳಿಸಿರುವ ಈ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.
07:10 PM (IST) Jun 24
Navali Balancing Reservoir: ಕೊಪ್ಪಳ ಜಿಲ್ಲೆಯ ನವಲಿ ಬಳಿ 32 ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣಕ್ಕೆ ಮೂರು ರಾಜ್ಯಗಳ ಸರ್ಕಾರಗಳ ಮುಂದೆ ಪ್ರಸ್ತಾವನೆ ಇದೆ. ತುಂಗಭದ್ರಾ ಜಲಾಶಯದ 33 ಸ್ಪಿಲ್‌ವೇ ಗೇಟ್ ಉದ್ಘಾಟನೆಗೆ ಆಗಮಿಸುವ..
06:56 PM (IST) Jun 24
Hansika Motwani: ನಟಿ ಹನ್ಸಿಕಾ ಮೋಟ್ವಾನಿ ಕುಟುಂಬ ಸಮೇತ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಬಿಳಿ ಬಣ್ಣದ ಟ್ರೆಡಿಷನಲ್ ಉಡುಪಿನಲ್ಲಿ ಕಾಣಿಸಿಕೊಂಡ ಹನ್ಸಿಕಾ, ‘ತಿರುಪತಿಯ ಬೆಳಗು’..
06:42 PM (IST) Jun 24
ರಾಜ್ಯ ಡಾಟಾ ಸೆಂಟರ್‌ನಲ್ಲಿ ಮೂಲಸೌಕರ್ಯ ನವೀಕರಣ ಮತ್ತು ಭದ್ರತಾ ಸುಧಾರಣೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಸರ್ಕಾರದ ವಿವಿಧ ಆನ್‌ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ. ಜಾತಿ, ಆದಾಯ ಪ್ರಮಾಣಪತ್ರ, ಗ್ಯಾರಂಟಿ ಯೋಜನೆಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
06:39 PM (IST) Jun 24
Karnataka Politics: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಬಿಜೆಪಿ, ಆರ್‌ಎಸ್‌ಎಸ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
06:37 PM (IST) Jun 24
05:44 PM (IST) Jun 24
Kannada Actress Jyoti Rai Poorvaj: ಖ್ಯಾತ ಧಾರಾವಾಹಿ ನಟಿ ಜ್ಯೋತಿ ರೈ ಪೂರ್ವಜ ಅವರು ಸಖತ ಬೋಲ್ಡ್ ಫೋಟೋಗಳಿಂದಲೇ ಗಮನಸೆಳೆಯುತ್ತಾರೆ. ಈಗ ಅವರು ಕೂತಲ್ಲೇ ಎರಡು ಲಕ್ಷ ರೂಪಾಯಿ ಹಣ ಗಳಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
05:35 PM (IST) Jun 24
Cinema Hungama: ‘ಹೇ ನವಿಲೇ’ ಹಾಡಿಗೆ ರೀಲ್ಸ್ ಮಾಡಿದ್ದ ನಿವೇದಿತಾ ಗೌಡ ಮತ್ತು ಕಿಶನ್ ಬಿಳಿಗಲಿ ವಿರುದ್ಧ ನವಿಲುಗರಿ ಬಳಕೆ ಆರೋಪ ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
05:21 PM (IST) Jun 24
Sreeleela: ಯೋಗ ದಿನದ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗವಹಿಸಿದ್ದ ವೇಳೆ ನಡೆದ ಫೋಟೋ ಸೆಷನ್ ವಿವಾದಕ್ಕೆ ಕಾರಣವಾಗಿದೆ. ಅಮೃತಾ ಫಡ್ನವಿಸ್ ಶ್ರೀಲೀಲಾರನ್ನು ಪಕ್ಕಕ್ಕೆ ಕಳುಹಿಸಿದ ವಿಡಿಯೋ ವೈರಲ್ ಆಗಿದೆ.
04:56 PM (IST) Jun 24
Darshan ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಮೀನು ಅರ್ಜಿಗೆ ವಿಧಿಸಿದ್ದ ಒಂದು ವರ್ಷದ ಗಡುವು ಕಡಿಮೆ ಮಾಡುವಂತೆ ಮನವಿ ಸಲ್ಲಿಸಿದ್ದು, ಇದೇ ವೇಳೆ ಹಿರಿಯ ವಕೀಲ ಹಶ್ಮತ್ ಪಾಷಾ ದರ್ಶನ್ ಪರ ವಕಾಲತ್ತು ವಹಿಸಿದ್ದಾರೆ.
04:38 PM (IST) Jun 24
ಕನ್ನಡ ಚಿತ್ರರಂಗಕ್ಕೆ ಹೊಸ OTT ವೇದಿಕೆಯಾಗಿ AVR Cine Max ಆರಂಭವಾಗಿದೆ. 750ಕ್ಕೂ ಹೆಚ್ಚು ಸಿನಿಮಾಗಳು, ವೆಬ್ ಸೀರೀಸ್, ರಿಯಾಲಿಟಿ ಶೋ, ಕ್ರೀಡೆ ಹಾಗೂ ಲೈವ್ ಕಾರ್ಯಕ್ರಮಗಳೊಂದಿಗೆ ಕನ್ನಡಿಗರಿಗಾಗಿ ವಿಶೇಷ ಮನರಂಜನಾ ವೇದಿಕೆ ಲಭ್ಯವಾಗಿದೆ.
04:24 PM (IST) Jun 24
04:21 PM (IST) Jun 24
Dhruva Sarja, ಸುಂದರ್ ರಾಜ್ ಅವರ ಬಳಿ ಸಿನಿಮಾದಲ್ಲಿ ಒಂದು ಪಾತ್ರ ನೀಡುವಂತೆ ಮನವಿ ಮಾಡಿದರು. 250ನೇ ಚಿತ್ರಕ್ಕೆ ಧ್ರುವ ಸರ್ಜಾ ಮೆಚ್ಚುಗೆ ವ್ಯಕ್ತಪಡಿಸಿ ಕುಟುಂಬದೊಂದಿಗೆ ಸಿನಿಮಾ ನೋಡುವುದಾಗಿ ಹೇಳಿದರು.
03:45 PM (IST) Jun 24
NCERT 6ನೇ ತರಗತಿಯ 'ಕೃಷ್ಣ' ಹೆಸರಿನ ಕನ್ನಡ ಪಠ್ಯಪುಸ್ತಕವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಪುಸ್ತಕವು ಧಾರ್ಮಿಕ ಕಥೆಗಳನ್ನು ಹೇರುತ್ತಿದೆ, ಕರ್ನಾಟಕದ ಪ್ರಾದೇಶಿಕ ವೈವಿಧ್ಯತೆಯನ್ನು ಕಡೆಗಣಿಸಿದೆ ಮತ್ತು ಸಮತೋಲಿತ ಆಹಾರದ ಹೆಸರಿನಲ್ಲಿ ಸಸ್ಯಾಹಾರವನ್ನು ಮಾತ್ರ ಬಿಂಬಿಸುತ್ತಿದೆ ಎಂದು ಆರೋಪಿಸಲಾಗಿದೆ.
02:44 PM (IST) Jun 24
01:12 PM (IST) Jun 24
12:38 PM (IST) Jun 24
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು ಕಿಶನ್ ಬಿಳಗಲಿ ಅವರು 'ನವಿಲೇ ನವಿಲೇ' ಹಾಡಿಗೆ ನವಿಲಿನ ಗರಿ ಬಳಸಿ ನೃತ್ಯ ಮಾಡಿದ್ದಕ್ಕಾಗಿ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದಡಿ ದೂರು ದಾಖಲಾಗಿದೆ. ಕಾನೂನಿನ ಅರಿವಿಲ್ಲದೆ ಈ ತಪ್ಪು ನಡೆದಿದ್ದು, ಇಬ್ಬರೂ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
12:26 PM (IST) Jun 24
'ಮೋಡ ಕವಿದ ವಾತಾವರಣ' ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ನಿರ್ದೇಶಕರು ಸ್ವಾರಸ್ಯಕರ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ. ಅಜ್ಜಿಯೊಬ್ಬರು, ಅವರು ಅಲ್ಲಿ ಇಲ್ಲದಿದ್ದಕ್ಕೆ ಸುನಿ ಅವರಿಗೆ ಹೇಗೆ ಕ್ಲಾಸ್ ತೆಗೆದುಕೊಂಡರು ಎಂಬುದನ್ನು ವಿವರಿಸಿದ್ದಾರೆ.
