ರಾಯಚೂರಿನಲ್ಲಿ ಭೀಕರ ದುರ್ಘಟನೆ. ಮರ ಬಿದ್ದು ಬೈಕ್‌ ಸವಾರ ದಂಪತಿ ಸ್ಥಳದಲ್ಲೇ ಮೃತ್ಯು. ಮಗುವಿಗೆ ಪವಾಡಸದೃಶ ರಕ್ಷಣೆ.

ರಾಯಚೂರು (ಜುಲೈ.23): ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಮರವೊಂದು ಮುರಿದುಬಿದ್ದು ಗಂಡ-ಹೆಂಡತಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಹೊರವಲಯದಲ್ಲಿ ನಡಿದಿದೆ.

ನಾಗಲಾಪುರ ಗ್ರಾಮದ ರಮೇಶ್ (26) ಮತ್ತು ಅನುಸೂಯಾ (24), ಮೃತ ದುರ್ದೈವಿಗಳು. ದಂಪತಿಯು ಮುದಗಲ್‌ನಿಂದ ನಾಗಲಾಪುರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ದಂಪತಿಯ ಮೂರು ವರ್ಷದ ಮಗು ಸೌಜನ್ಯಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಗುವನ್ನು ಮುದಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Bhatkal Girl Missing case: ಜುಲೈ 18ರಂದು ನಾಪತ್ತೆಯಾಗಿದ್ದ ಯುವತಿ ಮಥುರಾದಲ್ಲಿ ಪತ್ತೆ! ಭಟ್ಕಳ ಪೊಲೀಸರ ಕ್ರಮಕ್ಕೆ ಮೆಚ್ಚುಗೆ, ಏನಿದು ಪ್ರಕರಣ?

ಮಾಹಿತಿ ತಿಳಿದ ಕೂಡಲೇ ಮುದಗಲ್ ಪೊಲೀಸ್ ಠಾಣೆಯ ಪಿಎಸ್‌ಐ ವೆಂಕಟೇಶ ಮಾಡಿಗೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದಂಪತಿಯ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು ಕೆ.ಜಿ.ಹಳ್ಳಿ-ಡಿಜೆ.ಹಳ್ಳಿ ಗಲಭೆ: ತಪ್ಪೊಪ್ಪಿಕೊಂಡ ಮೂವರಿಗೆ ಎನ್ಐಎ ಕೋರ್ಟ್ 7 ವರ್ಷ ಜೈಲು ಶಿಕ್ಷೆ