Published : Jan 21, 2026, 06:51 AM ISTUpdated : Jan 22, 2026, 12:02 AM IST

Karnataka News Live: ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!

ಸಾರಾಂಶ

ಬೆಂಗಳೂರು: ಆದಾಯ ಹೆಚ್ಚಳ ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದೊಂದಿಗೆ ಬಿಎಂಟಿಸಿ ಜಾರಿ ಮಾಡಿರುವ ಯುಪಿಐ ಆಧಾರಿತ ವ್ಯವಸ್ಥೆ ಬಳಸಿ ನಿಗಮಕ್ಕೆ ಸೇರಬೇಕಾದ ಹಣ ತಮ್ಮ ಖಾತೆಗೆ ವರ್ಗಾಯಿಸುತ್ತಿದ್ದ ಮೂವರು ನಿರ್ವಾಹಕರನ್ನು ನಿಗಮ ಅಮಾನತು ಮಾಡಿದೆ.

ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದೊಂದಿಗೆ ಬಿಎಂಟಿಸಿ ಹಲವು ತಿಂಗಳಿನಿಂದ ಯುಪಿಐ ಆಧಾರಿತ ಪೇಮೆಂಟ್‌ ವ್ಯವಸ್ಥೆ ಜಾರಿಗೊಳಿಸಿದೆ. ಆದರೆ, ಈ ಯುಪಿಐ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ನಿರ್ವಾಹಕರಾದ ಸುರೇಶ್‌, ಅಶ್ಫಕ್‌ ಖಾನ್‌ ಮತ್ತು ಚಾಲಕ ಕಂ ನಿರ್ವಾಹಕ ಮಂಚೇಗೌಡ ಅವರು ಪ್ರಯಾಣಿಕರಿಗೆ ತಮ್ಮ ಬ್ಯಾಂಕ್‌ ಖಾತೆಯ ಕ್ಯೂಆರ್‌ ಕೋಡ್‌ ಅನ್ನು ನೀಡಿ ಪ್ರಯಾಣಿಕರು ಪಾವತಿಸುತ್ತಿದ್ದ ಪ್ರಯಾಣ ಶುಲ್ಕ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಮೂಲಕ ಬಿಎಂಟಿಸಿ ಬ್ಯಾಂಕ್‌ ಖಾತೆಗೆ ಹೋಗಬೇಕಿದ್ದ 1.04 ಲಕ್ಷವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ಮೂವರನ್ನೂ ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಜತೆಗೆ ಇಲಾಖಾ ವಿಚಾರಣೆಗೂ ಆದೇಶಿಸಲಾಗಿದೆ.

12:02 AM (IST) Jan 22

ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ಅಂದಾನಗೌಡ ಪಾಟೀಲರಿಗೆ ಧಾರವಾಡ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದೆ.

Read Full Story

11:31 PM (IST) Jan 21

Discover Koppal - ವಿಶ್ವದ ಗಮನ ಸೆಳೆಯಲಿದೆ ಹಿರೇಬೆಣಕಲ್ - ಡಿಸ್ಕವರ್ ಕೊಪ್ಪಳಕ್ಕೆ ಡಿಸಿ ವಿದ್ಯುಕ್ತ ಚಾಲನೆ

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಸಹಯೋಗದಲ್ಲಿ 'ಡಿಸ್ಕವರಿ ಕೊಪ್ಪಳ' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲೆಯ ಪ್ರವಾಸಿ ತಾಣಗಳು, ಪೌರಾಣಿಕ ಹಾಗೂ ಪ್ರಾಗೈತಿಹಾಸಿಕ ಸ್ಥಳಗಳನ್ನು ನಾಡಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ. 

Read Full Story

11:02 PM (IST) Jan 21

ಉತ್ತರಕನ್ನಡ - ಒಂದು ಎಕರೆ ಜಮೀನಿಗೆ ಹರಿದ ನೆತ್ತರು; ಕೋರ್ಟ್ ಮೆಟ್ಟಿಲೇರಿದ್ದಕ್ಕೇ ಪ್ರಾಣ ತೆಗೆದ ಪಾಪಿ!

ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಜಮೀನು ವಿವಾದವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ದ್ವೇಷಕ್ಕೆ ನಾಗಪ್ಪ ಗೌಡ ಎಂಬಾತ, ಮಾರುತಿ ಹೆಗಡೆ ಎಂಬುವವರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಈ ಸಂಬಂಧ ಮೃತರ ಪುತ್ರಿ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Read Full Story

10:32 PM (IST) Jan 21

Breaking News - ಕೋಮುದ್ವೇಷ ಭಾಷಣ ಆರೋಪ - ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮತ್ತೆ ಎಫ್‌ಐಆರ್!

ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೋಮುದ್ವೇಷ ಪ್ರಚೋದಿಸುವ ಭಾಷಣ ಮಾಡಿದ ಆರೋಪದ ಮೇಲೆ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಾನವ ಬಂಧುತ್ವ ವೇದಿಕೆಯಿಂದ ದೂರು. ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Read Full Story

10:09 PM (IST) Jan 21

ಬೆಂಗಳೂರು - ಮಗಳು ಮನೆ ಬಿಟ್ಟಿದ್ದಕ್ಕೆ ಪತ್ನಿಗೆ ಕಿರುಕುಳ; ಬೇಸತ್ತ ಹೆಂಡತಿಯಿಂದ ಪತಿಯೇ ಹತ್ಯೆ!

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ, ಮಗಳು ಮನೆ ಬಿಟ್ಟು ಹೋದ ವಿಚಾರಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. ಕೌಟುಂಬಿಕ ಕಲಹ ತಾರಕಕ್ಕೇರಿದಾಗ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Full Story

10:06 PM (IST) Jan 21

ಮದುವೆಗೆ ರೆಡಿಯಾದ ಉಗಂ ಮಂಜು, ಅರಿಶಿನ ಶಾಸ್ತ್ರದ ಫೋಟೋ ರಿಲೀಸ್‌; ಹಾರೈಸಲು ಬರ್ತಾನಾ ಪಳಾರ್‌ ಗಿಲ್ಲಿ?

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಹಾಗೂ ನಟ ಉಗ್ರಂ ಮಂಜು, ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿರುವ ಸಾಯಿ ಸಂಧ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜನವರಿ 23 ರಂದು ಧರ್ಮಸ್ಥಳದಲ್ಲಿ ನಡೆಯಲಿರುವ ವಿವಾಹಕ್ಕೂ ಮುನ್ನ, ಅವರ ಮನೆಯಲ್ಲಿ ಅರಿಶಿಣ ಶಾಸ್ತ್ರ ಸರಳವಾಗಿ ನೆರವೇರಿದೆ.

Read Full Story

09:27 PM (IST) Jan 21

ಚಾಮರಾಜನಗರ - ಪಾದಯಾತ್ರೆಗೆ ಹೋರಟಿದ್ದವರ ಮೇಲೆ ಚಿರತೆ ಅಟ್ಯಾಕ್, ಮಾದಪ್ಪ ಭಕ್ತ ಸಾವು!

ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತರ ಗುಂಪಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಪ್ರವೀಣ್ ಎಂಬ ಯಾತ್ರಿಕ ಸಾವನ್ನಪ್ಪಿದ್ದಾನೆ. ಈ ಘಟನೆಯ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯು ತಾತ್ಕಾಲಿಕವಾಗಿ ಪಾದಯಾತ್ರೆ ಮಾರ್ಗವನ್ನು ನಿರ್ಬಂಧಿಸಿ, ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಂಡಿದೆ.
Read Full Story

09:07 PM (IST) Jan 21

ಹಾಸನದಲ್ಲೇ ಹಾಡ ಹಗಲೇ ಬೆಚ್ಚಿ ಬೀಳಿಸುವ ಘಟನೆ - ಶಾಲಾ ಬಾಲಕಿಯ ಬೆನ್ನಟ್ಟಿಕೊಂಡು ಮನೆ ಬಾಗಿಲವರೆಗೂ ಬಂದ ಅಪರಿಚಿತ

ಹಾಸನದಲ್ಲಿ ಶಾಲಾ ಬಾಲಕಿಯೊಬ್ಬಳನ್ನು ಅಪರಿಚಿತನೋರ್ವ ಮನೆ ಬಾಗಿಲವರೆಗೂ ಹಿಂಬಾಲಿಸಿದ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.

Read Full Story

08:39 PM (IST) Jan 21

ಡ್ರಗ್ಸ್ ಹಾಗೂ ಅಕ್ಕಿ ದಂಧೆಯಲ್ಲಿ ಆಪ್ತರ ಹೆಸರು - ಅವರು ಮಾಡಿದ್ದನ್ನೆಲ್ಲಾ ನಮ್ಮ ತಲೆಗೆ ಕಟ್ಟಿದರೆ ಹೇಗೆ? - ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್

ದಾವಣಗೆರೆಯಲ್ಲಿನ ಡ್ರಗ್ಸ್ ಮತ್ತು ಪಡಿತರ ಅಕ್ಕಿ ಅಕ್ರಮ ಪ್ರಕರಣಗಳಲ್ಲಿ ತಮ್ಮ ಆಪ್ತರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮೌನ ಮುರಿದಿದ್ದಾರೆ. ತಪ್ಪು ಮಾಡಿದವರು ಯಾರೇ ಆಗಿರಲಿ, ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ.

Read Full Story

08:27 PM (IST) Jan 21

'ಬಿಗ್ ಬಾಸ್ ವೋಟಿಂಗ್ ಲೆಕ್ಕ ಬಿಟ್ಟರೆ, ವಿನ್ನರ್ ನಾನೇ'-ಅಶ್ವಿನಿ ಗೌಡ; ಸುದೀಪಣ್ಣ ಕೈ ಬಿಡ್ತಾರೆ ಅನ್ಕೊಂಡಿರಲಿಲ್ಲ!

