ಮಕ್ಕಳ ದಿನಾಚರಣೆಯ ಪ್ರಯುಕ್ತ ನವೆಂಬರ್‌ 14ರಂದು ಮಕ್ಕಳ ಜೊತೆಗೆ ಪೋಷಕರು ಕೂಡ ನೋಡುವಂತಹ ಸಿನಿಮಾವೊಂದು ಚಿತ್ರಮಂದಿರಗಳಿಗೆ ಬರುತ್ತಿದೆ. ಚಿತ್ರದ ಹೆಸರು ‘ಕೈಟ್‌ ಬ್ರದರ್ಸ್‌’. ವಿರೇನ್‌ ಸಾಗರ್‌ ಬಗಾಡೆ ನಿರ್ದೇಶನದ ಚಿತ್ರವಿದು.

ಮಕ್ಕಳ ದಿನಾಚರಣೆಯ ಪ್ರಯುಕ್ತ ನವೆಂಬರ್‌ 14ರಂದು ಮಕ್ಕಳ ಜೊತೆಗೆ ಪೋಷಕರು ಕೂಡ ನೋಡುವಂತಹ ಸಿನಿಮಾವೊಂದು ಚಿತ್ರಮಂದಿರಗಳಿಗೆ ಬರುತ್ತಿದೆ. ಚಿತ್ರದ ಹೆಸರು ‘ಕೈಟ್‌ ಬ್ರದರ್ಸ್‌’. ವಿರೇನ್‌ ಸಾಗರ್‌ ಬಗಾಡೆ ನಿರ್ದೇಶನದ ಚಿತ್ರವಿದು. ವಿರೇನ್‌ ಸಾಗರ್‌ ಬಗಾಡೆ ಮಾತನಾಡಿ, ಇದು ನನ್ನ ಹಲವು ವರ್ಷಗಳ ಮೊದಲ ಪ್ರಯತ್ನದ ಸಿನಿಮಾ. ಹಳ್ಳಿ, ಸರ್ಕಾರಿ ಶಾಲೆ, ಮಕ್ಕಳು ಮತ್ತು ಸರ್ಕಾರಿ ವ್ಯವಸ್ಥೆಯೇ ಚಿತ್ರದ ಪ್ರಧಾನ ಅಂಶಗಳು. ಮಕ್ಕಳ ಚಿತ್ರವಾದರೂ, ಎಲ್ಲಾ ವಯಸ್ಸಿನವರೂ ನೋಡಬೇಕಾದ ಉತ್ತಮ ಸಂದೇಶವಿರುವ ಚಿತ್ರ. ಹಳೆಯ ಸರ್ಕಾರಿ ಶಾಲೆಗಳನ್ನು ಸರ್ಕಾರವೇ ಸರಿಪಡಿಸಬೇಕು ಎಂದು ಕಾಯಬಾರದು.

ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಜವಾಬ್ದಾರಿ ಏನು, ಭವಿಷ್ಯಕ್ಕಾಗಿ ಕಾಯುತ್ತಿರುವ ಮಕ್ಕಳ ಬದುಕಿನಲ್ಲಿ ಇವರು ಹೇಗೆ ಬೆಳಕು ಮೂಡಿಸಬಹುದು, ಇದರ ಜೊತೆಗೆ ಸರ್ಕಾರದ ಪಾತ್ರವೇನು ಎಂದು ಹೇಳುವ ಚಿತ್ರವಿದು. ರೈಟ್‌ ಬ್ರದರ್ಸ್ ಅವರು ಫ್ಲೈಟ್‌ ಇಂಜಿನಿಯರಿಂಗ್‌ನಲ್ಲಿ ಆವಿಷ್ಕಾರ ಮಾಡಿದ್ದಾರೆ. ಆದರೆ, ಇಲ್ಲಿರುವ ಕೈಟ್‌ ಬ್ರದರ್ಸ್‌ ವಿದ್ಯಾರ್ಥಿಗಳು ಗಾಳಿಪಟದಲ್ಲೂ ಇಂಜಿನಿಯರಿಂಗ್‌ ಮಾಡಿದ್ದಾರೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು.

ದೂರದ ಅಹಮದಾಬಾದ್‌ನಲ್ಲಿ ನಡೆಯುವ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿ ಕೈಟ್‌ನಲ್ಲಿ ಮಾಡುವ ಆವಿಷ್ಕಾರದಿಂದಾಗಿ ಪಡೆಯುವ ಒಂದು ರೋಚಕ ಗೆಲುವಿನ ಕಾರಣ ಕೈಟ್‌ ಬ್ರದರ್ಸ್ ಎನಿಸಿಕೊಳ್ಳುತ್ತಾರೆ. ಇವರು ಕೈಟ್‌ ಸ್ಪರ್ಧೆಯಲ್ಲಿ ಭಾಗವಹಿಸುವುದು ಯಾಕೆ ಮತ್ತು ಅವರ ಪ್ರಯಾಣವೇ ಚಿತ್ರದ ರೋಚಕತೆ ಎಂದು ಹೇಳಿದರು. ಅಶೋಕ್‌ ಕಶ್ಯಪ್‌, ನಾನು ಈವರೆಗೂ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಣ ಮಾಡಿದ್ದೇನೆ. ಅದರಲ್ಲಿ ಮೊದಲ ನಿರ್ದೇಶಕರ ಚಿತ್ರಗಳಿಗೆ ಹೆಚ್ಚು ಕೆಲಸ ಮಾಡಿದ್ದೇನೆ. ವಿರೇನ್‌ ಸಾಗರ್‌ ಬಗಾಡೆ ಉತ್ತಮ ನಿರ್ದೇಶಕರು. ಒಳ್ಳೆಯ ಕಥೆ ಮಾಡಿದ್ದಾರೆ ಎಂದರು.

ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ

ವಿನೋದ್‌ ಬಗಾಡೆ, ನಿರ್ಮಾಪಕ ಬಿ ಎಸ್‌ ಮಂಜುನಾಥ್ ಮಾತನಾಡಿ, ‘ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ’ ಎಂದರು. ಮಂಜುನಾಥ್‌ ಬಿ ಎಸ್‌, ರಜನಿಕಾಂತ್‌ ರಾವ್‌ ಹಾಗೂ ಮಂಜುನಾಥ್‌ ಬಗಾಡೆ ನಿರ್ಮಿಸಿರುವ ಈ ಚಿತ್ರಕ್ಕೆ ಅಶೋಕ್‌ ಕಶ್ಯಪ್‌ ಕ್ಯಾಮೆರಾ, ಅನೀಶ್‌ ಚೆರಿಯನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಣಿಲ್‌ ನಾಡಗೀರ್‌, ಸಮರ್ಥ ಆಶಿ, ವಿನೋದ್‌ ಬಗಾಡೆ, ಅನಂತ ದೇಶಪಾಂಡೆ, ಪ್ರಭು ಹಂಚಿನಾಳ, ಶ್ರೇಯಾ ಹರಿಹರ, ರಾಜೀವ್‌ ಸಿಂಗ್ ಹಲವಾಯಿ ನಟಿಸಿದ್ದಾರೆ.