- Home
- Entertainment
- TV Talk
- Bigg Bossಗೆ ಹೋದ ನಟಿ: 'Puttakkana Makkalu' ಬಂಗಾರಮ್ಮ ಸ್ಥಿತಿ ಚಿಂತಾಜನಕ- ಆಸ್ಪತ್ರೆಗೆ ದಾಖಲು!
Bigg Bossಗೆ ಹೋದ ನಟಿ: 'Puttakkana Makkalu' ಬಂಗಾರಮ್ಮ ಸ್ಥಿತಿ ಚಿಂತಾಜನಕ- ಆಸ್ಪತ್ರೆಗೆ ದಾಖಲು!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಬಂಗಾರಮ್ಮ ಖ್ಯಾತಿಯ ಮಂಜು ಭಾಷಿಣಿ ಅವರು ಬಿಗ್ ಬಾಸ್ 12 ರಿಂದ ಹೊರಬಂದಿದ್ದಾರೆ. ಅವರು ಬಿಗ್ ಬಾಸ್‌ಗೆ ಹೋದ ಕಾರಣ, ಧಾರಾವಾಹಿಯಲ್ಲಿ ಅವರ ಪಾತ್ರವನ್ನು ಕೋಮಾಕ್ಕೆ ಜಾರುವಂತೆ ತೋರಿಸಲಾಗಿದ್ದು, ಮುಂದೆ ಅವರೇ ಈ ಪಾತ್ರದಲ್ಲಿ ಮುಂದುವರೆಯುತ್ತಾರೆಯೇ ಎಂಬ ಕುತೂಹಲ ಮೂಡಿದೆ.

ಬಂಗಾರಮ್ಮನಾಗಿದ್ದ ಮಂಜು ಭಾಷಿಣಿ
ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಇದೀಗ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗಿದೆ. ಇದರಲ್ಲಿ ಎಲ್ಲರ ಗಮನ ಸೆಳೆದ ಕ್ಯಾರೆಕ್ಟರ್ಗಳಲ್ಲಿ ಒಂದು ಬಂಗಾರಮ್ಮನ ಕ್ಯಾರೆಕ್ಟರ್. ಅದನ್ನು ನಿಭಾಯಿಸಿದವರು Bigg Boss 12 ಖ್ಯಾತಿಯ ಮಂಜು ಭಾಷಿಣಿ ಅವರು.
ಬಂಗಾರಮ್ಮ ಎಂದೇ ಫೇಮಸ್
ಮಂಜು ಭಾಷಿಣಿ ಎಂದರೆ, ಇಲ್ಲಿಯವರೆಗೆ ಯಾರಿಗೂ ತಿಳಿಯುತ್ತಿರಲಿಲ್ಲ. ಬಂಗಾರಮ್ಮ ಎಂದೇ ಫೇಮಸ್ ಆಗಿರುವ ನಟಿ, ಇದೀಗ ಬಿಗ್ಬಾಸ್ನಿಂದಾಗಿ ಮಂಜು ಭಾಷಿಣಿ (Manju Bhashini) ಎನ್ನುವುದು ಎಲ್ಲರಿಗೂ ತಿಳಿಯುವಂತಾಗಿದೆ.
ಬಂಗಾರಮ್ಮ ಸ್ಥಿತಿ ಚಿಂತಾಜನಕ
ಬಿಗ್ಬಾಸ್ಗೆ ಹೋದ ಹಿನ್ನೆಲೆಯಲ್ಲಿ, ಪುಟ್ಟಕ್ಕನ ಮಕ್ಕಳು ಬಂಗಾರಮ್ಮನ ಕ್ಯಾರೆಕ್ಟರ್ ಅನ್ನು ಸಾಯಿಸಿಯೇ ಬಿಟ್ಟರು ಎನ್ನಲಾಗಿತ್ತು. ಆದರೆ ಬಂಗಾರಮ್ಮನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪುಟ್ಟಕ್ಕನ ಹರಕೆ
ಅತ್ತ ಸಹನಾ ಮತ್ತು ಪುಟ್ಟಕ್ಕ ಬಂಗಾರಮ್ಮನಿಗಾಗಿ ಹರಕೆ ಹೊತ್ತಿದ್ದಾರೆ. ಈಗ ರಿಲೀಸ್ ಆಗಿರುವ ಪ್ರೊಮೋದಲ್ಲಿ ಬಂಗಾರಮ್ಮನ ಕ್ಯಾರೆಕ್ಟರ್ ಬದಲಾಗಿರುವುದನ್ನು ನೋಡಬಹುದು. ಬಿಗ್ಬಾಸ್ನಿಂದ ನಟಿ ಇಷ್ಟು ಬೇಗ ಹೊರಕ್ಕೆ ಬರುತ್ತಾರೆ ಎಂದು ತಿಳಿದಿದ್ದರೆ ಬಹುಶಃ ಈ ಪಾತ್ರವನ್ನು ಬದಲು ಮಾಡುತ್ತಿರಲಿಲ್ಲವೇನೋ.
ಸಂದರ್ಶನದಲ್ಲಿ ಹೇಳಿದ್ದೇನು?
ನಟಿ ಮಂಜು ಭಾಷಿಣಿ ಕೂಡ ಇದನ್ನೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಇದೀಗ ಪಾತ್ರ ಬದಲಾಗಿರುವುದನ್ನು ನೋಡಬಹುದಾಗಿದೆ. ಕೋಮಾಕ್ಕೆ ಜಾರಿರುವುದನ್ನು ತೋರಿಸಲಾಗಿದೆ. ಇನ್ನು ಮಂಜು ಭಾಷಿಣಿ ಅವರು ಹೊರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮುಂದೆ ಅವರೇ ಈ ಪಾತ್ರದಲ್ಲಿ ಮುಂದುವರೆಯಲಿದ್ದಾರೆ ಎನ್ನುವುದನ್ನು ಇನ್ನಷ್ಟೇ ನೋಡಬೇಕಿದೆ.
ಮೂರನೇ ವಾರಕ್ಕೆ ಹೊರಗೆ
ಇನ್ನು ನಟಿಯ ಕುರಿತು ಹೇಳುವುದಾದರೆ, ಮಂಜು ಭಾಷಿಣಿ ಅವರು, ಮೂರನೇ ವಾರಕ್ಕೆ Bigg Boss 12 ಮನೆಯಿಂದ ಹೊರಬಂದಿದ್ದಾರೆ. ಅಷ್ಟಕ್ಕೂ, ನಟಿ ಇದಾಗಲೇ ಸಿನಿಮಾಗಳಲ್ಲಿಯೂ ಫೇಮಸ್. 1997 ರಲ್ಲಿ ತೆರೆಕಂಡ ಪ್ರಶಸ್ತಿ ವಿಜೇತ ಚಿತ್ರ `ಭೂಮಿ ತಾಯಿ' ಮೂಲಕ ಜನಪ್ರಿಯರಾದರು.
ಅಕಾಡೆಮಿ ನಡೆಸುತ್ತಿದ್ದಾರೆ
ಇವರು ಈ ಟಿವಿ ಕನ್ನಡದಲ್ಲಿ ಪ್ರಸಾರವಾದ `ಸಿಲ್ಲಿ ಲಲ್ಲಿ' ಧಾರವಾಹಿಯ ಸಮಾಜಸೇವಕಿ ಲಲಿತಾಂಬ ಪಾತ್ರದ ಮೂಲಕ ತುಂಬಾ ಪ್ರಸಿದ್ಧಿ ಪಡೆದರು. ಇವರು `ಲೈಮ್ ಲೈಟ್ ಆಕ್ಟಿಂಗ್ ಅಕಾಡೆಮಿ'ಯನ್ನು ಮುನ್ನಡೆಸುತ್ತಿದ್ದಾರೆ.
ಇದನ್ನೂ ಓದಿ: ಫ್ಯಾನ್ಸ್ಗೆ ಬಿಗ್ ಶಾಕ್ ಕೊಟ್ಟ Bigg Boss ಮಂಜು ಭಾಷಿಣಿ: ನಟಿಯ ನಿರ್ಧಾರದಿಂದ ಅಭಿಮಾನಿಗಳಲ್ಲಿ ಬೇಸರ