BBK 12: ಕಾಲು ಮುಗಿತೀನಿ ಅಂದ್ರು ಬಿಡಲಿಲ್ಲ: ಗಿಲ್ಲಿ ನಟನಿಗೆ ಶಾಕ್ ಕೊಟ್ಟ ಸ್ಪರ್ಧಿಗಳು
Bigg Boss Kannada Gilli Nata: ಬಿಗ್‌ಬಾಸ್ ಮನೆಯಲ್ಲಿ ಜೋಡಿ ಹಕ್ಕಿಗಳಾಗುತ್ತಾರೆ ಎಂದು ನಿರೀಕ್ಷಿಸಿದ್ದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಸಂಬಂಧದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಇದರೊಂದಿಗೆ, ಮೂವರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಪ್ರವೇಶಿಸಿದ್ದಾರೆ.

ಹಾಸ್ಯ ಕಲಾವಿದ ಗಿಲ್ಲಿ ನಟ
ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ ನೋಡುಗರಿಗೆ ಇಷ್ಟವಾಗುತ್ತಿದ್ದು, ಮನೆಯೊಳಗೂ ಸಹ ಎಲ್ಲರನ್ನು ನಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಟ ಕಾವ್ಯಾ ಶೈವ ಜೊತೆ ಜಂಟಿಯಾಗಿ ಗಿಲ್ಲಿ ನಟ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಈ ವಾರದ ವೀಕೆಂಡ್‌ನಲ್ಲಿ ಇಬ್ಬರ ಜೋಡಿ ಬಗ್ಗೆ ಚರ್ಚೆಯೂ ನಡೆದಿತ್ತು. ಈ ನಡುವೆ ಬಿಗ್‌ಬಾಸ್ ಮನೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.
ಗಿಲ್ಲಿ ನಟ ಮತ್ತು ಕಾವ್ಯಾ ಶೈವ
ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಈ ಸೀಸನ್‌ನ ಜೋಡಿ ಹಕ್ಕಿಗಳಾಗ್ತಾರೆ ಅಂತಾನೇ ಬಿಂಬಿತವಾಗಿತ್ತು. ಗಿಲ್ಲಿ ನನಗೆ ಕಸೀನ್ (ಸೋದರ) ಫೀಲ್ ಕೊಡ್ತಾನೆ ಅಂತ ಕಾವ್ಯಾ ಹೇಳಿದ್ರೆ, ನಮ್ಮಲ್ಲಿ ಅತ್ತೆ-ಮಾವನ ಮಕ್ಕಳಿಗೂ ಕಸೀನ್ ಅಂತಾರೆ ಎಂದು ಹೇಳಿದ್ದರು. ತಂಗಿ ಅಂತಾ ಕರೆಯಲು ಸಹ ಗಿಲ್ಲಿ ಹಿಂದೇಟು ಹಾಕಿದ್ದರು. ಇದೀಗ ಮನೆ ಮಂದಿಯೆಲ್ಲಾ ಸೇರಿಕೊಂಡು ಗಿಲ್ಲಿ ಶಾಕ್ ಕೊಟ್ಟಿದ್ದಾರೆ.
ರಾಖಿ ಕಟ್ಟಿದ ಕಾವ್ಯಾ ಶೈವ
ಮನೆ ಮಂದಿಯೆಲ್ಲಾ ಜೊತೆಯಾಗಿ ಗಿಲ್ಲಿ ನಟ ಅವರಿಗೆ ಶಾಕ್ ನೀಡಿದ್ದಾರೆ. ಎಲ್ಲಾ ಪುರುಷ ಸದಸ್ಯರು ಗಿಲ್ಲಿಯನ್ನು ಹಿಡಿದುಕೊಂಡಿದ್ದು, ಕಾವ್ಯಾ ಬಂದು ರಾಖಿ (ದಾರ) ಕಟ್ಟಿದ್ದಾರೆ. ಅದನ್ನು ರಾಖಿ ಎಂದು ಹೇಳಿದ್ದಾರೆ. ಬೇಡ ಕಾವು, ಕಾಲು ಮುಗಿತೀನಿ ಅಂದ್ರು ಮನೆ ಸದಸ್ಯರು ಬಿಡದೇ ರಾಖಿ ಕಟ್ಟಿಸಿದ್ದಾರೆ.
ಮೂರು ಬೇಡ, ಎರಡು ಗಂಟು ಸಾಕು
ರಾಖಿ ಕಟ್ಟುವಾಗ ಸದಸ್ಯರು, ಕಾವ್ಯಾಗೆ ಎಕ್ಸಟ್ರಾ ಇನ್ನೊಂದು ಗಂಟು ಹಾಕು ಅಂತಾರೆ. ಅಲ್ಲಿಯೂ ತಮಾಷೆ ಮಾಡುವ ಗಿಲ್ಲಿ ನಟ, ಮೂರು ಗಂಟು ಹಾಕಿದರೆ ಮದುವೆ ಆದಂತೆ ಎಂದು ಹೇಳುತ್ತಾರೆ. ಆಗ ಮೂರು ಬೇಡ, ಎರಡು ಗಂಟು ಹಾಕುವಂತೆ ಕಾವ್ಯಾ ಅವರಿಗೆ ಸದಸ್ಯರು ಸಲಹೆ ನೀಡುತ್ತಾರೆ. ಕಾವ್ಯಾ ದಾರ ಕಟ್ಟುತ್ತಿದ್ದಂತೆ ಗಿಲ್ಲಿ ನಟ ಮುನಿಸಿಕೊಂಡು ಮನೆಯೊಳಗೆ ಹೋಗಿದ್ದಾರೆ.
ಇದನ್ನೂ ಓದಿ: ಸೇರಿಗೆ ಸವ್ವಾಸೇರು; ಕೈ ತೋರಿಸಿ ಮಾತಾಡಬೇಡ: ಅಶ್ವಿನಿ ಗೌಡ-ಜಾನ್ವಿ ವಿರುದ್ಧ ಮ್ಯೂಟಂಟ್ ರಘು ವೈಲೆಂಟ್
ಮೂವರು ಸ್ಪರ್ಧಿಗಳ ಎಂಟ್ರಿ
ನಾಲ್ಕನೇ ವಾರಕ್ಕೆ ವೈಲ್ಡ್ ಕಾರ್ಡ್‌ನಲ್ಲಿ ಕ್ವಾಟ್ಲೆ ಕಿಚನ್ ಶೋ ವಿನ್ನರ್ ಮ್ಯೂಟಂಟ್ ರಘು, ನಟಿ ರಿಷಾ ಗೌಡ ಮತ್ತು ಮಾಡೆಲ್ ಕಂ ಕಾರ್ಪೋರೇಟ್ ಉದ್ಯೋಗಿ ಮೈಸೂರಿನ ಹುಡುಗ ಸಂಜಯ್ ಸಿಂಗ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ರಘು ಅಬ್ಬರದ ಎಂಟ್ರಿಗೆ ಬಿಗ್‌ಬಾಸ್ ಸ್ಪರ್ಧಿಗಳು ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಎಂಟ್ರಿ ಕೊಟ್ಟ ಜೋಶ್‌ನಲ್ಲಿ ಮ್ಯೂಟಂಟ್ ರಘು ಎಡವಟ್ಟು: ರಣಕಹಳೆ ಮೊಳಗಿಸಿದ ಅಶ್ವಿನಿ-ಜಾನ್ವಿ