ಭಾರತದ ಪ್ರಸಿದ್ಧ ಟೆನಿಸ್ ತಾರೆ ಸಾನಿಯಾ ಮಿರ್ಜಾ, ತಮ್ಮ ಕಷ್ಟದ ದಿನಗಳನ್ನು ಬಹಿರಂಗಪಡಿಸಿದ್ದಾರೆ. ಡಿವೋರ್ಸ್ ನಂತ್ರ ಏನೆಲ್ಲ ಆಯ್ತು, ಸಹಾಯಕ್ಕೆ ಬಂದವರು ಯಾರು ಎಂಬುದನ್ನು ತಮ್ಮ ಯೂಟ್ಯೂಬ್ ಚಾನೆಲ್ನ ಮೊದಲ ಎಪಿಸೋಡ್ ನಲ್ಲಿ ಬಹಿರಂಗಪಡಿಸಿದ್ದಾರೆ.
ಈಗಿನ ದಿನಗಳಲ್ಲಿ ಡಿವೋರ್ಸ್ (Divorce) ಎಷ್ಟೇ ಕಾಮನ್ ಆಗಿದ್ರೂ ವಿಚ್ಛೇದನದ ನಂತ್ರ ಜೀವನವನ್ನು ಎದುರಿಸೋದು ಸುಲಭದ ಮಾತಲ್ಲ. ಸಿಂಗಲ್ ಪೇರೆಂಟ್ ಆಗಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಮಾಜದ ಮುಂದೆ ಧೈರ್ಯವಾಗಿದ್ದೇನೆ ಅಂತ ತೋರಿಸುವ ಪ್ರಯತ್ನ ನಡೆಸಿದ್ರೂ ಮನಸ್ಸೊಳಗೆ ಅದೆಷ್ಟೋ ಸವಾಲು, ಪ್ರಶ್ನೆ, ಆತಂಕ ಕಾಡ್ತಿರುತ್ತದೆ. ಇದಕ್ಕೆ ಟೆನಿಸ್ ಮಾಜಿ ಆಟಗಾರ್ತಿ ಸಾನಿಯಾ ಮಿರ್ಜಾ (Sania Mirza) ಹೊರತಾಗಿಲ್ಲ. ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ಜೊತೆ ಡಿವೋರ್ಸ್ ಆದ್ಮೇಲೆ ಸಾನಿಯಾ ಮಿರ್ಜಾ ಪ್ಯಾನಿಕ್ ಅಟ್ಯಾಕ್ ಗೆ ಒಳಗಾಗಿದ್ರು. ಅವರು ಡಿಪ್ರೆಶನ್ ಗೆ ಹೋಗಿದ್ರು. ಈ ಎಲ್ಲ ವಿಷ್ಯವನ್ನು ಫ್ಯಾನ್ಸ್ ಮುಂದೆ ಬಿಚ್ಚಿಟ್ಟ ಸಾನಿಯಾ ಮಿರ್ಜಾ, ಇದ್ರಿಂದ ಹೊರ ಬರಲು ಸಹಾಯ ಮಾಡಿದ್ದು ಯಾರು ಎಂಬುದನ್ನು ತಿಳಿಸಿದ್ದಾರೆ.
ಡಿವೋರ್ಸ್ ನಂತ್ರ ಸಾನಿಯಾ ಮಿರ್ಜಾಗೆ ಕಾಡ್ತಿತ್ತು ಪ್ಯಾನಿಕ್ ಅಟ್ಯಾಕ್ :
ಭಾರತದ ಪ್ರಸಿದ್ಧ ಟೆನಿಸ್ ತಾರೆ ಸಾನಿಯಾ ಮಿರ್ಜಾ, ವಾದ- ವಿರೋಧಗಳ ಮಧ್ಯೆಯೇ ಪಾಕಿಸ್ತಾನದ ಆಟಗಾರ ಶೋಯೆಬ್ ಮಲ್ಲಿಕ್ ಅವರನ್ನು 2010ರಲ್ಲಿ ಮದುವೆ ಆದ್ರು. 2018 ರಲ್ಲಿ ಸಾನಿಯಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೊದಲೇ ವಿಚ್ಛೇದಿತ ಶೋಯೆಬ್ ಮಲ್ಲಿಕ್, ಸಾನಿಯಾ ಮಿರ್ಜಾರಿಂದ ದೂರವಾದ್ರು. 2024ರಲ್ಲಿ ಶೋಯೆಬ್ ಪಾಕ್ ನಟಿ ಕೈ ಹಿಡಿದಿದ್ದಾರೆ. ಶೋಯೆಬ್ ರಿಂದ ದೂರವಾದ ಸಾನಿಯಾಗೆ ಆ ದಿನಗಳನ್ನು ಎದುರಿಸೋದು ಸವಾಲಾಗಿತ್ತು. ಪ್ಯಾನಿಕ್ ಅಟ್ಯಾಕ್, ಒತ್ತಡಕ್ಕೆ ಒಳಗಾಗಿದ್ದ ಅವರಿಗೆ ಧೈರ್ಯ ತುಂಬಿದ್ದು ಬಾಲಿವುಡ್ ನಿರ್ದೇಶಕಿ ಫರಾ ಖಾನ್.
ರಾಜಸ್ಥಾನ ರಾಯಲ್ಸ್ ಸೇರುವ ಮುನ್ನವೇ ಫ್ರಾಂಚೈಸಿ ಬಳಿ ಹೊಸ ಡಿಮ್ಯಾಂಡ್ ಇಟ್ಟ ರವೀಂದ್ರ ಜಡೇಜಾ!
ಸಾನಿಯಾ ಮಿರ್ಜಾ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಸರ್ವಿಂಗ್ ಇಟ್ ಅಪ್ ವಿತ್ ಸಾನಿಯಾ ಕಾರ್ಯಕ್ರಮದ ಮೊದಲ ಶೋನಲ್ಲಿ ತಮ್ಮ ಕಷ್ಟದ ದಿನಗಳು, ಫರಾ ಖಾನ್ ಸಹಾಯದ ಬಗ್ಗೆ ಸಾನಿಯಾ ಮಾತನಾಡಿದ್ದಾರೆ. ಡಿವೋರ್ಸ್ ನಂತ್ರ ಸಾನಿಯಾ ಮಿರ್ಜಾ ಅವರು ಒಂದು ಲೈವ್ ಶೋನಲ್ಲಿ ಪಾಲ್ಗೊಳ್ಳಬೇಕಿತ್ತು. ಆದ್ರೆ ಕ್ಯಾಮರಾ ಎದುರಿಸಲು ಅವರು ನಡುಗುತ್ತಿದ್ದರು. ಈ ವೇಳೆ ತಮ್ಮೆಲ್ಲ ಕೆಲ್ಸ ಬಿಟ್ಟು ಸಾನಿಯಾ ಬಳಿ ಬಂದ ಫರಾ ಖಾನ್, ಧೈರ್ಯ ಹೇಳಿದ್ದರು. ಅವರಿಲ್ಲದೆ ಹೋಗಿದ್ರೆ ನಾನು ಲೈವ್ ಶೋನಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ ಎಂದು ಸಾನಿಯಾ ಹೇಳಿದ್ದಾರೆ.
ಸಾನಿಯಾ ಬಗ್ಗೆ ಫರಾ ಖಾನ್ ಹೇಳಿದ್ದೇನು? :
ಆ ದಿನವನ್ನು ನೆನಪು ಮಾಡ್ಕೊಂಡ ಫರಾ ಖಾನ್, ನಾನು ತುಂಬಾ ಹೆದರಿದ್ದೆ. ಶೂಟಿಂಗ್ ಬಿಟ್ಟು ಸಾನಿಯಾ ಮನೆಗೆ ಬಂದಿದ್ದೆ ಎಂದಿದ್ದಾರೆ. ಸಿಂಗಲ್ ಮದರ್ ಆಗಿರುವ ಸಾನಿಯಾ ಕೆಲ್ಸವನ್ನು ಫರಾ ಖಾನ್ ಮೆಚ್ಚಿಕೊಂಡಿದ್ದಾರೆ. ಸಿಂಗಲ್ ಪೇರೆಂಟಿಂಗ್ ನಲ್ಲಿ ನೀವು ಕೆಲ್ಸ ಮಾಡ್ಬೇಕು, ಮಕ್ಕಳನ್ನು ಬೆಳೆಸಬೇಕು, ಅವರಿಗೆ ಸಮಯ ನೀಡ್ಬೇಕು, ಇದಕ್ಕೆ ಎರಡು ಪಟ್ಟು ಶ್ರಮ ಅಗತ್ಯ. ಎಲ್ಲ ಕೆಲ್ಸವನ್ನು ನೀವು ಸರಿಯಾಗಿ ನಿಭಾಯಿಸ್ತಿದ್ದೀರಿ ಅಂತ ಫರಾ ಖಾನ್, ಸಾನಿಯಾ ಅವರನ್ನು ಹೊಗಳಿದ್ದಾರೆ.
ಭಾರತದ ಕ್ರಿಕೆಟ್ ಕ್ರಶ್ ಸ್ಮೃತಿ ಮಂಧನಾಗೆ ಈ ಕನ್ನಡ ಫೇಮಸ್ ಹಾಡು ಅಂದ್ರೆ ಪಂಚಪ್ರಾಣವಂತೆ!
ಪ್ಯಾನಿಕ್ ಅಟ್ಯಾಕ್ ಅಂದ್ರೇನು? :
ಇಂದಿನ ದಿನದಲ್ಲಿ ಮಾನಸಿಕ ಆರೋಗ್ಯ ಬಹಳ ಮುಖ್ಯ. ಡಿವೋರ್ಸ್, ಒಂಟಿತನ, ಜವಾಬ್ದಾರಿಗಳ ಹೊರೆ ಮತ್ತು ಸಾಮಾಜಿಕ ಒತ್ತಡ ಮಾನಸಿಕ ಆರೋಗ್ಯಕ್ಕೆ ಧಕ್ಕೆ ತರಬಹುದು. ಪ್ಯಾನಿಕ್ ಅಟ್ಯಾಕ್ ಎಂದರೆ ಭಯ ಅಥವಾ ಆತಂಕ. ಇದು ಹಠಾತ್ ಕಾಡುತ್ತದೆ. ವ್ಯಕ್ತಿ ಏನೋ ತಪ್ಪು ಮಾಡಿದ್ದೇನೆ ಎಂಬ ಭಾವನೆಗೆ ಒಳಗಾಗ್ತಾನೆ. ಹೃದಯ ಬಡಿತ ವೇಗವಾಗುತ್ತದೆ. ಉಸಿರಾಟದಲ್ಲಿ ತೊಂದರೆಯಾಗುತ್ತದೆ. ವಿಪರೀತ ಬೆವರು, ನಡುಕ ಕಾಡುತ್ತದೆ. ಅನೇಕ ಬಾರಿ ಪ್ರಜ್ಞೆ ತಪ್ಪಿದಂತೆ ಭಾಸವಾಗುತ್ತದೆ. ಸಾಮಾನ್ಯವಾಗಿ 10 ರಿಂದ 20 ನಿಮಿಷಗಳವರೆಗೆ ಇದು ವ್ಯಕ್ತಿಯನ್ನು ಕಾಡುತ್ತದೆ.
