ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಈವರೆಗೆ ಒಟ್ಟು 15,470 ಕೋಟಿ ರೂಪಾಯಿ ವೆಚ್ಚವಾಗಿದೆ. ಗ್ರೀನ್‌ಫೀಲ್ಡ್‌ ಯೋಜನೆಯಾಗಿ ಆರಂಭವಾದ ಈ ವಿಮಾನ ನಿಲ್ದಾಣ, ಟರ್ಮಿನಲ್-1ರ ವಿಸ್ತರಣೆ ಹಾಗೂ ಪರಿಸರಸ್ನೇಹಿ ಟರ್ಮಿನಲ್-2 ನಿರ್ಮಾಣದ ಮೂಲಕ ಅಭಿವೃದ್ಧಿ ಹೊಂದಿದೆ.

ಬೆಂಗಳೂರು (ಜು.14): ಇಂದು ವಿಶ್ವದ ಪ್ರಮುಖ ಹಾಗೂ ಅತ್ಯಂತ ಸುಂದರ ವಿಮಾನ ನಿಲ್ದಾಣದ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬರೀ ಬೆಂಗಳೂರಿಗೆ ಮಾತ್ರವಲ್ಲ ಇಡೀ ಕರ್ನಾಟಕದ ಹೆಮ್ಮೆ. ದೇಶದ ಅತ್ಯಂತ ಜನನಿಬಿಡ ಹಾಗೂ ಅತ್ಯಾಧುನಿಕ ವಿಮಾನ ನಿಲ್ದಾಣಗಳಲ್ಲಿ ಒಂದು ಎನಿಸಿಕೊಂಡಿರುವ ಈ ವಿಮಾನ ನಿಲ್ದಾಣಕ್ಕೆ ಈವರೆಗೂ ಮಾಡಿರುವ ಒಟ್ಟು ವೆಚ್ಚ 15,470 ಕೋಟಿ ರೂಪಾಯಿ. ಇದು ಗ್ರೀನ್‌ಫೀಲ್ಡ್‌ ಏರ್‌ಪೋರ್ಟ್‌. ಅಂದರೆ, ಈಗ ವಿಮಾನ ನಿಲ್ದಾಣ ಇರುವ ಸ್ಥಳದಲ್ಲಿ ಯಾವುದೇ ವಿಮಾನ ನಿಲ್ದಾಣವಾಗಲಿ, ಕಟ್ಟಡಗಳಾಗಲಿ ಇದ್ದರಲಿಲ್ಲ. ದೇವನಹಳ್ಳಿಯ ಜಾಗವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಬದಲಾಯಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರಂಭದಲ್ಲಿ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣದ ವೆಚ್ಚ, ನಂತರದ ಮೂಲಸೌಕರ್ಯ ಅಭಿವೃದ್ದಿ, ವಿಸ್ತರಣಾ ಕಾಮಗಾರಿ ಹಾಗೂ ಇತ್ತೀಚಿನ ಭವ್ಯ ಟರ್ಮಿನಲ್‌-2 ನಿರ್ಮಾಣದವರೆಗೆ ಅಂದಾಜು 15,470 ಕೋಟಿ ವೆಚ್ಚವಾಗಿದೆ.

ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ (ಟರ್ಮಿನಲ್‌-1): ಇದಕ್ಕಾಗಿ 2470 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿತ್ತು. 2008ರ ಮೇನಲ್ಲಿ ಇದರ ಕಾಮಗಾರಿ ಮುಕ್ತಾಯವಾಗಿತ್ತು.ಇದು ಒಂದು ರನ್‌ವೇ ಮತ್ತು ಮೂಲ ಟರ್ಮಿನಲ್ 1 ಕಟ್ಟಡವನ್ನು ಒಳಗೊಂಡಿತ್ತು. ಅದಾದ ಬಳಿಕ ಟರ್ಮಿನಲ್‌-1ರ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದಕ್ಕಾಗಿ 1 ಸಾವಿರ ಕೋಟಿ ಹಣವನ್ನು ವೆಚ್ಚ ಮಾಡಲಾಗಿದ್ದರೆ, 2013ರ ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು.ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಉದ್ದೇಶಕ್ಕಾಗಿ ಟರ್ಮಿನಲ್ 1 ರ ವಿಸ್ತೀರ್ಣವನ್ನು ಗಣನೀಯವಾಗಿ ಹೆಚ್ಚಿಸಲಾಯಿತು. ಹೆಚ್ಚಿನ ಲೌಂಜ್‌ಗಳು, ಚೆಕ್-ಇನ್ ಕೌಂಟರ್‌ಗಳು ಮತ್ತು ಸಾಮರ್ಥ್ಯವನ್ನು ವಿಸ್ತರಿಸಲು ಈ ಹಂತದಲ್ಲಿ ಹಣವನ್ನು ಬಳಕೆ ಮಾಡಲಾಗಿತ್ತು/

ಭಾರೀ ಮೊತ್ತದ ಟರ್ಮಿನಲ್‌-2 ಮತ್ತು ಕ್ಯಾಂಪಸ್‌ ವಿಸ್ತರಣೆ

ಇದಾದ ಬಳಿಕ ಟರ್ಮಿನಲ್‌ 2 ಹಾಗೂ ಅದರ ಕ್ಯಾಂಪಸ್‌ ವಿಸ್ತರಣೆಯನ್ನು ಏಕಕಾಲದಲ್ಲಿ ಕೈಗೊಳ್ಳಲಾಗಿತ್ತು. ಇದಕ್ಕಾಗಿ 12 ಸಾವಿರ ಕೋಟಿಯಿಂದ ₹13,352 ಕೋಟಿಯಿಂದ ಖರ್ಚು ಮಾಡಲಾಗಿತ್ತು. ಟರ್ಮಿನಲ್‌-2ನ ಹಂತ-1ರ ಉದ್ಘಾಟನೆ 2022ರ ನವೆಂಬರ್‌ನಲ್ಲಿ ನಡೆದಿತ್ತು. ಇದು ವಿಮಾನ ನಿಲ್ದಾಣದ ಇತಿಹಾಸದಲ್ಲಿ ಅತ್ಯಂತ ದೊಡ್ಡಗರಿಷ್ಠ ಹೂಡಿಕೆ.ಪರಿಸರಸ್ನೇಹಿ 'ಗಾರ್ಡನ್ ಟರ್ಮಿನಲ್' (T2) ಕಟ್ಟಡ ನಿರ್ಮಾಣಕ್ಕಾಗಿಯೇ 5,000 ಕೋಟಿ ರೂಪಾಯಿ ವೆಚ್ಚಮಾಡಲಾಗಿತ್ತು.

ಒಟ್ಟು ₹13,000+ ಕೋಟಿ ಮೊತ್ತದ ಮೂಲಸೌಕರ್ಯ ಪ್ಯಾಕೇಜ್ ಅಡಿಯಲ್ಲಿ ಹೊಸದಾಗಿ ಎರಡನೇ ಸಮಾನಾಂತರ ರನ್‌ವೇ (Second Parallel Runway), ಮಲ್ಟಿ-ಮಾಡಲ್ ಸಾರಿಗೆ ಹಬ್ ಮತ್ತು ವಿಸ್ತರಿತ ಸಂಪರ್ಕ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.

ಮುಂದಿದೆ ಮತ್ತಷ್ಟು ಬೃಹತ್‌ ಯೋಜನೆಗಳು

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಇಲ್ಲಿಗೆ ಮುಗಿದಿಲ್ಲ ವಾರ್ಷಿಕವಾಗಿ 10 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಲುವಾಗಿ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಹೆಚ್ಚುವರಿಯಾಗಿ 2 ಬಿಲಿಯನ್ ಯುಎಸ್ ಡಾಲರ್ ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ನೀಡಿದೆ. ಈ ಮುಂದಿನ ಹಂತದಲ್ಲಿ ಟರ್ಮಿನಲ್ 1 ರ ಸಂಪೂರ್ಣ ನವೀಕರಣ ಮತ್ತು ಭವಿಷ್ಯದ ಟರ್ಮಿನಲ್ 3 (T3) ನಿರ್ಮಾಣದ ಆರಂಭಿಕ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.