ಬೆಂಗಳೂರು: ‘ಬಿಡದಿ ಸ್ಮಾರ್ಟ್ ಸಿಟಿ ನನ್ನ ಯೋಜನೆಯಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಯೋಜನೆಗೆ ಅಧಿಸೂಚನೆ ಹೊರಡಿಸಿದ್ದರು. ಹಿಂದಿನ ಬಿಜೆಪಿ ಸರ್ಕಾರ ಈ ಜಾಗದಲ್ಲಿ 1 ಸಾವಿರ ಎಕರೆಯನ್ನು ಕೆಐಎಡಿಬಿಗೆ ಸ್ವಾಧೀನಪಡಿಸಿಕೊಂಡಾಗ ಅವರು ಯಾಕೆ ಸುಮ್ಮನಿದ್ದರು?’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಡದಿ ಟೌನ್‌ಶಿಪ್ ಕುರಿತ ಜೆಡಿಎಸ್ ಪಾದಯಾತ್ರೆ ಬಗ್ಗೆ ಸದ್ಯಕ್ಕೆ ಉತ್ತರ ಕೊಡಲ್ಲ. ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಮಾಡಿದ್ದು ಯಾರು? ಬಿಡದಿಯಲ್ಲಿ ರೈತರು ಜಮೀನು ನೀಡಲು ಮುಂದಾಗಿದ್ದಾರೆ. ಆದರೂ ಇವರಿಗೆ ರಾಜಕಾರಣ ಮಾಡಬೇಕು, ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.
10:52 PM (IST) Jun 17
RSS: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರವನ್ನು ಬಿಟ್ಟು, ಕೊಟ್ಟಿರುವ ಗೃಹ ಖಾತೆಯನ್ನು ಸಮರ್ಥವಾಗಿ ನಡೆಸಿದರೆ ರಾಜ್ಯದ ಜನರಿಗೆ ಒಳ್ಳೆಯದಾಗಲಿದೆ ಎಂದು ಚಿಕ್ಕಮಗಳೂರು-ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
10:24 PM (IST) Jun 17
Guarantee Schemes: ಗ್ಯಾರಂಟಿ ಯೋಜನೆಯ ಕಾರ್ಯಕ್ರಮಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ. ಪರಿಷ್ಕರಣೆಯ ನಂತರ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಸವಲತ್ತುಗಳು ಸಿಗಲಿವೆ ಎಂದು ಎಚ್.ಎಂ.ರೇವಣ್ಣ ಹೇಳಿದರು.
09:29 PM (IST) Jun 17
Black Milk: ಹಾಲು ಅಂದ ತಕ್ಷಣ ನಮಗೆಲ್ಲಾ ನೆನಪಾಗೋದು ಬಿಳಿ ಬಣ್ಣ. ಹಸು, ಎಮ್ಮೆ, ಮೇಕೆ, ಒಂಟೆ ಹೀಗೆ ನಾವು ನೋಡುವ ಪ್ರಾಣಿಗಳ ಹಾಲು ಬಿಳಿಯಾಗಿಯೇ ಇರುತ್ತೆ. ಆದರೆ ಜಗತ್ತಿನಲ್ಲಿ ಒಂದು ಪ್ರಾಣಿ ಕಪ್ಪು ಬಣ್ಣದ ಹಾಲು ಕೊಡುತ್ತೆ ಅನ್ನೋದು ನಿಮಗೆ ಗೊತ್ತಾ? ಹಾಗಿದ್ರೆ ಆ ಪ್ರಾಣಿ ಯಾವುದು? ಬನ್ನಿ ನೋಡೋಣ.
08:57 PM (IST) Jun 17
ಪ್ರಧಾನಿ ಮೋದಿ ನೋಡಲು ಅತ್ಯಂತ ಸುಂದರ ವ್ಯಕ್ತಿ. ವೇರಿ ನೈಸ್ ಪರ್ಸನ್. ಆದರೆ ರಾಜತಾಂತ್ರಿಕ ವಿಚಾರ ಬಂದರೆ ಮೋದಿ ಅತ್ಯಂತ ಕಠಿಣ ಸ್ವಭಾವದವರು. ಚಾಣಾಕ್ಷ ಸಂಧಾನಕಾರ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಮಾತು ಭಾರಿ ವೈರಲ್ ಆಗಿದೆ.
07:42 PM (IST) Jun 17
Gangavathi ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ 2018ರಲ್ಲಿ ನಡೆದ ಅಪ್ರಾಪ್ತ ಬಾಲಕಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವರ ಸೇರಿ ನಾಲ್ವರಿಗೆ ದಂಡ ವಿಧಿಸಲಾಗಿದೆ.
07:35 PM (IST) Jun 17
07:12 PM (IST) Jun 17
Chanakya Niti: ಹುಡುಗಿಯರಿಗೆ ಕೇವಲ ಆಸ್ತಿ, ಸೌಂದರ್ಯ ಇರೋ ಹುಡುಗ್ರು ಮಾತ್ರ ಇಷ್ಟ ಆಗ್ತಾರೆ ಅಂತಾ ಹೆಚ್ಚಿನವರು ಅಂದುಕೊಂಡಿರುತ್ತಾರೆ. ಆದರೆ ಚಾಣಕ್ಯನ ಪ್ರಕಾರ, ಮಹಿಳೆಯರು ಪುರುಷರಲ್ಲಿ ಯಾವ ಗುಣಗಳನ್ನು ಹೆಚ್ಚು ಇಷ್ಟಪಡುತ್ತಾರೆ ಗೊತ್ತಾ?
06:33 PM (IST) Jun 17
06:02 PM (IST) Jun 17
05:44 PM (IST) Jun 17
05:12 PM (IST) Jun 17
04:29 PM (IST) Jun 17
04:23 PM (IST) Jun 17
Doddanna: 160 ಕೆಜಿ ತೂಕದ ಬಗ್ಗೆ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಡಾ.ರಾಜ್‌ಕುಮಾರ್ ಮತ್ತು ಶಂಕರ್ ನಾಗ್ ಅವರ ಶಿಸ್ತು, ಸಮಯಪಾಲನೆ ಹಾಗೂ 'ಒಂದು ಮುತ್ತಿನ ಕಥೆ' ಚಿತ್ರದ ಶೂಟಿಂಗ್ ವೇಳೆ ನಡೆದ ವಿಶೇಷ ಘಟನೆಯನ್ನು ಹಂಚಿಕೊಂಡಿದ್ದಾರೆ.
01:46 PM (IST) Jun 17
ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿದಿದ್ದರಿಂದ ಮೂರು ವರ್ಷಗಳ ನಂತರ ಮುಳುಗಡೆಯಾಗಿದ್ದ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ ಗೋಚರಿಸಿದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೆ, ದುರ್ಬಲ ಮುಂಗಾರಿನಿಂದಾಗಿ ರೈತರು ಬೆಳೆ ನಷ್ಟ ಮತ್ತು ನೀರಿನ ಕೊರತೆಯ ಆತಂಕದಲ್ಲಿದ್ದಾರೆ.
01:12 PM (IST) Jun 17
12:57 PM (IST) Jun 17
Mandya ಪತ್ನಿಗೆ ಮೆಸೇಜ್ ಮಾಡುತ್ತಿದ್ದನೆಂದು ಸಂಶಯಗೊಂಡು ವ್ಯಕ್ತಿಯೊಬ್ಬನನ್ನು ಸ್ನೇಹಿತರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿಯಲ್ಲಿ ನಡೆದಿದೆ.
12:52 PM (IST) Jun 17
ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರದಲ್ಲಿ ತಮ್ಮ ಹೆಸರು ತಳುಕು ಹಾಕಿದ್ದಕ್ಕೆ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ಬಂದ ಫೋನ್ ಕರೆಯ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾಗಿ ಸ್ಪಷ್ಟಪಡಿಸಿದ ಅವರು, ತಮ್ಮ ಹೋರಾಟ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಮಾತ್ರ ಎಂದಿದ್ದಾರೆ.
12:41 PM (IST) Jun 17
12:38 PM (IST) Jun 17
12:11 PM (IST) Jun 17
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿ ಗಲಾಟೆ ಮಾಡಿದ್ದಾರೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದ್ದಾರೆ.
12:06 PM (IST) Jun 17
ಏಳು ವರ್ಷಗಳ ಕಾಲ ಗುಟ್ಟಾಗಿ ಪ್ರೀತಿಸಿ, ಹತ್ತಾರು ಬಾರಿ ಮಾಧ್ಯಮಗಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಈ 'ಲವ್ ಬರ್ಡ್ಸ್' ಕೊನೆಗೂ ಮದುವೆ ಆಗಿದ್ದಾರೆ. ಮದುವೆಯ ದಿನ ವಿಜಯ್ ತಾಳಿ ಕಟ್ಟುವಾಗ ರಶ್ಮಿಕಾ ಕಣ್ಣಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ಇದೀಗ ರಶ್ಮಿಕಾ ವಿಜಯ್ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. !
12:02 PM (IST) Jun 17
ಚಾಮರಾಜನಗರ ಜಿಲ್ಲೆಯ ಮಸಣಾಪುರ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಅಂಬೇಡ್ಕರ್‌ರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪ ಹಿನ್ನೆಲೆ ಓರ್ವ ವ್ಯಕ್ತಿಯನ್ನ ಬಂಧಿಸಿದ ಪಲೀಸರು ವಿಚಾರಣೆಗೊಳಪಡಿಸಿದ್ದಾರೆ.
12:01 PM (IST) Jun 17
11:33 AM (IST) Jun 17
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಲು ವಿಳಂಬ ಮಾಡಿದ ಕೃಷ್ಣ ಬೈರೇಗೌಡರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ವಿಳಂಬವನ್ನು ಬೆಂಗಳೂರಿನ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್‌ಗೆ ಹೋಲಿಸಿರುವ ಅವರು, ಬಿಡಿಎ ಮತ್ತು ಬಿಎಂಆರ್‌ಡಿಎ ಇಲ್ಲದೆ ನಗರವನ್ನು ಅಭಿವೃದ್ಧಿಪಡಿಸುವ ಸವಾಲನ್ನು ಎತ್ತಿ ತೋರಿಸಿದ್ದಾರೆ.
11:18 AM (IST) Jun 17
ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನಲ್ಲಿ, ನಿರ್ಮಾಣ ಹಂತದ ಸರ್ಕಾರಿ ಕಟ್ಟಡದ ನೀರು ತುಂಬಿದ್ದ ಗುಂಡಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಈ ದುರ್ಘಟನೆಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ, ಸಾರ್ವಜನಿಕರು ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
10:26 AM (IST) Jun 17
ಬೆಂಗಳೂರಿನ ನಿಮ್ಹಾನ್ಸ್ ಲೇಔಟ್(Bengaluru nimhans layout)ನಲ್ಲಿ ಕ್ಷುಲ್ಲಕ ಕಾರಣಕ್ಕೆ ಗೆಳೆಯರಾದ ವಾಸಿಂ ಮತ್ತು ಸೈಯದ್ ನಡುವೆ ಜಗಳ ನಡೆದಿದೆ. ಸೈಯದ್‌ನ ತಾಯಿ ಅಕ್ಕನ ಬಗ್ಗೆ ವಾಸಿಂ ಅವಾಚ್ಯವಾಗಿ ನಿಂದಿಸಿದ್ದರಿಂದ ಕೋಪಗೊಂಡ ಸೈಯದ್, ಚಾಕುವಿನಿಂದ ಇರಿದು ವಾಸಿಂನನ್ನು ಕೊಲೆ ಮಾಡಿದ್ದಾನೆ.
09:49 AM (IST) Jun 17
09:42 AM (IST) Jun 17
ಇಂಧನ ಕೊರತೆ, ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (VTU) ಇನ್ನು ಮುಂದೆ ಪ್ರತಿ ಶನಿವಾರ ಆನ್‌ಲೈನ್ ತರಗತಿಗಳನ್ನು ನಡೆಸಲು ನಿರ್ಧರಿಸಿದೆ.
09:30 AM (IST) Jun 17
09:21 AM (IST) Jun 17
08:59 AM (IST) Jun 17
08:53 AM (IST) Jun 17
ಬೆಂಗಳೂರಿನ ನೈಸ್ ರಸ್ತೆಯಲ್ಲಿ ಮೇ 4 ರಂದು ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರ ಅರ್ಧ ದೇಹ ಪತ್ತೆಯಾಗಿದೆ. ಒಂದೂವರೆ ತಿಂಗಳು ಕಳೆದರೂ ಮೃತರ ಗುರುತು ಅಥವಾ ಅಪಘಾತ ಮಾಡಿದ ವಾಹನದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ನಿಗೂಢ ಪ್ರಕರಣವನ್ನು ಭೇದಿಸಲು ಕಾಮಾಕ್ಷಿಪಾಳ್ಯ ಸಂಚಾ ಪೊಲೀಸರಿಂದ ತನಿಖೆ..
08:47 AM (IST) Jun 17
08:44 AM (IST) Jun 17
08:35 AM (IST) Jun 17
ಜಿಮ್ ಮುಗಿಸಿ ಮನೆಗೆ ಬಂದ 26 ವರ್ಷದ ಬಾಡಿ ಬಿಲ್ಡರ್ ಸುಶೀಲಕುಮಾರ್ ದಿಢೀರ್ ಕುಸಿದುಬಿದ್ದು ಮೃತಪಟ್ಟಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಇವರು ಅಂತರಾಷ್ಟ್ರೀಯ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ಈ ಘಟನೆಯು ಅತಿಯಾದ ದೇಹ ಕಸರತ್ತಿನ ಅಪಾಯಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
08:21 AM (IST) Jun 17
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ, ಭತ್ತ ಮಾರಾಟ ಮಾಡಿದ ಲಕ್ಷಾಂತರ ರೈತರಿಗೆ ರಾಜ್ಯ ಸರ್ಕಾರ ಇನ್ನೂ 1,714 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಮುಂಗಾರು ಬಿತ್ತನೆಗೆ ಹಣವಿಲ್ಲದೆ ರೈತರು ಪರದಾಡುತ್ತಿದ್ದು, ಬಾಕಿ ಹಣ ಪಾವತಿಗೆ ಒತ್ತಡ ಹೆಚ್ಚಾದ ನಂತರ ಸರ್ಕಾರ 650 ಕೋಟಿ ರೂ. ಬಿಡುಗಡೆ ಮಾಡಿದೆ.
08:18 AM (IST) Jun 17
08:06 AM (IST) Jun 17
07:53 AM (IST) Jun 17
ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯಿಂದ (SIR) ತಮ್ಮ ಮತಬ್ಯಾಂಕ್‌ಗೆ ಸೇರಿದ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರ ಹೆಸರುಗಳು ಕೈಬಿಡುವ ಆತಂಕ. ಕಾಂಗ್ರೆಸ್(Congress) ಇದೆ. ಇದನ್ನು ತಡೆಯಲು, ರಾಜ್ಯಾದ್ಯಂತ ಜೂ.23 ರಿಂದ ಜೂ.30 ರವರೆಗೆ ಐದು ಬೃಹತ್ ಜಾಗೃತಿ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದೆ
07:42 AM (IST) Jun 17
ಜೋಗ್ ಫಾಲ್ಸ್ ಮತ್ತು ಸಿಗಂದೂರು ದೇವಸ್ಥಾನಕ್ಕೆ ಜೂ. 21 ರಿಂದ ವಿಶೇಷ ವೇಗದೂತ ಬಸ್ ಸೇವೆ ಆರಂಭವಾಗಲಿದೆ. ಈ ಲೇಖನದಲ್ಲಿ ಬಸ್‌ನ ಸಮಯ, ಮಾರ್ಗ, ದರ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣ ಲಭ್ಯವಿಲ್ಲದಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಜೊತೆಗೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನದ ವಿವರಗಳೂ ಇವೆ.