Published : Jul 23, 2025, 07:41 AM ISTUpdated : Jul 24, 2025, 12:12 AM IST

Karnataka News Live: ಅಂದು BSY, ಇಂದು ಡಿಕೆಶಿ - ಸಿಎಂ ಬದಲಾವಣೆ ಚರ್ಚೆ ನಡುವೆಯೇ ಗುಟ್ಟಾಗಿ ದೇವಾಲಯಕ್ಕೆ ಡಿಸಿಎಂ ಭೇಟಿ

ಸಾರಾಂಶ

ಬೆಂಗಳೂರು (ಜು.23): ರಾಜ್ಯಾದ್ಯಂತ ಕೇಂದ್ರದ ಆರ್‌ಡಿಎಸ್‌ಎಸ್‌ (RDSS) ಅಡಿ ಎಲ್ಲಾ ವಿದ್ಯುತ್‌ ಸಂಪರ್ಕಗಳಿಗೂ ಸ್ಮಾರ್ಟ್‌ ಮೀಟರ್‌ (smart meters) ಅಳವಡಿಕೆ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಕೇಂದ್ರದ ಸಬ್ಸಿಡಿ (power subsidy) ಪಡೆದುಕೊಳ್ಳಲು ಬಾಕಿ ಇರುವ 15 ಸಾವಿರ ಕೋಟಿ ಹಣವನ್ನು ಸರ್ಕಾರ ಕಟ್ಟಬೇಕಿದೆ. ಈ ಹಣ ಹೊಂದಿಸಲು ಸ್ಥಳೀಯ ಸಂಸ್ಥೆಗಳಿಂದ ತೆರಿಗೆ ಹೇರಿಕೆಗೆ ಸಲಹೆ ಬಂದಿದೆ. ಪರ್ಯಾಯ ಮಾರ್ಗ ಶೋಧಿಸುವಂತೆ ಸಿಎಂ ಸಿದ್ದರಾಮಯ್ಯ ಕೂಡ ಸೂಚನೆ ನೀಡಿದ್ದು, ಭಾರೀ ಸಸ್ಪೆನ್ಸ್‌ಗೆ ಕಾರಣವಾಗಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

12:12 AM (IST) Jul 24

ಅಂದು BSY, ಇಂದು ಡಿಕೆಶಿ - ಸಿಎಂ ಬದಲಾವಣೆ ಚರ್ಚೆ ನಡುವೆಯೇ ಗುಟ್ಟಾಗಿ ದೇವಾಲಯಕ್ಕೆ ಡಿಸಿಎಂ ಭೇಟಿ

DCM DK Shivakumar And Temple Visiting: ಡಿಸಿಎಂ ಡಿಕೆ ಶಿವಕುಮಾರ್ ದೇವಾಲಯಕ್ಕೆ ಖಾಸಗಿ ಭೇಟಿ ನೀಡಿದ್ದಾರೆ. ಈ ಹಿಂದೆ ಬಿಎಸ್ ಯಡಿಯೂರಪ್ಪ ಸಹ ಸಿಎಂ ಆಗುವ ಮುನ್ನ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಸಿಎಂ ಬದಲಾವಣೆ ಚರ್ಚೆ ನಡುವೆ ಡಿಕೆಶಿ ಭೇಟಿ ಕುತೂಹಲ ಮೂಡಿಸಿದೆ.

Read Full Story

11:53 PM (IST) Jul 23

Karwar Canada job fraud - ಕೆನಡಾದಲ್ಲಿ ಲೈಬ್ರರಿ ಬಾಯ್ ಕೆಲಸದ ಆಸೆ ತೋರಿಸಿ ₹3 ಉಂಡೇನಾಮ; ಆರೋಪಿಗೆ ತೀವ್ರ ಶೋಧ

ಕೆನಡಾದಲ್ಲಿ ಲೈಬ್ರರಿ ಬಾಯ್ ಕೆಲಸ ಕೊಡಿಸುವುದಾಗಿ ನಂಬಿಸಿ 3 ಲಕ್ಷ ರೂ. ಪಡೆದು ವಂಚಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

09:37 PM (IST) Jul 23

Ekka Box Office Collection - ನಿರ್ಮಾಪಕರ ಜೇಬು ತುಂಬಿಸ್ತಿದೆ ಬ್ಯಾಂಗಲ್ ಬಂಗಾರಿ; ಈವರೆಗಿನ ಕಲೆಕ್ಷನ್ ಎಷ್ಟು?

Ekka Movie Box Office Collection: ಕನ್ನಡ ಚಿತ್ರರಂಗದಲ್ಲಿ ಚೇತರಿಕೆ ಕಾಣದೇ ಇರುವ ಸಮಯದಲ್ಲಿ 'ಎಕ್ಕ' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಳ್ಳಿಯಿಂದ ಬೆಂಗಳೂರಿಗೆ ಬರುವ ಮುತ್ತು ಎಂಬಾತನ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ಕಥಾವಸ್ತು.

Read Full Story

09:17 PM (IST) Jul 23

ಬೆಂಗಳೂರಲ್ಲಿ ಇಬ್ಬರು ಬಾಲ್ಯ ಸ್ನೇಹಿತೆಯರು ಡಿಜಿಟಲ್; ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಹಣಕ್ಕೆ ವಂಚಕರು ಡಿಮ್ಯಾಂಡ್!

ಬೆಂಗಳೂರಿನಲ್ಲಿ 'ಡಿಜಿಟಲ್ ಅರೆಸ್ಟ್' ಎಂಬ ಹೊಸ ಸೈಬರ್ ವಂಚನೆ ಕಾಣಿಸಿಕೊಂಡಿದ್ದು, ಇಬ್ಬರು ಬಾಲ್ಯ ಸ್ನೇಹಿತೆಯರನ್ನು ವಿವಸ್ತ್ರಗೊಳಿಸಿ 58 ಸಾವಿರ ರೂಪಾಯಿ ಸುಲಿಗೆ ಮಾಡಲಾಗಿದೆ. 

Read Full Story

08:50 PM (IST) Jul 23

ಉಡುಪಿಯಲ್ಲಿ ರೆಡ್ ಅಲರ್ಟ್ - ಜಿಲ್ಲೆಯ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ರಜೆ

Udupi Rain Alert Update: ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲಾಡಳಿತವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆಗಳಿವೆ.

Read Full Story

08:39 PM (IST) Jul 23

Kodagu Horror - 2ನೇ ಹೆಂಡತಿ ಮಗು ಹತ್ಯೆ ಮಾಡಿ, ಮೊದಲನೇ ಹೆಂಡತಿ ಮಗುವನ್ನು ಹಳ್ಳಕ್ಕೆ ಎಸೆದವನು ಅಂದರ್!

ಎರಡನೇ ಪತ್ನಿಯ ಮಗುವನ್ನು ಕೊಂದು ತೋಟದಲ್ಲಿ ಹೂತಿಟ್ಟಿದ್ದ ವ್ಯಕ್ತಿಯ ಕ್ರೌರ್ಯ, ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮತ್ತೊಂದು ಬಾಲಕಿಯಿಂದ ಬಯಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story

08:17 PM (IST) Jul 23

Raichur Tree Falls incident - ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮರ ಮುರಿದು ಬಿದ್ದು ದಂಪತಿ ಸ್ಥಳದಲ್ಲೇ ಸಾವು, ಮಗು ಬದುಕಿದ್ದೇ ಪವಾಡ!

ರಾಯಚೂರಿನಲ್ಲಿ ಭೀಕರ ದುರ್ಘಟನೆ. ಮರ ಬಿದ್ದು ಬೈಕ್‌ ಸವಾರ ದಂಪತಿ ಸ್ಥಳದಲ್ಲೇ ಮೃತ್ಯು. ಮಗುವಿಗೆ ಪವಾಡಸದೃಶ ರಕ್ಷಣೆ.
Read Full Story

07:19 PM (IST) Jul 23

Bhatkal Girl Missing case - ಜುಲೈ 18ರಂದು ನಾಪತ್ತೆಯಾಗಿದ್ದ ಯುವತಿ ಮಥುರಾದಲ್ಲಿ ಪತ್ತೆ! ಭಟ್ಕಳ ಪೊಲೀಸರ ಕ್ರಮಕ್ಕೆ ಮೆಚ್ಚುಗೆ, ಏನಿದು ಪ್ರಕರಣ?

ಭಟ್ಕಳದಲ್ಲಿ ನಾಪತ್ತೆಯಾಗಿದ್ದ ಯುವತಿ ಮಥುರಾದಲ್ಲಿ ಪತ್ತೆ. ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ಕರೆತರಲಾಗಿದೆ. ಯುವತಿ ಸ್ವಇಚ್ಛೆಯಿಂದ ಮಹಿಳೆಯೊಂದಿಗೆ ತೆರಳಿದ್ದಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
Read Full Story

06:59 PM (IST) Jul 23

ಬೆಂಗಳೂರು ಕೆ.ಜಿ.ಹಳ್ಳಿ-ಡಿಜೆ.ಹಳ್ಳಿ ಗಲಭೆ - ತಪ್ಪೊಪ್ಪಿಕೊಂಡ ಮೂವರಿಗೆ ಎನ್ಐಎ ಕೋರ್ಟ್ 7 ವರ್ಷ ಜೈಲು ಶಿಕ್ಷೆ

2020ರ ಕೆ.ಜಿ.ಹಳ್ಳಿ ಮತ್ತು ಡಿಜೆ.ಹಳ್ಳಿ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ತಪ್ಪು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
Read Full Story

06:46 PM (IST) Jul 23

ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರ ಕೊಲೆ; ಕತ್ತು ಸೀಳಿ ಹೆದ್ದಾರಿಯಲ್ಲಿ ಬೀಸಾಡಿದ ಕಿಡಿಗೇಡಿಗಳು!

ಬೆಂಗಳೂರು ಮೂಲದ ಇಬ್ಬರು ಬಿಜೆಪಿ ಮುಖಂಡರಾದ ತಂದೆ-ಮಗನನ್ನು ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಲು ತೆರಳಿದ್ದ ವೇಳೆ, ರಾಜಿ ಮಾಡಿಕೊಳ್ಳೋಣವೆಂದು ಕರೆದಾಗ ಈ ಘಟನೆ ನಡೆದಿದೆ.

Read Full Story

06:35 PM (IST) Jul 23

IRCTCಯಿಂದ ಮುಂಗಾರು ಆಫರ್ - ಬೆಂಗಳೂರು-ಮೈಸೂರಿಗೆ ವಿಶೇಷ ಟ್ರಿಪ್

Bengaluru Mysuru Travel IRCTC Package: ಐಆರ್‌ಸಿಟಿಸಿ ಬೆಂಗಳೂರು ಮತ್ತು ಮೈಸೂರಿಗೆ 2 ರಾತ್ರಿ 3 ದಿನಗಳ ಪ್ರವಾಸ ಪ್ಯಾಕೇಜ್ ನೀಡುತ್ತಿದೆ. ಈ ಪ್ಯಾಕೇಜ್‌ನಲ್ಲಿ ಎಸಿ ಕಾರು, ಹೋಟೆಲ್ ವಸತಿ, ಊಟ ಮತ್ತು ಪ್ರಯಾಣ ವಿಮೆ ಸೇರಿವೆ. ಹಾಗಾಗಿ ಪ್ರಯಾಣಿಕರು ಈ ವಿಶೇಷ ಟೂರ್ ಪ್ಯಾಕೇಜ್‌ನ್ನು ಆನಂದಿಸಬಹುದು.

Read Full Story

06:17 PM (IST) Jul 23

ಮಲೆನಾಡಿಗೆ ಗುಡ್‌ನ್ಯೂಸ್ ಕೊಟ್ಟ ಸಚಿವರು, ಶಿವಮೊಗ್ಗಕ್ಕೆ ಬರಲಿದೆ ಬರಲಿದೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ!

ಶಿವಮೊಗ್ಗವನ್ನು ಮಲೆನಾಡಿನ ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳಿವೆ. ಸಿಮ್ಸ್ ಮತ್ತು ಮೆಗ್ಗಾನ್ ಆಸ್ಪತ್ರೆಗಳ ಮೂಲಸೌಕರ್ಯವನ್ನು ಹೆಚ್ಚಿಸಲಾಗುವುದು.
Read Full Story

06:12 PM (IST) Jul 23

ಯತ್ನಾಳ್‌ರಿಂದ ಮಠ ವಿವಾದದ ಬಗ್ಗೆ ಪ್ರತಿಕ್ರಿಯೆ, ದಕ್ಷಿಣೆ ಚೊಲೊ ಕೊಟ್ಟಾನ ಅಂತ ರಾಜಕೀಯ ಟೀಕೆ

ಶಾಸಕ ಯತ್ನಾಳ್ ಅವರು ಧರ್ಮಸ್ಥಳದ ಮಠದ ವಿವಾದ, ರಾಜಕೀಯ ನಾಯಕರು ಮತ್ತು ಸ್ವಾಮೀಜಿಗಳ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. ಸಿಎಂ ಬದಲಾವಣೆ, ಪಕ್ಷಗಳ ಗೊಂದಲಗಳ ಬಗ್ಗೆಯೂ ಮಾತನಾಡಿದ್ದಾರೆ.
Read Full Story

06:08 PM (IST) Jul 23

₹1654 ಕೋಟಿ ಎಫ್‌ಡಿಐ ಉಲ್ಲಂಘನೆ - ಮಿಂತ್ರಾ ವಿರುದ್ಧ ಇಡಿ ಕೇಸ್

ಮಿಂತ್ರಾ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಂಬಂಧಿತ ಕಂಪನಿಗಳ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಮೇಲೆ ₹1654 ಕೋಟಿ ದೂರು ದಾಖಲಾಗಿದೆ. ಹೋಲ್‌ಸೇಲ್ ವ್ಯಾಪಾರದ ನೆಪದಲ್ಲಿ ಮಲ್ಟಿ ಬ್ರಾಂಡ್ ಚಿಲ್ಲರೆ ವ್ಯಾಪಾರ ನಡೆಸಿ ಎಫ್‌ಡಿಐ ನಿಯಮ ಉಲ್ಲಂಘನೆ ಆರೋಪ.

Read Full Story

06:07 PM (IST) Jul 23

ಪುಟ್ಟಗೌರಿ ಮದುವೆ ಸೀರಿಯಲ್‌ ನೋಡುವ ಆಸೆಗಾಗಿ ರಹಸ್ಯ ಬಿಟ್ಟುಕೊಟ್ಟ ಅಜ್ಜಿ - ಸೂಪರ್ ಸೀಕ್ರೆಟ್ ಎಂದ ನೆಟ್ಟಿಗರು

Puttagowri Maduve Serial Popularity:  ಪುಟ್ಟಗೌರಿ ಮದುವೆ ಧಾರಾವಾಹಿ ಮತ್ತೆ ನೋಡಲು ಅಜ್ಜಿಯೊಬ್ಬರು ತಮ್ಮ ಕಿಚನ್ ರೆಸಿಪಿಯನ್ನು ಹಂಚಿಕೊಂಡಿದ್ದಾರೆ. 5 ವರ್ಷದ  ಹಿಂದಿನ ಪುಟ್ಟಗೌರಿ ನೋಡುವ ಆಸೆಗಾಗಿ ಅಜ್ಜಿ ಹೇಳಿಕೊಟ್ಟ ಸೀಕ್ರೆಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Read Full Story

05:44 PM (IST) Jul 23

Onlineನಲ್ಲಿ ವಸ್ತು ಸೇಲ್​ ಮಾಡ್ತಿದ್ದೀರಾ? ಯಾಮಾರಿದ್ರೆ ಬ್ಯಾಂಕ್ ಖಾತೆ ಗೋವಿಂದ! ಈ ಅನುಭವ ಕೇಳಿ...

OLX ಸೇರಿದಂತೆ ಯಾವುದೇ ಆನ್​ಲೈನ್​ ಪ್ಲ್ಯಾಟ್​ಫಾರ್ಮ್​ನಲ್ಲಿ ವಸ್ತು ಸೇಲ್​ ಮಾಡಲು ಇಟ್ಟರೆ ಎಚ್ಚರ ಎಚ್ಚರ... ನಿಮಗೂ ಇದೇ ಗತಿ ಆಗ್ಬೋದು. ಇವರ ಅನುಭವ ಕೇಳಿ...

 

Read Full Story

05:39 PM (IST) Jul 23

ಜಿಎಸ್‌ಟಿ ನೋಟೀಸ್ ಕೊಟ್ಟಿದ್ದರೂ, ಯಾರಿಂದಲೂ ತೆರಿಗೆ ಕಟ್ಟಿಸಿಕೊಳ್ಳಲ್ಲ - ಸಿಎಂ ಸಿದ್ದರಾಮಯ್ಯ

೪೦ ಲಕ್ಷ ರೂ.ಗಿಂತ ಅಧಿಕ ವ್ಯವಹಾರದ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ವಿಚಾರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಎಂ ಸಿದ್ದರಾಮಯ್ಯನವರು ಸಭೆ ನಡೆಸಿ, ತೆರಿಗೆ ವಸೂಲಿ ಮಾಡುವುದಿಲ್ಲ ಮತ್ತು ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Read Full Story

05:26 PM (IST) Jul 23

ಗುಜರಾತ್ ಎಟಿಎಸ್‌ನಿಂದ ಭರ್ಜರಿ ಭೇಟೆ; ಅಲ್-ಖೈದಾ ಸಂಪರ್ಕ ಹೊಂದಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

ಗುಜರಾತ್ ಎಟಿಎಸ್ ಅಲ್-ಖೈದಾ ಜೊತೆ ಸಂಪರ್ಕ ಹೊಂದಿದ್ದ ನಾಲ್ವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಸೇರ್ಪಡೆಗೊಳಿಸುತ್ತಿದ್ದ ಈ ಗುಂಪು ದೊಡ್ಡ ದುಷ್ಕೃತ್ಯಕ್ಕೆ ಸಂಚು ರೂಪಿಸಿತ್ತು.
Read Full Story

05:08 PM (IST) Jul 23

102 ಕೇಜಿ ಮೂಟೆ ಹೊತ್ತು 575 ಮೆಟ್ಟಿಲೇರಿ ಅಂಜನಾದ್ರಿ ತಲುಪಿದ 61ರ ಹರೆಯದ ಹನುಮ ಭಕ್ತ

61 ವರ್ಷ ಪ್ರಾಯದ ಹನುಮ ಭಕ್ತರೊಬ್ಬರು ಜೋಳ ತುಂಬಿದ್ದ 102 ಕೇಜಿ ತೂಕದ ಮೂಟೆಯನ್ನು ಹೊತ್ತು ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ. ಬೆನ್ನ ಮೇಲೆಮೂಟೆ ಹೊತ್ತು ಅವರು ಅಂಜನಾದ್ರಿ ಬೆಟ್ಟದ 575 ಮೆಟ್ಟಿಲನ್ನು ಏರಿ ಹೋಗುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Read Full Story

04:53 PM (IST) Jul 23

Rajadrohi - 40 ವರ್ಷಗಳ ಬಳಿಕ ಒಂದಾದ ಅನಂತ್​ನಾಗ್​-ಲಕ್ಷ್ಮಿ ಜೋಡಿ! ಕಣ್ತುಂಬಿಸಿಕೊಳ್ಳಲು ಫ್ಯಾನ್ಸ್​ ಕಾತರ

70-80ರ ದಶಕದಲ್ಲಿ ಕಿಚ್ಚು ಹೊತ್ತಿಸಿದ್ದ ಅನಂತ್​ನಾಗ್​-ಲಕ್ಷ್ಮಿ ಜೋಡಿ 40 ವರ್ಷಗಳ ಬಳಿಕ ಜೊತೆಯಾಗಿ ನಟಿಸಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಾವುದೀ ಚಿತ್ರ? ಡಿಟೇಲ್ಸ್​ ಇಲ್ಲಿದೆ...

 

Read Full Story

04:52 PM (IST) Jul 23

ವಿಜಯೇಂದ್ರನನ್ನ ಮತ್ತೆ ತಲೆಮೇಲೆ ಕೂರಿಸಿಕೊಂಡರೆ, ಹೊಸ ಪಕ್ಷ ಕಟ್ಟೋದು ಗ್ಯಾರಂಟಿ; ಬಿಜೆಪಿಗೆ ಯತ್ನಾಳ್ ಎಚ್ಚರಿಕೆ!

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರದಲ್ಲಿ ವಿಜಯೇಂದ್ರರನ್ನು ಮತ್ತೆ ಆಯ್ಕೆ ಮಾಡಿದರೆ ಹೊಸ ಪಕ್ಷ ಕಟ್ಟುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದ್ದಾರೆ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ 30 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Read Full Story

04:50 PM (IST) Jul 23

ನೆಲಮಂಗಲ-ತುಮಕೂರು ಮಾರ್ಗದ ಪ್ರಯಾಣಿಕರಿಗೆ ಸಂತಸದ ಸುದ್ದಿ; ನೋ ಟ್ರಾಫಿಕ್, ಬಿಂದಾಸ್ ಪ್ರಯಾಣ

Nelamangala Tumkur Highway: ನೆಲಮಂಗಲ ಮತ್ತು ತುಮಕೂರು ನಡುವಿನ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿದೆ. ಇದರಿಂದ ಪ್ರಯಾಣದ ಅವಧಿ ಇಳಿಕೆಯಾಗಲಿದೆ

Read Full Story

04:35 PM (IST) Jul 23

Marriage Twist - ಮದ್ವೆ ದಿನ ಪತಿಯ ನೋಡಿ ಮೂರ್ಛೆ ಹೋದ ಮದುಮಗಳು! ಮುಂದಿರೋದೇ ಭಾರಿ ಟ್ವಿಸ್ಟು...

ತಮ್ಮ ಮಗಳು, ಮೊಮ್ಮಕ್ಕಳ ವಯಸ್ಸಿನಾಕೆಯನ್ನು ಮದುವೆಯಾಗುವ ಅಜ್ಜಂದಿರೇನೂ ಕಮ್ಮಿಯಿಲ್ಲ. ದಿನನಿತ್ಯವೂ ಇಂಥ ಘಟನೆ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಆದರೆ ಅದಕ್ಕೆ ಟ್ವಿಸ್ಟ್​ ಇದೆ.ಏನಿದು?

 

Read Full Story

04:34 PM (IST) Jul 23

ಬೆಂಗಳೂರು ಬಸ್‌ ನಿಲ್ದಾಣದಲ್ಲಿ ಜಿಲೆಟಿನ್ ರಾಡ್‌, ಡಿಟೋನೇಟರ್ ಪತ್ತೆ, ಸ್ಪೋಟಕ್ಕೆ ಮತ್ತೆ ಸಂಚು?

ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಶಂಕಾಸ್ಪದ ವಸ್ತುಗಳು ಪತ್ತೆಯಾಗಿವೆ. 6 ಜಿಲೆಟಿನ್ ರಾಡ್‌ಗಳು ಮತ್ತು ಒಂದು ಡಿಟೋನೇಟರ್ ಪತ್ತೆಯಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಮತ್ತು ATS ತಂಡ ತನಿಖೆ ಆರಂಭಿಸಿದೆ.
Read Full Story

04:12 PM (IST) Jul 23

ಧರ್ಮಸ್ಥಳ ಪ್ರಕರಣ - ಕೇರಳ ಸರ್ಕಾರದ ಮಧ್ಯಪ್ರವೇಶ ಸಲ್ಲದು, ನಗರ ನಕ್ಸಲರ ಮಧ್ಯಸ್ಥಿಕೆಯಿಂದ ತನಿಖೆ ದಿಕ್ಕು ತಪ್ಪಲಿದೆ!

ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆಯಲ್ಲಿ ಕೇರಳ ಸರ್ಕಾರ ಮಧ್ಯಪ್ರವೇಶಿಸುತ್ತಿದೆ. ಇಂತಹ ನಗರ ನಕ್ಸಲರು ಭಾಗವಹಿಸುವಿಕೆಯಿಂದ ಎಸ್‌ಐಟಿ ತನಿಖೆಗೆ ತೊಂದರೆಯಾಗಲಿದೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.

Read Full Story

03:55 PM (IST) Jul 23

ಕರ್ನಾಟಕದ ಮೂಲೆ ಮೂಲೆ ಲೋಕಾಯುಕ್ತ ದಾಳಿ - ಅಧಿಕಾರಿಗಳ ಮನೆಯಲ್ಲಿ ಅಕ್ರಮ ಸಂಪತ್ತು ಪತ್ತೆ!

ರಾಜ್ಯಾದ್ಯಂತ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಹಲವು ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.  ಅಕ್ರಮ ಸಂಪತ್ತು ಪತ್ತೆಯಾಗಿದೆ. ಮೈಸೂರು, ಬೀದರ್, ತುಮಕೂರು, ಕಲಬುರ್ಗಿ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಳಿ ನಡೆದಿದೆ.

Read Full Story

03:00 PM (IST) Jul 23

ಸುಳ್ಳು ಕೇಸ್‌ನಲ್ಲಿ ಪತಿ, ಮಾವನಿಗೆ ಜೈಲು, ಕ್ಷಮೆ ಕೇಳುವಂತೆ ಐಪಿಎಸ್‌ ಅಧಿಕಾರಿಗೆ ಸೂಚಿಸಿದ ಸುಪ್ರೀಂ!

ಪತ್ನಿ ದಾಖಲಿಸಿದ ಕ್ರಿಮಿನಲ್ ಪ್ರಕರಣಗಳಿಂದಾಗಿ ಪತಿ 109 ದಿನಗಳು ಮತ್ತು ಅವರ ತಂದೆ 103 ದಿನಗಳು ಜೈಲಿನಲ್ಲಿ ಕಳೆಯಬೇಕಾಯಿತು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

 

Read Full Story

02:31 PM (IST) Jul 23

ರಾಜ್ಯದಲ್ಲಿ ಮತ್ತೆ ಜಾತಿ ಆಧಾರಿತ ಸಾಮಾಜಿಕ-ಆರ್ಥಿಕ ಸಮೀಕ್ಷೆ; ಸೆ.22ರಿಂದ ಗಣತಿ ಆರಂಭಿಸಲು ಸಿಎಂ ಸೂಚನೆ!

ಹಿಂದುಳಿದ ವರ್ಗಗಳ ಆಯೋಗದ ಪ್ರಸ್ತಾವನೆಯಂತೆ ರಾಜ್ಯದ 7 ಕೋಟಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಸರ್ಕಾರ ಸಜ್ಜಾಗಿದೆ. ಜಾತಿ ತಾರತಮ್ಯ ನಿವಾರಣೆ ಈ ಗಣತಿಯ ಪ್ರಮುಖ ಉದ್ದೇಶವಾಗಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಈ ಸಮೀಕ್ಷೆ ನಡೆಯಲಿದ್ದು, ಅಕ್ಟೋಬರ್‌ಗೆ ವರದಿ ಸಲ್ಲಿಸಬೇಕಿದೆ.

Read Full Story

01:58 PM (IST) Jul 23

ಟಿಎಂಸಿ ಅಧಿಕಾರದ ಅವಧಿಯಲ್ಲಿ ಪಶ್ಚಿಮ ಬಂಗಾಳವನ್ನು ತೊರೆದ 6,688 ಕಂಪನಿಗಳು, ಕೇಂದ್ರದ ಮಾಹಿತಿ

ಬಿಜೆಪಿಯ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಈ ಸಾಮೂಹಿಕ ವ್ಯವಹಾರಗಳ ವಲಸೆಯು ತೃಣಮೂಲ ಕಾಂಗ್ರೆಸ್ ಆಳ್ವಿಕೆಯಲ್ಲಿ ರಾಜ್ಯದ ಕೈಗಾರಿಕಾ ವಾತಾವರಣದ ಕರಾಳ ಚಿತ್ರಣವನ್ನು ಚಿತ್ರಿಸುತ್ತದೆ ಎಂದು ಆರೋಪಿಸಿದ್ದಾರೆ.

