ಗೋವಾ ಭೀಕರ ಅಪಘಾತದಲ್ಲಿ ಕಾರವಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಾವು, ಮತ್ತೊರ್ವ ಗಂಭೀರ, ಗೋವಾದ ಕಾನಕೋನದಿಂದ ಕಾರವಾರದತ್ತ ಬೈಕ್‌ನಲ್ಲಿ ಮರಳುತ್ತಿರುವ ವೇಳೆ ಎಮ್ಮೆ ಅಡ್ಡಬಂದು ಅಪಘಾತ ಸಂಭವಿಸಿದೆ.
ಕಾರವಾರ (ಅ.29) ಗೋವಾದ ಮಾಷೆಂ ಬಳಿ ನಡೆದ ಭೀಕರ ಅಪಘಾತದಲ್ಲಿ ಕಾರವಾರದ ಕ್ರಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮತ್ತೊರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ರಿಮ್ಸ್ ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿ ಆದರ್ಶ ಪೂಜಾರಿ (23) ಮೃತ ದುರ್ದೈವಿ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ರನೌಕ್ ಚಾವ್ಲಾಗೆ ಚಿಕಿತ್ಸೆ ಮುಂದುವರಿದಿದೆ.
ಎಮ್ಮೆಗೆ ಡಿಕ್ಕಿ ತಪ್ಪಿಸಲು ಹೋಗಿ ಅಪಘಾತ
ಕಾರಾವಾರದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಾದ ಆದರ್ಶ ಪೂಜಾರಿ ಹಾಗೂ ರೌನಕ್ ಚಾವ್ಲಾ ಇಬ್ಬರು ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಗೋವಾಗೆ ತೆರಳಿದ್ದರು. ದಕ್ಷಿಣ ಗೋವಾದ ಕಾನಕೋನದಿಂದ ಕಾರವಾರಗೆ ಬೈಕ್‌ನಲ್ಲಿ ಮರಳುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಎಮ್ಮೆ ಅಡ್ಡ ಬಂದಿದೆ. ಎಮ್ಮೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿ ಇಬ್ಬರು ನೆಲಕ್ಕೆ ಅಪ್ಪಳಿಸಿದ್ದಾರೆ. ಇದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಇಬ್ಬರನ್ನು ತಕ್ಷಣವೇ ಕಾನಕೋನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆ ದಾಖಲಿಸುವ ಮೊದಲೇ ಆದರ್ಶ್ ಪೂಜಾರಿ ಮೃತಪಟ್ಟಿದ್ದಾನೆ.
ಮತ್ತೊರ್ವ ವಿದ್ಯಾರ್ಥಿ ಕಿಮ್ಸ್ ಆಸ್ಪತ್ರೆ ದಾಖಲು
ಮತ್ತೊರ್ವ ವಿದ್ಯಾರ್ಥಿ ರೌನಕ್ ಚಾವ್ಲಾ ಹೆಚ್ಚಿನ ಚಿಕಿತ್ಸೆಗಾಗಿ ಕಾರಾವಾರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾವ್ಲಾ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತದೇಹ ಕುಟುಂಬಸ್ಥರ ಹಸ್ತಾಂತರ
ವಿದ್ಯಾರ್ಥಿ ಆದರ್ಶ ಪೂಜಾರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಡ್ ಕಾನ್ಸ್‌ಟೇಬಲ್ ಆನಂದ ಕುಶಾಳಿ ಪಾಗಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೋವಾ ಕಾನಕೋನ ಪ್ರಕರಣ ದಾಖಲಿಸಿದ್ದಾರೆ. ಅಪಘಾತದ ಭೀಕರತೆ ರಸ್ತೆ ಬದಿಯಲ್ಲಿ ಬೈಕ್ ಹಾಗೂ ಸತ್ತ ಎಮ್ಮೆ ಪತ್ತೆಯಾಗಿದೆ.