ಬಿಗ್ ಬಾಸ್ ಸೀಸನ್ 12ರ 2ನೇ ರನ್ನರ್ ಅಪ್ ಅಶ್ವಿನಿ ಗೌಡ, ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೋಟ್ ಲೆಕ್ಕವನ್ನು ಬದಿಗಿಟ್ಟರೆ ವ್ಯಕ್ತಿತ್ವದ ಆಧಾರದ ಮೇಲೆ ತಾವೇ ನಿಜವಾದ ವಿಜೇತರು ಎಂದಿರುವ ಅವರು, ವಿನ್ನರ್ ಗಿಲ್ಲಿ ಅವರ ಗೆಲುವು ಒಂದು 'ಪ್ಲ್ಯಾನ್' ಎಂದು ಆರೋಪಿಸಿದ್ದಾರೆ.
Read Full Story

08:00 PM (IST) Jan 21

Bigg Boss 12 ಝೂನಲ್ಲಿದ್ರೆ ಎಲ್ಲರೂ ಯಾವ ಪ್ರಾಣಿ ಆಗಿರ್ತಿದ್ರು? ನೆಚ್ಚಿನ ಸ್ಪರ್ಧಿಗಳ ಹುಡುಕಿದ ನೆಟ್ಟಿಗರು!

ಬಿಗ್​ಬಾಸ್​ 12ರ ಸ್ಪರ್ಧಿಗಳನ್ನು ಪ್ರಾಣಿಗಳಿಗೆ ಹೋಲಿಸಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದು ವೈರಲ್ ಆಗಿದೆ. ಈ ಕಲ್ಪನೆಯ ಪ್ರಕಾರ, ಕಿಚ್ಚ ಸುದೀಪ್ ಸಿಂಹವಾದರೆ, ವಿನ್ನರ್ ಗಿಲ್ಲಿ ನಟ ಹುಲಿಯಾಗಿದ್ದಾರೆ. ಆದರೆ, ಅಶ್ವಿನಿ ಗೌಡ ಅವರ ಬಗ್ಗೆ ಹೆಚ್ಚು ಚರ್ಚಿಸಲಾಗುತ್ತಿದೆ. 

Read Full Story

07:57 PM (IST) Jan 21

ಜಂಟಿ ಅಧಿವೇಶನ ಬಿಕ್ಕಟ್ಟು, ಸರ್ಕಾರದ 'ನರೇಗಾ' ಭಾಷಣ ಓದಲ್ಲ ಎಂದ ರಾಜ್ಯಪಾಲ!

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಸಂಘರ್ಷ ತಲೆದೋರಿದೆ. ಕೇಂದ್ರ ಸರ್ಕಾರದ ನರೇಗಾ ಯೋಜನೆ ಬದಲಾವಣೆ ಕುರಿತಾದ ಟೀಕೆಗಳನ್ನು ಒಳಗೊಂಡ ಭಾಷಣವನ್ನು ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ. ಇದು ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿನ ಆತಂಕವನ್ನು ಸೃಷ್ಟಿಸಿದೆ.
Read Full Story

07:35 PM (IST) Jan 21

ಬಿಎಂಟಿಸಿ ಬಸ್ QR Code ಹಣ ಜೇಬಿಗಿಳಿಸಿ ಸಸ್ಪೆಂಡ್ ಆದ 4 ಕಂಡಕ್ಟರ್‌ಗಳು; ಅವರ ಐಡಿಯಾ ಹೇಗಿದೆ ಒಮ್ಮೆ ನೋಡಿ!

ಬಿಎಂಟಿಸಿ 'ಶಕ್ತಿ' ಯೋಜನೆಯಲ್ಲಿ ಬೃಹತ್ ವಂಚನೆ! ಮಹಿಳೆಯರ ಉಚಿತ ಟಿಕೆಟ್ ಬಳಸಿ, ತಮ್ಮದೇ ಕ್ಯೂಆರ್ ಕೋಡ್ ಮೂಲಕ ಕಂಡಕ್ಟರ್‌ಗಳು ಲಕ್ಷಾಂತರ ಲೂಟಿ ಮಾಡಿದ್ದು ಹೇಗೆ? ಪೂರ್ತಿ ವಿವರ ತಿಳಿಯಿರಿ.

Read Full Story

07:34 PM (IST) Jan 21

ಸಚಿವ ತಂಗಡಗಿಗೆ ಈಡಿಗ ಸಮುದಾಯದ 'ವಾರ್ನಿಂಗ್'; ಶ್ರೀಗಳನ್ನು ನಿರ್ಲಕ್ಷಿಸಿದರೆ ಚುನಾವಣೆಲಿ ತಕ್ಕ ಪಾಠ!

ಸಚಿವ ಸ್ಥಾನ ಪಡೆದ ಬಳಿಕ ಈಡಿಗ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆಂದು ಸಚಿವ ಶಿವರಾಜ್ ತಂಗಡಗಿ ವಿರುದ್ಧ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀ ಪ್ರಣವಾನಂದ ಸ್ವಾಮೀಜಿಗಳ ಪಾದಯಾತ್ರೆಗೆ ಬೆಂಬಲ ನೀಡಿ, ಸಮುದಾಯದ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ.