 

Read Full Story

01:11 PM (IST) Jul 23

ಉಪರಾಷ್ಟ್ರಪತಿ ರಾಜೀನಾಮೆ ಕುರಿತು ಬಿಜೆಪಿ ಸ್ಪಷ್ಟನೆ ನೀಡಲಿ - ಸಚಿವ ಸಂತೋಷ್ ಲಾಡ್ ಒತ್ತಾಯ

ಪ್ರಜಾಪ್ರಭುತ್ವ ಇಲ್ಲ ಎಂದು ಈಗ ಉಪರಾಷ್ಟ್ರಪತಿಗಳಿಗೆ ಅರ್ಥವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

Read Full Story

01:10 PM (IST) Jul 23

ಹೆಣ್ಣು ಮಗು ಹುಟ್ಟಿದೆ... ನನಗೆ ಬಂದೂಕು​ ಕೊಡಿ ಎಂದು ಬೇಡಿಕೊಂಡ ನಟಿ Richa Chadha!

ಅಲಿ ಫಜಲ್ ಎಂಬುವವರನ್ನು ಮದುವೆಯಾಗಿರೋ ನಟಿ ರಿಚಾ ಚಡ್ಡಾಗೆ ಈಗ ಗನ್​ ಬೇಕಂತೆ. ಅದಕ್ಕೆ ಕಾರಣ ಮಗು ಭಾರತದಲ್ಲಿ ಹುಟ್ಟಿರೋದಕ್ಕಂತೆ. ಅದಕ್ಕೇ ಪಾಕಿಸ್ತಾನಕ್ಕೆ ಕಳಿಸಲು ರೆಡಿಯಾಗಿದ್ದಾರೆ ಫ್ಯಾನ್ಸ್​.

 

Read Full Story

12:55 PM (IST) Jul 23

ಶ್ರಾವಣ ಮಾಸದಲ್ಲಿ ಬಿಹಾರ ವಿಧಾನಸಭೆಯಲ್ಲಿ ಮಟನ್‌ ಊಟ, ಭಾರೀ ವಿವಾದ

ಮೋದಿ ಅವರ ಸಂಪುಟದಲ್ಲಿ, ಶ್ರಾವಣ ಮಾಸದಲ್ಲೂ ಸಹ ಪ್ರತಿದಿನ 3 ಕಿಲೋ ಮಟನ್ ಸೇವಿಸುವ ಬಿಹಾರದ ಮೂವರು ಸಚಿವರಿದ್ದಾರೆ, ಆದರೆ ತೋರಿಕೆಗಾಗಿ ಅವರು ಸನಾತನದ ಬಗ್ಗೆ ದೀರ್ಘ ಉಪನ್ಯಾಸಗಳನ್ನು ನೀಡುತ್ತಾರೆ ಎಂದು ಆರ್‌ಜೆಡಿ ನಾಯಕ ಟೀಕಿಸಿದ್ದಾರೆ.

 

Read Full Story

12:39 PM (IST) Jul 23

ಯೂರಿಯಾ ಸಾಕಷ್ಟಿದೆ, ರೈತರು ಆತಂಕ ಪಡುವುದು ಬೇಡ - ಸಚಿವ ಚಲುವರಾಯಸ್ವಾಮಿ

ನಮ್ಮ ಬಳಿ ಇನ್ನೂ 1.94 ಲಕ್ಷ ಮೆಟ್ರಿಕ್‌ ಟನ್‌ಗೂ ಹೆಚ್ಚು ದಾಸ್ತಾನಿದೆ. ಹಾಗಾಗಿ ರೈತರು ಆತಂಕ ಪಡುವುದು ಬೇಡ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

Read Full Story

12:14 PM (IST) Jul 23

ಸಣ್ಣ ನಗರಗಳ ಮಂದಿ ಸಾಲ ತೀರಿಸಲು ಸೋಲುತ್ತಿರುವುದು ಯಾಕೆ?

ಪುಟ್ಟ ಪಟ್ಟಣಗಳ ಅಥವಾ ಗ್ರಾಮೀಣ ಭಾಗಗಳ ಅನೇಕ ಮಂದಿ ಯುವಕರು ಸಾಲ ತೆಗೆದುಕೊಂಡು, ಅದನ್ನು ಮರುಪಾವತಿ ಮಾಡುವ ವಿಚಾರದಲ್ಲಿ ಹಿಂದೆ ಬಿದ್ದಿದ್ದಾಗಿ ಅನೇಕ ವರದಿಗಳು ಹೇಳುತ್ತಿವೆ. ಈ ಕುರಿತ ಮಾಹಿತಿ ಇಲ್ಲಿದೆ.

 

Read Full Story

12:12 PM (IST) Jul 23

ಬಾಲಿವುಡ್‌ ಹೊಸ ಜೋಡಿ, ವಿಭಿನ್ನ ಪ್ರಚಾರ - 4 ದಿನದಲ್ಲಿ 105 ಕೋಟಿ ಗಳಿಕೆ ಮಾಡಿದ 'ಸಯ್ಯಾರ'

‘ಸಯ್ಯಾರ’- ತೀವ್ರ ಪ್ರೇಮಕಥೆಯುಳ್ಳ ಈ ಬಾಲಿವುಡ್‌ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನದಲ್ಲಿ ದಾಖಲೆಯ 105.75 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ.

Read Full Story

11:58 AM (IST) Jul 23

ಹೆಂಡ್ತಿ ನದಿಗೆ ತಳ್ಳಿದರೂ ಬದುಕಿಬಂದ ಗಂಡ ತಾತಪ್ಪ ಹಗುರಿಲ್ಲಪ್ಪೋ; ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ!

ರಾಯಚೂರಿನಲ್ಲಿ ನದಿಗೆ ಬಿದ್ದ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ಘಟನೆಯ ಹಿಂದೆ ತಾತಪ್ಪ ಮಾಡಿದ ಭಾರೀ ಯಡವಟ್ಟು ಈಗ ಬಹಿರಂಗವಾಗಿದೆ. ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆಂಬ ಆರೋಪ ಕೇಳಿಬಂದಿದೆ.

Read Full Story

11:57 AM (IST) Jul 23

ಮಧುಮೇಹಿ ಸೇರಿ ಎಲ್ಲರಿಗೂ ಇಷ್ಟ 'ನಂದಿನಿ ಸ್ವಾದ್‌' ಖಡಕ್ ರೊಟ್ಟಿ - ರಿಲಯನ್ಸ್‌ ಜತೆಗೂ ಒಪ್ಪಂದ

ಮಧುಮೇಹಿಗಳ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಎಂದು ಸ್ವತಃ ಡಯಾಬಿಟೀಸ್ ಬಾಧಿತರೊಬ್ಬರು ಯೋಚಿಸಿದಾಗ ಹುಟ್ಟಿದ ಉದ್ಯಮವೇ ಸ್ವಾದ್ ನಂದಿನಿ ಹೆಸರಿನ ಖಡಕ್ ರೊಟ್ಟಿಗಳು.

Read Full Story

11:52 AM (IST) Jul 23

ದೇಶದಲ್ಲಿ ಗರಿಷ್ಠ ಯುಪಿಐ ವಹಿವಾಟು ನಡೆಸುವ ರಾಜ್ಯಗಳು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಜೂನ್ 2025ರ  (UPI Transaction) ವರದಿಯಂತೆ, UPI ವಹಿವಾಟಿನಲ್ಲಿ ಮಹಾರಾಷ್ಟ್ರ (Maharashtra) ಮುಂಚೂಣಿಯಲ್ಲಿದ್ದು, ಕರ್ನಾಟಕ ಮತ್ತು ಉತ್ತರಪ್ರದೇಶಗಳು ನಂತರದ ಸ್ಥಾನದಲ್ಲಿವೆ. ದಕ್ಷಿಣ ಭಾರತದ ರಾಜ್ಯಗಳಾದ ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳು ಕೂಡ ಗಣನೀಯ ಪ್ರಮಾಣದ ವಹಿವಾಟು ದಾಖಲಿಸಿವೆ. 

Read Full Story

11:23 AM (IST) Jul 23

ದಾವಣಗೆರೆ ಶೃಂಗ ಸಮ್ಮೇಳನ - ವೀರಶೈವ ಪಂಚ ಪೀಠಾಧೀಶರಿಂದ 12 ನಿರ್ಣಯ

12 ನಿರ್ಣಯಗಳನ್ನು ಒಂದೊಂದಾಗಿ ಓದಿದ ರಂಭಾಪುರಿ ಜಗದ್ಗುರುಗಳು ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರಗಳು, ಸಮಾಜದ ನಾಯಕರು, ಜನಪ್ರತಿನಿಧಿಗಳು, ಸಮಾಜ ಬಾಂಧವರು ಮಾಡಬೇಕು ಎಂದು ತಿಳಿಸಿದರು.

Read Full Story

11:05 AM (IST) Jul 23

ಅದಾನಿ ಗ್ರೂಪ್‌ 6 ಕಂಪನಿಗಳಲ್ಲಿ ಭಾರೀ ಪ್ರಮಾಣದಲ್ಲಿ ತಮ್ಮ ಪಾಲು ಕಡಿಮೆ ಮಾಡಿದ ವಿದೇಶ ಹೂಡಿಕೆದಾರರು

Adani Group FII Stake Trim ಜೂನ್ 2025 ರ ತ್ರೈಮಾಸಿಕದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐಗಳು) ಹಲವಾರು ಅದಾನಿ ಗ್ರೂಪ್ ಕಂಪನಿಗಳಲ್ಲಿ ತಮ್ಮ ಹೂಡಿಕೆಗಳನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿದ್ದಾರೆ.

 

Read Full Story

More Trending News