(J)ಜೆಡಿಎಸ್, (C)ಕಾಂಗ್ರೆಸ್, (B)ಬಿಜೆಪಿಯಲ್ಲಿ ನೊಂದವರಿಗೆ ಹೊಸ ಪಕ್ಷ ಜೆಸಿಬಿ, ಯತ್ನಾಳ್ ಸೂಚನೆ, ವಿಜಯೇಂದ್ರರನ್ನು ಅಧ್ಯಕ್ಷ ಮಾಡಿದರೆ ಯತ್ನಾಳ್ ಹೊಸ ಪಕ್ಷ ಅಧಿಕೃತವಾಗಿ ಘೋಷಣೆಯಾಗಲಿದೆ. ಹೊಸ ಪಕ್ಷ ಕುರಿತು ಯತ್ನಾಳ್ ಸೂಚನೆ ಸಂಚಲನ ಸೃಷ್ಟಿಸಿದೆ
ಬೆಳಗಾವಿ (ಅ.29) ಬಿಜೆಪಿಯಿಂದ ಉಚ್ಚಾಟಿತಗೊಂಡಿರುವ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಇದೀಗ ಹೊಸ ಪಕ್ಷದ ಸುಳಿವು ನೀಡಿದ್ದಾರೆ. ಜೆಸಿಬಿ ಹೆಸರಿನಲ್ಲಿ ಹೊಸ ಪಕ್ಷ ಕಟ್ಟುವುದಾಗಿ ಯತ್ನಾಳ್ ಸೂಚಿಸಿದ್ದಾರೆ. ಇದು ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ನೊಂದವರಿಗಾಗಿ ಕಟ್ಟುತ್ತಿರುವ ಪಕ್ಷ ಎಂದು ಯತ್ನಾಳ್ ಹೇಳಿದ್ದಾರೆ. ಪ್ರಮುಖವಾಗಿ ಬಿಜೆಪಿ ಹೈಕಮಾಂಡ್ ಮತ್ತೆ ಬಿವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದರೆ, ನಾವು ಪಕ್ಷ ಕಟ್ಟುವುದು ಖಚಿತ ಎಂದು ಯತ್ನಾಳ್ ಘೋಷಿಸಿದ್ದಾರೆ.
ಜೆ ಅಂದ್ರೆ ಜೆಡಿಎಸ್‌ನಲ್ಲಿ, ಸಿ ಅಂದ್ರೆ ಕಾಂಗ್ರೆಸ್ ಹಾಗೂ ಬಿ ಅಂದ್ರೆ ಬಿಜೆಪಿ
ಯತ್ನಾಳ್ ಹೊಸ ಪಕ್ಷದ ಹೆಸರು. ಇದು ಜೆ ಅಂದ್ರೆ ಜೆಡಿಎಸ್‌ನಲ್ಲಿ, ಸಿ ಅಂದ್ರೆ ಕಾಂಗ್ರೆಸ್ ಹಾಗೂ ಬಿ ಅಂದ್ರೆ ಬಿಜೆಪಿ. ಈ ಮೂರು ಪಕ್ಷದಲ್ಲಿ ನೊಂದವರು ನಮ್ಮ ಪಕ್ಷ ಸೇರುತ್ತಾರೆ. ಈಗ ಬಿಜೆಪಿಯಲ್ಲಿರುವವ 50 ಶಾಸಕರ ಬೆಂಬಲ ನನಗಿದೆ. ಹೆಚ್ಚಿನ ಸಂಖ್ಯೆಯ ಸಂಸದರ ಬೆಂಬಲವೂ ನನಗಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿನ ತಪ್ಪು ನಿರ್ಧಾರ ದುಬಾರಿಯಾಗಲಿದೆ ಎಂದು ಯತ್ನಾಳ್ ಎಚ್ಚರಿಸಿದ್ದಾರೆ.
ವಿಜಯೇಂದ್ರ ಅಧ್ಯಕ್ಷರಾದರೆ ಹೊಸ ಪಕ್ಷ ಖಚಿತ
ವಿಜಯೇಂದ್ರ ಮರಳಿ ರಾಜ್ಯ ಬಿಜೆಪಿ ಅಧ್ಯಕ್ಷರಾದ್ರೆ ನಾನು ಹೊಸ ಪಕ್ಷ ಕಟ್ಟುತ್ತೇನೆ. ಅತೀ ಹೆಚ್ಚು ಬೆಂಬಲವೂ ನನಗಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಿಜೆಪಿ ಹೈಕಮಾಂಡ್ ವಿಜಯೇಂದ್ರರನ್ನು ಅಧ್ಯಕ್ಷ ಮಾಡಬಾರದು. ಒಂದು ವೇಳೆ ವಿಜಯೇಂದ್ರ ಅಧ್ಯಕ್ಷರಾದ್ರೆ ನಾನು ಜಿಸಿಬಿ ಪಕ್ಷ ಕಟ್ಟುವೆ ಎಂದು ಯತ್ನಾಳ್ ಸೂಚಿಸಿದ್ದಾರೆ.
ಹಿಂದುತ್ವದ ಆಧಾರದಲ್ಲಿ ಪಕ್ಷ
ಬಸನಗೌಡಪಾಟೀಲ್ ಯತ್ನಾಳ್ ತಮ್ಮ ಹೊಸ ಜೆಸಿಬಿ ಪಕ್ಷ ಕಟ್ಟಲು ಎಲ್ಲಾ ತಯಾರಿ ಮಾಡಿದ್ದೇವೆ. ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿದ್ದೇವೆ. ವಿಜಯೇಂದ್ರ ನೇಮಿಸಿದ ಮರುದಿನವೇ ಪಕ್ಷ ಸ್ಥಾಪನೆ ಆಗಲಿದೆ. ಹಲವು ಕಡೆ ಪ್ರವಾಸ ಮಾಡಿದ್ದೇನೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಹಿಂದುತ್ವದ ಪರವಾಗಿ ಧೈರ್ಯವಾಗಿ ನಿಂತಿರುವ ಕಾರಣ ಜನರು ಉತ್ತಮ ಬೆಂಬಲ ಸೂಚಿಸುತ್ತಿದ್ದಾರೆ. ಜೆಸಿಬಿ ಪಕ್ಷ ಹಿಂದುತ್ವದ ಆಧಾರದ ಮೇಲೆ ಕಟ್ಟುವ ಪಕ್ಷ. ಇಲ್ಲಿ ಹಿಂದುತ್ವವೇ ಪ್ರಧಾನ. ಹಿಂದೂ ಸಮುದಾಯದ ನಾಡಿಮಿಡಿತವಾಗಿ ಈ ಪಕ್ಷ ಕಾರ್ಯನಿರ್ವಹಿಸಲಿದೆ ಎಂದು ಬಸನಗೌಡಪಾಟೀಲ್ ಯತ್ನಾಳ್ ಹೇಳಿದ್ದಾರೆ.