Read Full Story

07:16 PM (IST) Jan 21

ಕಿಚ್ಚನ ತಿವಿತವೊ, ಗಿಲ್ಲಿಯ ಗೆಲುವೊ? 'ಹೇಳೋದೆಲ್ಲಾ ಸುಳ್ಳು' ಎಂದು ಕೊನೆಗೂ ಒಪ್ಪಿಕೊಂಡ ಡಾಗ್​ ಸತೀಶ್!

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಅನುಬಂಧ ವೇದಿಕೆಯಲ್ಲಿ ತಮ್ಮ ದುಬಾರಿ ಉಡುಪು ಮತ್ತು ವೈಯಕ್ತಿಕ ಜೀವನದ ಬಗ್ಗೆ ಎಂದಿನಂತೆ ಬಡಾಯಿ ಕೊಚ್ಚಿಕೊಂಡಿದ್ದಾರೆ. ಆದರೆ, ಅಂತಿಮವಾಗಿ ವೇದಿಕೆಯಲ್ಲೇ ತಾನು ಹೇಳುವುದೆಲ್ಲಾ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ.

Read Full Story

07:08 PM (IST) Jan 21

ಲಕ್ಕುಂಡಿ ಉತ್ಖನನದಲ್ಲಿ 'ಘಟಸರ್ಪ'ದ ಆತಂಕ - ನಿಧಿ ಕಾಯುವ ಹಾವುಗಳ ಬೆನ್ನತ್ತಿ ಬಂದ ಮೈಸೂರಿನ ಉರಗ ರಕ್ಷಕರು!

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಉತ್ಖನನವು ಹಾವುಗಳ ಪ್ರತ್ಯಕ್ಷದಿಂದ ನಿಗೂಢ ತಿರುವು ಪಡೆದಿದೆ. 'ನಿಧಿಯನ್ನು ಹಾವು ಕಾಯುತ್ತವೆ' ಎಂಬ ಸ್ಥಳೀಯರ ನಂಬಿಕೆ ಕುರಿತು ಪರಿಶೀಲನೆ ಮಾಡಿ, ಜಾಗೃತಿ ಮೂಡಿಸಲು ಮೈಸೂರಿನ ಶಿವರಾಜ್ ನೇತೃತ್ವದ ಉರಗ ರಕ್ಷಣಾ ತಂಡವು ಆಗಮಿಸಿದೆ.

Read Full Story

06:59 PM (IST) Jan 21

ವೈಭವದ ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ, ಈ ಬಾರಿ ವಿಶೇಷ ಆಕರ್ಷಣೆಯಾಗಿ ಗದ್ದುಗೆ ಮಂಟಪ

ರಾಜ್ಯಾದ್ಯಂತ ಪ್ರಸಿದ್ಧವಾದ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯು ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ನಡೆಯಲಿದೆ. ಈ ಬಾರಿ ವಿಶೇಷ ಆಕರ್ಷಣೆಯಾಗಿ ಗದ್ದುಗೆ ಮಂಟಪ ನಿರ್ಮಿಸಲಾಗುತ್ತಿದ್ದು, ಭಕ್ತರಿಗಾಗಿ ವಸತಿ, ಅನ್ನಸಂತರ್ಪಣೆ ಹಾಗೂ ಭದ್ರತೆ ಸೇರಿದಂತೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ.

Read Full Story

06:39 PM (IST) Jan 21

ಕನ್ನಡದ ಈ ಸ್ಟಾರ್ ನಟಿಯರು ಹುಟ್ಟಿದ್ದು ಯಾವ ಜಿಲ್ಲೆಯಲ್ಲಿ? ಯಾವ ಜಾತಿಯಲ್ಲಿ?

ಬೆಂಗಳೂರು: ತನ್ನ ಅದ್ಭುತ ನಟನೆಯ ಮೂಲಕವೇ ಕನ್ನಡ ನಾಡಿನಾದ್ಯಂತ ಅಭಿಮಾನಿಗಳ ಜನಮನ ಗೆದ್ದ ಹೊಸ ತಲೆಮಾರಿನ ಕನ್ನಡದ ಟಾಪ್-7 ನಟಿಯರು ಯಾವ ಜಿಲ್ಲೆಯವರು ಹಾಗೆ ಯಾವ ಜಾತಿಯವರು ಎನ್ನುವುದನ್ನು ನೋಡೋಣ ಬನ್ನಿ.

 

Read Full Story

06:34 PM (IST) Jan 21

ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಮತ್ತೆ ಮುಂದೂಡಿಕೆ!

Karnataka Maharashtra Border Row ಸುಪ್ರೀಂ ಕೋರ್ಟ್‌ನಲ್ಲಿ ನಡೆಯಬೇಕಿದ್ದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಅರ್ಜಿ ವಿಚಾರಣೆ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ನ್ಯಾಯಮೂರ್ತಿಗಳು ಬೇರೆ ಪ್ರಕರಣಗಳಲ್ಲಿ ನಿರತರಾಗಿದ್ದೇ ಇದಕ್ಕೆ ಕಾರಣವಾಗಿದ್ದು, ಈ ಬೆಳವಣಿಗೆಯು ಗಡಿ ಹೋರಾಟಗಾರರ ಅಸಮಾಧಾನಕ್ಕೆ ಕಾರಣ. 

