ಒಂದೇ ಮಳೆಗೆ ಕೋಡಿ ಬಿದ್ದ ವಿವಿ ಸಾಗರ, ಮಾದಾಪುರ ಕೆರೆ, ರೈತರ ದೀಪಾವಳಿ ಸಂಭ್ರಮ ಡಬಲ್
ಒಂದೇ ಮಳೆಗೆ ಕೋಡಿ ಬಿದ್ದ ವಿವಿ ಸಾಗರ, ಮಾದಾಪುರ ಕೆರೆ, ರೈತರ ದೀಪಾವಳಿ ಸಂಭ್ರಮ ಡಬಲ್, ವಿವಿ ಸಾಗರ ಡ್ಯಾಂ ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಕೋಡಿ ಬಿದ್ದರೆ, ಇತ್ತ ಶಾಶ್ವತ ಬರಗಾಲಕ್ಕೆ ತುತ್ತಾಗಿದ್ದ ಕಡೂರು ತಾಲೂಕು ಇದೀಗ ನಳನಳಿಸುತ್ತಿದೆ.

ಮತ್ತೆ ಅಬ್ಬರಿಸುತ್ತಿದೆ ಮಳೆ
ಮತ್ತೆ ಅಬ್ಬರಿಸುತ್ತಿದೆ ಮಳೆ
ಮಳೆಗಾಲ ಮುಗೀತು ಅಂದುಕೊಂಡಾಗಲೇ ಮತ್ತೆ ಅಬ್ಬರಿಸಲು ಶುರುವಾಗಿದೆ. ವಾಯುಭಾರ ಕುಸಿತದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ದೇಶದ ಹಲವು ರಾಜ್ಯಗಳು ಭಾರಿ ಮಳೆ ಹಾಗೂ ಪ್ರವಾಹಕ್ಕೆ ತುತ್ತಾಗಿದೆ. ಮತ್ತೆ ಮಳೆರಾಯನ ಆರ್ಭಟಕ್ಕೆ ಎರಡನೇ ಬಾರಿಗೆ ರಾಜ್ಯದ ಜಲಾಶಯಗಳು ಭರ್ತಿಯಾಗಿದೆ.ಹಲವು ಡ್ಯಾಂ, ಕೆರೆಗಳು ಕೋಡಿ ಬಿದ್ದಿದಿದೆ. ಸ್ಥಳೀಯರಲ್ಲಿ ಸಂತಸ ಹೆಚ್ಚಾಗಿದೆ.
ಎರಡನೇ ಬಾರಿಗೆ ಕೋಡಿ ಬಿದ್ದ ವಿವಿ ಸಾಗರ ಡ್ಯಾಂ
ಎರಡನೇ ಬಾರಿಗೆ ಕೋಡಿ ಬಿದ್ದ ವಿವಿ ಸಾಗರ ಡ್ಯಾಂ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯ ವರ್ಷದಲ್ಲಿ ಎರಡನೇ ಬಾರಿಗೆ ಕೋಡಿ ಬಿದ್ದಿದೆ. ಕೋಟೆನಾಡಿನ ಅನ್ಮದಾತರ ಜೀವನಾಡಿ ಆಗಿರುವ ವಿವಿ ಸಾಗರ ಜಲಾಶಯ ಎರಡನೇ ಭಾರಿಗೆ ಕೋಡಿ ಬಿದ್ದ ಕಾರಣ ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ವರ್ಷದಲ್ಲಿ ಎರಡನೇ ಬಾರಿ ಕೋಡಿ ಬಿದ್ದಿದೆ ಎಂದು ಸಂಭ್ರಮಿಸಿದ್ದಾರೆ.
ದೇವರ ಕೃಪೆಯಿಂದ ಜಲಾಶಯ ಭರ್ತಿ
ದೇವರ ಕೃಪೆಯಿಂದ ಜಲಾಶಯ ಭರ್ತಿ
ದೇವರ ಕೃಪೆಯಿಂದ ಮತ್ತು ಸರ್ಕಾರದ ದೃಢ ಸಂಕಲ್ಪದಿಂದ ಜಲಾಶಯ ಭರ್ತಿ ಎಂದು ರೈತರು ಹೇಳಿದ್ದಾರೆ. ರೈತರ ಕನಸಿಗೆ ಜೀವ ತುಂಬಿದ ದಿನ ವಿವಿ ಸಾಗರ ಮತ್ತೆ ತುಂಬಿ ಹರಿಯುತ್ತಿದೆ. ಭಗವಂತನ ಆಶೀರ್ವಾದ, ಸರ್ಕಾರದ ಶ್ರಮ, ಜನರ ವಿಶ್ವಾಸ ಇವುಗಳೆಲ್ಲ ಸೇರಿ ಈ ದಿನವನ್ನು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿಸಿದೆ ಎಂದು ರೈತರು ಸಂಭ್ರಮಪಟ್ಟಿದ್ದಾರೆ.
ಮಾದಾಪುರ ಕೆರೆ ಸಂಪೂರ್ಣ ಭರ್ತಿ
ಮಾದಾಪುರ ಕೆರೆ ಸಂಪೂರ್ಣ ಭರ್ತಿ
ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ಒಂದೇ ರಾತ್ರಿ ಮಳೆಗೆ ಸುಮಾರು 15 ಎಕರೆ ವಿರ್ಸೀರ್ಣದ ಮಾದಾಪುರ ಕೆರೆ ಭರ್ತಿಯಾಗಿದೆ. ಕಡೂರು ತಾಲೂಕಿನಲ್ಲಿ ಮಾದಾಪುರ ಕೆರೆ ಭರ್ತಿಯಾಗಿರುವುದು ಸ್ಥಳೀಯ ದೀಪಾವಳಿ ಸಂಭ್ರಮ ಹೆಚ್ಚಿಸಿದೆ. ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು ಎಂದು ಗುರುತಿಸಿಗೊಂಡಿದೆ. ಆದರೆ ಈ ಬಾರಿ ಮಾದಾಪುರ ಕೆರೆ ಭರ್ತಿಯಾಗುವ ಮೂಲಕ ನಳನಳಿಸುತ್ತಿದೆ.
ಕಡೂರಿನಲ್ಲಿ ಈ ವರ್ಷ ಉತ್ತಮ ಮಳೆ
ಕಡೂರಿನಲ್ಲಿ ಈ ವರ್ಷ ಉತ್ತಮ ಮಳೆ
ಈ ವರ್ಷಪೂರ್ತಿ ಕಡೂರಿನಲ್ಲೂ ಆಗಾಗ್ಗೆ ಸಾಧಾರಣ ಮಳೆಯಾಗಿತ್ತು, ಭಾನುವಾರ ಸಂಜೆಯಿಂದ ಆರಂಭವಾದ ಒಂದೇ ಮಳೆಗೆ ಕೆರೆ ಭರ್ತಿಯಾಗಿದೆ. ಗುಂಡಿಗಳಲ್ಲಿ ಅಲ್ಪ-ಸ್ವಲ್ಪ ನೀರು ಬಿಟ್ಟರೆ ಕೆರೆ ಖಾಲಿ ಇತ್ತು. ಒಂದೇ ರಾತ್ರಿ ಮಳೆಗೆ ಕೆರೆ ಕೋಡಿ ಬಿದ್ದು ಹಳ್ಳಿಗರಲ್ಲಿ ಸಂತಸ ಮೂಡಿದೆ.
ಒಂದೆಡೆ ಕೆರೆ ಭರ್ತಿ ಮತ್ತೊಂದೆಡೆ ರೈತರ ಬದುಕು ತತ್ತರ
ಒಂದೆಡೆ ಕೆರೆ ಭರ್ತಿ ಮತ್ತೊಂದೆಡೆ ರೈತರ ಬದುಕು ತತ್ತರ
ಅಕಾಲಿಕವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ರೈತನ ಬೆಳೆಗಳು ನಾಶವಾಗಿದೆ. ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿ ಸೇರಿದಂತೆ ಹಲವೆಡೆ ರೈತ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದ ರೈತ ಕಂಲಾಗಿದ್ದಾನೆ. ಇದರ ಪರಿಣಾಮ ಲಕ್ಷ ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ.