ಬೆಂಗಳೂರು: ಆ.6ರಿಂದ ಮಳೆಗಾಲದ ವಿಧಾನಮಂಡಲ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆ.6 ರಂದು ಅಧಿವೇಶನ ಕರೆಯಲು ತೀರ್ಮಾನಿಸಿರುವುದಾಗಿ ತಿಳಿಸಿದರು. ಹೀಗಾಗಿ ಆಗಸ್ಟ್ ಮೊದಲ ವಾರ ಅಧಿವೇಶನ ನಡೆಯುವುದು ಬಹುತೇಕ ಖಚಿತಗೊಂಡಿದೆ.
ಆ.6 ರಿಂದ ಅಧಿವೇಶನ ಶುರುವಾಗಲಿದ್ದು, ಮೊದಲ ದಿನ ಹಂಗಾಮಿ ಸ್ಪೀಕರ್ ಆಗಿರುವ ಉಪಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಬಳಿಕ ನಿಧನರಾದ ಮಾಜಿ ಸಚಿವ ಸುಧಾಕರ್ ಅವರಿಗೆ ಸಂತಾಪ ಸೂಚನೆ ನಡೆಯಲಿದೆ. ನಂತರ ಆ.10 ರಿಂದ ಕಾರ್ಯಕಲಾಪ ಶುರುವಾಗಲಿದ್ದು ಆ.14ರವರೆಗೆ ನಡೆಯುತ್ತದೆಯೇ ಅಥವಾ ಆ.21ರವರೆಗೆ ನಡೆಯುತ್ತದೆಯೇ ಎಂಬುದು ಇನ್ನೂ ಅಂತಿಮಗೊಂಡಿಲ್ಲ.
ಸರ್ಕಾರದಿಂದ ವಿಧಾನಸಭೆ ಸಚಿವಾಲಯಕ್ಕೆ ಈವರೆಗೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ತಲುಪಿಲ್ಲ. ದಿನಾಂಕದ ಬಗ್ಗೆ ಮಾಹಿತಿ ತಲುಪಿದರೆ ಶಾಸಕರಿಗೆ ಪ್ರಶ್ನೋತ್ತರಕ್ಕೆ ಪ್ರಶ್ನೆಗಳನ್ನು ಸಲ್ಲಿಸಲು ಸೂಚಿಸಬೇಕಾಗುತ್ತದೆ. ಸಚಿವಾಲಯಕ್ಕೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
10:05 PM (IST) Jul 14
ಬೆಂಗಳೂರು ಮೆಟ್ರೋದಲ್ಲಿ ಹೆಚ್ಚುತ್ತಿರುವ ಹಳಿ ದುರಂತ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು, ಬಿಎಂಆರ್‌ಸಿಎಲ್ ತನ್ನ 177 ನಿಲ್ದಾಣಗಳಲ್ಲಿ ₹1,274 ಕೋಟಿ ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್ (PSD) ಅಳವಡಿಸಲು ಬೃಹತ್ ಯೋಜನೆ ರೂಪಿಸಿದೆ.
09:50 PM (IST) Jul 14
Karnataka Drought: ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಂಡ ನಿಯೋಜಿಸಬೇಕು" ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
09:32 PM (IST) Jul 14
ಭರ್ಜರಿ ಪ್ರದರ್ಶನ ಕಾಣುತ್ತಿರುವ ಅಖಿಲ್ ಅಕ್ಕಿನೇನಿ ಅಭಿನಯದ 'ಲೆನಿನ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಚಿತ್ರದೊಂದಿಗೆ ಕನ್ನಡದ ನಟ ಪ್ರಮೋದ್ ಕೂಡ ಗಮನ ಸೆಳೆದಿದ್ದಾರೆ.
08:55 PM (IST) Jul 14
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಈವರೆಗೆ ಒಟ್ಟು 15,470 ಕೋಟಿ ರೂಪಾಯಿ ವೆಚ್ಚವಾಗಿದೆ. ಗ್ರೀನ್‌ಫೀಲ್ಡ್ ಯೋಜನೆಯಾಗಿ ಆರಂಭವಾದ ಈ ವಿಮಾನ ನಿಲ್ದಾಣ, ಟರ್ಮಿನಲ್-1ರ ವಿಸ್ತರಣೆ ಹಾಗೂ ಪರಿಸರಸ್ನೇಹಿ ಟರ್ಮಿನಲ್-2 ನಿರ್ಮಾಣದ ಮೂಲಕ ಅಭಿವೃದ್ಧಿ ಹೊಂದಿದೆ.
08:51 PM (IST) Jul 14
ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಎತ್ತೇಚ್ಚ ಮಳೆ ಸುರಿಯುವುದು ಗೊತ್ತೇ ಇದೆ. ವಾರ್ಷಿಕ 2700 ಮಿಲಿ ಮೀಟರ್ ಮಳೆಯಾಗುವ ಕೊಡಗಿನಲ್ಲಿ ಈ ಬಾರಿ ಇದುವರೆಗೆ ಕೇವಲ 700 ಮಿಲಿ ಮೀಟರ್ ಮಾತ್ರವೇ ಮಳೆಯಾಗಿದೆ.
08:10 PM (IST) Jul 14
ದರ್ಶನ್ ಅವರ ಅಪರೂಪದ ಹಳೆಯ ವಿಡಿಯೋವೊಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
07:46 PM (IST) Jul 14
07:43 PM (IST) Jul 14
ತ್ರಿಪುರಾ ಮೂಲದ 28 ವರ್ಷದ ಬೋರ್ನಿ ಬಾನಿಕ್ ಪ್ಯಾರಿಸ್ ಬಳಿ ಸ್ವಂತ ಮನೆ ಖರೀದಿಸಿದ ನಂತರ ಎದುರಾಗುವ ಗುಪ್ತ ವೆಚ್ಚಗಳ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಿಂಗಳಿಗೆ ₹1.4 ಲಕ್ಷ ಇಎಂಐ ಹೊರತಾಗಿಯೂ ಹಲವು ನಿರ್ವಹಣಾ ಶುಲ್ಕಗಳು ಇರುತ್ತವೆ ಎಂದು ಅವರು ವಿವರಿಸಿದ್ದಾರೆ. ಮನೆ ಖರೀದಿಯ ಆರ್ಥಿಕ ಸತ್ಯವನ್ನು ಮುಕ್ತವಾಗಿ ಹಂಚಿಕೊಂಡ ಇವರ ಪಾರದರ್ಶಕತೆಗೆ ನೆಟಿಜನ್‌ಗಳು ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
06:50 PM (IST) Jul 14
ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ 'ರಿಚರ್ಡ್ ಆ್ಯಂಟನಿ' ಚಿತ್ರದ ಬಗ್ಗೆ ಇದೀಗ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ನೀಡಿರುವ ಹೇಳಿಕೆ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
06:48 PM (IST) Jul 14
ಇದೀಗ, ಎಸ್ ಜಾನಕಿ-ನವೀನ್ ಮೈಸೂರು ಸಂಬಂಧ ಹಲವರ ಕಣ್ಣನ್ನು ತೇವಗೊಳಿಸಿದೆ. ಆ ಪುಟ್ಟ ಬಾಲಕನ ಅಪರೊಮಿತ ಅಭಿಮಾನವೇ ಎಸ್ ಜಾನಕಿಯವರ ಕೊನೆಗಾಲದಲ್ಲಿ ತಾಯಿ-ಮಗ ಅನ್ನುವಂತಹ ಬಾಂಧವ್ಯಕ್ಕೆ ಕಾರಣವಾಯ್ತು. ಜೀವನದ ಕೊನೆಯ ಕ್ಷಣಗಳಲ್ಲಿ ಹೇಗಿದ್ದರು, ಏನೆಲ್ಲಾ ಆಯ್ತು? ಈ ಸ್ಟೋರಿ ನೋಡಿ..
06:34 PM (IST) Jul 14
ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ 1983ರ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು 43 ವರ್ಷಗಳ ನಂತರ ಒಂದೆಡೆ ಸೇರಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು 65 ಲಕ್ಷ ರೂಪಾಯಿಗಳ ಬೃಹತ್ ವಿದ್ಯಾರ್ಥಿವೇತನ ದತ್ತಿ ನಿಧಿಯನ್ನು ಸ್ಥಾಪಿಸಿದ್ದಾರೆ.
06:27 PM (IST) Jul 14
ತಿರುಮಲದಲ್ಲಿ ಉಪಸ್ಥಿತರಿರುವ ಕರ್ನಾಟಕದ ಪ್ರಮುಖ ಗಣ್ಯರೊಬ್ಬರಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ಶಿಷ್ಟಾಚಾರ ರೂಪಿಸುವುದು ಸೂಕ್ತ ಎಂದು ಟಿಟಿಡಿ ಆಡಳಿತ ಮಂಡಳಿ ಸದಸ್ಯ ಎಸ್. ನರೇಶ್ ಕುಮಾರ್ ತಿಳಿಸಿದ್ದಾರೆ.
06:02 PM (IST) Jul 14
05:14 PM (IST) Jul 14
ಶರ್ಮಿಳಾ ಮಾಂಡ್ರೆ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದ ನಟಿ ರಮ್ಯಾ, ತಮ್ಮ ಆತ್ಮೀಯ ಗೆಳತಿ ಶರ್ಮಿಳಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.
05:13 PM (IST) Jul 14
05:02 PM (IST) Jul 14
04:49 PM (IST) Jul 14
ನಗರದ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಮಿನಿ ವಿಧಾನಸೌಧವನ್ನು ರದ್ದು ಪಡಿಸಿ ನಗರದ ಹಳೇ ಪ್ರವಾಸಿ ಮಂದಿರದ ಸ್ಥಳದಲ್ಲಿ ನಿರ್ಮಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಅವರು ಶಾಸಕರಿಗೆ ಒತ್ತಾಯಿಸಿದ್ದಾರೆ.
04:37 PM (IST) Jul 14
Paraak Kannada Movie: ಸ್ಯಾಂಡಲ್ವುಡ್ನ ಬಹುಬೇಡಿಕೆಯ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪರಾಕ್' ಇದೀಗ ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆದಿದೆ.
04:07 PM (IST) Jul 14
04:02 PM (IST) Jul 14
Shankaracharya controversy In Udupi Mutt: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಆಚಾರ್ಯ ಶಂಕರರ ನಿಂದನೆ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿತ್ತು. ಈ ಬಗ್ಗೆ ಹರಿಕಥೆ ನಡೆಸಿದ ಮಹಿಳೆ ಕ್ಷಮೆ ಕೇಳಿದ್ದು, ಮಠವೂ ಕೂಡ ಸ್ಪಷ್ಟನೆ ನೀಡಿದೆ.
04:00 PM (IST) Jul 14
03:33 PM (IST) Jul 14
Kannada Youtuber Sam Sameer Neha Gupta Wedding: ಕನ್ನಡ ಯುಟ್ಯೂಬರ್ ಸ್ಯಾಮ್ ಸಮೀರ್ ಅವರು ನೇಹಾ ಗುಪ್ತ ಜೊತೆ ಮದುವೆಯಾಗಲು ರೆಡಿಯಾಗಿದ್ದಾರೆ. ಈಗಾಗಲೇ ಹೆಣ್ಣು ನೋಡುವ ಶಾಸ್ತ್ರ ಕೂಡ ಆಗಿದೆ. ಈಗ ಇವರಿಬ್ಬರು ಸೇರಿಕೊಂಡು ಒಂದು Vlog ಮಾಡಿ ಕೆಲ ಮಾತುಗಳಿಗೆ ಉತ್ತರ ಕೊಟ್ಟಿದ್ದಾರೆ.
02:40 PM (IST) Jul 14
01:38 PM (IST) Jul 14
01:33 PM (IST) Jul 14
01:14 PM (IST) Jul 14
‘ನನ್ನ ಅಮ್ಮನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಾನು ಮೈಸೂರಿನಿಂದ ಮರಳಿ ಬಂದಿದ್ದೇನೆ. ಅವರು ಇನ್ನು ಮುಂದೆ ನನ್ನ ಜೊತೆಗಿಲ್ಲ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ. ಅವರು ಪದೇ ಪದೇ ಮಾಡುತ್ತಿದ್ದ ಫೋನ್ ಕರೆಗಳನ್ನು ನಾನು ತುಂಬಾ ಮಿಸ್ ಮಾಡುತ್ತೇನೆ...’
12:43 PM (IST) Jul 14
Paradox Kannada Movie: ನೃತ್ಯ ನಿರ್ದೇಶಕ ಕ್ಯಾಪ್ಟನ್ ಕಿಶೋರ್ ಈಗ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹೌದು, ಅವರು 'ಪ್ಯಾರಾಡಾಕ್ಸ್' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಚಿತ್ರವಾಗಿದ್ದು, ಪ್ರಮುಖ ಪಾತ್ರದಲ್ಲಿ ಬಹು ಭಾಷಾ ನಟಿ ಹನ್ಸಿಕಾ ಮೊಟ್ವಾನಿ ಅಭಿನಯ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.
12:39 PM (IST) Jul 14
ಬೆಂಗಳೂರಿನ ಪಿಎಸ್‌ಐ ಭೈರಪ್ಪ, ತಮ್ಮ ಪತ್ನಿ ಮತ್ತು ಮಾವನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಅವರ ಪತ್ನಿಯೇ ಆರೋಪಿಸಿದ್ದಾರೆ. ಇನ್‌ಸ್ಟಾಗ್ರಾಮ್ ಯುವತಿಯರಿಗೆ ಗಾಳ ಹಾಕುವುದು ಸೇರಿದಂತೆ ಹಲವು ಗಂಭೀರ ಆರೋಪ ಮಾಡಿದ್ದು, ಆಯುಕ್ತರ ಮೊರೆ ಹೋಗಲು ನಿರ್ಧರಿಸಿದ್ದಾರೆ.
12:23 PM (IST) Jul 14
ಜಾನಕಿ ಇಲ್ಲದೆ ಸಂಗೀತ ಜಗತ್ತನ್ನು ಊಹಿಸಿಕೊಳ್ಳುವುದು ಅಸಾಧ್ಯ.. ಜಾನಕಮ್ಮನಂತಹ ಮಹಾನ್ ಗಾಯಕಿಯ ಧ್ವನಿಯನ್ನು ಕೇಳುವ ಭಾಗ್ಯವನ್ನು ಪಡೆಯುವ ಮೂಲಕ ಈ ಪೀಳಿಗೆಗೆ ಸಾಕಷ್ಟು ಪುಣ್ಯ ಸಿಕ್ಕಿ.. ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಹಾಡಿದ ಸಾವಿರಾರು ಅಮರ ಹಾಡುಗಳು ಹಾಗೇ ಇರುತ್ತದೆ..
12:19 PM (IST) Jul 14
ಮಧುಗಿರಿ, ಶಿರಾ ಮತ್ತು ಪಾವಗಡ ಭಾಗದ ಜನರ ದಶಕಗಳ ಕಾಲದ ರೈಲ್ವೆ ಕನಸು ಕೊನೆಗೂ ನನಸಾಗುವತ್ತ ದಾಪುಗಾಲು ಇಟ್ಟಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಭಾಗದ ಎರಡು ಪ್ರತ್ಯೇಕ ನೂತನ ರೈಲು ಮಾರ್ಗಗಳ ಪ್ರಗತಿಯ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ್ದಾರೆ.
12:08 PM (IST) Jul 14
Dildar Kannada Movie: ಪಡ್ಡೆಹುಲಿ ಸಿನಿಮಾ ಖ್ಯಾತಿಯ ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ಚಿತ್ರ `ದಿಲ್‌ದಾರ್'. ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
12:01 PM (IST) Jul 14
ಆನ್‌ಲೈನ್ ವಂಚನೆ ಪ್ರಕರಣಗಳು ಇತ್ತೀಚೆಗಿನ ದಿನಗಳಲ್ಲಿ ತೀರಾಸಾಮಾನ್ಯವಾಗಿ ಬಿಟ್ಟಿದೆ. ಜನ ಎಷ್ಟೇ ಎಚ್ಚೆತ್ತುಕೊಂಡಿದ್ದರೂ, ಖದೀಮರು ಇನ್ಯಾವುದೋ ರೂಪದಲ್ಲಿ ಯಾಮಾರಿಸ್ತಿದ್ದಾರೆ. ಇದೀಗ ಐಪಿಎಸ್ ಅಧಿಕಾರಿ ಒಬ್ಬರ ಹೆಸರಲ್ಲೇ ಮಹಾವಂಚನೆ ಮಾಡಿರೋದು ಬೆಳಕಿಗೆ ಬಂದಿದೆ.
11:52 AM (IST) Jul 14
ಸನ್ ಉದಯ ವಾಹಿನಿಯಲ್ಲಿ ‘ಮೈನಾ’ ಧಾರಾವಾಹಿ ಪ್ರಸಾರ ಆಗುತ್ತಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಧನುಷ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಇವರ ಜೊತೆ ‘ವಧು’ ಧಾರಾವಾಹಿಯ ದುರ್ಗಶ್ರೀ ಕೂಡ ನಟಿಸಿದ್ದಾರೆ.
11:40 AM (IST) Jul 14
ನೀವು ಕನ್ನಡದಲ್ಲಿ ವಿಡಿಯೋ ಮಾಡುತ್ತೀರಾ, ನಮಗೆ ಇಂಗ್ಲೀಷ್ ಗೊತ್ತಾಗಲ್ಲ ಎಂದು ಬೆಂಗಳೂರಿನ ಮುಗ್ದ ಆಟೋ ಚಾಲಕ ಅಮೆರಿಕನ್ ವ್ಲಾಗರ್‌ಗೆ ಪ್ರಶ್ನಿಸಿದ್ದರೆ, ಅತ್ತ ವ್ಲಾಗರ್, ಇಲ್ಲಾ ನಾನು ಕೆನಾಡಗೆ ಹೋಗಿಲ್ಲ ಎಂದು ಉತ್ತರಿಸಿದ್ದಾನೆ. ಈ ಸಂಭಾಷಣೆ ವಿಡಿಯೋ ಭಾರಿ ವೈರಲ್ ಆಗಿದೆ.
11:31 AM (IST) Jul 14
10:40 AM (IST) Jul 14
10:37 AM (IST) Jul 14
ಡಿಜಿಟಲ್ ಏಜೆನ್ಸಿಯೊಂದರಲ್ಲಿ ಬಾತ್‌ರೂಮ್ ವಿರಾಮ ಹಾಗೂ ಖಾಸಗಿ ಚಾಟ್‌ಗಳನ್ನು ಟ್ರ್ಯಾಕ್ ಮಾಡುವ ವಿಷಕಾರಿ ಸಂಸ್ಕೃತಿ ವಿರುದ್ಧ ಉದ್ಯೋಗಿಯೊಬ್ಬರು ರೆಡ್ಡಿಟ್‌ನಲ್ಲಿ ಬೇಸರ ಹೊರಹಾಕಿದ್ದಾರೆ. ಸಹೋದ್ಯೋಗಿಯೊಂದಿಗಿನ ಚಾಟ್ ಕದ್ದಾಲಿಸಿ ಮ್ಯಾನೇಜರ್ ಆತನಿಗೆ ವಜಾ ಮಾಡುವ ಬೆದರಿಕೆ ಒಡ್ಡಿದ್ದಾರೆ. ಈ ಪೋಸ್ಟ್‌ಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೊಸ ಕೆಲಸ ಹುಡುಕಿಕೊಂಡು ತಕ್ಷಣ ಆಫೀಸ್ ಬಿಡುವಂತೆ ನೆಟ್ಟಿಗರು ಸಲಹೆ ನೀಡಿದ್ದಾರೆ.
10:25 AM (IST) Jul 14
ಕಳೆದ ಒಂದು ವಾರದ ಹಿಂದೆ ಆರ್ಭಟಿಸಿದ್ದ ಮಳೆರಾಯ ಮತ್ತೆ ರಾಜ್ಯದಲ್ಲಿ ಕಳೆದು ಹೋಗಿದ್ದಾನೆ. ಪರಿಣಾಮ ರಾಜ್ಯದ ಜಲಾಶಯಗಳಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆ ಆಗಿದೆ. ಕೆಆರ್‍ಎಸ್ ಡ್ಯಾಂ ಕುರಿತ ಮಾಹಿತಿ ಇಲ್ಲಿದೆ.
09:47 AM (IST) Jul 14
09:45 AM (IST) Jul 14
ಮಾಸ್ಟರ್ ಡಿಗ್ರಿ ಮಾಡ್ಕೊಂಡು ಕೆಲಸಕ್ಕಾಗಿ ಅಲೆದಾಟ ನಡೆಸ್ತಿರೋರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ರಾಜ್ಯದಲ್ಲಿರುವ ವಿವಿಧ ಸರ್ಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.