Read Full Story

06:22 PM (IST) Jan 21

ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ನಾಗರ ಹಾವು ಆಯ್ತು, ಈಗ ದಿಢೀರ್ ಕೋತಿಗಳ ಸೈನ್ಯವೇ ಪ್ರತ್ಯಕ್ಷ!

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಸ್ಥಳದಲ್ಲಿ ವಾನರ ಸೇನೆ ಕಾಣಿಸಿಕೊಂಡು ಕುತೂಹಲ ಮೂಡಿಸಿದೆ. ಈ ಉತ್ಖನನದಲ್ಲಿ ಚಾಲುಕ್ಯ ಶೈಲಿಯ ತಾಮ್ರದ ಶಿವಲಿಂಗ, ನಾಗನ ಕಲ್ಲುಗಳು ಸೇರಿದಂತೆ ಹಲವು ಐತಿಹಾಸಿಕ ಕುರುಹುಗಳು ಪತ್ತೆಯಾಗಿವೆ. 

Read Full Story

05:57 PM (IST) Jan 21

ಮೈಷುಗರ್ ಕಾರ್ಖಾನೆ ಅವ್ಯವಹಾರ, ಮಹಾರಾಷ್ಟ್ರದ ಅಧಿಕಾರಿಯ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಕರ್ನಾಟಕ ಆದೇಶ

ಮಂಡ್ಯದ ಮೈಷುಗರ್ ಕಾರ್ಖಾನೆಯಲ್ಲಿ 2021-22ನೇ ಸಾಲಿನಿಂದ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಗಳು ಮತ್ತು ಅಕ್ರಮಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ತನಿಖಾ ಸಮಿತಿಯನ್ನು ರಚಿಸಿದೆ. ನಿವೃತ್ತ ಸಕ್ಕರೆ ಆಯುಕ್ತ ಶೇಖರ್ ಗಾಯಕ್‌ವಾಡ್ ಅಧ್ಯಕ್ಷತೆಯ ಈ ಸಮಿತಿಯು  15 ದಿನಗಳಲ್ಲಿ ವರದಿ ಸಲ್ಲಿಸಲಿದೆ.

Read Full Story

05:48 PM (IST) Jan 21

ಉಡುಪಿ - ಬಂಗಡೆ ಮೀನು ಕೊಟ್ಟು ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾಗೆ ಅದ್ಧೂರಿ ಸ್ವಾಗತ

ಉಡುಪಿ: ಕರಾವಳಿಯ ಕುವರಿ, ಬಿಗ್ ಬಾಸ್ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ತವರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಅಭಿಮಾನಿಗಳು ರಕ್ಷಿತಾ ಶೆಟ್ಟಿಗೆ ತಮ್ಮ ನೆಚ್ಚಿನ ಬಂಗುಡೆ ಮೀನು ಕೊಟ್ಟು ಸ್ವಾಗತಿಸಿದ್ದು, ಹೆಚ್ಚು ಗಮನ ಸೆಳೆದಿದೆ.

 

Read Full Story

05:20 PM (IST) Jan 21

ಧಾರವಾಡ - ಹೂತಿದ್ದ ಶವ ಹೊರಕ್ಕೆ, ಹೃದಯಾಘಾತವಲ್ಲ, ಹತ್ಯೆ? ಬಾಬಾಜಾನ್ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಧಾರವಾಡದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ನಂಬಲಾಗಿದ್ದ NWKSRTC ಚಾಲಕ ಬಾಬಾಜಾನ್ ಚಿನ್ನೂರು ಅವರ ಸಾವಿನಲ್ಲಿ ಹೊಸ ತಿರುವು ಸಿಕ್ಕಿದೆ.  ಸೆಯ ವಿರುದ್ಧವೇ ದೂರು ನೀಡಿದ್ದು, ಸತ್ಯಾಸತ್ಯತೆ ತಿಳಿಯಲು ಹೂತಿಟ್ಟ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

Read Full Story

05:06 PM (IST) Jan 21

ಮೆಡಿಕಲ್ ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕ ಪರಾರಿ! 11 ದಿನ ಕಳೆದರೂ ಸಿಗದ ಸುಳಿವು; ಪೋಷಕರ ಕಣ್ಣೀರು

ಬೆಳಗಾವಿಯ ಅಥಣಿಯಲ್ಲಿ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನ ಉಪನ್ಯಾಸಕನೊಬ್ಬ, ತನ್ನದೇ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಕರೆದುಕೊಂಡು ಪರಾರಿಯಾಗಿದ್ದಾನೆ. ಘಟನೆ ನಡೆದು 11 ದಿನ ಕಳೆದರೂ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ.

Read Full Story

04:47 PM (IST) Jan 21

ಶಕ್ತಿ ಯೋಜನೆ ಬರೋಕು ಮುಂಚೆಯೇ, ಬುರ್ಖಾ ಧರಿಸಿ ಬಸ್‌ ಹತ್ತಿದ್ರಂತೆ ಸಚಿವ ಜಮೀರ್‌ ಅಹ್ಮದ್‌ ಖಾನ್‌!

ಸಚಿವ ಹಾಗೂ ನ್ಯಾಷನಲ್ ಟ್ರಾವೆಲ್ಸ್ ಮಾಲೀಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಜೈದ್ ಖಾನ್, ತಮ್ಮ ತಂದೆಯ ಕುತೂಹಲಕಾರಿ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ರಾವೆಲ್ಸ್ ಬಸ್ಸುಗಳಲ್ಲಿ ನಡೆಯುತ್ತಿದ್ದ ವಂಚನೆಯನ್ನು ಪತ್ತೆಹಚ್ಚಲು, ಜಮೀರ್ ಅವರೇ ಬುರ್ಖಾ ಧರಿಸಿ ಪ್ರಯಾಣಿಕರಂತೆ ಬಸ್ ಹತ್ತಿದ್ದರು.

Read Full Story

04:43 PM (IST) Jan 21

ರೇಷ್ಮೆ ಸೀರೆ ಸಿಕ್ಕವರು ಫುಲ್ ಖುಷ್, ಸಿಗದವರು ನಿರಾಸೆ - ಮೈಸೂರು ಸಿಲ್ಕ್ ಕಾರ್ಖಾನೆ ಮುಂದೆ ಹೈಡ್ರಾಮಾ!

ಜಾಗತಿಕ ಮನ್ನಣೆ ಪಡೆದ ಮೈಸೂರು ರೇಷ್ಮೆ ಸೀರೆಗಳಿಗೆ ಅಭೂತಪೂರ್ವ ಬೇಡಿಕೆ ಸೃಷ್ಟಿ, ಸೀರೆ ಕೊಳ್ಳಲು ಗ್ರಾಹಕರು ಮುಂಜಾನೆಯಿಂದಲೇ ಕಾರ್ಖಾನೆಯ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಬೇಡಿಕೆಗೆ ತಕ್ಕಂತೆ ಸೀರೆಗಳನ್ನು ಪೂರೈಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಕ್ಕೆ ಆಕ್ರೋಶ.

Read Full Story

04:29 PM (IST) Jan 21

ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಮಾನತಿಗೆ ಕೆಪಿಸಿಸಿ ಗ್ರೀನ್ ಸಿಗ್ನಲ್! ಪೊಲೀಸರ ಕೈಗೂ ಸಿಗದೇ ಪರಾರಿ!

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ದೂರವಾಣಿಯಲ್ಲಿ ನಿಂದಿಸಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಘಟನೆಯಿಂದ ಪಕ್ಷಕ್ಕೆ ಮುಜುಗರವಾಗಿದ್ದು, ಕೆಪಿಸಿಸಿ ನೀಡಿದ ನೋಟಿಸ್‌ಗೆ ಉತ್ತರಿಸದ ಕಾರಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಲು ಶಿಸ್ತು ಸಮಿತಿಗೆ ಸೂಚಿಸಲಾಗಿದೆ.
Read Full Story

04:18 PM (IST) Jan 21

ಲಕ್ಕುಂಡಿ ರಹಸ್ಯ - ಮತ್ತೊಂದು ನಾಗನ ಹೆಡೆ ಇರುವ ಹಸಿರು ಶಿಲೆ ಪತ್ತೆ, ಮಣ್ಣಿನ ಬಿಲ್ಲೆಗಳು ಕೂಡ ಪತ್ತೆ

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಮತ್ತೊಂದು ಅಪರೂಪದ ನಾಗಶಿಲೆ ಪತ್ತೆಯಾಗಿದೆ. ಹೆಡೆ ಎತ್ತಿ ನಿಂತಿರುವ ಹಾವಿನ ಕೆತ್ತನೆಯುಳ್ಳ ಈ ಹಸಿರು ಶಿಲೆಯ ಜೊತೆಗೆ, ಸುಟ್ಟ ಮಣ್ಣಿನ ಬಿಲ್ಲೆಯೂ ದೊರೆತಿದ್ದು, ಇದು ಲಕ್ಕುಂಡಿಯ ಇತಿಹಾಸದ ಬಗ್ಗೆ ಕುತೂಹಲ ಹೆಚ್ಚಿಸಿದೆ.
Read Full Story

04:05 PM (IST) Jan 21

ಸಂಸದ ಬಿ.ವೈ. ರಾಘವೇಂದ್ರ ಕಾರು ಅಪಘಾಯ; ಹಿಂಬದಿಯಿಂದ ಡಿಕ್ಕಿ ಹೊಡೆದ ವಾಹನ, ಅದೃಷ್ಟವಶಾತ್ ಸಂಸದರು ಪಾರು!

ಶಿಕಾರಿಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರ ಕಾರು ಕುಂಚೇನಹಳ್ಳಿ ಬಳಿ ಸರಣಿ ಅಪಘಾತಕ್ಕೀಡಾಗಿದೆ. ಹಿಂಬದಿಯಿಂದ ಬಂದ ಖಾಸಗಿ ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಸದರ ಕಾರು ಮುಂದಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಗುದ್ದಿದೆ. ಅದೃಷ್ಟವಶಾತ್ ಸಂಸದರು ಯಾವುದೇ ಅಪಾಯವಾಗಿಲ್ಲ.

Read Full Story

03:29 PM (IST) Jan 21

ಭದ್ರಾವತಿ ದಂಪತಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್, ಚಿನ್ನದ ಆಸೆಗೆ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಂದ ವೈದ್ಯ!

ಭದ್ರಾವತಿಯಲ್ಲಿ ವೃದ್ಧ ದಂಪತಿಗಳು ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣವನ್ನು ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದಾರೆ. ಹಣ ಮತ್ತು ಚಿನ್ನದ ಆಸೆಗಾಗಿ, ಸ್ವಂತ ಸೋದರನ ಮಗನಾದ ವೈದ್ಯನೇ ಅನಸ್ತೇಶಿಯಾ ಇಂಜೆಕ್ಷನ್ ನೀಡಿ ಅವರನ್ನು ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ.
Read Full Story

03:17 PM (IST) Jan 21

ಬೆಂಗಳೂರಿನಲ್ಲಿ ಫಿಟ್ನೆಸ್ ಇನ್ಫ್ಲುಯೆನ್ಸರ್‌ಗೆ ಕಿರುಕುಳ - ಹರಿಯಾಣದಿಂದ ಬಂದಿದ್ದ 'ಸೈಕೋ' ಸ್ಟಾಕರ್ ಬಂಧನ!

ಇನ್‌ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್ ಇನ್ಫ್ಲುಯೆನ್ಸರ್ ಯುವತಿಯೊಬ್ಬರಿಗೆ ಹರಿಯಾಣ ಮೂಲದ ಸುಧೀರ್ ನಿರಂತರ ಕಿರುಕುಳ ನೀಡಿದ್ದಾನೆ. ಯುವತಿ ಬೆಂಗಳೂರಿನಲ್ಲಿದ್ದಾಗ ಇನ್‌ಸ್ಟಾಗ್ರಾಮ್ ಲೊಕೇಶನ್ ಆಧರಿಸಿ ಹರಿಯಾಣದಿಂದ ಬಂದು ಯುವತಿ ಹಿಂಬಾಲಿಸುತ್ತಿದ್ದನು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Read Full Story

02:50 PM (IST) Jan 21

ಬೆಂಗಳೂರಿನಲ್ಲಿ ಮತ್ತೆ ಘರ್ಜಿಸಿದ ಬಿಡಿಎ ಜೆಸಿಬಿ - ಕೆಂಗೇರಿಯಲ್ಲಿ ಅಕ್ರಮ ಕಟ್ಟಡಗಳ ತೆರವು, ನಿವಾಸಿಗಳ ಆಕ್ರೋಶ!

ಬೆಂಗಳೂರಿನ ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿ, ಬಿಡಿಎಗೆ ಸೇರಿದ ಜಾಗದ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಅಕ್ರಮವಾಗಿ ನಿರ್ಮಿಸಲಾಗಿದ್ದ ಹಲವು ಮನೆಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದ್ದು, ಇದಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Read Full Story

02:17 PM (IST) Jan 21

ಅರ್ಚಕನ ಭೀಕರ ಕೊ*ಲೆಗೆ ಕಾರಣವಾಗಿತ್ತು ಒನ್ ವೇ ಲವ್..! ಅಪ್ರಾಪ್ತ ಬಾಲಕ ಅಂದರ್

ಬೆಳಗಾವಿಯಲ್ಲಿ, ತನ್ನ ಅಕ್ಕನನ್ನು ಪ್ರೀತಿಸಿ ಪೀಡಿಸುತ್ತಿದ್ದ ಅರ್ಚಕನನ್ನು ಅಪ್ರಾಪ್ತ ಯುವಕನೊಬ್ಬ ಕೊ*ಲೆ ಮಾಡಿದ್ದಾನೆ. ಮತ್ತೊಂದೆಡೆ, ಹಾಸನದಲ್ಲಿ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿದ ಕಾಮುಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Read Full Story

02:07 PM (IST) Jan 21

Ambari Double-Decker - ಹೇಗಿದೆ ಬೆಂಗಳೂರಿಗೆ ಬಂದಿರೋ ಅಂಬಾರಿ ಡಬಲ್ ಡೆಕ್ಕರ್ ಬಸ್?

ಬೆಂಗಳೂರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೆಎಸ್‌ಟಿಡಿಸಿ ಅಂಬಾರಿ ಡಬಲ್ ಡೆಕ್ಕರ್ ಬಸ್‌ಗಳನ್ನು ಪರಿಚಯಿಸಿದೆ. ಈ ಬಸ್ಸುಗಳು ತೆರೆದ ಮೇಲ್ಛಾವಣಿ ಹೊಂದಿದ್ದು, ನಗರದ ಪ್ರಮುಖ ಸ್ಥಳಗಳ ಮೂಲಕ ಸಂಚರಿಸಲಿವೆ. ಪ್ರಯಾಣಿಕರು ಕೆಎಸ್‌ಟಿಡಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು.
Read Full Story

01:36 PM (IST) Jan 21

ಮದುವೆಯಾಗದ ಮೊಮ್ಮಗಳಿಗೆ ಹುಟ್ಟಿದ ಮಗು; ಒಂದೇ ನಿಮಿಷಕ್ಕೆ ಹಸುಗೂಸಿನ ಕುತ್ತಿಗೆ ಹಿಸುಕಿ ತಿಪ್ಪೆಗೆಸೆದ ಅಜ್ಜಿ!

ಚಿಕ್ಕಮಗಳೂರಿನ ತರೀಕೆರೆಯಲ್ಲಿ ಮದುವೆಗೂ ಮುನ್ನ ಮಗುವಿಗೆ ಜನ್ಮ ನೀಡಿದ ನರ್ಸ್ ಕುಟುಂಬ, ಸಮಾಜದ ಗೌರವಕ್ಕೆ ಅಂಜಿ ಹಸುಗೂಸನ್ನು ಕೊಲೆ ಮಾಡಿದೆ. ಹುಟ್ಟಿದ ಮಗುವನ್ನು ಅಜ್ಜಿಯೇ ಕತ್ತು ಹಿಸುಕಿ ಕೊಂದಿದ್ದು, 15 ದಿನಗಳ ನಂತರ ಈ ಘೋರ ಕೃತ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
Read Full Story

01:36 PM (IST) Jan 21

ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಆಪ್ತನ ವಿರುದ್ಧ ಎಫ್ಐಆರ್‌!

ದಾವಣಗೆರೆಯಲ್ಲಿ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪದ ಮೇಲೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಆಪ್ತ ಮೊಹಮ್ಮದ್ ಜಮೀರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Read Full Story

01:07 PM (IST) Jan 21

ಡಾಲಿ 'JC'ಯಲ್ಲಿ ದಾಸನ ವಿವಾದಾತ್ಮಕ ಜೈಲು ಸೀನ್! ದರ್ಶನ್ ಜೈಲಿನ ಕರಾಳ ಸತ್ಯ ಅನಾವರಣ?

ನಟ ಧನಂಜಯ್ ನಿರ್ಮಾಣದ 'ಜೆಸಿ' ಸಿನಿಮಾವು, ನಟ ದರ್ಶನ್ ಅವರ ವಿವಾದಾತ್ಮಕ ಜೈಲು ಫೋಟೋವನ್ನು ಹೋಲುವ ದೃಶ್ಯದಿಂದಾಗಿ ಸದ್ದು ಮಾಡುತ್ತಿದೆ. ನ್ಯಾಯಾಂಗ ಬಂಧನದಲ್ಲಿನ ಅವ್ಯವಹಾರಗಳನ್ನು ತೋರಿಸುವ ಈ ಚಿತ್ರ, ದರ್ಶನ್ ಅವರ ನೈಜ ಘಟನೆಗೂ ಇದಕ್ಕೂ ಇರುವ ಸಂಬಂಧದ ಬಗ್ಗೆ ಕುತೂಹಲ ಕೆರಳಿಸಿದೆ.
Read Full Story

01:05 PM (IST) Jan 21

ಧಾರವಾಡದಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿಗೂಢ ಹತ್ಯೆ, ವಿನಯ್ ಕುಲಕರ್ಣಿ ಡೈರಿ ಬಳಿ ಶವ ಪತ್ತೆ!

ಧಾರವಾಡದಲ್ಲಿ 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಆಕೆಯ ಶವ ನಗರದ ಹೊರವಲಯದಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

01:04 PM (IST) Jan 21

ವಿಜಯಲಕ್ಷ್ಮಿ ದರ್ಶನ್‌ಗೆ ಪೊಲೀಸ್ ನೋಟಿಸ್, ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ

ಸೋಷಿಯಲ್ ಮೀಡಿಯಾದಲ್ಲಿ ಅವ್ಯಾಚ್ಯ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ, ನ್ಯಾಯಾಧೀಶರ ಮುಂದೆ 164ನೇ ಕಲಂನಡಿ ಹೇಳಿಕೆ ದಾಖಲಿಸುವಂತೆ ಅವರಿಗೆ ಸೂಚಿಸಲಾಗಿದೆ.  

Read Full Story

12:52 PM (IST) Jan 21

ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್ - ಗುಜರಾತ್ ಬಸ್‌ಗಳಿಗೆ ಕೂತಲ್ಲೇ 'FC' ಕೊಟ್ಟ ಕೋರಮಂಗಲ RTO ನಿಸಾರ್ ಅಮಾನತು!

ಗುಜರಾತ್ ವಾಹನಗಳಿಗೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ (FC) ನೀಡಿದ ಕೋರಮಂಗಲ ಆರ್.ಟಿ.ಒ ಅಧಿಕಾರಿ ನಿಸಾರ್ ಅಹಮದ್ ಅಮಾನತು. ಈ ಭ್ರಷ್ಟಾಚಾರವನ್ನು ಸುವರ್ಣ ನ್ಯೂಸ್ ಸಾಕ್ಷಿ ಸಮೇತ ಬಯಲಿಗೆಳೆದ ನಂತರ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ. ಈ ಹಗರಣದಿಂದಾಗಿ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಎದುರಾಗಿದೆ.

Read Full Story

More Trending News