ಐ ಯಾಮ್‌ ಗಾಡ್‌ ಶೀರ್ಷಿಕೆ ಇಡುವುದಕ್ಕೆ ಧೈರ್ಯ ಬೇಕು. ಮೊದಲ ನಿರ್ದೇಶನದ ಸಿನಿಮಾಗೆ ಈ ಶೀರ್ಷಿಕೆ ಇಟ್ಟಿದ್ದಾರೆ ಅಂದ್ರೆ ಸಿನಿಮಾ ಚೆನ್ನಾಗಿ ಮಾಡಿದ್ದಾರೆ ಅಂತರ್ಥ. ರವಿ ಒಳ್ಳೆಯ ಸಿನಿಮಾ ಮೇಕರ್, ಟ್ರೇಲರ್‌ ಚೆನ್ನಾಗಿದೆ ಎಂದು ಉಪೇಂದ್ರ ಹೇಳಿದ್ದಾರೆ.

‘ಐ ಯಾಮ್‌ ಗಾಡ್‌ ಶೀರ್ಷಿಕೆ ಇಡುವುದಕ್ಕೆ ಧೈರ್ಯ ಬೇಕು. ಮೊದಲ ನಿರ್ದೇಶನದ ಸಿನಿಮಾಗೆ ಈ ಶೀರ್ಷಿಕೆ ಇಟ್ಟಿದ್ದಾರೆ ಅಂದ್ರೆ ಸಿನಿಮಾ ಚೆನ್ನಾಗಿ ಮಾಡಿದ್ದಾರೆ ಅಂತರ್ಥ. ರವಿ ಒಳ್ಳೆಯ ಸಿನಿಮಾ ಮೇಕರ್, ಟ್ರೇಲರ್‌ ಚೆನ್ನಾಗಿದೆ’ ಎಂದು ಉಪೇಂದ್ರ ಹೇಳಿದ್ದಾರೆ. ರವಿ ಗೌಡ ನಟನೆ, ನಿರ್ಮಾಣ, ನಿರ್ದೇಶನದ ‘ಐ ಯಾಮ್‌ ಗಾಡ್‌’ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿ ಅವರು ಮಾತನಾಡಿದರು. ಐ ಯಾಮ್‌ ಗಾಡ್‌ ಅನ್ನುವುದು ಉಪೇಂದ್ರ ಅವರ ಫೇಮಸ್‌ ಡೈಲಾಗ್‌ ಆಗಿದ್ದು , ರವಿ ಗೌಡ ಆ ಡೈಲಾಗನ್ನೇ ಶೀರ್ಷಿಕೆಯಾಗಿಸಿದ್ದಾರೆ.

ಉಪೇಂದ್ರ ನಟನೆ, ನಿರ್ದೇಶನದ ‘ಉಪ್ಪಿ 2’ ಸಿನಿಮಾದಲ್ಲಿ ಕೆಲಸ ಮಾಡಿರುವ ರವಿ ಗೌಡ ಇದೀಗ ಅದೇ ಹುಮ್ಮಸ್ಸಿನಲ್ಲಿ ಹೊಸ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಕುರಿತು ರವಿ ಗೌಡ, ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದಾಗ ಯಾವುದೇ ಸಿನಿಮಾ ಯೂನಿವರ್ಸಿಟಿ ಸೇರುವುದು ಬೇಡ ಉಪ್ಪಿ ಸರ್‌ ಹತ್ತಿರ ಹೋಗೋದು ಬೆಸ್ಟ್‌ ಅಂತ ಹೋಗಿ ಅವರ ಜೊತೆ ಕೆಲಸ ಮಾಡಿ ಬಂದು ಈ ಸಿನಿಮಾ ಮಾಡಿದ್ದೇನೆ. ಸಿನಿಮಾ ಬಿಡುಗಡೆಯಾದಾಗ ಚಿತ್ರ ನೋಡಿದವರ ಬಳಿ ಸಿನಿಮಾ ಹೇಗಿದೆ ಎಂದು ಕೇಳಿ ತಿಳಿದುಕೊಂಡು ಆಮೇಲೆ ನಿರ್ಧರಿಸಿ ಎಂದರು.

ಐಯಾಮ್‌ ಗಾಡ್‌ ಈಗಾಗಲೇ ಶೂಟಿಂಗ್ ಅನ್ನು ಸಂಪೂರ್ಣವಾಗಿ ಮುಗಿಸಿದ್ದು, ರಿಲೀಸ್‌ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಐಯಾಮ್‌ ಗಾಡ್‌ ಸಿನಿಮಾ ತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಸಿನಿಮಾ ನ.7ರಂದು ಬಿಡುಗಡೆಯಾಗುತ್ತಿದೆ. ವಿಜೇತಾ ನಾಯಕಿಯಾಗಿ ನಟಿಸಿದ್ದಾರೆ. ರವಿಶಂಕರ್‌, ಅವಿನಾಶ್‌, ಅರುಣಾ ಬಾಲರಾಜ್‌, ನಿರಂಜನ್‌ ಕುಮಾರ್‌ ಪ್ರಧಾನ ಪಾತ್ರದಲ್ಲಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ನಿವೇದಿತಾ ಗೌಡ, ದಿಗಂತ್‌ ಡ್ಯಾನ್ಸ್‌

ವಿ ಗೌಡ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಐ ಯಾಮ್‌ ಗಾಡ್‌’ ಚಿತ್ರದಲ್ಲಿ ಬರುವ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕುವ ಮೂಲಕ ನಟ ದಿಗಂತ್‌ ಹಾಗೂ ನಿವೇದಿತಾ ಗೌಡ ಅವರು ಕಾಣಿಸಿಕೊಂಡಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಮೊದಲ ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿತ್ತು.ಈಗ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಗಿದ್ದು, ಈ ಹಾಡಿನಲ್ಲಿ ನಟ ದಿಗಂತ್‌ ಹಾಗೂ ನಿವೇದಿತಾ ಗೌಡ ಹೆಜ್ಜೆ ಹಾಕಿದ್ದಾರೆ. ಶಶಾಂಕ್‌ ಶೇಷಗಿರಿ, ಅನಿರುದ್ಧ ಶಾಸ್ತ್ರಿ ಹಾಗೂ ಐಶ್ವರ್ಯ ರಂಗರಾಜನ್‌ ಅವರು ಈ ಹಾಡನ್ನು ಹಾಡಿದ್ದಾರೆ.