12:26 PM (IST) Jun 24
12:00 PM (IST) Jun 24
10:46 AM (IST) Jun 24
ಚನ್ನಗಿರಿ ವೃತ್ತ ನಿರೀಕ್ಷಕ ರವೀಶ್ ವೈಯಕ್ತಿಕ ದ್ವೇಷದಿಂದ ಸುಮಾರು 50 ಜನರ ಮೇಲೆ ಸುಳ್ಳು ಅ*ತ್ಯಾ*ಚಾ*ರ ಮತ್ತು ಪ್ರಾಣ ಬೆದರಿಕೆ ಕೇಸ್ ದಾಖಲಿಸಿದ್ದಾರೆ ಎಂದು ಹೊನ್ನೆಮರದಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ನಮ್ಮೆಲ್ಲರನ್ನೂ ಸಾಮೂಹಿಕವಾಗಿ ಎನ್‌ಕೌಂಟರ್ ಮಾಡಿ ಅಥವಾ ಇಚ್ಛಾಮರಣಕ್ಕೆ ಅನುಮತಿ ನೀಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
10:36 AM (IST) Jun 24
ತಾಲೂಕಿನಲ್ಲಿ ಪ್ರತಿದಿನ 1.20 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಪಟ್ಟಣದ ಸಮೀಪ ನೂತನವಾಗಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಲಾಯಿತು. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಅವರು ಹಾಲು ಉತ್ಪಾದಕರಿಗೆ ವಿಮೆ, ಆರ್ಥಿಕ ನೆರವು ಸೇರಿದಂತೆ ಹಲವು ಸೌಲಭ್ಯಗಳನ್ನು ಘೋಷಿಸಿದರು.
10:25 AM (IST) Jun 24
ಕಾಂಗ್ರೆಸ್ ಸಮಾವೇಶದಿಂದ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ವಿದ್ಯಾರ್ಥಿಯೇ ಮನೆಯಿಂದ ತಡವಾಗಿ ಬದರೆ ಇದರಲ್ಲಿ ಸರ್ಕಾರದ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
10:23 AM (IST) Jun 24
10:16 AM (IST) Jun 24
09:05 AM (IST) Jun 24
08:58 AM (IST) Jun 24
ಸಚಿವ ಸತೀಶ್ ಜಾರಕಿಹೊಳಿ ಅವರ ಸೋದರಿಯ ಪತಿ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.
08:49 AM (IST) Jun 24
ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ!
08:37 AM (IST) Jun 24
08:06 AM (IST) Jun 24
07:52 AM (IST) Jun 24
07:49 AM (IST) Jun 24
ಪುತ್ತೂರಿನಲ್ಲಿ ಕಾಣೆಯಾಗಿದ್ದ 'ಚಿನ್ನು' ಎಂಬ ದೇಸಿ ನಾಯಿಯನ್ನು ಪತ್ತೆ ಹಚ್ಚಿಕೊಟ್ಟ ಕೂಲಿ ಕಾರ್ಮಿಕ ಪುರಂದರ ಅವರಿಗೆ, ಶ್ವಾನಪ್ರೇಮಿ ಮಾಲೀಕ ಗಣೇಶ್ ಭಟ್ ಕೇರ ಅವರು 50 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ. ಫಿಟ್ಸ್ ಸಮಸ್ಯೆಯಿಂದ ಬಳಲುತ್ತಿದ್ದ ನಾಯಿಯ ಹುಡುಕಾಟಕ್ಕಾಗಿ ಮಾಲೀಕರು ಬಹುಮಾನ ಘೋಷಿಸಿದ್ದರು.
07:35 AM (IST) Jun 24