Published : Nov 13, 2025, 06:50 AM ISTUpdated : Nov 14, 2025, 12:02 AM IST

karnataka news live: ಬಾಗಲಕೋಟೆ - ರೈತರ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಗಾಯಗೊಂಡ ಎಸ್ಪಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ

ಸಾರಾಂಶ

ಬೆಂಗಳೂರು: ಅಸಂಘಟಿತ ವಲಯದ ಕಾರ್ಮಿಕರ ಅನುಕೂಲಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರ ಆರೋಗ್ಯ, ಅಪಘಾತ ಪರಿಹಾರ, ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ, ಅಂತ್ಯಕ್ರಿಯೆ ವೆಚ್ಚ ಪಾವತಿ ಸೇರಿ ಮತ್ತಿತರ ಯೋಜನೆಗಳ ಜಾರಿಗೊಳಿಸಲಾಗುತ್ತಿದೆ. ಅದಕ್ಕಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ -ನಿರ್ದೇಶನದಂತೆ, ಯೋಜನೆಗಳ ಜಾರಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಂಸಘಟಿತ ಕಾರ್ಮಿಕ ಕಲ್ಯಾಣದ ಹೆಚ್ಚುವರಿ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳುವಂತೆ ಆರ್ಥಿಕ ಇಲಾಖೆ ಕಾರ್ಮಿಕ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾಪ ಮತ್ತು ವಾಣಿಜ್ಯ ತೆರಿಗೆ ಇಲಾಖೆಗೆ ಮನವಿ ಮಾಡಲಾಗಿದೆ.

ASP Mahanteshwar Jiddi injured

12:02 AM (IST) Nov 14

ಬಾಗಲಕೋಟೆ - ರೈತರ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಗಾಯಗೊಂಡ ಎಸ್ಪಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ

ರಬಕವಿ ಬನಹಟ್ಟಿ ತಾಲೂಕಿನ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬೆಂಕಿ ಅವಘಡದ ನಂತರ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಬಾಗಲಕೋಟೆ ಎಎಸ್ಪಿ ಮಹಾಂತೇಶ್ವರ ಜಿದ್ದಿ ಗಂಭೀರವಾಗಿ ಗಾಯಗೊಂಡಿದ್ದು, ಮೂರು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Read Full Story

11:40 PM (IST) Nov 13

ಕಬ್ಬಿನ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ದೊಣ್ಣೆ ಹಿಡಿದು ಸಾಯಿ ಪ್ರಿಯಾ ಕಾರ್ಖಾನೆ ಕಾವಲಿಗೆ ನಿಂತ ರೈತರು!

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬಿನ ಬಾಕಿ ಮತ್ತು ನ್ಯಾಯಯುತ ಬೆಲೆಗಾಗಿ ಪ್ರತಿಭಟಿಸುತ್ತಿದ್ದ ರೈತರ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಲಾಗಿದೆ. ಈ ಕೃತ್ಯಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ರೈತ ಸಂಘಟನೆಗಳು ಆರೋಪಿಸಿದ್ದು, ಘಟನೆಯಿಂದ ಜಮಖಂಡಿ ಮುಧೋಳ ಭಾಗದ ರೈತರ ನಡುವೆ ಆಕ್ರೋಶ ಭುಗಿಲೆದ್ದಿದೆ.

Read Full Story

11:04 PM (IST) Nov 13

ವಿಶ್ವದ ಏಕೈಕ ಜೈ ಶ್ರೀರಾಮ್ ಎಡಿಶನ್ ಐಫೋನ್ 17 ಪ್ರೋ ಮ್ಯಾಕ್ಸ್ ಖರೀದಿಸಿದ ಟೆಕ್ನಿಕಲ್ ಗುರೂಜಿ

ವಿಶ್ವದ ಏಕೈಕ ಜೈ ಶ್ರೀರಾಮ್ ಎಡಿಶನ್ ಐಫೋನ್ 17 ಪ್ರೋ ಮ್ಯಾಕ್ಸ್ ಖರೀದಿಸಿದ ಟೆಕ್ನಿಕಲ್ ಗುರೂಜಿ , ಚಿನ್ನ ಲೇಪಿತ ಈ ಐಫೋನ್‌ ಹಿಂಭಾಗದಲ್ಲಿ ಶ್ರೀರಾಮ ಹಾಗೂ ಹನುಮಾನ್ ಫೋಟೋ ಫ್ರೇಮ್ ಇದೆ. ಇಷ್ಟೇ ಅಲ್ಲ ಜೈ ಶ್ರೀರಾಮ್ ಎಂದು ಬರೆಯಲಾಗಿದೆ.

Read Full Story

10:41 PM (IST) Nov 13

ಬೆಂಗಳೂರು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ - ಸಫಾರಿ ಬಸ್ ಮೇಲೆ ಚಿರತೆ ಹಠಾತ್ ದಾಳಿ, ಮಹಿಳೆ ಕೈಗೆ ಗಾಯ! ವಿಡಿಯೋ ವೈರಲ್

ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ ಸಫಾರಿ ವೇಳೆ ಚಿರತೆಯೊಂದು ಸಫಾರಿ ಬಸ್ ಮೇಲೆ ಹಾರಿ ದಾಳಿ ಮಾಡಿದೆ. ಈ ಘಟನೆಯಲ್ಲಿ ಚೆನ್ನೈ ಮೂಲದ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

10:05 PM (IST) Nov 13

ಬಾಲಿವುಡ್ ನಟ ಧರ್ಮೇಂದ್ರ ಹೆಲ್ತ್ ಅಪ್‌ಡೇಟ್ ಪ್ರಕರಣ, ಪೊಲೀಸರಿಂದ ಆಸ್ಪತ್ರೆ ಉದ್ಯೋಗಿ ಅರೆಸ್ಟ್

ಬಾಲಿವುಡ್ ನಟ ಧರ್ಮೇಂದ್ರ ಹೆಲ್ತ್ ಅಪ್‌ಡೇಟ್ ಪ್ರಕರಣ, ಪೊಲೀಸರಿಂದ ಆಸ್ಪತ್ರೆ ಉದ್ಯೋಗಿ ಅರೆಸ್ಟ್ , ಅಷ್ಟಕ್ಕೂ ಧರ್ಮೇಂದ್ರ ಆರೋಗ್ಯ ಪ್ರಕರಣಕ್ಕೂ ಆಸ್ಪತ್ರೆ ಸಿಬ್ಬಂದಿ ಅರೆಸ್ಟ್ ಆಗಿದ್ದೇಕೆ? ಈ ಬೆಳವಣಿಗೆಗೆ ಕಾರಣವೇನು?

Read Full Story

09:59 PM (IST) Nov 13

ಕಾರವಾರ - ಮೆಡಿಕಲ್ ವಿದ್ಯಾರ್ಥಿಗಳ ಬುಲೆಟ್ ಬೈಕ್ ಸ್ಕೂಟಿಗೆ ಡಿಕ್ಕಿ, ಮಗ ಕಣ್ಮುಂದೆ ಸಾವು, ತಾಯಿ ಗಂಭೀರ ಗಾಯ!

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಬುಲೆಟ್ ಬೈಕ್ ಹಾಗೂ ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ 15 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಯುವಕನ ತಾಯಿ ಹಾಗೂ ಬುಲೆಟ್ ಸವಾರರಾದ ಮೆಡಿಕಲ್ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story

09:00 PM (IST) Nov 13

ರೈತ ಪ್ರತಿಭಟನೆಯಲ್ಲಿ ಕಲ್ಲು ತೂರಾಟ, ಅಡಿಷನಲ್ ಎಸ್‌ಪಿಗೆ ಗಂಭೀರ ಗಾಯ, ನಿಷೇಧಾಜ್ಞೆ ಜಾರಿ

ರೈತ ಪ್ರತಿಭಟನೆಯಲ್ಲಿ ಕಲ್ಲು ತೂರಾಟ, ಅಡಿಷನಲ್ ಎಸ್‌ಪಿಗೆ ಗಂಭೀರ ಗಾಯ, ನಿಷೇಧಾಜ್ಞೆ ಜಾರಿ, ರೈತರ ಪ್ರತಿಭಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, 50ಕ್ಕೂ ಹೆಚ್ಚು ಟ್ರಾಕ್ಟರ್ ಬೆಂಕಿಗೆ ಆಹುತಿಯಾಗಿದೆ. ಇತ್ತ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ.

Read Full Story

08:00 PM (IST) Nov 13

ಹಾರ್ನ್ ಮಾಡಿದ್ದಕ್ಕೆ ಟೆಕ್ಕಿಯಿಂದ ಹಿಟ್‌ ಅಂಡ್ ರನ್, ಆರೋಪಿ ಬಂಧನ, ಸಿಸಿಟೀವಿಲಿ ಶಾಕಿಂಗ್ ದೃಶ್ಯ!

Techie hit and run case ಬೆಂಗಳೂರಿನಲ್ಲಿ ರಸ್ತೆ ಗಲಾಟೆಯಿಂದ ಕುಪಿತಗೊಂಡ ಸಾಫ್ಟ್‌ವೇರ್ ಇಂಜಿನಿಯರ್, ದಂಪತಿ ಹಾಗೂ ಮಗು ಸಂಚರಿಸುತ್ತಿದ್ದ ಬೈಕ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಭಯಾನಕ ಕೃತ್ಯ. ಆತನನ್ನು ಕೊಲೆಯತ್ನ ಪ್ರಕರಣದಡಿ ಬಂಧಿಸಲಾಗಿದೆ.

Read Full Story

07:35 PM (IST) Nov 13

ಕುಶಾಲನಗರ ಜಾನುವಾರು ಜಾತ್ರೆ - ಕಾರಿನ ಬೆಲೆಯನ್ನು ಮೀರಿಸಿದ ಹಳ್ಳಿಕಾರ್ ಹೋರಿಗಳ ಬೆಲೆ!

ಕುಶಾಲನಗರ ಗಣಪತಿ ರಥೋತ್ಸವದ ಅಂಗವಾಗಿ ನಡೆದ ಜಾನುವಾರು ಜಾತ್ರೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹೋರಿಗಳು ಪ್ರದರ್ಶನಗೊಂಡವು. ಮೈಸೂರು, ಹಾಸನ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ರೈತರು ತಮ್ಮ ಅಮೃತ್ ಮಹಲ್, ಹಳ್ಳಿಕಾರ್ ತಳಿಯ ಹೋರಿಗಳನ್ನು ಪ್ರದರ್ಶಿಸಿದರು.

