- Home
- Entertainment
- Cine World
- Rachita Ram ನಂತರ ಮೇಘನಾ ರಾಜ್ ಸರದಿ: Rajinikanth ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮುಖ್ಯ ಪಾತ್ರ!
Rachita Ram ನಂತರ ಮೇಘನಾ ರಾಜ್ ಸರದಿ: Rajinikanth ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮುಖ್ಯ ಪಾತ್ರ!
‘ಜೈಲರ್ 2’ ಚಿತ್ರದಲ್ಲಿ ನಟಿ ಮೇಘನಾ ರಾಜ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಮೇಘನಾ ರಾಜ್ ಅವರು ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದೆ.

ಮುಖ್ಯ ಪಾತ್ರದಲ್ಲಿ ಮೇಘನಾ ರಾಜ್
ರಜನಿಕಾಂತ್ ನಟನೆಯ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದಲ್ಲಿ ನಟಿ ಮೇಘನಾ ರಾಜ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಮೇಘನಾ ರಾಜ್ ಅವರು ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದೆ.
ಈಗ ಮೇಘನಾ ರಾಜ್ ಸರದಿ
ಸದ್ಯ ಅವರ ಪಾತ್ರ ಯಾವುದು ಎನ್ನುವುದು ತಿಳಿದುಬಂದಿಲ್ಲ. ‘ಕೂಲಿ’ ಚಿತ್ರದ ಮೂಲಕ ರಚಿತಾ ರಾಮ್ ಅವರು ರಜನಿಕಾಂತ್ ಅವರ ಜೊತೆಗೆ ನಟಿಸಿದ್ದರು. ಈಗ ಮೇಘನಾ ರಾಜ್ ಸರದಿ.
ಒಟ್ಟಕೊಂಬನ್ ಚಿತ್ರದಲ್ಲಿಯೂ ಮೇಘನಾ
ಮ್ಯಾಥ್ಯೂಸ್ ಥಾಮಸ್ ನಿರ್ದೇಶನದ, ಸುರೇಶ್ ಗೋಪಿ ನಟನೆಯ ಮಲಯಾಳಂ ಸಿನಿಮಾ ‘ಒಟ್ಟಕೊಂಬನ್’ ಚಿತ್ರದಲ್ಲಿಯೂ ಅವರು ನಟಿಸುತ್ತಿದ್ದಾರೆ. ಇದು ನಿರ್ಮಾಣ ಹಂತದಲ್ಲಿದೆ.
ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಚಿತ್ರ
ಕನ್ನಡದಲ್ಲಿ ಮೇಘನಾ ರಾಜ್ ನಟಿಸಿರುವ ‘ಬುದ್ಧಿವಂತ 2’ ಚಿತ್ರ ತೆರೆಗೆ ಬರಬೇಕಿದೆ. ಇದರ ನಡುವೆ ಶ್ರೀನಗರ ಕಿಟ್ಟಿ ಜೊತೆಗೆ ‘ಅಮರ್ತ’ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ‘ಜೈಲರ್ 2’ ಮೂಲಕ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಚಿತ್ರಕ್ಕೆ ಮೇಘನಾ ಜೊತೆಯಾಗುತ್ತಿದ್ದಾರೆ.
ನರಸಿಂಹ ಪಾತ್ರದಲ್ಲಿ ಶಿವಣ್ಣ
ಇನ್ನು ಜೈಲರ್-2 ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಅಭಿನಯಿಸಿದ್ದಾರೆ. ಮೊದಲ ಭಾಗದಲ್ಲಿ ನರಸಿಂಹ ಅನ್ನೋ ಪಾತ್ರವನ್ನೆ ಶಿವಣ್ಣ ಮಾಡಿದ್ದರು. ಆ ಪಾತ್ರವೇ ಇಲ್ಲೂ ಮುಂದುವರೆದಿದೆ.