ಡಿಜಿಪಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲಿ ಸಮವಸ್ತ್ರದಲ್ಲಿಯೇ ಮಹಿಳೆಯೊಂದಿಗೆ ಸರಸವಾಡಿದ ವಿಡಿಯೋ ವೈರಲ್ ಆಗಿದೆ. ಈ ಘಟನೆಯಿಂದ ತೀವ್ರ ಮುಜುಗರಕ್ಕೊಳಗಾದ ಸರ್ಕಾರ ತನಿಖೆಗೆ ಆದೇಶಿಸಿದ್ದು, ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಈ ಕೃತ್ಯವನ್ನು ಖಂಡಿಸಿದ್ದಾರೆ.

ಬೆಂಗಳೂರು (ಜ.19): ಡಿಜಿಪಿ ರಾಮಚಂದ್ರ ರಾವ್‌ ಅವರ ಸರಸ ವಿಡಿಯೋ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾದ ಬೆನ್ನಲ್ಲಿಯೇ ಸಿಎಂ ಸಿದ್ದರಾಮಯ್ಯ ರಾಂಗ್‌ ಆಗಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಡಿಜಿಪಿ ರಾಮಚಂದ್ರ ರಾವ್‌ ಅವರ ಮಲ ಮಗಳು ನಟಿ ರನ್ಯಾ ರಾವ್‌ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡು ಪರಪ್ಪನ ಅಗ್ರಹಾರ ಜೈಲು ಸೇರಿದ್ದರೆ, ಈಗ ಆಕೆಯ ಮಲ ತಂದೆಯ ಸರಸದ ವಿಡಿಯೋ ವೈರಲ್‌ ಆಗಿದೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ವಿಡಿಯೋ ಪ್ರಸಾರವಾದ ಬೆನ್ನಲ್ಲಿಯೇ ಸಿಟ್ಟಾಗಿರುವ ಸಿದ್ದರಾಮಯ್ಯ ಈ ಕುರಿತು ವರದಿ ನೀಡುವಂತೆ ಆದೇಶ ನೀಡಿದ್ದು, ಘಟನೆಯ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ.

'ಜವಾಬ್ದಾರಿಯತ ಸ್ಥಾನದಲ್ಲಿರುವ, ಪೊಲೀಸ್‌ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಮಾಡೋವಂಥ ಕೆಲಸವೇನ್ರಿ ಇದು. ಪರ್ಸನಲ್‌ ಏನಾದರೂ ಇದ್ದರೆ ಬೇರೆ ಜಾಗದಲ್ಲಿ ಇಟ್ಕೋಬೇಕು. ಮನೆಯಲ್ಲಿ ಇಟ್ಕೋಬೇಕು. ಕಚೇರಿಯಲ್ಲಿ ಎಂಥದ್ದಿದು. ಅದೂ ಯೂನಿಫಾರ್ಮ್‌ ಹಾಕೊಂಡು ಈ ರೀತಿ ಮಾಡಿದ್ದಾರೆ' ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ ಎನ್ನಲಾಗಿದೆ.

ಅರಗ ಜ್ಞಾನೇಂದ್ರ ಆಕ್ರೋಶ

ಇನ್ನು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನನಗೂ ಸುದ್ದಿ ಬಂತು. ನಾನು ನ್ಯೂಸ್‌ನಲ್ಲಿ ಕೂಡ ನೋಡಿದೆ. ಐಪಿಎಸ್‌ ಅಧಿಕಾರಿಯಾಗಿ ಇಷ್ಟು ವರ್ಷ ಸರ್ವೀಸ್‌ ಮಾಡಿರುವ ವ್ಯಕ್ತಿಯೇ ಹೀಗೆ ಮಾಡಿದ್ರೆ ಹೇಗೆ' ಎಂದು ಪ್ರಶ್ನೆ ಮಾಡಿದ್ದಾರೆ.

ಇದು ನಾಚಿಕೆಗೇಡಿನ ಸಂಗತಿ. ನಾನು ಗೃಹ ಸಚಿವನಾಗಿ ಒಳ್ಳೆಯ ಅಧಿಕಾರಿಗಳನ್ನೂ ನೋಡಿದ್ದೇನೆ. ಆದರೆ, ಇಂಥವರೆಲ್ಲ ಇಲಾಖೆಗೆ ಶೋಭೆ ತರುವವರಲ್ಲ. ಇವರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಇದು ದುಷ್ಕೃತ್ಯ. ಪೊಲೀಸ್‌ ಇಲಾಖೆಯಿಂದಲೇ ಅವರು ಹೊರಹೋಗಬೇಕು. ಎಲ್ಲರಿಗೂ ಅವರು ಕ್ಷಮೆ ಕೇಳಬೇಕು. ಮೊನ್ನೆ ಮೊನ್ನೆ ತಾನೇ ಮಗಳ ಕೇಸ್‌ನಲ್ಲಿ ಅವರು ಜೈಲಿಗೆ ಹೋಗಿ ಬಂದಿದ್ದರು. ಸಸ್ಪೆಂಡ್‌ ಆಗಿದ್ದರು. ಇಂಥ ಒಬ್ಬ ಅಧಿಕಾರಿ ಇಷ್ಟು ನೀಚ ಕೃತ್ಯ ಎಸಗಿದ್ದಾರೆ. ಮಹಿಳೆಯರನ್ನು ರಕ್ಷಣೆ ಮಾಡಬೇಕಾದ ಶಿಸ್ತಿನ ಇಲಾಖೆಯ ಹೆಸರು ಹಾಳು ಮಾಡಿದ್ದಾರೆ. ಅದೂ ಕೂಡ ಆಫೀಸ್‌ ಒಳಗಡೆ ಈ ವರ್ತನೆ ನಾಚಿಕೆಗೇಡು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಜಿಪಿ ರಾಮಚಂದ್ರ ರಾವ್‌ ತಮ್ಮ ಕಚೇರಿಯಲ್ಲಿ ಸಾಕಷ್ಟು ಮಹಿಳೆಯರ ಜೊತೆ ರಾಸಲೀಲೆ ಆಡಿದ್ದಾರೆ. ಸಮವಸ್ತ್ರದಲ್ಲೇ ಕುಳಿತು ಮಹಿಳೆಯರಿಗೆ ಮುತ್ತುಕೊಟ್ಟಿದ್ದು ಮಾತ್ರವಲ್ಲದೆ ಅವರ ಖಾಸಗಿ ಭಾಗಗಳನ್ನು ಮುಟ್ಟಿದ್ದಾರೆ. ಇದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಲಾಗಿದ್ದು, ಅದೀಗ ವೈರಲ್‌ ಆಗಿದೆ.ತಮ್ಮ ಹುದ್ದೆಯ ಘನತೆ ಮರೆತು ಕಚೇರಿಯಲ್ಲೇ ರಾಸಲೀಲೆ ಮಾಡಿದ್ದಾರೆ. ಈ ವಿಡಿಯೋದಿಂದ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿದೆ.