ತಾಲೂಕಿನ ತಾಳಕನಕಾಪೂರ ಗ್ರಾಮದ ಸಣ್ಣ ದುರ್ಗಪ್ಪ ಪರಿವರ್ ಎಂಬ ಯುವಕ, ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಮಹಾದಾಸೋಹಕ್ಕಾಗಿ ಅಪರೂಪದ ಸೇವೆ ಸಲ್ಲಿಸಿದ್ದಾನೆ. 50 ಕೆಜಿ ಅಕ್ಕಿ ಮೂಟೆಯನ್ನು ಹೆಗಲ ಮೇಲೆ ಹೊತ್ತು 15 ಕಿಲೋಮೀಟರ್ ಪಾದಯಾತ್ರೆ ಮೂಲಕ ಗವಿಮಠಕ್ಕೆ ತಲುಪಿಸಿ ತನ್ನ ಭಕ್ತಿ ಸಮರ್ಪಿಸಿದ್ದಾನೆ.

ಕೊಪ್ಪಳ: ತಾಲೂಕಿನ ಇರಕಲಗಡಾ ಸಮೀಪದ ತಾಳಕನಕಾಪೂರ ಗ್ರಾಮದ ಯುವಕ ಸಣ್ಣ ದುರ್ಗಪ್ಪ ಪರಿವರ್ ಎಂಬಾತ 50 ಕೆಜಿ ಅಕ್ಕಿ ಪಾಕೆಟ್ ಹೊತ್ತುಕೊಂಡು 15ಕಿಮೀ ದೂರದಿಂದ ಭಾನುವಾರ ಪಾದಯಾತ್ರೆ ಮೂಲಕ ಆಗಮಿಸಿ ಕೊಪ್ಪಳ ಗವಿಮಠದ ಮಹಾದಾಸೋಹಕ್ಕೆ ಅಕ್ಕಿ ಸೇವೆ ಸಲ್ಲಿಸಿದ್ದಾನೆ.

50 ಕೆಜಿ ಅಕ್ಕಿ ಪಾಕೆಟ್‌

ತಾಳಕನಕಾಪೂರದ ಯುವಕ ಸಣ್ಣ ದುರ್ಗಪ್ಪ ತಮ್ಮೂರು ತಾಳಕನಕಾಪೂರದಿಂದ ಬರೋಬ್ಬರಿ ಅರ್ಧ ಕ್ವಿಂಟಲ್, 50 ಕೆಜಿ ಅಕ್ಕಿ ಪಾಕೆಟ್‌ನ್ನು ಹೇಗಲ ಮೇಲೆ ಹೊತ್ತುಕೊಂಡು ಕೊಪ್ಪಳ ನಗರದ ಗವಿಮಠಕ್ಕೆ ಬಂದಿದ್ದಾನೆ. ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಮಹಾದಾಸೋಹಕ್ಕೆ ದವಸ, ಧಾನ್ಯಗಳನ್ನು ಭಕ್ತರು ತಂದು ಸಮರ್ಪಿಸುತ್ತಿದ್ದಾರೆ.

ಸಣ್ಣ ದುರ್ಗಪ್ಪ 50 ಕೆಜಿ ಅಕ್ಕಿ ಪಾಕೆಟ್ ಹೊತ್ತು ತಂದು ಜಾತ್ರೆಯ ದಾಸೋಹಕ್ಕೆ ಭಕ್ತಿ ಸಮರ್ಪಿಸಿದ್ದಾನೆ. ಭಾನುವಾರ ಬೆಳಗ್ಗೆ 6.45ಕ್ಕೆ ಗ್ರಾಮದಿಂದ ಹೊರಟ ಸಣ್ಣ ದುರ್ಗಪ್ಪ 11ಗಂಟೆ ವೇಳೆ ಗವಿಮಠದಲ್ಲಿದ್ದಾನೆ. ಜಾತ್ರೆ ಅಂಗವಾಗಿ ಜರುಗುತ್ತಿರುವ ಮಹಾದಾಸೋಹಕ್ಕೆ ಭಕ್ತಿ ಪೂರಕವಾಗಿ ಅಕ್ಕಿಹೊತ್ತು ತಂದು ಸೇವೆ ಸಲ್ಲಿಸಿದ್ದೇನೆ ಎಂದು ಸಣ್ಣ ದುರ್ಗಪ್ಪ ತಿಳಿಸಿದ್ದಾನೆ. ಅಕ್ಕಿ ಹೊತ್ತು ತಂದ ಈ ಭಕ್ತನಿಗೆ ಗವಿಶ್ರೀಗಳು ಸಹ ಸನ್ಮಾನಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳ ಗವಿಸಿದ್ದೇಶ್ವರ ದಾಸೋಹ 'ಸ್ವಾಮೀಜಿ ಟೇಬಲ್ ಕ್ಲೀನಿಂಗ್'; ಸರಳತೆ ವೈರಲ್ ವಿಡಿಯೋ ಹಿಂದಿದೆ ಕಾಣದ ಸತ್ಯ!

ಭಕ್ತರಿಂದ ಗವಿಮಠದ ಮಹಾದಾಸೋಹಕ್ಕೆ ಅಕ್ಕಿ ಸೇವೆ

ಕೊಪ್ಪಳ ತಾಲೂಕಿನ ಇರಕಲಗಡಾ ಸಮೀಪದ ತಾಳಕನಕಾಪೂರ ಗ್ರಾಮದ ಯುವಕ ಸಣ್ಣ ದುರ್ಗಪ್ಪ ಪರಿವರ್ ಎಂಬಾತ 50 ಕೆಜಿ ಅಕ್ಕಿ ಪಾಕೆಟ್ ಹೊತ್ತುಕೊಂಡು 15 ಕಿಮೀ ದೂರದಿಂದ ಪಾದಯಾತ್ರೆ ಮೂಲಕ ಕೊಪ್ಪಳ ಗವಿಮಠದ ಮಹಾದಾಸೋಹಕ್ಕೆ ಅಕ್ಕಿ ಸೇವೆ ಸಲ್ಲಿಸಿದ್ದಾನೆ.

ಇದನ್ನೂ ಓದಿ: ಮೈಸೂರು ಜಂಬೂಸವಾರಿಗೆ ಇರೋ ಮನ್ನಣೆ, ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಯಾಕಿಲ್ಲ? ಹಿರಿಯ ನಟ ದತ್ತಣ್ಣ ಪ್ರಶ್ನೆ