Read Full Story

07:31 PM (IST) Nov 13

ಅಬ್ಬಬ್ಬಾ! ಚಾನೆಲ್​ ವಿರುದ್ಧವೇ ಗುಡುಗಿದ Bigg Boss ಜಾಹ್ನವಿ - ದೊಡ್ಮನೆಯಲ್ಲಿ ಅಂಥದ್ದೇನಾಯ್ತು ನೋಡಿ!

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಜಾಹ್ನವಿ, ವಾಹಿನಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸ್ಪಂದನಾ ಸೋಮಣ್ಣ ಸೇರಿದಂತೆ ಕೆಲವು ಸ್ಪರ್ಧಿಗಳನ್ನು ವೀಕ್ಷಕರ ವೋಟ್ ಇಲ್ಲದೆ ವಾಹಿನಿಯೇ ಉದ್ದೇಶಪೂರ್ವಕವಾಗಿ ಸೇವ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದು, ಈ ಹೇಳಿಕೆಯು ಇದೀಗ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
Read Full Story

07:17 PM (IST) Nov 13

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!

ಪವರ್ ಬ್ಯಾಂಕ್‌ಗಳು ಮೊಬೈಲ್ ಚಾರ್ಜಿಂಗ್‌ಗೆ ಅತ್ಯಗತ್ಯವಾಗಿದ್ದರೂ, ಕೆಲವು ಅಪಾಯಕಾರಿ ಸಂಕೇತಗಳನ್ನು ನೀಡಬಹುದು. ಬ್ಯಾಟರಿ ಊತ, ಅತಿಯಾದ ಬಿಸಿ, ವಾಸನೆ ಅಥವಾ ಔಟ್‌ಪುಟ್ ಸಮಸ್ಯೆಗಳಂತಹ ಚಿಹ್ನೆಗಳು ಕಂಡರೆ, ಅದು ಸ್ಫೋಟದಂತಹ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.ಈ ಲೇಖನದಲ್ಲಿ ವಿವರಿಸಲಾಗಿದೆ.

Read Full Story

07:02 PM (IST) Nov 13

ಕೈಮೀರಿದ ರೈತ ಪ್ರತಿಭಟನೆ, ಮುಧೋಳದಲ್ಲಿ ಟ್ರಾಕ್ಟರ್‌‌ಗೆ ಹಚ್ಚಿದ ಬೆಂಕಿಯಿಂದ ನೂರಾರು ಟನ್ ಕಬ್ಬು ನಾಶ

ಕೈಮೀರಿದ ರೈತ ಪ್ರತಿಭಟನೆ, ಮುಧೋಳದಲ್ಲಿ ಟ್ರಾಕ್ಟರ್‌‌ಗೆ ಹಚ್ಚಿದ ಬೆಂಕಿಯಿಂದ ನೂರಾರು ಟನ್ ಕಬ್ಬು ನಾಶ, ಸುಮಾರು 20ಕ್ಕೂ ಹೆಚ್ಚು ಟ್ರಾಕ್ಟರ್‌ಗಳಿಗೆ ರೈತರು ಬೆಂಕಿ ಹಚ್ಚಿದ್ದಾರೆ. ಸಮೀರವಾಡಿ ಕಾರ್ಖಾನೆ ಆವರಣದಲ್ಲಿ ಈ ಘಟನೆ ನಡೆದಿದೆ.

 

Read Full Story

06:44 PM (IST) Nov 13

ಜೆಡಿಎಸ್‌ನಿಂದ ಶಾಸಕನಾದಾಗ ಕಾಂಗ್ರೆಸ್ ಮುಗಿಸಿದ್ದೆ, ಆ ಸಂದರ್ಭ ಮತ್ತೆ ಬರಬಹುದು, ಸ್ವಪಕ್ಷದ ವಿರುದ್ಧ ರಾಜಣ್ಣ ಮತ್ತೆ ಗುಡುಗು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತುಮಕೂರಿನಲ್ಲಿ ಸ್ವಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2004ರಲ್ಲಿ ತಾನು ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್‌ಗೆ 'ವೈಟ್ ವಾಶ್' ಮಾಡಿದ್ದೆ. ಅಂತಹ ಸಂದರ್ಭ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Read Full Story

06:35 PM (IST) Nov 13

ಮಧೋಳ ರೈತರ ಕಿಚ್ಚಿಗೆ ಹೊತ್ತಿ ಉರಿದ ಕಬ್ಬು ತುಂಬಿದ ಟ್ರಾಕ್ಟರ್, 20ಕ್ಕೂ ಹೆಚ್ಚು ವಾಹನ ಭಸ್ಮ

ಮಧೋಳ ರೈತರ ಕಿಚ್ಚಿಗೆ ಹೊತ್ತಿ ಉರಿದ ಕಬ್ಬು ತುಂಬಿದ ಟ್ರಾಕ್ಟರ್, 20ಕ್ಕೂ ಹೆಚ್ಚು ವಾಹನ ಭಸ್ಮ, ಸಮೀರವಾಡಿ ಕಬ್ಬು ಕಾರ್ಖಾನೆಯತ್ತ ನೂರಾರು ರೈತರು ನುಗ್ಗಿದ್ದಾರೆ. ಇತ್ತ ಟ್ರಾಕ್ಟರ್ ಹೊತ್ತಿ ಉರಿದಿದೆ.

 

Read Full Story

06:29 PM (IST) Nov 13

Bigg Boss ರಕ್ಷಿತಾ ಶೆಟ್ಟಿಯ ಯುಟ್ಯೂಬ್​ ಆದಾಯ ಇದೀಗ ರಿವೀಲ್​! ಇಷ್ಟು ಸಿಕ್ಕಿದ್ಯಾ?

ಬಿಗ್​ಬಾಸ್​ ಮನೆಯಲ್ಲಿ ಸದ್ದು ಮಾಡುತ್ತಿರುವ ರಕ್ಷಿತಾ ಶೆಟ್ಟಿ, ತಮ್ಮ ವಿಭಿನ್ನ ಭಾಷಾ ಶೈಲಿಯಿಂದಲೇ ಜನಪ್ರಿಯರಾಗಿದ್ದಾರೆ. ಮುಂಬೈನಲ್ಲಿ ಬೆಳೆದರೂ ಕರಾವಳಿ ಅಡುಗೆ ವಿಡಿಯೋಗಳಿಂದ ಫೇಮಸ್ ಆಗಿರುವ ಅವರ ಯೂಟ್ಯೂಬ್ ಆದಾಯದ ಅಂದಾಜು ಲೆಕ್ಕಾಚಾರದ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story

06:01 PM (IST) Nov 13

ಚಿತ್ತಾಪುರ - ಆರೆಸ್ಸೆಸ್‌ಗೆ ಅನುಮತಿ, ನಮಗೇಕಿಲ್ಲ? ಅದೇ ದಿನ ಸೇರುತ್ತೇವೆ ಎಂದ ಭೀಮ್ ಅರ್ಮಿ!

ಕಲಬುರಗಿ ಹೈಕೋರ್ಟ್‌ನಿಂದ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ಸಿಕ್ಕ ಬೆನ್ನಲ್ಲೇ, ಇದೇ ದಿನದಂದು ತಮಗೂ ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ಭೀಮ್ ಆರ್ಮಿ ಸಂಘಟನೆ ಪಟ್ಟು ಹಿಡಿದಿದೆ. ಅನುಮತಿ ಸಿಗದಿದ್ದರೂ ಸಾವಿರಾರು ಜನರೊಂದಿಗೆ ಮೆರವಣಿಗೆ ನಡೆಸುವುದಾಗಿ  ಘೋಷಿಸಿದೆ.

Read Full Story

05:42 PM (IST) Nov 13

ಡೆಮೋ ರೀತಿ ಲಿಂಗ ಬೇಕಾ? ವರ್ಕಿಂಗ್ ರೀತಿ ಬೇಕಾ? ಆಪರೇಷನ್​ನ ಶಾಕಿಂಗ್​ ಮಾಹಿತಿ ಕೊಟ್ಟ transgender

 ತೃತೀಯ ಲಿಂಗಿಯರು ಲಿಂಗ ಪರಿವರ್ತನೆಗೆ ಒಳಗಾಗುವಾಗ ಎದುರಿಸುವ ಸವಾಲುಗಳನ್ನು ಈ ಲೇಖನ ವಿವರಿಸುತ್ತದೆ. ಈ ಶಸ್ತ್ರಚಿಕಿತ್ಸೆಯು ಅತ್ಯಂತ ದುಬಾರಿ ಮತ್ತು ನೋವಿನಿಂದ ಕೂಡಿದ್ದು, ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ.   ಅವರು ಅನುಭವಿಸುವ ಸಂಕಷ್ಟಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ.

Read Full Story

05:29 PM (IST) Nov 13

'ಕಾಂಗ್ರೆಸ್‌ನವ್ರಿಗೆ ಸ್ವಲ್ಪವೂ ಮಾನ-ಮಾರ್ಯಾದೆ ಅನ್ನೋದೇ ಇಲ್ಲ' ದೆಹಲಿ ಸ್ಫೋಟದ ಬಗ್ಗೆ ರಾಯರಡ್ಡಿ ಹೇಳಿಕೆಗೆ ಕೆರಳಿದ ಶ್ರೀರಾಮುಲು -

ದೆಹಲಿ ಸ್ಪೋಟದ ಕುರಿತ ಬಸವರಾಜ ರಾಯರಡ್ಡಿ ಅವರ ಹೇಳಿಕೆಗೆ ಮಾಜಿ ಸಚಿವ ಶ್ರೀರಾಮುಲು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೋಜು-ಮಸ್ತಿ ಮಾಡುತ್ತಿರುವ ಬಗ್ಗೆ ಗಮನಹರಿಸುವಂತೆ ಕಾಂಗ್ರೆಸ್‌ಗೆ ಸವಾಲು.

Read Full Story

04:56 PM (IST) Nov 13

ದೆಹಲಿ ಕಾರ್ ಬಾಂಬ್ ಸ್ಫೋಟ ಪ್ರಕರಣ - ತುಮಕೂರಿನಲ್ಲಿ ಶಂಕಿತನ ವಿಚಾರಣೆ, ಯಾರು ಈ ಮುಜಾಯುದ್ದೀನ್?

ದೆಹಲಿಯ ಕೆಂಪುಕೋಟೆ ಬಳಿಯ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರಿನ ಮುಜಾಯುದ್ದೀನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಿಂದೆ 'ಕಲಿಫತ್' ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಈತನಿಗೆ, ಪ್ರಸ್ತುತ ಸ್ಫೋಟ ಸಂಬಂಧ ವಿಚಾರಣೆ ನಡೆಸಿ ಬಿಟ್ಟುಕಳಿಸಲಾಗಿದೆ.

Read Full Story

04:56 PM (IST) Nov 13

ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಮುಸ್ಲಿಮರು - ಕ್ಷೇತ್ರದ ಅಪಪ್ರಚಾರ ಮಾಡ್ತಿರೋರಿಗೆ ತನ್ವೀರ್​ ಹೇಳಿದ್ದೇನು?

ಧರ್ಮಸ್ಥಳದ ಕುರಿತ ಅಪಪ್ರಚಾರಗಳ ನಡುವೆಯೂ, ಧರ್ಮಭೇದವಿಲ್ಲದೆ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ, ತನ್ವೀರ್ ಅಹಮ್ಮದ್ ನೇತೃತ್ವದ ಮುಸ್ಲಿಂ ತಂಡವೊಂದು ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ಭೇಟಿ ನೀಡಿ, ಇದು ಸರ್ವಧರ್ಮೀಯರ ಕ್ಷೇತ್ರ ಎಂದು ಸಾರಿದೆ.
Read Full Story

04:16 PM (IST) Nov 13

ಕೋರ್ಟ್ ತೀರ್ಪಿಗೂ ಮುನ್ನ RSS ಪಥಸಂಚಲನಕ್ಕೆ ಅವಕಾಶ ಕೊಟ್ಟಿದ್ದ ಚಿತ್ತಾಪುರ ತಹಶಿಲ್ದಾರ್

ನಿರ್ಧಾರ ಬದಲು, ಕೋರ್ಟ್ ತೀರ್ಪಿಗೂ ಮುನ್ನ RSS ಪಥಸಂಚಲನಕ್ಕೆ ಅವಕಾಶ ಕೊಟ್ಟಿದ್ದ ಚಿತ್ತಾಪುರ ತಹಶಿಲ್ದಾರ್ ಪತ್ರ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಕಳೆದ ಒಂದು ತಿಂಗಳಿನಿಂದ ಅವಕಾಶ ನಿರಾಕರಿಸಿದ್ದ ತಹಶಿಲ್ದಾರ್ ಕೋರ್ಟ್ ತೀರ್ಪಿಗೂ ಮೊದಲೇ ಗ್ರೀನ್ ಸಿಗ್ನಲ್.

Read Full Story

03:33 PM (IST) Nov 13

ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಎಡವಟ್ಟಿಗೆ 1 ಲಕ್ಷ ಕೋಟಿ ರೂ ಬೇರೊಂದು ಖಾತೆಗೆ ಟ್ರಾನ್ಸ್‌ಫರ್

ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಎಡವಟ್ಟಿಗೆ 1 ಲಕ್ಷ ಕೋಟಿ ರೂ ಬೇರೊಂದು ಖಾತೆಗೆ ಟ್ರಾನ್ಸ್‌ಫರ್ ಮಾಡಿದ ಘಟನೆ ನಡೆದಿದೆ. ಕರ್ನಾಕ ಬ್ಯಾಂಕ್‌ನ ಒಟ್ಟು ಠೇವಣಿ ಮೊತ್ತ. 1.4 ಲಕ್ಷ ಕೋಟಿ ರೂಪಾಯಿ. ಕಣ್ತಪ್ಪಿನಿಂದ ಆದ ತಪ್ಪಿಗೆ ಬ್ಯಾಂಕ್ ಖಾಲಿಯಾಗಿದೆ.

Read Full Story

03:10 PM (IST) Nov 13

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ, ಕಂಡೀಷನ್ ಅಪ್ಲೈ

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ, ಕಂಡೀಷನ್ ಅಪ್ಲೈ,  ಆದರೆ ಕೆಲ ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ. ಬ್ಯಾಂಡ್ ಸಿಬ್ಬಂದಿ, ಸ್ವಯಂ ಸೇವಕರ ಒಟ್ಟು ಸಂಖ್ಯೆ ಸೇರಿದಂತೆ ಕೆಲ ವಿಚಾರದಲ್ಲಿ ಷರತ್ತು ವಿಧಿಸಲಾಗಿದೆ.

 

Read Full Story

03:07 PM (IST) Nov 13

Bigg Boss ಕನ್ನಡದವ್ರೂ ಕಮ್ಮಿ ಇಲ್ಲ ಕಣ್ರಿ! ಮಹಿಳೆಯರ ಮಾರಾಮಾರಿ - ಭಯದಿಂದ ಬೆವರಿದ ಪುರುಷರು!

