MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Lakshmi Nivasa: ವಿಶ್ವನ ತಲೆಗೆ ಪಿಸ್ತೂಲ್​​ನಿಂದ ಗುರಿ ಇಟ್ಟ ಜಯಂತ್​- ಮುಂದಾಗಿದ್ದು ಯಾರೂ ಊಹಿಸದ ಟ್ವಿಸ್ಟ್​!

Lakshmi Nivasa: ವಿಶ್ವನ ತಲೆಗೆ ಪಿಸ್ತೂಲ್​​ನಿಂದ ಗುರಿ ಇಟ್ಟ ಜಯಂತ್​- ಮುಂದಾಗಿದ್ದು ಯಾರೂ ಊಹಿಸದ ಟ್ವಿಸ್ಟ್​!

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯ ಸೈಕೋ ಜಯಂತ್‌ಗೆ ತಿಳಿದಿದೆ. ಶ್ರದ್ಧಾಂಜಲಿ ಸಭೆಯ ನೆಪದಲ್ಲಿ ವಿಶ್ವನನ್ನು ಕರೆದು, ಪಿಸ್ತೂಲ್ ತೋರಿಸಿ ಜಾಹ್ನವಿ ಎಲ್ಲಿದ್ದಾಳೆ ಎಂದು ಬೆದರಿಸುತ್ತಾನೆ. ವಿಶ್ವ ಆಕೆ ಎಲ್ಲಿದ್ದಾಳೆಂದು ಹೇಳದೆ, ಸಾಧ್ಯವಾದರೆ ಜಯಂತ್‌ಗೆ ಸವಾಲು ಹಾಕುತ್ತಾನೆ.

1 Min read
Suchethana D
Published : Oct 29 2025, 05:05 PM IST
Share this Photo Gallery
  • FB
  • TW
  • Linkdin
  • Whatsapp
16
ರೋಚಕ ಟ್ವಿಸ್ಟ್​
Image Credit : Instagram

ರೋಚಕ ಟ್ವಿಸ್ಟ್​

ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್​ನಲ್ಲಿ ಈಗ ಯಾರೂ ಊಹಿಸದ ರೋಚಕ ಟ್ವಿಸ್ಟ್​ ಸಿಕ್ಕಿದೆ. ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿಯುತ್ತಲೇ, ಆ ಸತ್ಯ ವಿಶ್ವನಿಗೆ ಗೊತ್ತು ಎನ್ನುವುದು ಸೈಕೋ ಜಯಂತ್​ಗೆ ತಿಳಿದಿದೆ.

26
 ಶ್ರದ್ಧಾಂಜಲಿ ಸಭೆ
Image Credit : Instagam

ಶ್ರದ್ಧಾಂಜಲಿ ಸಭೆ

ಇದೇ ಕಾರಣಕ್ಕೆ, ಜಾಹ್ನವಿಯ ಶ್ರದ್ಧಾಂಜಲಿ ಸಭೆಯ ನೆಪದಲ್ಲಿ ವಿಶ್ವನನ್ನು ಮಾತ್ರ ಕರೆದಿದ್ದಾನೆ. ಹೀಗೆ ಮಾತು ಮಾತಿನಲ್ಲಿ ವಿಶ್ವನ ಮೇಲೆ ರೇಗಾಡಿದ ಜಯಂತ್​ ಜಾಹ್ನವಿ ಬದುಕಿರುವುದು ನನಗೆ ಗೊತ್ತಿದೆ, ಎಲ್ಲಿ ಇದ್ದಾಳೆ ಹೇಳು ಎಂದಿದ್ದಾನೆ.

Related Articles

Related image1
Bhagyalakshmi ಆದಿ ಜೊತೆ ಮದ್ವೆಗೆ ರೆಡಿಯಾದಳಾ ಭಾಗ್ಯ? ಮದುಮಗಳ ಲುಕ್ ಹಿಂದಿರೋ ಸೀಕ್ರೆಟ್​ ಏನು?
Related image2
Bigg Bossಗೆ ಹೋದ ನಟಿ: 'Puttakkana Makkalu' ಬಂಗಾರಮ್ಮ ಸ್ಥಿತಿ ಚಿಂತಾಜನಕ- ಆಸ್ಪತ್ರೆಗೆ ದಾಖಲು!
36
ಪಿಸ್ತೂಲ್​ನಿಂದ ಗುರಿ
Image Credit : Instagam

ಪಿಸ್ತೂಲ್​ನಿಂದ ಗುರಿ

ಆದರೆ ವಿಶ್ವ ನನಗೆ ಗೊತ್ತಿಲ್ಲ ಎಂದಿದ್ದಾನೆ. ಸಿಟ್ಟಿಗೆದ್ದ ಜಯಂತ್​, ಪಿಸ್ತೂಲ್​ ತೆಗೆದು ವಿಶ್ವನ ತಲೆಗೆ ಗುರಿಯಿಟ್ಟು ಹೇಳ್ತಿಯೋ ಇಲ್ವೋ ಎಂದು ಪ್ರಶ್ನಿಸಿದ್ದಾನೆ.

46
ವಿಶ್ವನ ಚಾಲೆಂಜ್​
Image Credit : Instagam

ವಿಶ್ವನ ಚಾಲೆಂಜ್​

ಅದಕ್ಕೆ ವಿಶ್ವ, ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ಹೇಳಿದ್ದಾನೆ. ಆದರೆ ಆಕೆ ಎಲ್ಲಿದ್ದಾಳೆ ಎನ್ನುವ ಸತ್ಯ ನನಗೆ ಮಾತ್ರ ಗೊತ್ತು. ಅಷ್ಟು ಸಾಧ್ಯವಾದರೆ ನೀನೇ ಹುಡುಕಿ ನೋಡು ಎಂದು ಚಾಲೆಂಜ್​ ಹಾಕಿ ಹೊರಟು ಹೋಗಿದ್ದಾನೆ.

56
ವಿಶ್ವನ ಮೇಲೆ ಸಿಟ್ಟು
Image Credit : Instagam

ವಿಶ್ವನ ಮೇಲೆ ಸಿಟ್ಟು

ಇದನ್ನು ಕೇಳಿ ಜಯಂತ್​ ಸುಮ್ಮನಾಗಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ವಿಶ್ವನ ಮೇಲೆ ಹಲವು ನೆಟ್ಟಿಗರು ಕೋಪಗೊಂಡಿದ್ದಾರೆ. ಜಯಂತ್​ ಮನಸ್ಸು ಮಾಡಿದ್ದರೆ ನಿನ್ನನ್ನು ಅಲ್ಲಿಯೇ ಸಾಯಿಸಿಬಿಡಬಹುದಿತ್ತು. ಆದರೆ ಆತ ಒಳ್ಳೆಯವನು. ಅದಕ್ಕೆ ಹಾಗೆ ಮಾಡಲಿಲ್ಲ ಎನ್ನುತ್ತಿದ್ದಾರೆ.

66
ಜಾಹ್ನವಿ ಕಥೆ ಏನು?
Image Credit : Instagram

ಜಾಹ್ನವಿ ಕಥೆ ಏನು?

ವಿಶ್ವನಿಗೆ ತಿಳಿದಿರೋ ಸತ್ಯ ಜಯಂತ್​ಗೆ ತಿಳಿಯದೇ ಇರುತ್ತಾ? ಇನ್ನು ಚಿನ್ನುಮರಿ ತಪ್ಪಿಸಿಕೊಳ್ಳೋದು ಬಹಳನೇ ಕಷ್ಟ. ಇದೀಗ ವಿಶ್ವ ಕೊಟ್ಟಿರೋ ಏಟಿಗೆ ಜಯಂತ್​ ಮತ್ತಷ್ಟು ರೋಷದಿಂದ ಜಾಹ್ನವಿಯ ಹುಡುಕಾಟ ಅಂತೂ ಮಾಡಿಯೇ ತೀರುತ್ತಾನೆ. ಹಾಗಿದ್ರೆ ಮುಂದೇನು?

ಸೀರಿಯಲ್​ ಪ್ರೊಮೋ ನೋಡಲು ಇದರ ಮೇಲೆ ಕ್ಲಿಕ್​ ಮಾಡಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡ
ಸಂಬಂಧಗಳು
ಕನ್ನಡ ಧಾರಾವಾಹಿಗಳ ಟಿಆರ್‌ಪಿ
ಟಿವಿ ಶೋ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved