- Home
- Entertainment
- TV Talk
- Bigg Boss ಮನೆಯಲ್ಲಿ ಲವ್ ಬ್ರೇಕಪ್! Gilli-Kavya ಮಧ್ಯೆ ಭಾರಿ ಬಿರುಕು: ಹೊರ ಹೋಗೇಬಿಟ್ರಲ್ಲ ಕಾವು!
Bigg Boss ಮನೆಯಲ್ಲಿ ಲವ್ ಬ್ರೇಕಪ್! Gilli-Kavya ಮಧ್ಯೆ ಭಾರಿ ಬಿರುಕು: ಹೊರ ಹೋಗೇಬಿಟ್ರಲ್ಲ ಕಾವು!
ಬಿಗ್ಬಾಸ್ ಮನೆಯಲ್ಲಿ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಗಿಲ್ಲಿ ಅವರು 'ಕಾವು ಕಾವು' ಎಂದು ರೇಗಿಸುವುದನ್ನು ನಿಲ್ಲಿಸುವಂತೆ ಕಾವ್ಯಾ ಹೇಳಿದ್ದು, ಇದು ಇಬ್ಬರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿ ಸ್ನೇಹ ಮುರಿಯುವ ಹಂತ ತಲುಪಿದೆ.

ಪ್ರೀತಿ ಪ್ರೇಮ ಮಾಮೂಲು
ಬಿಗ್ಬಾಸ್ (Bigg Boss) ಮನೆಯಲ್ಲಿ, ಪ್ರೀತಿ- ಪ್ರೇಮ, ಬ್ರೇಕಪ್ ಇವೆಲ್ಲವೂ ಮಾಮೂಲೇ. ಮನೆಯೊಳಗೆ ಇರುವಷ್ಟು ದಿನ ಒಂದಿಷ್ಟು ಮಂದಿ ಸ್ಕ್ರಿಪ್ಟೆಡ್ ಲವ್ ಮಾಡಿ, ಹೊರ ಹೋದ ಮೇಲೆ ಬೇರೆ ಬೇರೆ ಆಗುವುದು ಇದೆ. ಮತ್ತೆ ಕೆಲವರು ಇದನ್ನೇ ರಿಯಲ್ ಪ್ರೀತಿ ಮಾಡಿಕೊಂಡು, ಹೊರಬಂದು ಮದ್ವೆಯಾಗಿ ಬೇರೆ ಆಗುವುದೂ ಇದೆ.
ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿ
ಅದು ರಿಯಲ್ಲೋ, ರೀಲೋ ಒಟ್ಟಿನಲ್ಲಿ ಈ ಬಾರಿಯ ಬಿಗ್ಬಾಸ್ (Bigg Boss 12)ನಲ್ಲಿರೋ ಲವ್ ಸ್ಟೋರಿ ಪೈಕಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜೋಡಿ ಒಂದು. ಹಾಗೆಂದು ಇವರೇನೂ ಯಾವತ್ತಿಗೂ ಮಿತಿಮೀರಿ ಹೋದವರಲ್ಲ. ಇವರದ್ದು ಕ್ಯೂಟ್ ಫ್ರೆಂಡ್ಷಿಪ್. ಅದಕ್ಕೆ ಪ್ರೀತಿ-ಪ್ರೇಮದ ಬಣ್ಣನೂ ಬಳಿಯಲಾಗಿದೆ. ಬಿಗ್ಬಾಸ್ ಹೇಳಿದಂತೆ ಕೇಳುವ ಈ ಸ್ಪರ್ಧಿಗಳು ಪ್ರೇಮಿಗಳ ಹಾಗೆ ವರ್ತಿಸುವುದೂ ಅನಿವಾರ್ಯವಾಗಿದೆ ಎನ್ನಿ.
ಮೆಚ್ಚಿಕೊಂಡ ವರ್ಗ
ಆದರೆ, ಇವರಿಬ್ಬರ ಜೋಡಿಯನ್ನು ಮೆಚ್ಚಿಕೊಂಡಿರೋ ದೊಡ್ಡ ವರ್ಗವೇ ಇದೆ. ಬಹುತೇಕ ಬಿಗ್ಬಾಸ್ ಪ್ರೇಮಿಗಳು ಕಾವ್ಯಾ-ಗಿಲ್ಲಿಯ ಸ್ನೇಹಕ್ಕೆ ಖುಷಿ ಪಡುವವರು ಇದ್ದಾರೆ. ಇವರಿಬ್ಬರ ಬಾಂಧವ್ಯ ಈ ರೀತಿ ಇದೆ. ಅಷ್ಟಕ್ಕೂ ಇವರಿಬ್ಬರೂ ಕೈಗೆ ದಾರ ಕಟ್ಟಿಕೊಂಡು ಜಂಟಿಯಾಗಿ ಮನೆ ಒಳಗೆ ಪ್ರವೇಶಿಸಿದ್ದರು. ಅದೇ ಪ್ರೀತಿ ಮುಂದುವರೆದಿದೆ.
ಕಾವು ಕಾವು
ಆದರೆ ಈ ಪ್ರೀತಿಗೆ ಈಗ ಯಾರ ಕಣ್ಣು ಬಿದ್ದಿದೆಯೋ ಗೊತ್ತಿಲ್ಲ. ಸದ್ಯ ಇವರಿಬ್ಬರೂ ಬ್ರೇಕಪ್ ಆದಂತಿದೆ. ಅಷ್ಟಕ್ಕೂ ಗಿಲ್ಲಿ ನಟ (Gilli Nata) ಕಾವ್ಯಾ ಅವರನ್ನು ಕಾವು ಕಾವು ಎಂದೇ ಕರೆಯೋದು. ಸುದೀಪ್ ಅವರೂ ಇವರಿಬ್ಬರನ್ನೂ ಸಾಕಷ್ಟು ಬಾರಿ ರೇಗಿಸಿದ್ದು ಇದೆ. ಗಿಲ್ಲಿ ಸದಾ ಕಾವ್ಯಾರನ್ನು ರೇಗಿಸುವುದು ಮಾಮೂಲು. ಹಲವು ಬಾರಿ ಅವರ ಬೆಂಬಲಕ್ಕೂ ನಿಂತಿದ್ದರು.
ಬ್ರೇಕಪ್
ಆದರೆ,, ಇದು ಇತರ ಸ್ಪರ್ಧಿಗಳಿಗೂ ಕಿರಿಕಿರಿ ಉಂಟು ಮಾಡುತ್ತಿದ್ದುದು ಕೆಲವೊಮ್ಮೆ ನೋಡಬಹುದಾಗಿದೆ. ಆದರೆ ಇದೀಗ, ಗಿಲ್ಲಿ ಹಾಗೂ ಕಾವ್ಯ ನಡುವೆ ಭಿನ್ನಾಭಿಪ್ರಾಯ ಮೂಡಿದೆ. 'ಹಾರ್ಟ್ ಬ್ರೇಕಿಗಿಂತ ನೋವು ಈ ಫ್ರೆಂಡ್‌ಶಿಪ್ ಬ್ರೇಕಪ್' ಎಂದು ಶೀರ್ಷಿಕೆಯೊಂದಿಗೆ ಪ್ರೊಮೋ ರಿಲೀಸ್ ಆಗಿದೆ.
ಸ್ವಾಭಿಮಾನಕ್ಕೆ ಧಕ್ಕೆ
ಇದರಲ್ಲಿ, ಕಾವ್ಯಾ ಅವರು, ನಿನ್ನ ಸಮಸ್ಯೆ ಏನು, ಮಾತು ಬಿಟ್ಟಿದ್ಯಾರು? ನನ್ನನ್ನು ಕಾವು ಕಾವು ಅಂತ ರೇಗಿಸಬೇಡ ಎಂದಿದ್ದಾರೆ. ಅದಕ್ಕೆ ಗಿಲ್ಲಿ, ಅದು ಸಾಧ್ಯವೇ ಇಲ್ಲ ಎಂದಿದ್ದಾರೆ. ಮಾತನ್ನು ಬಿಟ್ಟಿದ್ದರಿಂದ ಕಾವ್ಯಾ ಈಗ ಗಿಲ್ಲಿಯ ಬಳಿ, "ನಿನ್ನ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ನಾನೇನು ಮಾಡ್ದೆ ಎಂದಾಗ ಗಿಲ್ಲಿ, ರೇಗಿಸಬಾರದು ಅಲ್ವಾ ನಿಂಗೆ ಸರಿ ಬಿಡು. ಮಾತನಾಡವುದೇ ಸಮಸ್ಯೆ ಅಲ್ವಾ? ಮಾತನಾಡದೇ ಇದ್ದರೆ ಎಂದಿದ್ದಾರೆ.
ಹೊರಟು ಹೋದ ಕಾವ್ಯಾ
ಅದಕ್ಕೆ ಕಾವ್ಯಾ ಬೇರೆಯವರು ಹೇಳಿದಾಗ ಸ್ವಾಭಿಮಾನಕ್ಕೆ ಧಕ್ಕೆ ಬರಲಿಲ್ಲ, ನಾನು ಹೇಳಿದ್ರೆ ಮಾತ್ರನಾ ಎಂದಾಗ ಗಿಲ್ಲಿ, ಊರಿನವರೆಲ್ಲಾ ಬೈಯುವುದಕ್ಕೂ ಮನೆಯವರು ಹೇಳುವುದಕ್ಕೂ ವ್ಯತ್ಯಾಸ ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕಾವ್ಯಾ ಸಿಟ್ಟಿನಿಂದ ಹಾಗಿದ್ರೆ ಮಾತನಾಡಿಸುವುದಿಲ್ಲ ಬಿಡು, ಮೂರನೇ ವ್ಯಕ್ತಿ ಆಗಿದ್ದೀನಿ ಅಂದ್ರೆ ಪರವಾಗಿಲ್ಲ, ಮೂರನೇ ವ್ಯಕ್ತಿ ಆಗಿ ಇರ್ತೀನಿ ಎಂದು ಹೇಳಿ ಹೊರಟು ಹೋಗಿದ್ದಾರೆ.