MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Hassan
  • ಕಳಪೆ ಕಾಮಗಾರಿ, ಬರದ ನಡುವೆ ಎತ್ತಿನಹೊಳೆ ಪೈಪ್‌ಲೈನ್‌ ಒಡೆದು 8 ಕೋಟಿ ಲೀಟರ್‌ ನೀರು ಪೋಲು!

ಕಳಪೆ ಕಾಮಗಾರಿ, ಬರದ ನಡುವೆ ಎತ್ತಿನಹೊಳೆ ಪೈಪ್‌ಲೈನ್‌ ಒಡೆದು 8 ಕೋಟಿ ಲೀಟರ್‌ ನೀರು ಪೋಲು!

ಸಕಲೇಶಪುರ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವೆಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

2 Min read
Author : Santosh Naik
Published : Jul 14 2026, 05:13 PM IST
Share this Photo Gallery
  • FB
  • TW
  • Linkdin
  • Whatsapp
16
ನೀರು ಸರಬರಾಜು ತಾತ್ಕಾಲಿಕ ಬಂದ್‌
Image Credit : X

ನೀರು ಸರಬರಾಜು ತಾತ್ಕಾಲಿಕ ಬಂದ್‌

ಬಯಲು ಸೀಮೆಯಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಣಭೂಮಿಗೆ ಕುಡಿಯುವ ನೀರು ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಎತ್ತಿನಹೊಳೆ ಯೋಜನೆ’ಯ ಬೃಹತ್ ಪೈಪ್‌ಲೈನ್ ಸಕಲೇಶಪುರ ತಾಲೂಕಿನಲ್ಲಿ ಒಡೆದು ಭಾರಿ ಪ್ರಮಾಣದ ನೀರು ಪೋಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೀರು ಪೋಲಾದ ಹಿನ್ನೆಲೆಯಲ್ಲಿ ಸದ್ಯ ಯೋಜನೆ ಅಡಿ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕಳಪೆ ಕಾಮಗಾರಿಗೆ ಒಡೆದ ಪೈಪ್‌ಲೈನ್; ಕಾರಂಜಿ ರೀತಿ ಚಿಮ್ಮಿದ ನೀರು
Image Credit : X

ಕಳಪೆ ಕಾಮಗಾರಿಗೆ ಒಡೆದ ಪೈಪ್‌ಲೈನ್; ಕಾರಂಜಿ ರೀತಿ ಚಿಮ್ಮಿದ ನೀರು

ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಬಳಿ ಭಾನುವಾರ ಎತ್ತಿನಹೊಳೆ ಯೋಜನೆಯ ಬೃಹತ್ ಪೈಪ್‌ಲೈನ್ ಇದ್ದಕ್ಕಿದ್ದಂತೆ ಒಡೆದುಹೋಗಿದೆ. ಪೈಪ್‌ಲೈನ್ ನಿರ್ಮಾಣದ ವೇಳೆ ನಡೆದ ಕಳಪೆ ವೆಲ್ಡಿಂಗ್ ಹಾಗೂ ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಪೈಪ್ ಒಡೆದ ರಭಸಕ್ಕೆ ನೀರು ಸುಮಾರು 15 ಗಂಟೆಗಳಿಗೂ ಹೆಚ್ಚು ಕಾಲ ಬೃಹತ್ ಕಾರಂಜಿಯಂತೆ ಆಕಾಶಕ್ಕೆ ಚಿಮ್ಮಿದ್ದು, ಇಡೀ ಪ್ರದೇಶ ಜಲಾವೃತಗೊಂಡಿತ್ತು.

Related Articles

Related image1
ಎತ್ತಿನಹೊಳೆ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಡಾ.ಕೆ.ಸುಧಾಕರ್‌ ಒತ್ತಾಯ
Related image2
Yettinahole project: ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆ: ಕೇಂದ್ರ ಷರತ್ತಿನ ಅಸ್ತು, ಗೌಡರ ಭಾವುಕ ಮನವಿಗೆ ಸ್ಪಂದನೆ
36
ನಡುನೀರಿನಲ್ಲಿ ಮುಳುಗಿದ ರೈತರ ಜಮೀನುಗಳು; ಪರಿಸರ ಹಾನಿ
Image Credit : X

ನಡುನೀರಿನಲ್ಲಿ ಮುಳುಗಿದ ರೈತರ ಜಮೀನುಗಳು; ಪರಿಸರ ಹಾನಿ

ಹಲಸುಲಿಗೆ ಗ್ರಾಮದ ಸುತ್ತಮುತ್ತಲ ಕೃಷಿ ಭೂಮಿಗಳಿಗೆ ನಿರಂತರವಾಗಿ ಹರಿದ ನೀರು, ಅಲ್ಲಿನ ಬೆಳೆಗಳನ್ನು ಜಲಾವೃತಗೊಳಿಸಿದೆ. ಅತ್ಯಂತ ಒತ್ತಡದಲ್ಲಿ ಭಾರಿ ಪ್ರಮಾಣದ ನೀರು ಗದ್ದೆಗಳಿಗೆ ನುಗ್ಗಿದ್ದರಿಂದ ಮಣ್ಣಿನ ಸವಕಳಿಯಾಗಿದ್ದು, ರೈತರ ಬೆಳೆ ಹಾನಿಯಾಗಿದೆ. ಪೈಪ್‌ಲೈನ್ ಯೋಜನೆ ಜಾರಿಯಾದಾಗಿನಿಂದಲೂ ಸಕಲೇಶಪುರ ತಾಲೂಕಿನಲ್ಲಿ ನಿರಂತರವಾಗಿ ಇಂತಹ ಘಟನೆಗಳು ಜರುಗುತ್ತಿದ್ದು, ಇದು ಸ್ಥಳೀಯ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದೆ ಎಂದು ಪರಿಸರವಾದಿಗಳು ಹಾಗೂ ಗ್ರಾಮಸ್ಥರು ದೂರಿದ್ದಾರೆ.

46
ಬರೊಬ್ಬರಿ 8 ಕೋಟಿ ಲೀಟರ್ ಶುದ್ಧ ನೀರು ವ್ಯರ್ಥ
Image Credit : X

ಬರೊಬ್ಬರಿ 8 ಕೋಟಿ ಲೀಟರ್ ಶುದ್ಧ ನೀರು ವ್ಯರ್ಥ

ಭಾನುವಾರ ಸಂಭವಿಸಿದ ಈ ಪೈಪ್‌ಲೈನ್ ಬಿರುಕಿನಿಂದಾಗಿ ಸುಮಾರು 8 ಕೋಟಿ ಲೀಟರ್‌ನಷ್ಟು ನೀರು ನದಿ ಅಥವಾ ಜನರಿಗೂ ಸೇರದೆ, ರೈತರ ಜಮೀನುಗಳ ಮೂಲಕ ಹರಿದು ಪೋಲಾಗಿದೆ. ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರದ ಜನತೆ ಒಂದು ಹನಿ ನೀರಿಗೂ ಪರದಾಡುತ್ತಿರುವ ಇಂತಹ ಪರಿಸ್ಥಿತಿಯಲ್ಲಿ, ಇಷ್ಟೊಂದು ಬೃಹತ್ ಪ್ರಮಾಣದ ನೀರು ಕಳಪೆ ಕಾಮಗಾರಿಯಿಂದಾಗಿ ವ್ಯರ್ಥವಾಗಿ ಹರಿದು ಹೋಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

56
ಎತ್ತಿನಹೊಳೆ ನೀರು ಪೂರೈಕೆ ಸಂಪೂರ್ಣ ಸ್ಥಗಿತ
Image Credit : X

ಎತ್ತಿನಹೊಳೆ ನೀರು ಪೂರೈಕೆ ಸಂಪೂರ್ಣ ಸ್ಥಗಿತ

ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಎತ್ತಿನಹೊಳೆ ಯೋಜನೆ ಅಡಿ ನೀರು ಹರಿಸುವುದನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ (AEE) ಪ್ರಮೋದ್ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

66
ಸಮರೋಪಾದಿಯಲ್ಲಿ ಸಿದ್ಧತೆ; ಬುಧವಾರದಿಂದ ದುರಸ್ತಿ ಕಾರ್ಯ
Image Credit : X

ಸಮರೋಪಾದಿಯಲ್ಲಿ ಸಿದ್ಧತೆ; ಬುಧವಾರದಿಂದ ದುರಸ್ತಿ ಕಾರ್ಯ

ಸದ್ಯ ಪೈಪ್ ಒಡೆದ ಜಾಗದಲ್ಲಿ ನೀರು ಸಂಪೂರ್ಣವಾಗಿ ಸೋರಿಕೆಯಾಗುವುದನ್ನು ನಿಲ್ಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಈಗಾಗಲೇ ಪರಿಣಿತ ವೆಲ್ಡಿಂಗ್ ತಜ್ಞರ ತಂಡವನ್ನು ರವಾನಿಸಲಾಗಿದೆ. ಪೈಪ್‌ಲೈನ್‌ನಿಂದ ನೀರು ಸೋರಿಕೆಯಾಗುವುದು ಸಂಪೂರ್ಣವಾಗಿ ನಿಂತ ತಕ್ಷಣವೇ, ಅಂದರೆ ಬುಧವಾರದಿಂದ (ನಾಳೆ) ಸಮರೋಪಾದಿಯಲ್ಲಿ ದುರಸ್ತಿ ಕಾಮಗಾರಿ ಆರಂಭವಾಗಲಿದ್ದು, ಆದಷ್ಟು ಬೇಗ ನೀರು ಪೂರೈಕೆಯನ್ನು ಮರುಸ್ಥಾಪಿಸಲಾಗುವುದು ಎಂದು ಎಇಇ ಪ್ರಮೋದ್ ತಿಳಿಸಿದ್ದಾರೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಹಾಸನ
ದಕ್ಷಿಣ ಕನ್ನಡ
ಸುದ್ದಿ
ಕರ್ನಾಟಕದ ನದಿಗಳು
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಕಚೇರಿ ಆರಂಭಕ್ಕೂ ಮುನ್ನವೇ ಕುಸಿದ ತೋಟಗಾರಿಕೆ ಇಲಾಖೆ ಕಟ್ಟಡ ; ಚಾಯ್‌ವಾಲಾನಿಂದ ಉಳಿತು ಜೀವ
Recommended image2
ನಾಳೆಯಿಂದ ಯಲಹಂಕ-ಅರಸೀಕೆರೆ ನಡುವೆ Memu Train ಸರ್ವೀಸ್‌ ಆರಂಭ, ಈ ಸ್ಟೇಷನ್‌ಗಳಲ್ಲಿ ಇರಲಿದೆ ಸ್ಟಾಪ್‌
Recommended image3
ಹಾಸನ: ಮನೆ ಮುಂದೆ ಜಾನುವಾರು ಕಟ್ಟುವಾಗ ಕಾಡಾನೆ ದಾಳಿ! ಸೊಂಡಿಲಿನಿಂದ ಎತ್ತಿ ಬಿಸಾಡಿದ ಸಲಗ, ರೈತ ಗಂಭೀರ ಗಾಯ!
Related Stories
Recommended image1
ಎತ್ತಿನಹೊಳೆ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಡಾ.ಕೆ.ಸುಧಾಕರ್‌ ಒತ್ತಾಯ
Recommended image2
Yettinahole project: ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆ: ಕೇಂದ್ರ ಷರತ್ತಿನ ಅಸ್ತು, ಗೌಡರ ಭಾವುಕ ಮನವಿಗೆ ಸ್ಪಂದನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved