ಕೋಣ ಕತೆ ತುಂಬಾ ಸರಳ. ಕೋಣವನ್ನು ಬಲಿಕೊಡುವ ಆಚರಣೆಯನ್ನು ಮಾಡುವ ಊರಿಗೆ ಚಿತ್ರದ ನಾಯಕ ಹೋಗುತ್ತಾನೆ. ಬಲಿ ಆಗಬೇಕಾದ ಕೋಣದ ಜತೆಗೆ ಹೀರೋ ಕೂಡ ಲಾಕ್ ಆಗುತ್ತಾನೆ. ನಂತರ ಆ ಊರಿನಿಂದ ಹೇಗೆ ಹೊರಗೆ ಬರುತ್ತಾನೆ.
ಕೋಮಲ್ ನಟನೆಯ, ತನಿಷಾ ಕುಪ್ಪಂಡ ನಟನೆ- ನಿರ್ಮಾಣದ, ಹರಿಕೃಷ್ಣ ನಿರ್ದೇಶನದ ‘ಕೋಣ’ ಚಿತ್ರವು ಅಕ್ಟೋಬರ್ 31ರಂದು ತೆರೆಗೆ ಬರುತ್ತಿದೆ. ಹರಿಕೃಷ್ಣ ನಿರ್ದೇಶನದ ಈ ಚಿತ್ರದ ಟ್ರೇಲರ್ ಈಗಾಗಲೇ ಗಮನ ಸೆಳೆದಿದೆ. ಈ ಚಿತ್ರದ ಕುರಿತು ಕೋಮಲ್ ಮಾತುಗಳು ಇಲ್ಲಿವೆ.
- ಇದು ನೈಜ ಘಟನೆಯನ್ನು ಒಳಗೊಂಡ ಫ್ಯಾಂಟಸಿ, ಹಾರರ್ ಮತ್ತು ಹ್ಯೂಮರ್ ಕತೆಯ ಸಿನಿಮಾ. ಕಂಟೆಂಟ್ ಜೊತೆಗೆ ಹ್ಯೂಮರ್ ಇದೆ.
- ಕತೆ ತುಂಬಾ ಸರಳ. ಕೋಣವನ್ನು ಬಲಿಕೊಡುವ ಆಚರಣೆಯನ್ನು ಮಾಡುವ ಊರಿಗೆ ಚಿತ್ರದ ನಾಯಕ ಹೋಗುತ್ತಾನೆ. ಬಲಿ ಆಗಬೇಕಾದ ಕೋಣದ ಜತೆಗೆ ಹೀರೋ ಕೂಡ ಲಾಕ್ ಆಗುತ್ತಾನೆ. ನಂತರ ಆ ಊರಿನಿಂದ ಹೇಗೆ ಹೊರಗೆ ಬರುತ್ತಾನೆ, ಕೋಣವನ್ನು ಬಲಿ ಕೊಡಲು ಹೊರಟಿರುವುದು ಯಾಕೆ ಎಂಬುದನ್ನು ಹೇಳುತ್ತಾ ಹೋಗುತ್ತದೆ ಸಿನಿಮಾ.
ರಾತ್ರಿ ಹೊತ್ತಿನಲ್ಲೇ ಚಿತ್ರೀಕರಣ
- ಕುಂದಾಪುರದ ಭಾಗದ ಹಳ್ಳಿಯಲ್ಲಿ ರಾತ್ರಿ ಹೊತ್ತಿನಲ್ಲೇ ಹೆಚ್ಚು ಚಿತ್ರೀಕರಣ ಮಾಡಿದ್ದೇವೆ. ಮೂಢನಂಬಿಕೆಯ ಮೇಲೆ ನಡೆವ ಕತೆ ಚಿತ್ರದಲ್ಲಿದ್ದರೂ ಅದನ್ನು ಸಾಕಷ್ಟು ವಿಭಿನ್ನವಾಗಿ ನಿರೂಪಿಸಿಲಾಗಿದೆ.
- ನನ್ನ ಪಾತ್ರ ಹಾಗೂ ಕಾಸ್ಟ್ಯೂಮ್ ಈ ಚಿತ್ರದಲ್ಲಿ ಬೇರೆ ರೀತಿಯಾಗಿದೆ. ನಾನು ಇದುವರೆಗೂ ಕಾಣಿಸಿಕೊಳ್ಳದ ರೀತಿಯಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.
ಬಿಗ್‌ಬಾಸ್ ಶೋನಿಂದ ಬಂದ ಮೇಲೆ ನಾನೇ ನಟಿಸಿ, ನಿರ್ಮಿಸುತ್ತಿರುವ ಚಿತ್ರವಿದು. ಸಹ ಕಲಾವಿದರು, ಸ್ನೇಹಿತರ ಬೆಂಬಲದೊಂದಿಗೆ ಈ ಚಿತ್ರ ಮಾಡಿದ್ದೇನೆ. ಮೂಢನಂಬಿಕೆ ಜೊತೆಗೆ ಕಾಮಿಡಿ ಕನೆಕ್ಟ್ ಮಾಡಿರುವುದೇ ಈ ಚಿತ್ರದ ವಿಶೇಷತೆ.
- ತನಿಷಾ ಕುಪ್ಪಂಡ
