- Home
- Entertainment
- TV Talk
- Bigg Boss ಕನ್ನಡದವ್ರೂ ಕಮ್ಮಿ ಇಲ್ಲ ಕಣ್ರಿ! ಮಹಿಳೆಯರ ಮಾರಾಮಾರಿ: ಭಯದಿಂದ ಬೆವರಿದ ಪುರುಷರು!
Bigg Boss ಕನ್ನಡದವ್ರೂ ಕಮ್ಮಿ ಇಲ್ಲ ಕಣ್ರಿ! ಮಹಿಳೆಯರ ಮಾರಾಮಾರಿ: ಭಯದಿಂದ ಬೆವರಿದ ಪುರುಷರು!
ಬಿಗ್ಬಾಸ್ ರಿಯಾಲಿಟಿ ಷೋನಲ್ಲಿ ಜಗಳಗಳು ಸಾಮಾನ್ಯ, ಆದರೆ ಇದೀಗ ಕನ್ನಡ ಬಿಗ್ಬಾಸ್ನ ಹೊಸ ಪ್ರೊಮೋದಲ್ಲಿ ಮಹಿಳಾ ಸ್ಪರ್ಧಿಗಳು ಮಾರಾಮಾರಿ ಮಾಡಿಕೊಂಡಿದ್ದಾರೆ. ಅಚ್ಚರಿಯೆಂದರೆ, ಸದಾ ಜಗಳದಿಂದಲೇ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ಅವರೇ ಈ ಜಗಳವನ್ನು ತಡೆಯಲು ಬಂದಿದ್ದಾರೆ.

ಬಿಗ್ಬಾಸ್ ಪ್ರಿಯರು- ಕಿಡಿ ಕಾರುವವರು!
ಬಿಗ್ಬಾಸ್ (Bigg Boss) ಎನ್ನೋದು ಯಾವ ರೀತಿಯ ಷೋ ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದದ್ದೇ. ಈ ಷೋನಲ್ಲಿ ಹೀಗೆಯೇ ಇರುತ್ತದೆ ಎಂದು ಅದನ್ನು ಖುಷಿಯಿಂದ ಎಂಜಾಯ್ ಮಾಡುವ ವರ್ಗ ಒಂದೆಡೆಯಾದರೆ, ಅದು ಹೀಗೆಯೇ ಇರುತ್ತದೆ ಎನ್ನುವ ಕಾರಣಕ್ಕಾಗಿಯೇ ಇದನ್ನು ನೋಡದ ವರ್ಗವೂ ಅಷ್ಟೇ ಪ್ರಮಾಣದಲ್ಲಿ ಇದೆ. ಕೆಲವರಿಗೆ ಇದೇ ಖುಷಿ, ಮತ್ತೆ ಕೆಲವರಿಗೆ ಇದೇ ಅಸಹ್ಯ, ಅಸಭ್ಯ!
ಎಲ್ಲ ಬಿಗ್ಬಾಸ್ ಕಥೆ
ಒಟ್ಟಿನಲ್ಲಿ ಮಾರಾಮಾರಿ, ಗಲಾಟೆ, ಕಿರುಚಾಟ, ಅಶ್ಲೀಲತೆ, ಲವ್... ಎಲ್ಲವೂ ಎಲ್ಲಾ ಭಾಷೆಗಳ ಬಿಗ್ಬಾಸ್ನಲ್ಲಿ ರಾರಾಜಿಸುವುದು ಇದ್ದೇ ಇದೆ. ಕೆಲವೊಂದು ಭಾಷೆಯ ಬಿಗ್ಬಾಸ್ನಲ್ಲಿ ಸ್ಪರ್ಧಿಗಳ ಬೆಡ್ರೂಮ್ ದೃಶ್ಯಗಳನ್ನೂ, ಅಲ್ಲಿ ಅವರ ರೊಮಾನ್ಸ್ ಅನ್ನೂ ತೋರಿಸಿದ್ದು ಇದೆ. ಅದನ್ನು ಬೈದುಕೊಳ್ಳುತ್ತಲೇ ಅದನ್ನು ಎಂಜಾಯ್ ಮಾಡಿ ಟಿಆರ್ಪಿ ಏರಿಸಿರುವ ಘಟನೆಗಳೂ ನಡೆದಿವೆ.
ಮುಗ್ಧರಾಗಿದ್ರೆ ಜಾಗ ಇಲ್ಲ!
ಜೀವನದಲ್ಲಿಯೂ ಸಪ್ಪಗಿದ್ದು, ಇಂಥ ರಿಯಾಲಿಟಿ ಷೋನಲ್ಲಿಯೂ ಎಲ್ಲರೂ ಒಳ್ಳೆಯವರಾಗಿಯೇ ಸೀದಾ ಸಾದಾ ಆಗಿ ಬಿಟ್ಟರೆ ರುಚಿಸುವುದಾದರೂ ಹೇಗೆ ಅಲ್ವಾ? ಪಾಪ ಮಲ್ಲಮ್ಮನಂಥ ಮುಗ್ಧರ ಗತಿನೇ ಆಗತ್ತೆ. ಅವರು ಬೇಗನೇ ಮನೆಯಿಂದ ಹೊರಬರಬೇಕಾಗುತ್ತದೆ. ಅದಕ್ಕಾಗಿಯೇ ಬಿಗ್ಬಾಸ್ ಮನೆಯಲ್ಲಿ ಕೊನೆಯವರೆಗೆ ಉಳಿಯಬೇಕು ಎಂದರೆ ಎಲ್ಲಾ ಎಲ್ಲೆಗಳನ್ನು ಮೀರಲೇಬೇಕಾದ ಅನಿವಾರ್ಯತೆ ಸ್ಪರ್ಧಿಗಳಿಗೆ.
ಎಲ್ಲಾ ಹಂತ ಮೀರಿದ ಮಹಿಳೆಯರು
ಇದೀಗ ಇಲ್ಲೊಂದು ಪ್ರೊಮೋ ಬಿಡುಗಡೆಯಾಗಿದೆ. ಇದರಲ್ಲಿ, ಮಹಿಳೆಯರು ಎಲ್ಲಾ ಹಂತ ಮೀರಿ ಮಾರಾಮಾರಿ ಮಾಡಿಕೊಂಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುವ ಇಂಥ ದೃಶ್ಯಗಳು ಇದೀಗ ಬಿಗ್ಬಾಸ್ಮನೆಯಲ್ಲಿ ಕಂಡುಬಂದಿದೆ.
ಕನ್ನಡದ ಮಹಿಳಾಮಣಿಗಳು
ಬೇರೆ ಭಾಷೆಗಳ ಬಿಗ್ಬಾಸ್ನಲ್ಲಿ ಇಂಥದ್ದು ಮಾಮೂಲು ಆಗಿದ್ದರೂ ಇದೀಗ ಕನ್ನಡದ ಈ ಮಹಿಳಾ ಮಣಿಗಳು ತಾವೇನೂ ಕಮ್ಮಿ ಇಲ್ಲ ಕಣ್ರೀ ಎನ್ನುತ್ತಿದ್ದಾರೆ.
ಜಗಳ ಬಿಡಿಸಲು ಬಂದ ಅಶ್ವಿನಿ ಗೌಡ
ಕುತೂಹಲದ ವಿಷ್ಯವೊಂದು ಇದರಲ್ಲಿ ಕಾಣಬಹುದು. ಅದೇನೆಂದರೆ, ಸದಾ ಜಗಳದಿಂದಲೇ ಫೇಮಸ್ ಆಗ್ತಿರೋ ಅಶ್ವಿನಿ ಗೌಡ (Ashwini Gowda) ಅವರು ಈ ಜಗಳವನ್ನು ತಡೆಯಲು ಬಂದು, ಎಲ್ಲರ ಬಾಯಿ ಮುಚ್ಚಿಸಿರುವುದು. ಈ ಬಗ್ಗೆ ಸಾಕಷ್ಟು ಮಂದಿ ಕಮೆಂಟ್ ಮೂಲಕ ಅಚ್ಚರಿಯನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಪುರುಷರ ಭಯ
ಅದೇ ರೀತಿ ಅಲ್ಲಿರುವ ಪುರುಷರು ಭಯದಿಂದ ನೋಡುತ್ತಿರುವುದನ್ನು ಈ ಪ್ರೊಮೋದಲ್ಲಿ ನೋಡಬಹುದಾಗಿದೆ. ಇಂಥ ದೃಶ್ಯಗಳು ಅಪರೂಪ ಆಗಿರುವ ಕಾರಣದಿಂದ ಅವರು ಭಯಪಟ್ಟುಕೊಂಡರೋ ಎನ್ನುವಂತಿದೆ ಈ ದೃಶ್ಯ.
Bigg Boss 12 ಎನ್ನೋ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಆಗಿರೊ ಈ ವಿಡಿಯೋ ನೋಡಿ