- Home
- Entertainment
- TV Talk
- Bigg Boss ಮನೆಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ಕನ್ನಡದ 'Seethe' ಧಾರಾವಾಹಿ ನಟ; ಯಾರದು?
Bigg Boss ಮನೆಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ಕನ್ನಡದ 'Seethe' ಧಾರಾವಾಹಿ ನಟ; ಯಾರದು?
ಕನ್ನಡದಲ್ಲಿ ದಶಕದ ಹಿಂದೆ ಸೀತೆ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಸೀತೆ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದಲ್ಲಿ ಅಮಿತ್ ಭಾರ್ಗವ ನಟಿಸುತ್ತಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಈ ಸೀರಿಯಲ್‌ನ್ನು ನೋಡುತ್ತಿದ್ದರು. ಈಗ ಈ ಸೀರಿಯಲ್ ನಟ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.

ತಮಿಳು ಧಾರಾವಾಹಿಯಲ್ಲಿ ಬ್ಯುಸಿ
2013ರಲ್ಲಿ ತಮಿಳಿನಲ್ಲಿ ‘ಮಹಾ ಭಾರತಂ’ ಸೀರಿಯಲ್ ಪ್ರಸಾರ ಆಗುತ್ತಿತ್ತು. ಈ ಸೀರಿಯಲ್‌ನಲ್ಲಿ ಅಮಿತ್ ನಟಿಸಿದ್ದರು. ಅದಾದ ಬಳಿಕ ಅವರು ತಮಿಳು ಭಾಷೆಯ ಧಾರಾವಾಹಿಗಳಲ್ಲಿ ಬ್ಯುಸಿ ಆದರು. ಬಿಗ್ ಬಾಸ್ ಕನ್ನಡ ಸೀಸನ್ 2 ಶೋಗೆ ಅಮಿತ್ ಅವರು ಧ್ವನಿ ಕೂಡ ನೀಡಿದ್ದರು.
ಚೆನ್ನೈನಲ್ಲಿ ಸೆಟಲ್ ಆಗಿದ್ದಾರೆ
ಬೆಂಗಳೂರಿನ ಅಮಿತ್ ಅವರು ಚೆನ್ನೈನಲ್ಲಿ ಸೆಟಲ್ ಆಗಿದ್ದಾರೆ, ಅಷ್ಟೇ ಅಲ್ಲದೆ ಅಲ್ಲಿಯೇ ಒಂದಾದ ಮೇಲೆ ಒಂದರಂತೆ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. ಸಾಕಷ್ಟು ಧಾರಾವಾಹಿ, ಸಿನಿಮಾ ಪಾತ್ರಗಳಿಗೆ ಅವರು ಧ್ವನಿಯನ್ನು ಕೂಡ ನೀಡಿದ್ದರು.
ಲವ್ ಮ್ಯಾರೇಜ್
ಅಂದಹಾಗೆ ವರ್ಕ್‌ಶಾಪ್‌ವೊಂದರಲ್ಲಿ ಶ್ರೀರಂಜನಿ ಜೊತೆ ಅಮಿತ್ ಭಾರ್ಗವ ಪರಿಚಯ ಆಗಿ, ಸ್ನೇಹಕ್ಕೆ ತಿರುಗಿ ಮದುವೆಯೂ ಆಯ್ತು. ಇವರಿಬ್ಬರಿಗೂ ಮಗಳಿದ್ದಾಳೆ. 2016ರಲ್ಲಿ ಮದುವೆಯಾಗಿದ್ದು, 2019 ರಲ್ಲಿ ಮಗಳು ಹುಟ್ಟಿದ್ದಾಳೆ.
ಬಿಗ್ ಬಾಸ್ ಸ್ಪರ್ಧಿ
ಈಗ ಬಿಗ್ ಬಾಸ್ ತಮಿಳು 9 ಶೋನಲ್ಲಿ ಅಮಿತ್ ಭಾರ್ಗವ ಅವರು ಭಾಗವಹಿಸಿದ್ದಾರೆ. ವೈಲ್ಡ್‌ಕಾರ್ಡ್ ಎಂಟ್ರಿ ಕೂಡ ಕೊಟ್ಟಿದ್ದರು. ವಿಜಯ್ ಸೇತುಪತಿ ನಿರೂಪಣೆಯ ಈ ಶೋನಲ್ಲಿ ಅಮಿತ್ ಹೇಗೆ ಆಟ ಆಡಲುದ್ದಾರೆ ಎಂದು ಕಾದು ನೋಡಬೇಕಿದೆ.
ಎಂಥಹ ಸರ್ಪ್ರೈಸ್
ಬಿಗ್ ಬಾಸ್ ಹಾಗೆ ಹೇಳುತ್ತಿದ್ದಾರೆ, ಬಿಗ್ ಬಾಸ್ ಹೀಗೆ ಆದೇಶ ನೀಡಿದ್ದಾರೆ ಎಂದು ಅಮಿತ್ ಭಾರ್ಗವ ಅವರು ಬಿಗ್ ಬಾಸ್ ಕನ್ನಡ ಸೀಸನ್ 1, 2 ಶೋನಲ್ಲಿ ಹೇಳಿದ್ದರು. ಈಗ ಇವರೇ ಬಿಗ್ ಬಾಸ್ ಸ್ಪರ್ಧಿಯಾಗಿ ಹೋಗಿರೋದು ಆಶ್ಚರ್ಯವಾಗಿದೆ. ಈ ಕ್ಲಿಕ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.