ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದ ಮಹಿಳೆಯೊಬ್ಬರು ತನ್ನ ಮೊಮ್ಮಗಳ ಹೆಸರಿಗೆ ಸುಕನ್ಯಾ ಸಮೃದ್ಧಿ ಯೋಜನೆಗೆ ಜಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಗೃಹಲಕ್ಷ್ಮೀ ಹಣದಿಂದ ಹಲವಾರು ಕಡೆಗಳಲ್ಲಿ ಮಹಿಳೆಯರು ನಾನಾ ಕಾರ್ಯಗಳಿಗೆ ವಿನಿಯೋಗಿಸಿಕೊಂಡಿದ್ದಾರೆ. ತರಲಕಟ್ಟಿ ಗ್ರಾಮದ ಶರಣಮ್ಮ ಬ್ಯಾಳಿ ಅವರು ತಮ್ಮ ಮೊಮ್ಮಗಳು ಸಾನ್ವಿ ಬ್ಯಾಳಿ ಅವರಿಗೆ ಭವಿಷ್ಯದಲ್ಲಿ ಸಹಾಯವಾಗಲಿ ಎನ್ನುವ ಸದುದ್ದೇಶದಿಂದ ಗೃಹಲಕ್ಷ್ಮೀ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೆ, ಸುಕನ್ಯಾ ಸಮೃದ್ಧಿ ಯೋಜನೆಗೆ ₹10 ಸಾವಿರ ಜಮೆ ಮಾಡಿದ್ದಾರೆ. ಮೊಮ್ಮಗಳ 18 ವರ್ಷದ ನಂತರ ಶಿಕ್ಷಣ, ಮದುವೆಗೆ ಅನುಕೂಲವಾಗಲಿಗೆ ಎಂದು ಮನಗಂಡು ಹಣ ಜಮೆ ಮಾಡಿ ಮಾದರಿಯಾಗಿದ್ದಾರೆ. ಇವರ ಕಾರ್ಯಕ್ಕೆ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.
09:49 AM (IST) Jan 20
ದಿಢೀರ್ ಅತಿರೇಕದ ವರ್ತನೆಗಳು ಮತ್ತು ಪಟಾಫಟ್ ಪೊಲೀಸ್ ಕಾರ್ಯಾಚರಣೆಯ ಈ ಯುಗದಲ್ಲಿ ಜನರ ಭಿನ್ನಧ್ವನಿಯನ್ನು ಕಾನೂನಿನ ಹೆಸರಲ್ಲಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಬಂಧನವನ್ನು ವಾಕ್ ಸ್ವಾತಂತ್ರ್ಯ ಹತ್ತಿಕ್ಕುವ ದಾಳವಾಗಿ ಬಳಸಲಾಗುತ್ತಿದೆ.
09:48 AM (IST) Jan 20
ಡಿಜಿಪಿ ರಾಮಚಂದ್ರರಾವ್ ಪ್ರಕರಣಕ್ಕೆ ಬೆಳಗಾವಿ ನಂಟಿನ ಶಂಕೆ ವ್ಯಕ್ತವಾಗಿದೆ. ಎಂಟು ವರ್ಷಗಳ ಹಿಂದೆ ಅವರು ಬೆಳಗಾವಿ ಐಜಿಯಾಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಡಿಯೋದಲ್ಲಿರುವ ಮಹಿಳೆಯೂ ಬೆಳಗಾವಿಯವರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
09:19 AM (IST) Jan 20
ಶಾಸಕ ಜಿ.ಟಿ. ದೇವೇಗೌಡರು ತಾವು ಜೆಡಿಎಸ್‌ನಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿಯೇ ಸ್ಪರ್ಧಿಸುವುದಾಗಿ ಹೇಳುವ ಮೂಲಕ, ಸಾ.ರಾ. ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
08:31 AM (IST) Jan 20
ಕರ್ಣನು ತನ್ನ ಸ್ವಂತ ಮಗನಲ್ಲ ಎಂಬ ಕಾರಣಕ್ಕೆ ರಮೇಶ್ ದ್ವೇಷಿಸುತ್ತಾನೆ ಎಂಬ ಸತ್ಯ ಬಯಲಾಗಿದೆ. ಇದೇ ಕಾರಣಕ್ಕೆ, ಬೇರೆಯವರ ಮಗುವನ್ನು ಸಾಕುವ ನೋವು ಕರ್ಣನಿಗೆ ತಿಳಿಯಲೆಂದು ರಮೇಶ್ ನಿತ್ಯಾಳ ಮಗುವನ್ನು ರಕ್ಷಿಸುತ್ತಿದ್ದಾನೆ. ಜೊತೆಗೆ, ಸಂಜಯ್ ಮತ್ತು ತಾರಾ ಅವರ ದ್ವೇಷದ ಹಿಂದಿನ ಕಾರಣಗಳೂ ಸಹ ಬಹಿರಂಗಗೊಂಡಿವೆ.
08:22 AM (IST) Jan 20
ವಿಜ್ಞಾನದ ಅದ್ಭುತವೆಂದೇ ಪರಿಗಣಿಸಲಾಗುವ ವಿದ್ಯುತ್ ಅನ್ನು ತಂತಿಯಿಲ್ಲದೆ ಬರೀ ಗಾಳಿಯಲ್ಲಿ ಪ್ರವಹಿಸುವ ಇನ್ನೊಂದು ಅದ್ಭುತ ತಂತ್ರಜ್ಞಾನವನ್ನು ಫಿನ್ಲೆಂಡ್ ಅವಿಷ್ಕರಿಸಿದೆ. ಇದರಡಿಯಲ್ಲಿ ಅಲ್ಟ್ರಾಸೌಂಡ್‌ನಿಂದ ವಿದ್ಯುತ್ ಸಂಚಾರಕ್ಕೆ ಮಾರ್ಗವನ್ನು ಸೃಷ್ಟಿಸಲಾಗುವುದು
08:06 AM (IST) Jan 20
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜೈಲಿನಲ್ಲಿರುವ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್‌ಗೆ ವಾರಕ್ಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ನಗರದ ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೆಟ್ಟಿಲೇರಿದೆ.
07:51 AM (IST) Jan 20
ಡಿಜಿಪಿ ರಾಮಚಂದ್ರರಾವ್ ಅವರ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ಆದರೆ, ಸಂತ್ರಸ್ತೆಯಿಂದ ದೂರು ದಾಖಲಾಗಿಲ್ಲ. ಈ ಪ್ರಕರಣದ ಜೊತೆಗೆ ಅವರ ಹಿಂದಿನ ಆರೋಪಗಳು ಮತ್ತು ವೈರಲ್ ಆಡಿಯೋದ ವಿವರಗಳೂ ಇಲ್ಲಿವೆ.
07:28 AM (IST) Jan 20
ಸ್ವಿಜರ್ಲೆಂಡ್‌ನ ಹಿಮಚ್ಛಾದಿತ ನಗರಿ ದಾವೋಸ್‌ನಲ್ಲಿ ಸೋಮವಾರದಿಂದ ಆರಂಭಗೊಂಡ 5 ದಿನಗಳ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಭಾರತ ಸರ್ಕಾರದ ಪ್ರತಿನಿಧಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಮೂವರು ಸಚಿವರು ಪಾಲ್ಗೊಂಡಿದ್ದಾರೆ.
07:25 AM (IST) Jan 20
ನಾಡಪ್ರಭು ಕೆಂಪೇಗೌಡ ಬಡಾವಣೆಯ ಸ್ಕಂದ ನಗರ, ಮುನೇಶ್ವರ ಬ್ಲಾಕ್ ಸೇರಿದಂತೆ ಹಲವೆಡೆ ವಾಸವಿರುವ ನಿವಾಸಿಗಳಿಗೆ ವಾರದೊಳಗೆ ಕಟ್ಟಡಗಳನ್ನು ತೆರವುಗೊಳಿಸುವಂತೆ ಬಿಡಿಎ ನೋಟಿಸ್ ನೀಡಿದೆ. ಖಾಸಗಿ ಭೂ ಮಾಲೀಕರಿಂದ ನಿವೇಶನ ಖರೀದಿಸಿದ್ದೇವೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ.