ನ.28ಕ್ಕೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ, ಬೃಹತ್ ಗೀತೋತ್ಸವದಲ್ಲೂ ಭಾಗಿ, ಶ್ರೀಕೃಷ್ಣನ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ ಪ್ರಸಾದ ಸ್ವೀಕರಿಸಲಿದ್ದಾರೆ. ಗೀತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಉಡುಪಿ (ಅ.29) ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಈ ಬಾರಿ ಮೋದಿ ಆಗಮಿಸುತ್ತಿರುವುದು ಉಡುಪಿಯ ಶ್ರೀಕಷ್ಣ ಮಠಕ್ಕೆ. ನವೆಂಬರ್ 28ರ ಉಡುಪಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಶ್ರೀಕೃಷ್ಣ ದರ್ಶನ ಮಾಡಲಿದ್ದಾರೆ. ವಿಶೇಷವಾಗಿ ಬೃಹತ್ ಗೀತೋತ್ಸವದಲ್ಲೂ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಈಗಾಗಲೇ ತಯಾರಿಗಳು ಆರಂಭಗೊಂಡಿದೆ. ಶ್ರೀಕೃಷ್ಣ ಮಠದ ತಯಾರಿ ಜೊತೆಗೆ ಭದ್ರತಾ ತಯಾರಿಗಳನ್ನು ಎಜೆನ್ಸಿಗಳು ಆರಂಭಿಸಿದೆ.

ಮಧ್ಯಾಹ್ನ 12ಗಂಟೆ ದರ್ಶನ

ಉಡುಪಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ಪೊಡವಿಯೊಡೆಯನ ದರ್ಶನ ಮಾಡಲಿದ್ದಾರೆ. ಪ್ರಸಾದ ಸ್ವೀಕರಿಸಿದ ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಬೃಹತ್ ಗೀತೋತ್ಸವದಲ್ಲೂ ಭಾಗಿಯಾಗಲಿದ್ದಾರೆ.

ಸಿಎಂ ಆಗಿದ್ದಾಗ ಮೊದಲ ಭೇಟಿ ನೀಡಿದ್ದ ಮೋದಿ

ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ನರೇಂದ್ರ ಮೋದಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. 2008ರಲ್ಲಿ ಸಿಎಂ ಮೋದಿ ಶ್ರೀಕೃಷ್ಣನ ದರ್ಶನ ಪಡೆದಿದ್ದರು. ಇದೀಗ ಪ್ರಧಾನಿಯಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಮೊದಲನೇ ಭೇಟಿಯಾಗಿದ್ದರೆ, ಒಟ್ಟಾರೆ 2ನೇ ಭೇಟಿಯಾಗಿದೆ. ವಿಶೇಷ ಅಂದರೆ ಅಂದೂ ಕೂಡ ಇದೇ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮೋದಿ ಸ್ವಾಗತಿಸಿ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದರು.

ಆಡಳಿತ ಕಾರ್ಯಗಳ ಜೊತೆಗೆ ಪ್ರಧಾನಿ ಮೋದಿ ಬಿಹಾರ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ ಬಿಹಾರದ ಬೇಗೂಸರಾಯಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಆರ್ ಜೆ ಡಿ ಸೇರಿ ಮಹಾಘಟಬಂಧನ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಬಿಹಾರದಲ್ಲಿ ಇಷ್ಟು ಬೆಳಕಿದೆ. ಈ ಲಾಟೀನ್ ಮತ್ತವರ ಜೊತೆಗಾರರ ಆಡಳಿತ ಬೇಕಾ? ಜಂಗಲ್ ರಾಜ್ ನಾಯಕರು ತಮ್ಮ ಕುಟುಂಬದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಕಳೆದ ಎರಡು ದಶಕಗಳಲ್ಲಿ ಆರ್‌ಜೆಡಿ ಚುನಾವಣೆಯನ್ನು ಗೆದ್ದಿಲ್ಲಕಾರಣ ತನ್ನ ದುರಹಂಕಾರದ ನಡುವೆ ಸಿಕ್ಕಿಕೊಂಡಿದೆ ಎಂದು ಮೋದಿ ಹೇಳಿದ್ದರು.