ಧಾರವಾಡ/ಕಲಬುರಗಿ: ಸರ್ಕಾರಿ ಆವರಣಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಖಾಸಗಿ ಸಂಸ್ಥೆಗಳ ಚಟುವಟಿಕೆ ನಿರ್ಬಂಧಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ರಾಜ್ಯ ಹೈಕೋರ್ಟ್‌ನ ಧಾರವಾಡ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದ ನ.2 ರಂದು ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಪಥ ಸಂಚಲನ ನಡೆಸಲು ಆರ್‌ಎಸ್ಎಸ್ ಗೆ ಹಾದಿ ಸುಗಮ ಆಗಲಿದೆಯೇ ಎಂಬ ಚರ್ಚೆ ಶುರುವಾಗಿದೆ. ಸರ್ಕಾರಿ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ಕಡಿವಾಣ ಹಾಕಲು ತಮಿಳು ನಾಡು ಮಾದರಿಯಲ್ಲಿ ನಿರ್ಬಂಧ ಹೇರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಸರ್ಕಾರವು ಸರ್ಕಾರಿ ಸ್ಥಳಗಳಲ್ಲಿ ಆರೆಸ್‌ಎಸ್ ರೀತಿಯ ಚಟುವಟಿಕೆಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು.

11:08 PM (IST) Oct 29
RBI Repatriates 64 Tonnes of Gold in H1 FY ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಚಿನ್ನದ ನಿಕ್ಷೇಪಗಳ ದೊಡ್ಡ ಭಾಗವನ್ನು ವಿದೇಶದಿಂದ ಭಾರತಕ್ಕೆ ಮರಳಿ ತರುತ್ತಿದೆ. ಪ್ರಸ್ತುತ, ಶೇ. 65ಕ್ಕೂ ಹೆಚ್ಚು ಚಿನ್ನವನ್ನು ದೇಶೀಯವಾಗಿ ಸಂಗ್ರಹಿಸಲಾಗಿದೆ.
10:29 PM (IST) Oct 29
ತಾವೇ ಕೊಟ್ಟ ಕೇಸ್ ರದ್ದುಕೋರಿ ಬುರುಡೆ ಗ್ಯಾಂಗ್ ಹೈಕೋರ್ಟ್‌ಗೆ ಅರ್ಜಿ, ಅರೆಸ್ಟ್ ತಪ್ಪಿಸಲು ಕೊನೆ ಪ್ರಯತ್ನ ನಡೆಸಿದೆ. ಈ ಮೂಲಕ ಧರ್ಮಸ್ಥಳ ವಿರುದ್ದ ಮಾಡಿದ ಷಡ್ಯಂತ್ರ ಬಯಲಾಗುತ್ತಿದ್ದಂತೆ ಬುರುಡೆ ಗ್ಯಾಂಗ್ ಇದೀಗ ಮೆಲ್ಲನೆ ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ.
09:37 PM (IST) Oct 29
08:38 PM (IST) Oct 29
ನ.28ಕ್ಕೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ, ಬೃಹತ್ ಗೀತೋತ್ಸವದಲ್ಲೂ ಭಾಗಿ, ಶ್ರೀಕೃಷ್ಣನ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ ಪ್ರಸಾದ ಸ್ವೀಕರಿಸಲಿದ್ದಾರೆ. ಗೀತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
08:38 PM (IST) Oct 29
Basavaraj Horatti Slams Madhu Bangarappa Over Reducing Pass Marks to 33 ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳ ಪಾಸಿಂಗ್ ಮಾರ್ಕ್ಸ್ ಅನ್ನು 35 ರಿಂದ 33ಕ್ಕೆ ಇಳಿಸುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿರ್ಧಾರಕ್ಕೆ ಸಭಾಪತಿ ಬಸವರಾಜ್ ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
08:35 PM (IST) Oct 29
ದೀಪಿಕಾ ಪಡುಕೋಣೆ, ತೆರೆಯ ಮೇಲೆ ತಮ್ಮ ನಟನೆಯಿಂದ ಮಾತ್ರವಲ್ಲ, ತೆರೆಯ ಹಿಂದೆ ತಮ್ಮ ಮೌಲ್ಯಯುತ ನಿಲುವುಗಳಿಂದಲೂ ಗಮನ ಸೆಳೆಯುತ್ತಾರೆ. ಅವರು ಕೇವಲ ಸ್ಟಾರ್ ಆಗಿ ಉಳಿಯದೆ, ಬದಲಾವಣೆಗೆ ನಾಂದಿ ಹಾಡುವ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇದಕ್ಕೆ ನೀವೇನಂತೀರಾ?
