ಹಾನಗಲ್ಲ: ರಾಜ್ಯ ಸರ್ಕಾರದಿಂದ ಬಡವರಿಗೆ ಕಡಿಮೆ ದರದಲ್ಲಿ ನಿವೇಶನ, ಕಡುಬಡವರಿಗೆ ಉಚಿತ ನಿವೇಶನ ಯೋಜನೆ ಅರಂಭವಾಗಲಿದೆ. ಅಲ್ಲದೆ, 6 ತಿಂಗಳಲ್ಲಿ 72 ಸಾವಿರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ರಾಜ್ಯ ಕರ್ನಾಟಕ ಗೃಹ ಮಂಡಳಿ ನೂತನ ಅಧ್ಯಕ್ಷ ಶಾಸಕ ಶ್ರೀನಿವಾಸ್ ಮಾನೆ ತಿಳಿಸಿದರು.
ಸ್ವಾತಂತ್ರ್ಯ ದಿನೋತ್ಸವದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಸಮಸ್ಯೆಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ. ದೆಹಲಿಯಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಕರ್ನಾಟಕ ಭವನ ಆರಂಭಿಸಲಾಗಿದೆ. ಸಮರ್ಥ ಸಮೃದ್ಧ ಭಾರತ ನಿರ್ಮಾಣ ನಮ್ಮ ಆದ್ಯತೆ ಎಂದರು
11:34 PM (IST) Aug 16
‘ರಾಗ’ ಮತ್ತು ‘ಪರಸಂಗ’ ಸಿನಿಮಾಗಳಿಂದ. ಯಾಕೆಂದರೆ ‘ರಾಗ’ ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ ಎಂದು ಸಂದರ್ಶನದಲ್ಲಿ ನಟ ಮಿತ್ರ ಹೇಳಿದರು.
11:07 PM (IST) Aug 16
10:49 PM (IST) Aug 16
ನಾಗರಪಂಚಮಿ ಹಬ್ಬದ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ನಾಳೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
10:22 PM (IST) Aug 16
09:34 PM (IST) Aug 16
ದಕ್ಷಿಣ ಕನ್ನಡದಲ್ಲಿ ನಾಳೆ (ಆ.17) ಒಂದು ದಿನದ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ದರ್ಶನ್ ಆದೇಶ ಹೊರಡಿಸಿದ್ದಾರೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.
09:30 PM (IST) Aug 16
ಚಾಮರಾಜನಗರ ಶೂಟೌಟ್ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅರಣ್ಯಾಧಿಕಾರಿಗಳು ಇವತ್ತು ಮತ್ತೊಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ ಇರುವ ವಿಚಾರಗಳು ಪ್ರಕರಣಕ್ಕೆ ಮೇಜರ್ ತಿರುವು ನೀಡುವ ಸಾಧ್ಯತೆಗಳು ದಟ್ಟವಾಗಿವೆ.
09:21 PM (IST) Aug 16
09:14 PM (IST) Aug 16
ನಟ ದರ್ಶನ್ ಅವರಿಗೆ ಇರುವ ಅಭಿಮಾನಿ ಬಳಗದ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ದರ್ಶನ್ ಎಲ್ಲೇ ಕಾಣಿಸಿಕೊಂಡರೂ, ಅವರ ಹೆಸರು ಕೇಳಿದರೂ ಅಭಿಮಾನಿಗಳು ‘ಡಿ-ಬಾಸ್’ ಎಂದು ಜೈಕಾರ ಹಾಕುವುದು ಸಾಮಾನ್ಯ.
08:45 PM (IST) Aug 16
ಟೀಮ್ ಇಂಡಿಯಾದ ದಿಗ್ಗಜ ಆಟಗಾರರೊಬ್ಬರು ರವೀಂದ್ರ ಜಡೇಜಾ ಅವರು ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿನ ಹಿನ್ನಡೆ ಮತ್ತು ತಂಡದಲ್ಲಿನ ತಾರತಮ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಅಶ್ವಿನ್‌ಗಿಂತಲೂ ಕೆಳ ಕ್ರಮಾಂಕಕ್ಕೆ ತಳ್ಳಿದ್ದು ತಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ.
08:36 PM (IST) Aug 16
ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಕೊಡಗಿನ ಮಡಿಕೇರಿಯಲ್ಲಿ ಕಾನೂನು ಪದವೀಧರೆ ಹಾಗೂ ಎಂಎನ್‌ಸಿ ಉದ್ಯೋಗಿ ಮಲಿಹಾ ಫಾತಿಮಾ ಅವರನ್ನು ವಿವಾಹವಾದರು. ಯಾರು ಈ ಮಲಿಹಾ ಫಾತಿಮಾ?
08:15 PM (IST) Aug 16
ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಅವರು ಕೊಡಗಿನ ಮಡಿಕೇರಿಯ ರೆಸಾರ್ಟ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕಾನೂನು ಪದವೀಧರೆ ಮಲಿಹಾ ಫಾತಿಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಹೈ-ಪ್ರೊಫೈಲ್ ಮದುವೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್, ನಟರಾದ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.
08:06 PM (IST) Aug 16
ಆರ್ ಎಸ್ ಎಸ್ ಹಿಂದೆಯೂ ನೋಂದಣಿಯಾಗಿಲ್ಲ ಮುಂದೆಯೂ ನೋಂದಣಿ ಆಗಲ್ಲ ಎಂದಿರುವ ಆರ್ಎಸ್ಎಸ್ ರಾಷ್ಟ್ರೀಯ ನಾಯಕ ಸಂತೋಷ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ತಣ್ಣಗೆ ತಿರುಗೇಟು ನೀಡಿದ್ದಾರೆ.
08:02 PM (IST) Aug 16
ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಹಲ್ಲೆಗೊಳಗಾದ ಯುವಕನ ದೂರು ನಿರ್ಲಕ್ಷಿಸಿ, ಪಿಎಸ್‌ಐ ದೂರಿನ ಮೇರೆಗೆ ಯುವಕರ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಮಹಿಳಾ ಪಿಎಸ್‌ಐ
07:52 PM (IST) Aug 16
ನನ್ನ 35 ವರ್ಷದ ಹೋರಾಟಕ್ಕೆ ಫಲ ಸಿಕ್ಕಿದೆ, ನಾನು ಪ್ರಾರ್ಥನೆ ಸಲ್ಲಿಸಿದ್ದೆ ಫಲ ಸಿಕ್ಕಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್ ತಾವು ಸಿಎಂ ಆಗಿರುವುದಕ್ಕೆ ಮಾರ್ಮಿಕವಾಗಿ ನುಡಿದಿದ್ದಾರೆ. ನಮ್ಮ ನೀರು ನಮ್ಮ ಹಕ್ಕು..
07:46 PM (IST) Aug 16
ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಆರೋಪದ ಮೇಲೆ ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನ ಉರ್ವ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಎಫ್‌ಐಆರ್ ದಾಖಲಿಸದಿದ್ದರೆ ಹೈಕೋರ್ಟ್ ಮೂಲಕ ಕಾನೂನು ಹೋರಾಟ ನಡೆಸುವುದಾಗಿ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಎಚ್ಚರಿಸಿದ್ದಾರೆ.
07:19 PM (IST) Aug 16
ಬೆಂಗಳೂರಿನಿಂದ ಸ್ಟಾರ್ ಆದ ಖ್ಯಾತ ನಟನ ಅಭಿನಯದ 1995ರ ಚಿತ್ರವನ್ನು ಹಳೆಯ ಫಿಲ್ಮ್ ರೀಲ್ ಮತ್ತು ಪ್ರೊಜೆಕ್ಟರ್ ಬಳಸಿ ಮರು ಪ್ರದರ್ಶಿಸಲಾಯಿತು. ಈ ವಿಶಿಷ್ಟ ಪ್ರದರ್ಶನವು ಪ್ರೇಕ್ಷಕರಿಗೆ ಡಿಜಿಟಲ್ ಯುಗದ ಮೊದಲು ಇದ್ದ ಥಿಯೇಟರ್ ಅನುಭವವನ್ನು ಮರಳಿ ನೀಡಿತು, ಮತ್ತು ಜನರು ಹಳೆಯ ದಿನಗಳನ್ನು ನೆನಪಿಸಿಕೊಳ್ಳಲು ಥಿಯೇಟರ್‌ಗೆ ಮುಗಿಬಿದ್ದರು.
07:16 PM (IST) Aug 16
ಮಡಿಕೇರಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಡಿಸೆಂಬರ್ ಒಳಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದರು. ಪ್ರತಿ ಗ್ರಾಮ ಪಂಚಾಯಿತಿಗೆ 10 ಲಕ್ಷ ರೂ. ಅನುದಾನ ಹಾಗೂ 'ಭಾರತ್ ಜೋಡೋ ಯುವ ಘಟಕ'ಗಳ ಸ್ಥಾಪನೆಯ ಮೂಲಕ ಅಭಿವೃದ್ಧಿಗೆ ವೇಗ ನೀಡಲಾಗುವುದು ಎಂದು ಅವರು ತಿಳಿಸಿದರು.
06:45 PM (IST) Aug 16
ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ತೊಳೆದ ಬಳಿಕ ಅವುಗಳಿಂದ ಕೆಟ್ಟ ವಾಸನೆ ಬರುತ್ತಿದೆಯೇ? ಡ್ರಮ್ ಒಳಗೆ ಕೊಳೆ, ಡಿಟರ್ಜೆಂಟ್ ಅವಶೇಷ ಅಥವಾ ಗಾರ ಜಮೆಯಾಗಿದೆಯೇ? ಹಾಗಾದರೆ ಮೆಷಿನ್‌ನ್ನೇ ದೂಷಿಸುವ ಮೊದಲು..
06:20 PM (IST) Aug 16
ನೇಹಾ ಶೆಟ್ಟಿ ಕನ್ನಡದ ‘ಮುಂಗಾರು ಮಳೆ 2’ ಚಿತ್ರದ ಮೂಲಕ ಪರಿಚಿತರಾದ ನಟಿ. ಸದ್ಯ ಟಾಲಿವುಡ್‌ನಲ್ಲಿ ಕೆಲವೇ ಸಿನಿಮಾಗಳ ಮೂಲಕವೇ ಭಾರೀ ಕ್ರೇಜ್ ಸಂಪಾದಿಸಿದ ನಟಿಯರ ಪೈಕಿ ನೇಹಾ ಶೆಟ್ಟಿ ಕೂಡ ಒಬ್ಬರು.
06:15 PM (IST) Aug 16
05:23 PM (IST) Aug 16
05:09 PM (IST) Aug 16
ಯಶ್ ಎಂದರೆ ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಸರು. ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ಅವರ ಖ್ಯಾತಿ ದೇಶದ ಗಡಿ ದಾಟಿದ್ದು, ವಿಶ್ವದಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
04:55 PM (IST) Aug 16
ಬೆಂಗಳೂರಿನ ಎಂಜಿನಿಯರ್ ಗೌರವ್ ಸೇನ್ ಅವರು ರಸ್ತೆ ಗುಂಡಿಗಳನ್ನು ಪತ್ತೆಹಚ್ಚಲು ಮತ್ತು ಅವುಗಳ ಗಾತ್ರವನ್ನು ವಿಶ್ಲೇಷಿಸಲು ಎಐ (AI) ಚಾಲಿತ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನವು ಗುಂಡಿಗಳಿಗೆ ಕಾರಣರಾದ ಗುತ್ತಿಗೆದಾರರನ್ನು ಗುರುತಿಸಿ, ಅವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲು ಸಿದ್ಧವಿರುವ ದೂರನ್ನು ಸ್ವಯಂಚಾಲಿತವಾಗಿ ಸಿದ್ಧಪಡಿಸುತ್ತದೆ.
04:52 PM (IST) Aug 16
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಟಾರ್ ನಟರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಯಶ್ ಅವರಿಗೂ ರಾಜಕೀಯಕ್ಕೆ ಬರುವ ಆಸೆ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ.
04:26 PM (IST) Aug 16
‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ಯಶ್ ಸೇರಿದಂತೆ ಕೆಲ ನಟರು ಕಾಣಿಸಿಕೊಂಡಿರುವ ಇಂಟಿಮೇಟ್ ದೃಶ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
04:06 PM (IST) Aug 16
ಹುಟ್ಟುಹಬ್ಬದ ಸಂಭ್ರಮದಲ್ಲಿ ಕೇಕ್ ಕತ್ತರಿಸುವುದು ಸಾಮಾನ್ಯ. ಆದರೆ ಅದೇ ಕೇಕ್ ಸಂಭ್ರಮದ ಮನೆಯನ್ನು ಆಸ್ಪತ್ರೆಗೆ ಸೇರಿಸುವಂತೆ ಮಾಡಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿ ಹುಟ್ಟುಹಬ್ಬದ ಕೇಕ್‌ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಇದನ್ನು ಸೇವಿಸಿದ 11 ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.
04:03 PM (IST) Aug 16
02:15 PM (IST) Aug 16
01:52 PM (IST) Aug 16
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಎರಡು ವರ್ಷದ ಮಗುವೊಂದು ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ಸದ್ಯ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
01:49 PM (IST) Aug 16
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಷ್ಟ್ರ ರಕ್ಷಣಾ ಪಡೆಯ ನೇತೃತ್ವದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗಡಿಪಾರು ಮಾಡಲು ಆಗ್ರಹಿಸಿ ಪ್ರತಿಭಟನೆ ನಡೆಯಿತು. ಈ ಹೋರಾಟದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಹೋರಾಟ ಗುರಿ ಮುಟ್ಟುವವರೆಗೂ ನಿಲ್ಲಬಾರದು ಎಂದರು. ಜನಸಂಖ್ಯಾ ಹೆಚ್ಚಳದ ಆತಂಕ..
01:33 PM (IST) Aug 16
ಬಿಗ್‌ಬಾಸ್ ಸೀಸನ್ 13ರ ಅಗ್ನಿಪರೀಕ್ಷೆ ಆರಂಭವಾಗಿದ್ದು, ಕುಮಾರಿ ಎಂಬ ಯುವತಿ ಗಮನ ಸೆಳೆಯುತ್ತಿದ್ದಾರೆ. ತನ್ನ ಫಿಲ್ಟರ್ ಇಲ್ಲದ ಮಾತುಗಳಿಂದ ತೀರ್ಪುಗಾರರ ಮನಗೆದ್ದ ಈಕೆ, ಚಂದನ್ ಶೆಟ್ಟಿಯವರನ್ನೇ ನಾಮಿನೇಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
12:50 PM (IST) Aug 16
ವಿಜಯ್ ಪಾಳೇಗಾರ್ ನಿರ್ದೇಶನದ , ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಾಯಕತ್ವದ ‘ರಾಶಿ’ ಚಿತ್ರದ ಮೊದಲ ಹಾಡು "ಮೊದಲ ಪ್ರೀತಿ" ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ವಿಜಯ್ ಪಾಳೇಗಾರ್ ಬರೆದು, ಸಂಗೀತ ಸಂಯೋಜಿಸಿರುವ ಈ ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ.
12:42 PM (IST) Aug 16
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗಡಿಪಾರು ಮಾಡಬೇಕೆಂದು ರಾಷ್ಟ್ರ ರಕ್ಷಣಾ ಪಡೆಯು ಬೃಹತ್ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಹಿಂದೂ ಮುಖಂಡ ವಸಂತ್ ಗಿಳಿಯಾರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
11:11 AM (IST) Aug 16
ಸುಮಾರು ₹500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಕೇಂದ್ರವು, ಕ್ರೀಡಾ ವಿಜ್ಞಾನ, ತಂತ್ರಜ್ಞಾನ, ಮತ್ತು ವಿವಿಧ ಬಗೆಯ ಪಿಚ್‌ಗಳನ್ನು ಬಳಸಿ ಆಟಗಾರರ ಕೌಶಲ್ಯ ಮತ್ತು ಫಿಟ್‌ನೆಸ್ ಅನ್ನು ಸುಧಾರಿಸುತ್ತದೆ. ಇದು ಕೇವಲ ಪುನಶ್ಚೇತನ ಕೇಂದ್ರವಲ್ಲ, ಬದಲಿಗೆ ಭಾರತೀಯ ಕ್ರಿಕೆಟ್‌ನ ಪ್ರತಿಭಾ ಅಭಿವೃದ್ಧಿಯ ಹೃದಯವಾಗಿದೆ.
09:29 AM (IST) Aug 16
ಬೆಂಗಳೂರಿನ ಔಟರ್ ರಿಂಗ್ ರೋಡ್‌ನಲ್ಲಿ ಅಕ್ಟೋಬರ್‌ನಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದ್ದು, ತೀವ್ರ ಸಂಚಾರ ದಟ್ಟಣೆ ಉಂಟಾಗಲಿದೆ. ಇದಕ್ಕೆ ಪರಿಹಾರವಾಗಿ ಸರ್ಕಾರವು ಐಟಿ ಕಂಪನಿಗಳಿಗೆ ಹೈಬ್ರಿಡ್ ಕೆಲಸದ ಮಾದರಿಗೆ ಮನವಿ ಮಾಡಿದೆ.
08:47 AM (IST) Aug 16
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಹೈದರಾಬಾದ್ ನಿಜಾಮ್ ಕಾಲದಲ್ಲಿ ತಮ್ಮ ಕುಟುಂಬವನ್ನು ರಕ್ಷಿಸಿದ್ದು RSS ಎಂಬ ಬಿ.ಎಲ್. ಸಂತೋಷ್ ಅವರ ಹೇಳಿಕೆ ತಳ್ಳಿಹಾಕಿದ್ದಾರೆ. ತಮ್ಮನ್ನು ರಕ್ಷಿಸಿದ್ದು ನೆಹರು, ಸರ್ದಾರ್ ಪಟೇಲ್ ಮತ್ತು ಭಾರತೀಯ ಸೇನೆಯೇ ಹೊರತು ಬೇರೆ ಯಾರೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
08:20 AM (IST) Aug 16
ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟಿ ಪವಿತ್ರಾ ಗೌಡ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಬ್ಬರಿದ್ದ ಬ್ಯಾರಕ್‌ನಿಂದ 16 ಕೈದಿಗಳಿರುವ ಬ್ಯಾರಕ್‌ಗೆ ವರ್ಗಾಯಿಸಲಾಗಿದೆ. ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮ.
07:50 AM (IST) Aug 16
07:47 AM (IST) Aug 16
07:40 AM (IST) Aug 16
ಶಿಕಾರಿಪುರದ ಕಡೇನಂದಿಹಳ್ಳಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಸೌಭಾಗ್ಯ ಲಭಿಸಿತು. ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ವಿಶ್ವಾಗ್ರಹ ಫೌಂಡೇಶನ್ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ, ಮಕ್ಕಳ ಶಿಕ್ಷಣಕ್ಕೆ ಸ್ಫೂರ್ತಿ ತುಂಬಿದವು.