- Home
- Karnataka Districts
- ಹೊಸಪೇಟೆಯ ದರೋಜಿ ಕರಡಿಧಾಮದಲ್ಲಿ ವಿಶೇಷ 'ಸ್ಕಾಪ್ಸ್ ಗೂಬೆ' ಪತ್ತೆ; ದೀಪಾವಳಿಗೆ ಲಕ್ಷ್ಮೀ ವಾಹನ ಕಾಣಿಸಿದ್ರೆ ಏನರ್ಥ?
ಹೊಸಪೇಟೆಯ ದರೋಜಿ ಕರಡಿಧಾಮದಲ್ಲಿ ವಿಶೇಷ 'ಸ್ಕಾಪ್ಸ್ ಗೂಬೆ' ಪತ್ತೆ; ದೀಪಾವಳಿಗೆ ಲಕ್ಷ್ಮೀ ವಾಹನ ಕಾಣಿಸಿದ್ರೆ ಏನರ್ಥ?
ಹೊಸಪೇಟೆಯ ದರೋಜಿ ಕರಡಿಧಾಮದ ಬಳಿ ಇದೇ ಮೊದಲ ಬಾರಿಗೆ 'ಭಾರತೀಯ ಸ್ಕಾಪ್ಸ್ ಗೂಬೆ' ಎಂಬ ವಿಶಿಷ್ಟ ನಿಶಾಚರಿ ಪತ್ತೆಯಾಗಿದೆ. ಛದ್ಮವೇಷಧಾರಿಯಾದ ಈ ಗೂಬೆಯನ್ನು ಅದರ ವಿಶಿಷ್ಟ ಸದ್ದಿನಿಂದ ಪಕ್ಷಿ ಪ್ರೇಮಿಗಳು ಗುರುತಿಸಿದ್ದು, ಈ ಭಾಗದಲ್ಲಿ ಈ ಪ್ರಭೇದದ ಗೋಚರತೆ ಅಚ್ಚರಿಗೆ ಕಾರಣವಾಗಿದೆ.

ಭಾರತೀಯ ಸ್ಕಾಪ್ಸ್ ಗೂಬೆ
ವಿಶಿಷ್ಟ ಕಿವಿಯಂತಹ ಗರಿ, ಛದ್ಮವೇಷಧಾರಿಯಾದ ನಿಶಾಚರಿ ' ಭಾರತೀಯ ಸ್ಕಾಪ್ಸ್ ಗೂಬೆ' ಇದೇ ಮೊದಲ ಬಾರಿ ದರೋಜಿ ಕರಡಿಧಾಮ ಬಳಿ ಪತ್ತೆಯಾಗಿದೆ.
ಹೊಸಪೇಟೆ ತಾಲೂಕಿನ ದರೋಜಿ ಕರಡಿಧಾಮದ ಬಳಿ ಪತ್ತೆಯಾಗಿರುವ ಈ ಗೂಬೆಯು, ಗಾತ್ರದಲ್ಲಿ ಚಿಕ್ಕದಾಗಿದೆ. 9ರಿಂದ 10 ಇಂಚು ಉದ್ದವಿರುವ ಈ ಗೂಬೆಯೂ ಬೂದು ಬಣ್ಣದ್ದಾಗಿದೆ. ಕಣ್ಣು ಕಡು ಬಣ್ಣವಿದೆ. ದೇಹದ ಬಣ್ಣ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಹಗಲಿನಲ್ಲಿ ಇದನ್ನು ಪತ್ತೆ ಹಚ್ಚುವುದು ಕಷ್ಟ.
ಇದನ್ನೂ ಓದಿ: 7 ಬಾರಿ ಹಾವು ಕಚ್ಚಿದ್ರೂ ಬದುಕುಳಿದ ಮಹಿಳೆ, ಯಾರಿಗೆ ಹೆಚ್ಚು ಕಾಡುತ್ತೆ ಹಾವಿನ ಭಯ?
ಅಚ್ಚರಿ ಸಂಗತಿ
ಸ್ಕಾಪ್ಸ್ ಗೂಬೆ ವಟ ವಟ ಸದ್ದಿನಿಂದ ಹಿಂಬಾಲಿಸಿದ ಪಕ್ಷಿ ಪ್ರೇಮಿಗಳಾದ ಸಾಚಿರಾಯ್ ಮತ್ತು ಶ್ರೀಧರ್, ಪೆರುಮಾಳ್ ಪಂಪಯ್ಯ ಸ್ವಾಮ ಗುರುತಿಸಿದ್ದಾರೆ. ಈ ಪ್ರಬೇಧವೇ ಈ ಭಾಗದಲ್ಲಿ ಹೊಸದಾಗಿ ಗೋಚರಿಸಿರುವುದು ಅಚ್ಚರಿ ಸಂಗತಿಯಾಗಿದೆ ಎಂದು ವನ್ಯಜೀವಿ ಛಾಯಾಗ್ರಾಹಕ, ಪರಿಸರವಾದಿ ಪಂಪಯ್ಯಸ್ವಾಮಿ ಮಳೇಮಠ ತಿಳಿಸಿದ್ದಾರೆ.
ಇದನ್ನೂ ಓದಿ: ಹಾವಿನೊಂದಿಗೆ ಕಾದಾಡಿ ಪ್ರಾಣಬಿಟ್ಟ ಸಾಕುನಾಯಿ: ವೀಡಿಯೋ
ದೀಪಾವಳಿಗೆ ಲಕ್ಷ್ಮಿ ವಾಹನ
ಗೂಬೆಯನ್ನು ಲಕ್ಷ್ಮೀದೇವಿಯ ವಾಹನ ಎಂದು ಪರಿಗಣಿಸಲಾಗುತ್ತದೆ. ತೀಕ್ಷ್ಣ ದೃಷ್ಟಿ ಹೊಂದಿರುವ ಕಾರಣ ಲಕ್ಷ್ಮೀ ದೇವಿ ಗೂಬೆಯನ್ನು ತನ್ನ ವಾಹನವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಗೂಬೆ ದರ್ಶನವು ಆರ್ಥಿಕ ಅಭಿವೃದ್ಧಿ ಮತ್ತು ಧನಾತ್ಮಕ ಶಕ್ತಿ ಪ್ರವಾಹ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜನರು ಮನೆ, ಕೆಲಸ ಮಾಡುವ ಸ್ಥಳಗಳಲ್ಲಿ ಗೂಬೆ ಪ್ರತಿಮೆ/ಫೋಟೋ ಇರಿಸಿಕೊಳ್ಳುತ್ತಾರೆ.
ದೀಪಾವಳಿ ಶುಭ ಸಂದರ್ಭದಲ್ಲಿಯೇ ವಿಶೇಷ ಗೂಬೆ ಹೊಸಪೇಟೆಯಲ್ಲಿ ಪತ್ತೆಯಾಗಿದೆ. ಈ ಘಟನೆ ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಎಲ್ಲರೂ ಪೂಜಿಸುವ ದೇವಿ ಲಕ್ಷ್ಮಿಗೆ ಗೂಬೆಯನ್ನೇಕೆ ವಾಹನ ಮಾಡಿಕೊಂಡಳು?