07:05 PM (IST) Oct 29
ಗೋವಾ ಭೀಕರ ಅಪಘಾತದಲ್ಲಿ ಕಾರವಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಾವು, ಮತ್ತೊರ್ವ ಗಂಭೀರ, ಗೋವಾದ ಕಾನಕೋನದಿಂದ ಕಾರವಾರದತ್ತ ಬೈಕ್‌ನಲ್ಲಿ ಮರಳುತ್ತಿರುವ ವೇಳೆ ಎಮ್ಮೆ ಅಡ್ಡಬಂದು ಅಪಘಾತ ಸಂಭವಿಸಿದೆ.
06:23 PM (IST) Oct 29
06:08 PM (IST) Oct 29
(J)ಜೆಡಿಎಸ್, (C)ಕಾಂಗ್ರೆಸ್, (B)ಬಿಜೆಪಿಯಲ್ಲಿ ನೊಂದವರಿಗೆ ಹೊಸ ಪಕ್ಷ ಜೆಸಿಬಿ, ಯತ್ನಾಳ್ ಸೂಚನೆ, ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದರೆ ಯತ್ನಾಳ್ ಹೊಸ ಪಕ್ಷ ಅಧಿಕೃತವಾಗಿ ಘೋಷಣೆಯಾಗಲಿದೆ. ಹೊಸ ಪಕ್ಷ ಕುರಿತು ಯತ್ನಾಳ್ ಸೂಚನೆ ಸಂಚಲನ ಸೃಷ್ಟಿಸಿದೆ
05:32 PM (IST) Oct 29
05:05 PM (IST) Oct 29
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯ ಸೈಕೋ ಜಯಂತ್‌ಗೆ ತಿಳಿದಿದೆ. ಶ್ರದ್ಧಾಂಜಲಿ ಸಭೆಯ ನೆಪದಲ್ಲಿ ವಿಶ್ವನನ್ನು ಕರೆದು, ಪಿಸ್ತೂಲ್ ತೋರಿಸಿ ಜಾಹ್ನವಿ ಎಲ್ಲಿದ್ದಾಳೆ ಎಂದು ಬೆದರಿಸುತ್ತಾನೆ. ವಿಶ್ವ ಆಕೆ ಎಲ್ಲಿದ್ದಾಳೆಂದು ಹೇಳದೆ, ಸಾಧ್ಯವಾದರೆ ಜಯಂತ್‌ಗೆ ಸವಾಲು ಹಾಕುತ್ತಾನೆ.
04:57 PM (IST) Oct 29
Ex BPCL CFO K Shivakumar Exposes Systemic Corruption in Bengaluru After Daughter Tragic Death ಬಿಪಿಸಿಎಲ್‌ನ ಮಾಜಿ ಸಿಎಫ್‌ಒ ಕೆ. ಶಿವಕುಮಾರ್, ತಮ್ಮ ಮಗಳು ಅಕ್ಷಯಾ ಸಾವಿನ ನಂತರ ಬೆಂಗಳೂರಿನಲ್ಲಿ ಎದುರಿಸಿದ ಭ್ರಷ್ಟಾಚಾರದ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.
03:48 PM (IST) Oct 29
Actor Puneeth Rajkumar Movies: ಇಂದು ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ನಾಲ್ಕು ವರ್ಷಗಳು ಕಳೆದಿವೆ. ಹೃದಯಾಘಾತದಿಂದ ಅವರು ನಿಧನರಾದರು. ನಟನೆಯ ಹೊರತಾಗಿ ಪುನೀತ್ ಅವರ ಸಾಮಾಜಿಕ ಕೆಲಸಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಇವರ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ಇಲ್ಲಿದೆ.
03:25 PM (IST) Oct 29
ಡಿಕೆಶಿ ಆಗಲ್ಲ, ಜಾರಕಿಹೊಳಿಗೆ ಸಿಗಲ್ಲ, ಬ್ಲ್ಯಾಕ್ ಹಾರ್ಸ್‌ಗೆ ಸಿಎಂ ಪಟ್ಟ, ಯತ್ನಾಳ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.ಕಾಂಗ್ರೆಸ್ ಅಧಿಕಾರ ಬದಲಾವಣೆಯಲ್ಲಿ ಸಿದ್ದರಾಮಯ್ಯ ಕುರ್ಚಿ ಮೇಲೆ ಕಣ್ಣಿಟ್ಟಿರುವ, ರೇಸ್‌ನಲ್ಲಿರುವ ಯಾವ ನಾಯಕರು ಸಿಎಂ ಆಗಲ್ಲ ಎಂದಿದ್ದಾರೆ.
03:15 PM (IST) Oct 29
Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ರಕ್ಷಿತಾ ಮೇಲೆ ಅಶ್ವಿನಿ ವಾಗ್ದಾಳಿ ಮಾಡಿದ್ದರು. ಈಗ ಮತ್ತೆ ಅಶ್ವಿನಿ, ರಿಷಾ ಗೌಡ, ರಾಶಿಕಾ ಸೇರಿಕೊಂಡು ರಕ್ಷಿತಾ ಮೇಲೆ ಹರಿಹಾಯ್ದಿದ್ದಾರೆ. ಅಡುಗೆ ವಿಚಾರಕ್ಕೆ ಜಗಳ ಶುರುವಾಗಿದೆ. ಆ ವೇಳೆ ಅಶ್ವಿನಿ ಏನು ಹೇಳಿದ್ರು?
02:03 PM (IST) Oct 29
ಮಕ್ಕಳ ದಿನಾಚರಣೆಯ ಪ್ರಯುಕ್ತ ನವೆಂಬರ್ 14ರಂದು ಮಕ್ಕಳ ಜೊತೆಗೆ ಪೋಷಕರು ಕೂಡ ನೋಡುವಂತಹ ಸಿನಿಮಾವೊಂದು ಚಿತ್ರಮಂದಿರಗಳಿಗೆ ಬರುತ್ತಿದೆ. ಚಿತ್ರದ ಹೆಸರು ‘ಕೈಟ್ ಬ್ರದರ್ಸ್’. ವಿರೇನ್ ಸಾಗರ್ ಬಗಾಡೆ ನಿರ್ದೇಶನದ ಚಿತ್ರವಿದು.
01:50 PM (IST) Oct 29
ಕನ್ನಡದಲ್ಲಿ ದಶಕದ ಹಿಂದೆ ಸೀತೆ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಸೀತೆ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದಲ್ಲಿ ಅಮಿತ್ ಭಾರ್ಗವ ನಟಿಸುತ್ತಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಈ ಸೀರಿಯಲ್‌ನ್ನು ನೋಡುತ್ತಿದ್ದರು. ಈಗ ಈ ಸೀರಿಯಲ್ ನಟ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.
01:42 PM (IST) Oct 29
ಐ ಯಾಮ್ ಗಾಡ್ ಶೀರ್ಷಿಕೆ ಇಡುವುದಕ್ಕೆ ಧೈರ್ಯ ಬೇಕು. ಮೊದಲ ನಿರ್ದೇಶನದ ಸಿನಿಮಾಗೆ ಈ ಶೀರ್ಷಿಕೆ ಇಟ್ಟಿದ್ದಾರೆ ಅಂದ್ರೆ ಸಿನಿಮಾ ಚೆನ್ನಾಗಿ ಮಾಡಿದ್ದಾರೆ ಅಂತರ್ಥ. ರವಿ ಒಳ್ಳೆಯ ಸಿನಿಮಾ ಮೇಕರ್, ಟ್ರೇಲರ್ ಚೆನ್ನಾಗಿದೆ ಎಂದು ಉಪೇಂದ್ರ ಹೇಳಿದ್ದಾರೆ.
01:25 PM (IST) Oct 29
Apple stock value increase: ಐಫೋನ್ ಮೇಲಿನ ಜನರ ಅಪಾರ ಕ್ರೇಜ್‌ನಿಂದಾಗಿ, ಆಪಲ್ ಸಂಸ್ಥೆಯು ಇದೇ ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ದಾಟಿದೆ. ಇತ್ತೀಚೆಗೆ ಬಿಡುಗಡೆಯಾದ ಐಫೋನ್ 17 ಮತ್ತು ಐಫೋನ್ ಏರ್ ಮಾದರಿಗಳ ಭರ್ಜರಿ ಮಾರಾಟವು ಕಂಪನಿಯ ಷೇರು ಮೌಲ್ಯವನ್ನು ಹೆಚ್ಚಿಸಿದೆ.
01:24 PM (IST) Oct 29
ಕೋಣ ಕತೆ ತುಂಬಾ ಸರಳ. ಕೋಣವನ್ನು ಬಲಿಕೊಡುವ ಆಚರಣೆಯನ್ನು ಮಾಡುವ ಊರಿಗೆ ಚಿತ್ರದ ನಾಯಕ ಹೋಗುತ್ತಾನೆ. ಬಲಿ ಆಗಬೇಕಾದ ಕೋಣದ ಜತೆಗೆ ಹೀರೋ ಕೂಡ ಲಾಕ್ ಆಗುತ್ತಾನೆ. ನಂತರ ಆ ಊರಿನಿಂದ ಹೇಗೆ ಹೊರಗೆ ಬರುತ್ತಾನೆ.
01:20 PM (IST) Oct 29
Actress Vaishnavi Koundinya Photos: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಪ್ರೇಮಕಾವ್ಯ ಧಾರಾವಾಹಿಯಲ್ಲಿ ಕಾವ್ಯ ಪಾತ್ರದಲ್ಲಿ ವೈಷ್ಣವಿ ಕೌಂಡಿನ್ಯ ಅವರು ನಟಿಸುತ್ತಿದ್ದಾರೆ. ಕೆಲ ಸಮಯಗಳ ಕಾಲ ಅವರು ಬೇರೆ ಭಾಷೆಯಲ್ಲಿ ನಟಿಸುತ್ತಿದ್ದು, ಈಗ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.
01:12 PM (IST) Oct 29
01:03 PM (IST) Oct 29
ಕನ್ನಡ ರಾಜ್ಯೋತ್ಸವಕ್ಕೆ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಆರ್.ವಿ ರೋಡಿಂದ ಬೊಮ್ಮಸಂದ್ರ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ನವೆಂಬರ್ 1ರಿಂದ ಐದನೇ ರೈಲು ಸಂಚಾರ ಮಾಡಲಿದೆ.
12:50 PM (IST) Oct 29
Gen Z ಪೀಳಿಗೆಯವರು ನಿಜಕ್ಕೂ ಭಾರೀ ಅಪ್‌ಡೇಟ್ ಆಗಿರೋದರಲ್ಲಿ ಯಾವುದೇ ಸಂಶಯವಿಲ್ಲ, ಬದುಕನ್ನು ನೋಡುವ ಮನಸ್ಥಿತಿ ಅಥವಾ ಲೈಫ್‌ನ್ನು ಎಂಜಾಯ್ ಮಾಡೋದು ಕೂಡ ಅನೇಕರಿಗೆ ಆಶ್ಚರ್ಯ ತಂದಿದೆ. ಈಗ ಲೀವ್ ಲೆಟರ್ ಭಾರೀ ವೈರಲ್ ಆಗ್ತಿದೆ.
12:43 PM (IST) Oct 29
ಕನ್ನಡ ಪಾಠ ಶಾಲೆ ದುಬೈ ಶಾಲೆಯಲ್ಲಿ 2014 ರಿಂದ ಅನಿವಾಸಿ ಭಾರತೀಯ ಮಕ್ಕಳಿಗೆ ಕನ್ನಡ ಬೋಧನೆಯನ್ನು ಉಚಿತವಾಗಿ ಮಾಡಲಾಗುತ್ತಿದ್ದು, ಈ ಶಾಲೆಗೆ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನ್ನಣೆ ದೊರತಿದೆ.
12:23 PM (IST) Oct 29
12:18 PM (IST) Oct 29
12:13 PM (IST) Oct 29
ಕಾವೇರಿಯೂ ಸೇರಿದಂತೆ ಎಲ್ಲಾ ನದಿಗಳಿಗೂ ಕೈಗಾರಿಕೆಗಳ ತ್ಯಾಜ್ಯ ಹಾಗೂ ಒಳಚರಂಡಿ ನೀರು ಸೇರಿ ಕಲುಷಿತಗೊಳಿಸಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ನದಿಗಳನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿ ಆಗಬೇಕಾದ ಕೆಲಸ.
12:08 PM (IST) Oct 29
Bigg Boss Kannada Season 12 Show: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಾಶಿಕಾ ಶೆಟ್ಟಿ ಹಾಗೂ ಸೂರಜ್ ಅವರು ಒಂದೇ ವಾರಕ್ಕೆ ತುಂಬ ಕ್ಲೋಸ್ ಆಗಿದ್ದಾರೆ. ಈಗ ಈ ಜೋಡಿ ಮಧ್ಯೆ ಬಿರುಕು ಬಂದಿದೆ. ಇದಕ್ಕೆ ಕಾರಣ ಏನು? ನಿಜಕ್ಕೂ ಏನು ಆಯ್ತು?
11:59 AM (IST) Oct 29
Karna Serial: ಇಲ್ಲಿವರೆಗೆ ಕರ್ಣ ಮತ್ತು ನಿಧಿ ಜೋಡಿನ ಮೆಚ್ಚಿ, ನಿತ್ಯಾಳನ್ನು ಆಡಿಕೊಳ್ಳುತ್ತಿದ್ದ ವೀಕ್ಷಕರು ಇದೀಗ ಹೊಸ ಎಪಿಸೋಡ್ ಪ್ರೊಮೋಗಳನ್ನು ನೋಡಿ, ಈ ಜೋಡಿ ಸೂಪರ್ ಆಗಿದೆ. ಮಿಲನ ಸಿನಿಮಾದ ಅಂಜಲಿ ಮತ್ತು ಆಕಾಶ್ ಜೋಡಿಯಂತೆ ಕಾಣುತ್ತಿದೆ ಎನ್ನುತ್ತಿದ್ದಾರೆ.
11:43 AM (IST) Oct 29
ರಾಹುಲ್ ಗಾಂಧಿಯವರ ರಾಜ್ಯಕ್ಕೆ ಆಗಮನ ವಿಚಾರ ಗೊತ್ತಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಗಮನ ಹರಿಸ್ತಾರೆ. ಕಾಂಗ್ರೆಸ್ ಭನವಗಳ ಬಗ್ಗೆ ಪಕ್ಷದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮಾಹಿತಿ ನೀಡ್ತಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.
11:21 AM (IST) Oct 29
Ramesh s plan failed: ಮಗ ಕರ್ಣನ ನಗುವನ್ನು ಕಿತ್ತುಕೊಳ್ಳಲು ತಂದೆ ರಮೇಶ್ ರೂಪಿಸಿದ ಸಂಚು ವಿಫಲವಾಗಿದೆ. ಮನೆಗೆ ಬಂದ ಮಹಿಳೆಯರ ಕೊಂಕು ಮಾತುಗಳಿಗೆ ಕರ್ಣ ತಕ್ಕ ಉತ್ತರ ನೀಡಿದ್ದು, ನಿತ್ಯಾಳನ್ನು ಗೆಲ್ಲಿಸಿದ್ದಾನೆ. ಇದರಿಂದ ರಮೇಶ್ ಮತ್ತೊಮ್ಮೆ ಸೋಲನುಭವಿಸಿದ್ದಾನೆ.
11:18 AM (IST) Oct 29
ಕೆಲ ಪೊಲೀಸರು ರಿಯಲ್ ಎಸ್ಟೇಟ್ ಮಾಡುವವರು, ಡ್ರಗ್ಸ್ ಜಾಲದ ಜೊತೆ ಶಾಮಿಲಾಗಿರುತ್ತಾರೆ, ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯ ಕಡಿಮೆಯಾಗಿರುವ ಬಗ್ಗೆ ಸ್ವಯಂ ಪ್ರಶ್ನಿಸಿಕೊಂಡರೆ ಉತ್ತರ ಸಿಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
11:11 AM (IST) Oct 29
‘ಸದ್ಯಕ್ಕೆ ದಲಿತ ಮುಖ್ಯಮಂತ್ರಿ ಕುರಿತು ಯಾವುದೇ ಚರ್ಚೆ ಇಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಎರಡ್ಮೂರು ಸಲ ಹೇಳಿದ್ದಾರೆ. ಹೀಗಾಗಿ ಆ ಸಮಯ ಬಂದಾಗ ಮಾತನಾಡುತ್ತೇವೆ’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
10:50 AM (IST) Oct 29
ವಿಪ್ರೋ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಮತ್ತು ಆರ್.ವಿ ಎಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಚಾಲಕರಹಿತ ಕಾರನ್ನು ಇತ್ತೀಚೆಗೆ ಕಾಲೇಜಿನ ಕ್ಯಾಂಪಸ್‌ನಲ್ಲಿ ಅನಾವರಣಗೊಳಿಸಲಾಗಿದೆ.
10:41 AM (IST) Oct 29
ಕಾಂಗ್ರೆಸ್‌ನಲ್ಲಿ ನಾನು ಸೀನಿಯರ್ ಲೀಡರ್. ಈ ಹಿಂದೆಯೂ ನನಗೆ ಯಾವುದೇ ಬೇಡಿಕೆ ಇಲ್ಲದೆ ಸಚಿವ ಸ್ಥಾನ ನೀಡಿದ್ದರು. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ, ಈ ಬಾರಿ ನನಗೆ ಸಚಿವ ಸ್ಥಾನ ಕೊಡಬಹುದು ಎನ್ನುವ ನಿರೀಕ್ಷೆಯಿದೆ.
10:26 AM (IST) Oct 29
BBK 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿರುವ ರಿಷಾ ಗೌಡಗೂ ಹಾಗೂ ಗಿಲ್ಲಿ ನಟನಿಗೂ ಜಗಳ ಶುರುವಾಗಿದೆ. ಇದಕ್ಕೆ ಕಾರಣ ಏನು? ಅಂಥದ್ದೇನಾಯ್ತು?
10:19 AM (IST) Oct 29
ಒಂದು ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ರಾಜ್ಯದ ಮುಖ್ಯಮಂತ್ರಿಯಾದರೆ ರಾಜ್ಯದ ಕಾಂಗ್ರೆಸ್ ಕಚೇರಿಗಳಿಗೆ ದೊಡ್ಡ ಬೀಗ ಹಾಕಬೇಕಾಗುತ್ತೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
09:51 AM (IST) Oct 29
ಇಸೈಜ್ಞಾನಿ ಇಳಯರಾಜಾ ಸಂಗೀತದಲ್ಲಿ ಅಸಂಖ್ಯಾತ ಹಿಟ್ ಹಾಡುಗಳು ಬಂದಿವೆ. ಅದರಲ್ಲಿ ಅವತಾರಂ ಚಿತ್ರದ ಒಂದೇ ಒಂದು ಹಾಡು ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ಲಾಭ ತಂದುಕೊಟ್ಟಿದೆ. ಅದರ ಬಗ್ಗೆ ನೋಡೋಣ.
09:36 AM (IST) Oct 29
ಸಿಎಂ ಸ್ಥಾನಕ್ಕೆ ಎಲ್ಲರಿಗೂ ಆಸೆ ಇದ್ದೆ ಇರುತ್ತದೆ. ಆಸೆ ಪಟ್ಟವರಿಗೆಲ್ಲ ಕಡಿವಾಣ ಹಾಕಲು ಸಾಧ್ಯವಿಲ್ಲ. ನಾನಂತೂ ಮುಖ್ಯಮಂತ್ರಿ ವಿಚಾರವಾಗಿ ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದರು.