ದಾವಣಗೆರೆ: ಸಿಎಂ ಬದಲಾವಣೆ ವಿಚಾರದಲ್ಲಿ ಉಂಟಾಗಿರುವ ಗೊಂದಲ ಶೀಘ್ರ ಇತ್ಯರ್ಥ ಆಗಬೇಕೆಂಬ ಆಸೆ ಎಲ್ಲರದ್ದಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ನಮ್ಮದು ಈ ಅವಧಿಗೆ ಅಲ್ಲ. 2028ರ ಚುನಾವಣೆಗೆ ಬೇಡಿಕೆ ಇರುವುದು. ನಮ್ಮ ಅಭಿಮಾನಿಗಳು ಮುಂಗಡವಾಗಿ ಕ್ಲೇಮ್ ಮಾಡುತ್ತಿದ್ದಾರೆ. ಈಗ ಯಾರೂ ಸಹ ಯಾರಿಗೂ ಕನ್ಫ್ಯೂಸ್ ಮಾಡಬೇಡಿ. ಈಗ ಯಾರು ಆಗುವರೋ ಆಗಲಿ, ನಮ್ಮದು ಸಪೋರ್ಟ್ ಇದ್ದೇ ಇರುತ್ತದೆ ಎಂದು ಹೇಳಿದರು. ಹಲಿಗೆ ಹೋಗುವುದು, ಬರುವುದು ಇದ್ದೇ ಇರುತ್ತದೆ. ಪ್ರತಿ ಸಲವೂ ಹೋಗುತ್ತಿರುತ್ತಾರೆ. ಈಗ ಅಸ್ಸಾಂ ಚುನಾವಣೆ ಹಿನ್ನೆಲೆಯಲ್ಲಿ ಹೋಗಿರಬಹುದು ಎಂದರು.

10:33 PM (IST) Jan 19
ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ, ಫೆ.10 ರಿಂದ ಫೆ.25ರ ವರೆಗೆ ಅನ್ವಯವಾಗುವಂತೆ ವೇಳಾಪಟ್ಟಿ ಸಿದ್ದಪಡಿಸಲು ಸೂಚನೆ ನೀಡಿದೆ. ಇದೇ ವೇಳೆ ಮಹತ್ವದ ತಾಕೀತು ಮಾಡಿದೆ.
08:56 PM (IST) Jan 19
ಗಿಲ್ಲಿ ಸೇರಿ ಬಿಗ್ ಬಾಸ್ ಸ್ಪರ್ಧಿಗಳು ಕಲಿಸಿದ ಜೀವನದ ಅತೀ ದೊಡ್ಡ ಪಾಠ, ಗಿಲ್ಲಿ ಗೆಲುವಿನೊಂದಿಗೆ ಬಿಗ್ ಬಾಸ್ 12 ಅಂತ್ಯಗೊಂಡಿದೆ. ಸಂಭ್ರಮಾಚರಣೆ ಜೋರಾಗಿದೆ. ಈ ಬಿಗ್ ಬಾಸ್ ಸ್ಪರ್ಧಿಗಳು ಕಲಿಸಿದ ಜೀವನದ ಪಾಠ ಪ್ರತಿಯೊಬ್ಬರಿಗೂ ಅನ್ವಯವಾಗುತ್ತೆ. ಏನದು?
07:52 PM (IST) Jan 19
ಕೆ.ಡಿ. ಕೆಂಪಮ್ಮ ಅಲಿಯಾಸ್ 'ಸೈನೈಡ್ ಮಲ್ಲಿಕಾ', ಭಾರತದ ಮೊದಲ ಮಹಿಳಾ ಸರಣಿ ಕೊಲೆಗಾರ್ತಿ. ಆಕೆ ದೇವಾಲಯಗಳಲ್ಲಿ ಮಹಿಳಾ ಭಕ್ತರೊಂದಿಗೆ ಸ್ನೇಹ ಬೆಳೆಸಿ, ಸೈನೈಡ್ ಮಿಶ್ರಿತ ತೀರ್ಥ ನೀಡಿ ಕೊಂದು ಅವರ ಚಿನ್ನಾಭರಣಗಳನ್ನು ದೋಚುತ್ತಿದ್ದಳು.
07:19 PM (IST) Jan 19
06:39 PM (IST) Jan 19
ಡಿಜಿಪಿ ರಾಮಚಂದ್ರ ರಾವ್ ಅವರ ವಿವಾದಾತ್ಮಕ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮಾನತಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಈ ಆರೋಪವನ್ನು ಸುಳ್ಳು ಮತ್ತು ಫ್ಯಾಬ್ರಿಕೇಟೆಡ್ ಎಂದು ತಳ್ಳಿಹಾಕಿರುವ ರಾಮಚಂದ್ರ ರಾವ್, ರಜೆಯ ಮೇಲೆ ತೆರಳಿದೆ.
06:31 PM (IST) Jan 19
ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರು 10 ದಿನಗಳ ರಜೆ ಮೇಲೆ ತೆರಳಿ ಅಜ್ಞಾತವಾಸಕ್ಕೆ ಜಾರಿದ್ದಾರೆ. ಸಮವಸ್ತ್ರದಲ್ಲಿಯೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ಈ ಪ್ರಕರಣವು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಭಾರೀ ಮುಜುಗರ ತಂದಿದೆ.
06:13 PM (IST) Jan 19
ಅಮೆರಿಕದಲ್ಲಿ 1.6 ಕೋಟಿ ರೂ. ಸಂಬಳ ಪಡೆಯುವ ಎನ್‌ಆರ್‌ಐ ವ್ಯಕ್ತಿಯೊಬ್ಬರು, ಪೋಷಕರ ಆರೈಕೆಗಾಗಿ ಬೆಂಗಳೂರಿಗೆ ಮರಳಲು ಯೋಚಿಸುತ್ತಿದ್ದಾರೆ. ಬೆಂಗಳೂರಿನ ಕಂಪನಿಯೊಂದು 90 ಲಕ್ಷ ರೂ. ಸಂಬಳದ ಆಫರ್ ನೀಡಿದ್ದು, ಈ ಸಂಬಳ ಉತ್ತಮ ಜೀವನಕ್ಕೆ ಸಾಕಾಗುವುದೇ ಎಂಬ ಗೊಂದಲವನ್ನು ರೆಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
05:39 PM (IST) Jan 19
05:33 PM (IST) Jan 19
ಸ್ವಿಗ್ಗಿಯ 2025ರ ಆಹಾರ ವರದಿಯ ಪ್ರಕಾರ, ಬೆಂಗಳೂರಿಗರು ಒಂದೇ ವರ್ಷದಲ್ಲಿ 161 ಲಕ್ಷ ಬಿರಿಯಾನಿಗಳನ್ನು ಆರ್ಡರ್ ಮಾಡಿ ದೇಶದ ಗಮನ ಸೆಳೆದಿದ್ದಾರೆ. ಬಿರಿಯಾನಿಯ ಜೊತೆಗೆ, ಇಡ್ಲಿ, ದೋಸೆಯಂತಹ ದಕ್ಷಿಣ ಭಾರತೀಯ ಖಾದ್ಯಗಳು ಮತ್ತು ಗುಲಾಬ್ ಜಾಮೂನ್‌ನಂತಹ ಸಿಹಿತಿಂಡಿಗಳಿಗೂ ಹೆಚ್ಚಿನ ಬೇಡಿಕೆಯಿದೆ.
04:45 PM (IST) Jan 19
ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ರಾಸಲೀಲೆ ನಡೆಸಿದ ಆರೋಪ ಎದುರಿಸುತ್ತಿರುವ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಭೇಟಿಯಾಗಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿರಾಕರಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.
04:39 PM (IST) Jan 19
04:39 PM (IST) Jan 19
Kannada Serial TRP: ಧಾರಾವಾಹಿಗಳ ಟಿಆರ್‌ಪಿ ಲಿಸ್ಟ್ ಹೊರಬಿದ್ದಿದೆ. ವಾರದಿಂದ ವಾರಕ್ಕೆ ಧಾರಾವಾಹಿಗಳಲ್ಲಿರುವ ಟ್ವಿಸ್ಟ್‌ಗಳಿಂದ ಟಿಆರ್‌ಪಿ ಬದಲಾಗುವುದು. ಹಾಗೆಯೇ ಈ ವಾರ ಕೂಡ ಹಾಗೆ ಆಗಿದೆ. ಹಾಗಿದ್ದರೆ ಏನಾಗಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
04:38 PM (IST) Jan 19
ಡಿಜಿಪಿ ರಾಮಚಂದ್ರ ರಾವ್ ಅವರ ಅಸಭ್ಯ ವರ್ತನೆಯ ವಿಡಿಯೋವೊಂದು ವೈರಲ್ ಆಗಿದ್ದು, ಇದು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋ 10 ವರ್ಷ ಹಳೆಯದು ಮತ್ತು ಎಐ-ರಚಿತ ಎಂದು ರಾವ್ ಹೇಳಿಕೊಂಡರೂ, ಅದರ ಸತ್ಯಾಸತ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
03:45 PM (IST) Jan 19
ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರದ್ದೆನ್ನಲಾದ 47 ಸೆಕೆಂಡ್‌ಗಳ ವಿಡಿಯೋ ಲೀಕ್ ಆಗಿದ್ದು, ಕಚೇರಿಯಲ್ಲೇ ಮೂವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಖಾಕಿ ಸಮವಸ್ತ್ರದಲ್ಲೇ ಮಹಿಳೆಯರಿಗೆ ಮುತ್ತಿಕ್ಕುವುದು, ಖಾಸಗಿ ಭಾಗಗಳನ್ನು ಮುಟ್ಟುವಂತಹ ವಿಕೃತ ದೃಶ್ಯಗಳು ವಿಡಿಯೋದಲ್ಲಿವೆ.
03:26 PM (IST) Jan 19
02:58 PM (IST) Jan 19
Karnataka Vs Tamlinadu: ಹೊಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ತಮಿಳುನಾಡು ಸರ್ಕಾರದ ಪ್ರಸ್ತಾಪವನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ. ಈ ಹಿಂದೆಯೇ ಉಡಾನ್ ಪಟ್ಟಿಯಿಂದ ಕೈಬಿಡಲಾಗಿತ್ತು.
02:57 PM (IST) Jan 19
Bigg Boss Kannada Season 12 Ashwini Gowda: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಮಧ್ಯೆ ಜಗಳ ಆಗಿತ್ತು. ಆ ವೇಳೆ ಅಶ್ವಿನಿ ಗೌಡ ಅವರು ರಕ್ಷಿತಾ ಎಸ್ ಕ್ಯಾಟಗರಿಗೆ ಸೇರಿದವಳು ಎಂದು ಹೇಳಿದ್ದರು. ಎಸ್ ಕ್ಯಾಟಗರಿ ಅಂದರೆ ಏನು ಎಂದು ಅವರು ಮಾತನಾಡಿದ್ದಾರೆ.
02:55 PM (IST) Jan 19
ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ಸರಸವಾಡಿದ್ದಾರೆ ಎನ್ನಲಾದ ವೈರಲ್ ವಿಡಿಯೋವನ್ನು ಐಜಿಪಿ ರಾಮಚಂದ್ರ ರಾವ್ ನಿರಾಕರಿಸಿದ್ದಾರೆ. ಇದು ತಮ್ಮ ತೇಜೋವಧೆ ಮಾಡಲು ಎಐ ಬಳಸಿ ಸೃಷ್ಟಿಸಿದ ನಕಲಿ ವಿಡಿಯೋ ಎಂದಿರುವ ಅವರು, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾಗಿದ್ದಾರೆ.
02:49 PM (IST) Jan 19
ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಗಿಲ್ಲಿ ನಟ ನಾವು ಸ್ನೇಹಿತರಷ್ಟೇ ಎಂದರೂ, ಅವರ ತಾಯಿ ಮಗ ಇಷ್ಟಪಟ್ಟ ಹುಡುಗಿಯ ಜೊತೆ ಮದುವೆ ಮಾಡಿಸುವುದಾಗಿ ಹೇಳಿದ್ದಾರೆ. ಅಭಿಮಾನಿಗಳು, ಕಾವ್ಯಾ ಅವರನ್ನೇ ಮದುವೆ ಮಾಡಿಸೋ ಪಟ್ಟು ಹಿಡಿದಿದ್ದಾರೆ.
02:43 PM (IST) Jan 19
ಡಿಜಿಪಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲಿ ಸಮವಸ್ತ್ರದಲ್ಲಿಯೇ ಮಹಿಳೆಯೊಂದಿಗೆ ಸರಸವಾಡಿದ ವಿಡಿಯೋ ವೈರಲ್ ಆಗಿದೆ. ಈ ಘಟನೆಯಿಂದ ತೀವ್ರ ಮುಜುಗರಕ್ಕೊಳಗಾದ ಸರ್ಕಾರ ತನಿಖೆಗೆ ಆದೇಶಿಸಿದ್ದು, ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಈ ಕೃತ್ಯವನ್ನು ಖಂಡಿಸಿದ್ದಾರೆ.
02:32 PM (IST) Jan 19
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಾಣಿಗಮಂಗಲ ಗಡಿ ಗ್ರಾಮದಲ್ಲಿ, ಶಾಸಕ ಎಂ.ಆರ್. ಮಂಜುನಾಥ್ ಅವರು ಜಿಲ್ಲೆಯ ಮೊದಲ ಸ್ಯಾಟಲೈಟ್ ಬಿಎಸ್ಎನ್ಎಲ್ ಟವರ್ ಸಂಪರ್ಕಕ್ಕೆ ಚಾಲನೆ ನೀಡಿದರು.
02:26 PM (IST) Jan 19
ದ್ವಿತೀಯ ಪಿಯುಸಿ ಪ್ರಿಪರೇಟರಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ನಂತರ, ಶಿಕ್ಷಣ ಇಲಾಖೆಯು ಕಠಿಣ ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿ, ಪದವಿ ಪೂರ್ವ ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಚಿಂತನೆ ನಡೆಸಿದೆ.
02:21 PM (IST) Jan 19
ಕರ್ನಾಟಕದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕಚೇರಿಯಲ್ಲಿ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋಗಳು ವೈರಲ್ ಆಗಿವೆ. ಈ 'ಕಾಮಕಾಂಡ' ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.
02:10 PM (IST) Jan 19
02:05 PM (IST) Jan 19
01:25 PM (IST) Jan 19
ಚಿನ್ನದ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಬೆಳ್ಳಿ ದರವೂ ಗಣನೀಯವಾಗಿ ಏರಿಕೆಯಾಗಿದೆ. ಅಮೆರಿಕ-ವೆನೆಜುವೆಲಾ ನಡುವಿನ ಉದ್ವಿಗ್ನತೆಯಂತಹ ಜಾಗತಿಕ ಕಾರಣಗಳಿಂದ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಚಿನ್ನದತ್ತ ಮುಖ ಮಾಡುತ್ತಿದ್ದು, ಇದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
01:21 PM (IST) Jan 19
ಗದಗದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಇಲಾಖೆಯ ಉತ್ಖನನದಲ್ಲಿ ಶಿಲಾಯುಗದ ಆಯುಧಗಳು ಪತ್ತೆಯಾಗಿವೆ. ಇದೇ ವೇಳೆ, ಓರ್ವ ಸ್ವಾಮೀಜಿ ಸ್ಥಳದಲ್ಲಿ ಸಾವಿರ ಕೆಜಿ ಚಿನ್ನದ ಶಿವಲಿಂಗವಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಘಟನೆಗಳು ಉತ್ಖನನದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.
01:01 PM (IST) Jan 19
ನಟ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ 'ಲ್ಯಾಂಡ್ ಲಾರ್ಡ್' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಸುಳ್ಳು ಕೇಸುಗಳಿಂದ ಬೇಸತ್ತು ಸಂವಿಧಾನ ಮತ್ತು ಡಾ. ಅಂಬೇಡ್ಕರ್ ಅವರ ಬಗ್ಗೆ ಓದಲು ಪ್ರಾರಂಭಿಸಿದೆ ಎಂದು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
12:41 PM (IST) Jan 19
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಭಾಗವಹಿಸಿ, ರನ್ನರ್ ಅಪ್ ಆಗಿದ್ದಾರೆ. ಕಾವ್ಯ ಶೈವ ಅವರು ಫಿನಾಲೆಯಲ್ಲಿ ಇರೋಕೆ ಅರ್ಹರಿಲ್ಲ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದರು. ಈ ಬಗ್ಗೆ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.
12:32 PM (IST) Jan 19
ತಾಲೂಕಿನ ತಾಳಕನಕಾಪೂರ ಗ್ರಾಮದ ಸಣ್ಣ ದುರ್ಗಪ್ಪ ಪರಿವರ್ ಎಂಬ ಯುವಕ, ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಮಹಾದಾಸೋಹಕ್ಕಾಗಿ ಅಪರೂಪದ ಸೇವೆ ಸಲ್ಲಿಸಿದ್ದಾನೆ. 50 ಕೆಜಿ ಅಕ್ಕಿ ಮೂಟೆಯನ್ನು ಹೆಗಲ ಮೇಲೆ ಹೊತ್ತು 15 ಕಿಲೋಮೀಟರ್ ಪಾದಯಾತ್ರೆ ಮೂಲಕ ಗವಿಮಠಕ್ಕೆ ತಲುಪಿಸಿ ತನ್ನ ಭಕ್ತಿ ಸಮರ್ಪಿಸಿದ್ದಾನೆ.
12:32 PM (IST) Jan 19
12:12 PM (IST) Jan 19
ಹೊಳೆಹೊನ್ನೂರು ಸಮೀಪದ ಅರಬಿಳಚಿ ಗ್ರಾಮದಲ್ಲಿ, ಬಟ್ಟೆ ತೊಳೆಯಲು ಭದ್ರಾ ನಾಲೆಗೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಕಾಲು ಜಾರಿ ನೀರುಪಾಲಾಗಿದ್ದಾರೆ. ತಾಯಿ-ಮಗಳು ಮೊದಲು ನಾಲೆಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಹೋದ ಮಗ ಮತ್ತು ಅಳಿಯ ಕೂಡ ನೀರಿನಲ್ಲಿ ಮುಳುಗಿದ್ದಾರೆ.
12:08 PM (IST) Jan 19
ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿದ್ದಾರೆ. ಶ್ರೀರಾಮುಲು ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
12:06 PM (IST) Jan 19
11:59 AM (IST) Jan 19
ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟ, 'ಡೆವಿಲ್' ಸಿನಿಮಾ ಚಿತ್ರೀಕರಣದ ವೇಳೆ ನಟ ದರ್ಶನ್ ಜೊತೆಗಿನ ಅನುಭವ ಹಂಚಿಕೊಂಡಿದ್ದಾರೆ. ದರ್ಶನ್ ಅವರು ತಮ್ಮ ಕಾಮಿಡಿಯನ್ನು ಮೆಚ್ಚಿದ್ದನ್ನು ನೆನೆದ ಅವರು, ಬಿಗ್‌ಬಾಸ್ ಮನೆಯಲ್ಲಿ ತಮಗೆ ಬೆಂಬಲ ನೀಡಿದ ಸಹ ಸ್ಪರ್ಧಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
11:43 AM (IST) Jan 19
Bigg Boss Kannada Season 12 Winning Prize: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕೊನೆಗೂ ಮಂಡ್ಯದ ಗಂಡು ಗಿಲ್ಲಿ ನಟ ಅವರು ಗೆದ್ದಿದ್ದಾರೆ. ಹೀಗಿರುವಾಗ ಅವರು ಆ ಬಹುಮಾನದಲ್ಲಿ ಏನು ಮಾಡುತ್ತಾರೆ ಎಂಬ ಕುತೂಹಲ ಇತ್ತು. ಇದಕ್ಕೆ ಅವರು ಉತ್ತರ ಕೊಟ್ಟಿದ್ದಾರೆ.
11:42 AM (IST) Jan 19
ಬಿಗ್‌ಬಾಸ್ ಕನ್ನಡ 12ರ ಎರಡನೇ ರನ್ನರ್ ಅಪ್ ಅಶ್ವಿನಿ ಗೌಡ, ಇನ್‌ಸ್ಟಾಗ್ರಾಂ ಲೈವ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ತಾನು ಸೈಲೆಂಟ್ ಆಗಿ ಹೋಗುವುದಿಲ್ಲ, ಬದಲಿಗೆ ವೈಲೆಂಟ್ ಆಗಿ ಹೊಸ ಪ್ರಾಜೆಕ್ಟ್‌ಗಳೊಂದಿಗೆ ಮರಳುವುದಾಗಿ ಹೇಳಿದ್ದಾರೆ.
11:25 AM (IST) Jan 19
ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವಿಜಯ್ ರಾಜ್ ಗೌಡ ಎಂಬಾತ, ತಾನು ಕೋಟ್ಯಾಧಿಪತಿ ಉದ್ಯಮಿ ಎಂದು ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಗೆ 1.53 ಕೋಟಿ ರೂ. ವಂಚಿಸಿದ್ದಾನೆ. ತನ್ನ ಪತ್ನಿಯನ್ನೇ ಅಕ್ಕ ಎಂದು ಪರಿಚಯಿಸಿ, ಇಡಿ ಕೇಸ್ ನೆಪದಲ್ಲಿ ಹಣ ಪಡೆದಿದ್ದ ಈತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
11:19 AM (IST) Jan 19
11:16 AM (IST) Jan 19
ಮಂಡ್ಯದ ಹಳ್ಳಿ ಹೈದ ಗಿಲ್ಲಿ ನಟರಾಜ್, ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬಡತನದಿಂದ ಬಂದು, ತಮ್ಮ ಮುಗ್ಧತೆ ಮತ್ತು ಹಾಸ್ಯದಿಂದ ಜನರ ಮನಗೆದ್ದ ಇವರು, 50 ಲಕ್ಷ ನಗದು, ಕಾರು ಹಾಗೂ ಕಿಚ್ಚ ಸುದೀಪ್ ಅವರಿಂದ 10 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.