ಬಿಗ್​ಬಾಸ್​ ರಿಯಾಲಿಟಿ ಷೋನಲ್ಲಿ ಜಗಳಗಳು ಸಾಮಾನ್ಯ, ಆದರೆ ಇದೀಗ ಕನ್ನಡ ಬಿಗ್​ಬಾಸ್​ನ ಹೊಸ ಪ್ರೊಮೋದಲ್ಲಿ ಮಹಿಳಾ ಸ್ಪರ್ಧಿಗಳು ಮಾರಾಮಾರಿ ಮಾಡಿಕೊಂಡಿದ್ದಾರೆ. ಅಚ್ಚರಿಯೆಂದರೆ, ಸದಾ ಜಗಳದಿಂದಲೇ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ಅವರೇ ಈ ಜಗಳವನ್ನು ತಡೆಯಲು ಬಂದಿದ್ದಾರೆ.
Read Full Story

01:59 PM (IST) Nov 13

ಕನ್ನಡದಲ್ಲಿ ನೋಡಿದರೆ ಚೆನ್ನಾಗಿ ಅರ್ಥ ಆಗುತ್ತದೆ - Koragajja ಚಿತ್ರದ ಬಗ್ಗೆ ನಟಿ ಶ್ರುತಿ ಹೇಳಿದ್ದೇನು?

ಸುಧೀರ್‌ ಅತ್ತಾವರ್‌ ನಿರ್ದೇಶನದ ‘ಕೊರಗಜ್ಜ’ ಚಿತ್ರದ ಆಡಿಯೋ ಬಿಡುಗಡೆ ಜೊತೆಗೆ ಅದ್ದೂರಿಯಾಗಿ ಕೊರಗಜ್ಜನ ಕೋಲ ಸೇವೆಯೂ ನಡೆಯಿತು. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಿಯೋ ಬಿಡುಗಡೆ ನಂತರ ಕೋಲ ಸೇವೆ ನಡೆಯಿತು.

Read Full Story

01:43 PM (IST) Nov 13

Bigg Boss ಮನೆಯಲ್ಲಿ ಲವ್​ ಬ್ರೇಕಪ್​! ಗಿಲ್ಲಿ-ಕಾವ್ಯಾ ಮಧ್ಯೆ ಭಾರಿ ಬಿರುಕು - ಹೊರ ಹೋಗೇಬಿಟ್ರಲ್ಲ ಕಾವು!

ಬಿಗ್​ಬಾಸ್​ ಮನೆಯಲ್ಲಿ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಗಿಲ್ಲಿ ಅವರು 'ಕಾವು ಕಾವು' ಎಂದು ರೇಗಿಸುವುದನ್ನು ನಿಲ್ಲಿಸುವಂತೆ ಕಾವ್ಯಾ ಹೇಳಿದ್ದು, ಇದು ಇಬ್ಬರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿ ಸ್ನೇಹ ಮುರಿಯುವ ಹಂತ ತಲುಪಿದೆ.
Read Full Story

01:28 PM (IST) Nov 13

Trending ಆದ ನೀಲಿ ಸೀರೆ ಸುಂದರಿ ಮರಾಠಿ ನಟಿ ಗಿರಿಜಾ ಓಕ್‌ - ಸಿಡ್ನಿ ಸ್ವೀನಿ, ಮೋನಿಕಾ ಬೆಲ್ಲೂಚಿ ಜೊತೆ ಹೋಲಿಕೆ!

ಮೂಲತಃ ಮರಾಠಿ ಸಿನಿಮಾ ರಂಗದ ಪ್ರಮುಖ ನಟಿ ಗಿರಿಜಾ ಓಕ್. ಮಹಾರಾಷ್ಟ್ರ ಮೂಲದ ಚೆಲುವೆ ಮರಾಠಿ ಹಾಗೂ ಹಿಂದಿ ಸಿನಿಮಾ, ವೆಬ್ ಸೀರಿಸ್‌ಗಳಲ್ಲಿ ಅಭಿನಯಿಸಿದ್ದಾರೆ. ಹಿಂದಿ ಚಿತ್ರವಾದ 'ಶೋರ್ ಇನ್ ದಿ ಸಿಟಿ'ಯಲ್ಲಿ ಅವರ ಪಾತ್ರ ಗಮನಾರ್ಹವಾಗಿತ್ತು.

Read Full Story

01:27 PM (IST) Nov 13

IAS ಕನಸು - ಮದುವೆಗೆ ಮುಂದಾದ ತಂದೆ - ಮನೆಬಿಟ್ಟು ಹೋದ ಬಾಲೆ - ತಂದೆಯಿಂದ ಹೇಬಿಯಸ್ ಕಾರ್ಪಸ್ ಅರ್ಜಿ

girl leaves home for ias dream: ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಮಧ್ಯಪ್ರದೇಶದ ಯುವತಿಯೊಬ್ಬಳು, ಪೋಷಕರು ಮದುವೆಗೆ ಒತ್ತಾಯಿಸಿದ್ದರಿಂದ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ತಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

Read Full Story

01:09 PM (IST) Nov 13

ಡಿವೋರ್ಸ್ ನಂತ್ರ ಸಾನಿಯಾ ಮಿರ್ಜಾಗೆ ಕಾಡಿತ್ತು ಪ್ಯಾನಿಕ್ ಅಟ್ಯಾಕ್ ! ಆ ದಿನ ನೆನಪು ಮಾಡ್ಕೊಂಡ ಟೆನಿಸ್ ತಾರೆ

ಭಾರತದ ಪ್ರಸಿದ್ಧ ಟೆನಿಸ್ ತಾರೆ ಸಾನಿಯಾ ಮಿರ್ಜಾ, ತಮ್ಮ ಕಷ್ಟದ ದಿನಗಳನ್ನು ಬಹಿರಂಗಪಡಿಸಿದ್ದಾರೆ. ಡಿವೋರ್ಸ್ ನಂತ್ರ ಏನೆಲ್ಲ ಆಯ್ತು, ಸಹಾಯಕ್ಕೆ ಬಂದವರು ಯಾರು ಎಂಬುದನ್ನು ತಮ್ಮ ಯೂಟ್ಯೂಬ್ ಚಾನೆಲ್ನ ಮೊದಲ ಎಪಿಸೋಡ್ ನಲ್ಲಿ ಬಹಿರಂಗಪಡಿಸಿದ್ದಾರೆ.

Read Full Story

12:19 PM (IST) Nov 13

ದರ್ಶನ್​ ಸಿನಿಮಾದಲ್ಲಿ ಕೆಟ್ಟದ್ದಾಗಿ ನೋಡಿದ್ರು, ಬಟ್ಟೆ ಹಾಕಲೂ ಬಿಡಲಿಲ್ಲ - ಆ ದಿನಗಳ ನೆನೆದ Bigg Boss ಡಾಗ್​ ಸತೀಶ್​

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, 2001ರಲ್ಲಿ ತೆರೆಕಂಡ 'ದರ್ಶನ್' ಚಿತ್ರದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ತಮಗೆ ಕೆಟ್ಟದಾಗಿ ಮೇಕಪ್ ಮಾಡಿ ಅವಮಾನಿಸಲಾಯಿತು ಮತ್ತು ಇದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಪಾತ್ರವನ್ನು ಅರ್ಧಕ್ಕೆ ಸಾಯಿಸಲಾಯಿತು ಎಂದು ನಟ  ಆರೋಪಿಸಿದ್ದಾರೆ.

Read Full Story

11:25 AM (IST) Nov 13

ರಚಿತಾ ರಾಮ್‌ ನಂತರ ಮೇಘನಾ ರಾಜ್‌ ಸರದಿ - ರಜನಿಕಾಂತ್‌ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಮುಖ್ಯ ಪಾತ್ರ!

‘ಜೈಲರ್‌ 2’ ಚಿತ್ರದಲ್ಲಿ ನಟಿ ಮೇಘನಾ ರಾಜ್‌ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಮೇಘನಾ ರಾಜ್‌ ಅವರು ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದೆ.

Read Full Story

10:53 AM (IST) Nov 13

ಸೀರೆಯುಟ್ಟು ಕೈಯಲ್ಲಿ ಗನ್ ಹಿಡಿದು ಬಂದ ಪ್ರಿಯಾಂಕಾ ಚೋಪ್ರಾ - ಹೆಸರಿನಲ್ಲೇ ಕಥೆ ಹೇಳಿದ ರಾಜಮೌಳಿ

ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ `ಗ್ಲೋಬ್ ಟ್ರೋಟರ್` ಚಿತ್ರದಿಂದ ಪ್ರಿಯಾಂಕಾ ಚೋಪ್ರಾ ಪಾತ್ರದ ಫಸ್ಟ್ ಲುಕ್ ಬಂದಿದೆ. ಅವರ ಹೆಸರಿನಲ್ಲೇ ರಾಜಮೌಳಿ ಅಸಲಿ ಕಥೆ ಹೇಳಿದ್ದಾರೆ.

Read Full Story

10:31 AM (IST) Nov 13

ಜನರ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲು ಆಗುವುದಿಲ್ಲ - ಸಚಿವ ಕೃಷ್ಣ ಭೈರೇಗೌಡ

ಜನರ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲು ಆಗುವುದಿಲ್ಲ. ಆದರೆ ಯಾವುದನ್ನು ಬಗೆಹರಿಸಲು ಸಾಧ್ಯತೆ ಇದೆಯೋ ಅದನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

Read Full Story

10:06 AM (IST) Nov 13

ನನ್ನ ಲೈಫ್‌ನಲ್ಲಿ ವಿಜಯ್ ದೇವರಕೊಂಡ ಇರೋದು ಒಂದು ವರ - ಭಾವುಕರಾದ ರಶ್ಮಿಕಾ ಮಂದಣ್ಣ

ಪ್ರತಿಯೊಬ್ಬರ ಲೈಫ್‌ನಲ್ಲೂ ವಿಜಯ್ ದೇವರಕೊಂಡ ಅವರಂತಹ ವ್ಯಕ್ತಿ ಇರುವುದು ಒಂದು ವರ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 'ದಿ ಗರ್ಲ್‌ಫ್ರೆಂಡ್' ಸಕ್ಸಸ್ ಇವೆಂಟ್‌ನಲ್ಲಿ ವಿಜಯ್ ಆಕೆಯ ಕೈಗೆ ಕಿಸ್ ಮಾಡಿದ್ದು ಹೈಲೈಟ್ ಆಗಿತ್ತು.

Read Full Story

09:59 AM (IST) Nov 13

ಬೆಂಗಳೂರು 2ನೇ ದೆಹಲಿ ಆಗುವುದು ಸನ್ನಿಹಿತ!

ಇತ್ತೀಚಿನ ದಿನಗಳಲ್ಲಿ ವಲಸಿಗರ ಸ್ವರ್ಗವಾಗುತ್ತಿರುವ ಬೆಂಗಳೂರು ಸಹ ವಾಯು ಮಾಲಿನ್ಯದಲ್ಲಿ 2ನೇ ದೆಹಲಿ ಆಗುತ್ತಿದ್ದು, ನಗರದ ಹಲವೆಡೆ ವಾಯು ಗುಣಮಟ್ಟ ಹದಗೆಡತೊಡಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ-ಅಂಶಗಳು.

Read Full Story

09:58 AM (IST) Nov 13

ಕಳೆದ 3 ತಿಂಗಳಿಂದ ಆರ್‌ಟಿಒದಿಂದ ಎನ್‌ಒಸಿ ಸ್ಥಗಿತ - ಮರು ನೋಂದಣಿ ಆಗದೇ ವಾಹನ ಮಾರಿದವರಿಗೆ ಸಂಕಷ್ಟ

Karnataka RTO NOC delay: ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ಆರ್‌ಟಿಒ ಅಧಿಕಾರಿಗಳು ವಾಹನಗಳ ಮರು ನೋಂದಣಿಗೆ ಎನ್‌ಒಸಿ ನೀಡುತ್ತಿಲ್ಲ. ಇದರಿಂದಾಗಿ, ವಾಹನಗಳನ್ನು ಮಾರಾಟ ಮಾಡಿದ ಮಾಲೀಕರು ಮಾಲೀಕತ್ವವನ್ನು ವರ್ಗಾಯಿಸಲು ಸಾಧ್ಯವಾಗದೆ, ಸಂಭವನೀಯ ಕಾನೂನು ಅಪಾಯಗಳನ್ನು ಎದುರಿಸುತ್ತಿದ್ದಾರೆ. 

Read Full Story

09:50 AM (IST) Nov 13

ಹುಲಿ ದಾಳಿ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಕ್ಯಾಮೆರಾ ಅಳವಡಿಸಿ - ಸಚಿವ ಈಶ್ವರ್‌ ಖಂಡ್ರೆ

ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪದೇಪದೆ ಹುಲಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚುವರಿ ಕ್ಯಾಮೆರಾ ಅಳವಡಿಸಿ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದ್ದಾರೆ.

Read Full Story

09:28 AM (IST) Nov 13

ಇದು ಮುಂದಿನ ಪೀಳಿಗೆಯ ಯೋಜನೆ - ಟನಲ್‌ ರಸ್ತೆ ವಿರೋಧಿಸಿದ ಬಿಜೆಪಿಗೆ ಡಿಕೆಶಿ ಕೌಂಟರ್

ಬಿಜೆಪಿ ಕರ್ನಾಟಕ ಅಭಿವೃದ್ಧಿಗೆ ವಿರೋಧಿ ಪಕ್ಷವಾಗಿದ್ದು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡರೂ ಅದನ್ನು ವಿರೋಧಿಸುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

 

Read Full Story

09:11 AM (IST) Nov 13

ಏರ್‌ಪೋರ್ಟ್‌ನಿಂದ ದಾವಣಗೆರೆಗೆ ನೇರ ಫ್ಲೈಬಸ್‌ ಶುರು

ಮೈಸೂರು, ಮಡಿಕೇರಿ, ಕುಂದಾಪುರದ ಬಳಿಕ ಇದೀಗ ದಾವಣಗೆರೆಗೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರ ಫ್ಲೈಬಸ್‌ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬುಧವಾರ ಚಾಲನೆ ನೀಡಿದರು.

Read Full Story

09:01 AM (IST) Nov 13

ಒಂದು ದಿನದ ಮಟ್ಟಿಗೆ ನೀವೂ ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಆಗ್ತೀರಾ?

 ಸಾರ್ವಜನಿಕರಿಗೆ ಒಂದು ದಿನದ ಮಟ್ಟಿಗೆ ಟ್ರಾಫಿಕ್‌ ಪೊಲೀಸ್‌ ಆಗುವ ಸುವರ್ಣ ಅವಕಾಶವನ್ನು ನಗರದ ಸಂಚಾರ ಪೊಲೀಸರು ಕಲ್ಪಿಸಿದ್ದಾರೆ.

18 ವರ್ಷ ಮೇಲ್ಪಟ್ಟವರು ಮತ್ತು ದೈಹಿಕವಾಗಿ ಫಿಟ್‌ ಆಗಿ ಇರುವವರು ಯಾರು ಬೇಕಾದರೂ ಒಂದು ದಿನದ ಮಟ್ಟಿಗೆ ಸಂಚಾರ ಪೊಲೀಸ್‌ ಆಗಿ ಕರ್ತವ್ಯ ನಿರ್ವಹಿಸಬಹುದಾಗಿದೆ.

Read Full Story

More Trending News