ರಾಮನಗರ: ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ ಯುವಕ ಆಕೆಯ ಬಳಿ ₹25 ಲಕ್ಷ ಹಣ, 6 ದುಬಾರಿ ಮೊಬೈಲ್ ಹಾಗೂ 137 ಗ್ರಾಂ ಚಿನ್ನಾಭರಣ ಪಡೆದು ವಂಚನೆ ಮಾಡಿರುವ ಪ್ರಕರಣ ಚನ್ನಪಟ್ಟಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಶೆಟ್ಟಿಹಳ್ಳಿ ಬಡಾವಣೆಯಲ್ಲಿ ವಾಸಿಸುತ್ತಿರುವ ಯುವತಿಗೆ, ಅಪ್ಪಗೆರೆ ಸಿದ್ದಾರ್ಥ ನಗರದ ಕೃಷ್ಣ ಮೂರ್ತಿ ಎಂಬ ವ್ಯಕ್ತಿ ಪ್ರೀತಿ ಹೆಸರಿನಲ್ಲಿ ಮೋಸ ಮಾಡಿರುವುದಾಗಿ ಪ್ರಕರಣ ದಾಖಲಾಗಿದ್ದು, ಈತನ ಜೊತೆಗೆ ಯುವಕನ ತಾಯಿ ಸಿದ್ದಮ್ಮ ಮತ್ತು ಅಣ್ಣ ಮನೋಜ್ ಎಂಬುವರು ಈ ಕೃತ್ಯಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೃಷ್ಣಮೂರ್ತಿ ಮತ್ತು ನಾನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ ಈತ ನನ್ನಿಂದ ನಗದು ಹಾಗೂ ಆನ್‌ಲೈನ್ ಮೂಲಕ ₹25 ಲಕ್ಷ ಹಣವನ್ನು ಪಡೆದುಕೊಂಡಿದ್ದ. ಇದಲ್ಲದೆ 2019ರಿಂದ 6 ದುಬಾರಿ ಮೊಬೈಲ್‌ಗಳನ್ನು ದುಬಾರಿ ಸ್ಮಾರ್ಟ್ ವಾಚ್‌ಗಳನ್ನು ತೆಗೆಸಿಕೊಂಡಿದ್ದು, ನನ್ನ ಬಳಿ ಇದ್ದ 137 ಗ್ರಾಂ ಚಿನ್ನಾಭರಣಪಡೆದುಕೊಂಡಿದ್ದಾನೆ. ಈತನಿಗೆ ಬೇರೊಬ್ಬ ಯುವತಿಯ ಜೊತೆಗೆ ಸಂಬಂಧವಿದ್ದು ಇದನ್ನು ಮುಚ್ಚಿಟ್ಟು ವಂಚಿಸಿದ್ದಾನೆ. ಹಣ ನೀಡುವಂತೆ ಕೇಳಿದಾಗ ಧಮಕಿ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
11:05 PM (IST) Oct 20
ಸಾರಿಗೆ ಬಸ್-ಟ್ರಾಕ್ಟರ್ ನಡುವೆ ಭೀಕರ ಅಪಘಾತ, ನಾಲ್ವರ ಕಾಲು ಮುರಿತ, ರಾಯಚೂರು ಸೀತಾ ನಗರದ ಬಳಿ ಈ ಅಫಘಾತ ಸಂಭವಿಸಿದೆ. ಹಲವರು ಗಾಯಗೊಂಡಿದ್ದು, ರೀಮ್ಸ್ ಆಸ್ಪತ್ರೆಯಲ್ಲಿ ಗಾಯಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
11:01 PM (IST) Oct 20
ತನ್ನ ತಂಗಿಯನ್ನು ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಮೈದುನನ ಮೇಲೆ ಅತ್ತಿಗೆ ಸೇಡು ತೀರಿಸಿಕೊಂಡಿದ್ದಾಳೆ. ಕುಟುಂಬದ ವಿರೋಧಕ್ಕೆ ಮಣಿದು ಪ್ರೀತಿ ಮುರಿದುಕೊಂಡಿದ್ದಕ್ಕೆ ಕೋಪಗೊಂಡ ಆಕೆ, ರಾತ್ರಿ ವೇಳೆ ಮೈದುನನ ಖಾಸಗಿ ಅಂಗವನ್ನೇ ಕತ್ತರಿಸಿ ಪರಾರಿಯಾಗಿದ್ದಾಳೆ.
10:05 PM (IST) Oct 20
ಬೆಂಗಳೂರಿನ ಹೆಣ್ಣೂರಿನಲ್ಲಿ ದೀಪಾವಳಿ ಪಟಾಕಿ ಕಿಡಿ ಸಿಡಿದಿದ್ದಕ್ಕೆ ಶುರುವಾದ ಸಣ್ಣ ಜಗಳವು, ಐವರ ಗುಂಪೊಂದು ಮಚ್ಚು-ಲಾಂಗುಗಳಿಂದ ಬಡಾವಣೆಯ ನಿವಾಸಿಗಳಿಗೆ ಪ್ರಾಣ ಬೆದರಿಕೆ ಹಾಕುವಷ್ಟರ ಮಟ್ಟಿಗೆ ಉಲ್ಬಣಗೊಂಡಿದೆ. ಈ ದಾಂಧಲೆಯಿಂದ ಬೆಚ್ಚಿಬಿದ್ದ ಸ್ಥಳೀಯರು, ಮೂವರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
09:54 PM (IST) Oct 20
ದೀಪಾವಳಿ ಮೊದಲ ದಿನವೇ ಪಟಾಕಿ ಅವಘಡ, ಬಾಲಕ ಸೇರಿ ಇಬ್ಬರ ಕಣ್ಣಿಗೆ ಗಾಯ, ಇಬ್ಬರನ್ನು ಆಸ್ಪತ್ರೆ ದಾಖಳಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇದುವರೆಗೆ ನಾಲ್ವರು ಪಟಾಕಿಯಿಂದ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
08:59 PM (IST) Oct 20
ಕಳೆದ ನಾಲ್ಕು ವರ್ಷಗಳಿಂದ ಸಿರಿಗೆರೆಯ ತರಳಬಾಳು ಬೃಹನ್ಮಠ ಹಾಗೂ ಸಾಣೇಹಳ್ಳಿ ಶಾಖಾ ಮಠದ ಸ್ವಾಮೀಜಿಗಳ ನಡುವೆ ಇದ್ದ ವೈಮನಸ್ಸು ಶಮನಗೊಳ್ಳುವ ಲಕ್ಷಣಗಳು ಕಾಣಿಸಿವೆ. ಸಾಣೇಹಳ್ಳಿ ಶ್ರೀಗಳ ಭೇಟಿಯ ಯತ್ನಕ್ಕೆ ಪ್ರತಿಯಾಗಿ, ಮಾತುಕತೆಗೆ ಸಿದ್ಧವೆಂದು ತರಳಬಾಳು ಮಠವು ಪತ್ರದ ಮೂಲಕ ತಿಳಿಸಿದೆ.
08:32 PM (IST) Oct 20
08:19 PM (IST) Oct 20
ಈ ದೀಪಾವಳಿ ಹಬ್ಬದಂದು 'ಲೆಮೆನ್', 'ಸ್ವಾನ್' ಹಾಗೂ 'ಅಟ್ಲಸ್' ಎಂಬ ಮೂರು ಧೂಮಕೇತುಗಳು ಬಾನಂಗಳದಲ್ಲಿ ಕಾಣಿಸಿಕೊಳ್ಳಲಿವೆ. ಇವುಗಳಲ್ಲಿ ಲೆಮೆನ್ ಧೂಮಕೇತು ಬರಿಗಣ್ಣಿಗೆ ಗೋಚರಿಸಲಿದ್ದು, ಅಟ್ಲಸ್ ಧೂಮಕೇತು ನಮ್ಮ ಸೌರವ್ಯೂಹದ ಹೊರಗಿನಿಂದ ಬಂದಿರುವುದು ವಿಶೇಷವಾಗಿದೆ.
08:11 PM (IST) Oct 20
08:09 PM (IST) Oct 20
ದೀಪಾವಳಿಗೆ ಬೆಂಗಳೂರು, ದೆಹಲಿ ಆಗಸದಿಂದ ಹೀಗೆ ಕಾಣ್ತಿದೆ ಎಂದ ಮಹಿಳೆಗೆ ವಾಸ್ತವ ತಿಳಿಸಿದ ನೆಟ್ಟಿಗರು, ಈ ಎರಡು ವಿಡಿಯೋದಲ್ಲಿ ಯಾವುದು ಬೆಂಗಳೂರು, ಯಾವುದು ದೆಹಲಿ? ಮಹಿಳೆ ಪೋಸ್ಟ್‌ಗೆ ನೆಟ್ಟಿಗರು ವಾಸ್ತವ ತಿಳಿಸಿದ್ದೇಕೆ?
07:54 PM (IST) Oct 20
ಮೇಲುಕೋಟೆಯ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ದಶಕಗಳ ನಂತರ ಅಪರೂಪದ ನಕ್ಷತ್ರ ಸಂಯೋಗದಿಂದಾಗಿ, ರಾಜಮುಡಿ ಉತ್ಸವ ಮತ್ತು ಅಷ್ಟ ತೀರ್ಥೋತ್ಸವ ಅ. 31 ರಂದು ಒಂದೇ ದಿನ ನಡೆಯಲಿದೆ. ಈ ವಿಶೇಷ ದಿನದಂದು ಸ್ವಾಮಿಗೆ ಮೈಸೂರು ಅರಸರು ಸಮರ್ಪಿಸಿದ ವಜ್ರಖಚಿತ ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುವುದು.
07:13 PM (IST) Oct 20
ಪುತ್ತೂರಿನಲ್ಲಿ ನಡೆದ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾಲೂಕಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ನಿರ್ಮಿಸುವುದಾಗಿ ಘೋಷಿಸಿದರು. ಸಮಾಜದಲ್ಲಿ ಸಮಾನತೆ, ಕೋಮು ಸೌಹಾರ್ದತೆ ಕಾಪಾಡುವ ಅಗತ್ಯವನ್ನು ಒತ್ತಿಹೇಳಿದರು.
07:12 PM (IST) Oct 20
06:49 PM (IST) Oct 20
06:47 PM (IST) Oct 20
ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್‌ಗೆ ಕ್ಷಮೆ ಕೋರಿದ್ದಾರೆ ಎಂದು ಬಿಂಬಿಸುವ ನಕಲಿ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟರ್ ಸಂಘಪರಿವಾರದ ಕುತಂತ್ರ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
06:26 PM (IST) Oct 20
06:18 PM (IST) Oct 20
'ರಿಷಬ್ ಶೆಟ್ಟಿಯವರಿಂದ ತುಳುನಾಡು ದೇವರು-ದೈವ ಪ್ರಪಂಚಕ್ಕೆ ಪರಿಚಯ ಆಗಿದ್ದೋ ಅಥವಾ ತುಳುನಾಡ ದೈವದ ಕೃಪೆಯಿಂದ ರಿಷಬ್ ಶೆಟ್ಟಿಯವರು ಜಗತ್ತಿನ ಕಣ್ಣಿಗೆ ಬಿದ್ದಿರೋ' ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ. ಎರಡೂ ಆಂಗಲ್‌ಗಳಲ್ಲಿ ಶುರುವಾಗಿರೋ ಈ ಡಿಬೇಟ್ ಮುಂದೆ ಎಲ್ಲಿಗೆ ಹೋಗಿ ತಲುಪತ್ತೋ ಏನೋ!
06:02 PM (IST) Oct 20
Delhi Metro viral video ದೆಹಲಿ ಮೆಟ್ರೋ ಪುಟ್ಟ ಮಕ್ಕಳ ನೃತ್ಯದಿಂದ ಸುದ್ದಿಯಾಗಿದ್ದು, ವೀಡಿಯೋ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಮೂವರು ಪುಟ್ಟ ಮಕ್ಕಳು ಬಾಲಿವುಡ್‌ನ ಪೆಹ್ಲಾ ಪೆಹ್ಲಾ ಪ್ಯಾರ್ ಹಾಡಿಗೆ ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ದೆಹಲಿ ಮೆಟ್ರೋ ರೈಲಿನೊಳಗೆ ಮಾಡಿದ ನೃತ್ಯ ಅನೇಕರ ಮನಸೆಳೆದಿದೆ.
05:25 PM (IST) Oct 20
ದೊಡ್ಡಬಳ್ಳಾಪುರದಲ್ಲಿ, ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತ ಉಪನ್ಯಾಸಕಿ ಪುಷ್ಪಾ ಎಂಬುವವರು ಡ್ಯಾಂಗೆ ಹಾರಿ ಆತ್ಮ8ಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ, ಅವರು ತಮ್ಮ ನೋವು ಮತ್ತು ಅನ್ಯಾಯವನ್ನು ವಿವರಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ.
05:15 PM (IST) Oct 20
ಬಿಹಾರ ಚುನಾವಣಾ ಆಖಾಡ ಸಾಕಷ್ಟು ರಂಗೇರುತ್ತಿದೆ. ಹೊಸ ಹೊಸ ಮುಖಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿದು ಬಿರುಸಿನ ಮತ ಬೇಟೆಯಲ್ಲಿ ತೊಡಗಿದ್ದಾರೆ. ಅವರಲ್ಲೊಬ್ಬರು ಪುಷ್ಪಂ ಪ್ರಿಯಾ ಚೌಧರಿ ಅವರ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.
05:14 PM (IST) Oct 20
04:31 PM (IST) Oct 20
ಕೊಪ್ಪಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿವಾದ ತಾರಕಕ್ಕೇರಿದ್ದು, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರು ಅಧಿಕಾರಿಗಳ ವಿರುದ್ಧ ಸಿಎಂಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಯಾಗಿ, ಅಧಿಕಾರಿಗಳ ವರ್ಗದಿಂದ ವೈರಲ್ ಆದ ಪತ್ರವೊಂದು ರಾಯರೆಡ್ಡಿಯವರ ವಿರುದ್ಧವೇ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
04:31 PM (IST) Oct 20
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಶೇ. 80ರಷ್ಟು ಪೂರ್ಣಗೊಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸಮೀಕ್ಷೆಯನ್ನು ವಿರೋಧಿಸಿದ ಬಿಜೆಪಿ ನಾಯಕರ ಕ್ಷೇತ್ರವಾದ ಶಿಕಾರಿಪುರದಲ್ಲೇ ಶೇ. 91ರಷ್ಟು ಗಣತಿ ಪೂರ್ಣಗೊಂಡಿರುವುದು ಗಮನಾರ್ಹ ಎಂದಿದ್ದಾರೆ.
04:26 PM (IST) Oct 20
03:33 PM (IST) Oct 20
03:32 PM (IST) Oct 20
03:15 PM (IST) Oct 20
ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ 5000 ರೂಪಾಯಿ ಕೊಡ್ತಿನಿ ಬಾ ಎಂದು ಕರೆದ ಮಧ್ಯವಯಸ್ಕ ವ್ಯಕ್ತಿಯೊಬ್ಬನಿಗೆ ನರ್ಸ್ ಮಂಗಳಾರತಿ ಮಾಡಿದಂತಹ ಘಟನೆ ಉತ್ತರಾಖಂಡ್‌ನ ಡೆಹ್ರಾಡೂನ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
03:06 PM (IST) Oct 20
ದಕ್ಷಿಣ ಕನ್ನಡದ ಉಳ್ಳಾಲ ಕುಂಪಲದಲ್ಲಿ, ತಂದೆಯೇ ತನ್ನ ಮಗಳ ಮೇಲೆ 10 ವರ್ಷಗಳಿಂದ ಅತ್ಯಾ*ಚಾರ ಎಸಗುತ್ತಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮಾನಸಿಕವಾಗಿ ಕುಗ್ಗಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಕೌನ್ಸಿಲಿಂಗ್ ವೇಳೆ ಈ ಅಮಾನವೀಯ ಕೃತ್ಯ ಬಯಲಾಗಿದೆ.
03:06 PM (IST) Oct 20
ಒಂದೇ ಮಳೆಗೆ ಕೋಡಿ ಬಿದ್ದ ವಿವಿ ಸಾಗರ, ಮಾದಾಪುರ ಕೆರೆ, ರೈತರ ದೀಪಾವಳಿ ಸಂಭ್ರಮ ಡಬಲ್, ವಿವಿ ಸಾಗರ ಡ್ಯಾಂ ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಕೋಡಿ ಬಿದ್ದರೆ, ಇತ್ತ ಶಾಶ್ವತ ಬರಗಾಲಕ್ಕೆ ತುತ್ತಾಗಿದ್ದ ಕಡೂರು ತಾಲೂಕು ಇದೀಗ ನಳನಳಿಸುತ್ತಿದೆ.
02:54 PM (IST) Oct 20
ಬೆಂಗಳೂರಿನ ಥಣಿಸಂದ್ರದಲ್ಲಿರುವ ಮದರಸಾದ 4 ಎಕರೆ ಆಸ್ತಿ ವಿವಾದ ಮತ್ತೆ ಬೀದಿ ಜಗಳಕ್ಕೆ ಕಾರಣವಾಗಿದೆ. ಮಶಿಯಾ ಮಹ್ಮದ್ ಎಂಬಾತ ಮಹಿಳಾ ಸಂಘಟನೆಯನ್ನು ಕಳುಹಿಸಿ ಗಲಾಟೆ ಮಾಡಿಸಿದ್ದು, 15 ವರ್ಷಗಳಿಂದ ನ್ಯಾಯಾಲಯದಲ್ಲಿರುವ ಈ ಪ್ರಕರಣವು ಆಗಾಗ ಗಲಭೆಗೆ ತಿರುಗುತ್ತಿದೆ.
02:46 PM (IST) Oct 20
02:43 PM (IST) Oct 20
Bigg Boss Kannada Gilli Nata: ಬಿಗ್‌ಬಾಸ್ ಮನೆಯಲ್ಲಿ ಜೋಡಿ ಹಕ್ಕಿಗಳಾಗುತ್ತಾರೆ ಎಂದು ನಿರೀಕ್ಷಿಸಿದ್ದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಸಂಬಂಧದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಇದರೊಂದಿಗೆ, ಮೂವರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಪ್ರವೇಶಿಸಿದ್ದಾರೆ.
01:58 PM (IST) Oct 20
01:58 PM (IST) Oct 20
ಚಿರಂಜೀವಿ ಜೊತೆಗಿನ ಒಂದು ಇಂಡಸ್ಟ್ರಿ ಹಿಟ್ ಸಿನಿಮಾವನ್ನು ರೋಜಾ ಮಿಸ್ ಮಾಡಿಕೊಂಡರು. ಒಂದೇ ಒಂದು ಹಾಡಿನಿಂದಾಗಿ ಚಿರಂಜೀವಿ ರೋಜಾರನ್ನು ಕೈಬಿಟ್ಟು ಬೇರೆ ನಾಯಕಿಯನ್ನು ಆಯ್ಕೆ ಮಾಡಿದರು. ಆ ವಿವರ ಇಲ್ಲಿದೆ.
01:38 PM (IST) Oct 20
ಹಿರಿಯ ನಟಿಯರಾದ ಸುಹಾಸಿನಿ, ವಿಜಯಶಾಂತಿ, ರಮ್ಯಾ ಕೃಷ್ಣರಿಂದ ಹಿಡಿದು ಆರತಿ ಅಗರ್ವಾಲ್‌ವರೆಗೆ ಅನೇಕ ಸ್ಟಾರ್ ನಟಿಯರಿಗೆ ತಮ್ಮ ಮಾಂತ್ರಿಕ ಧ್ವನಿ ನೀಡಿದ ನಟಿ, ಡಬ್ಬಿಂಗ್ ಕಲಾವಿದೆ ಸರಿತಾ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
01:34 PM (IST) Oct 20
01:31 PM (IST) Oct 20
01:18 PM (IST) Oct 20
ಸಿಎಂ ಸಿದ್ದರಾಮಯ್ಯ ಖರ್ಗೆ ತಾಳಕ್ಕೆ ತಕ್ಕಂತೆ ಕುಣೀತಿದ್ದಾರೆ. ಆರ್‌ಎಸ್‌ಎಸ್ ಎದುರು ಹಾಕಿಕೊಂಡವರು ಭಸ್ಮ ಆಗ್ತಾರೆ. ಇದು ಕಾಂಗ್ರೆಸ್ ಅಂತ್ಯದ ಆರಂಭ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದರು.
12:58 PM (IST) Oct 20
ಬೆಳಕಿನ ಹಬ್ಬಕ್ಕೆ ಹೊಳೆ ಹೊಳೆಯುವ ಮಾದಕ ಉಡುಗೆಗಳಲ್ಲಿ ಬಿ ಟೌನ್ ಬೆಡಗಿಯರ ಮೆರವಣಿಗೆ ಹೊರಟಿದೆ. ‘ದೇಸಿ ಟಚ್, ಬೋಲ್ಡ್ ಲುಕ್’ನ ಉಡುಗೆಗಳು ದೀಪಾವಳಿ ಹಬ್ಬಕ್ಕೆ ಮಾಲೆ ಪಟಾಕಿಯಂತೆ ಸೌಂಡ್ ಮಾಡ್ತಿವೆ.
12:32 PM (IST) Oct 20
12:29 PM (IST) Oct 20