ಕಾಣಬಾರದ್ದೆಲ್ಲಾ ಕಂಡೋಯ್ತಮ್ಮಾ, ಈಗೇನ್​ ಡ್ರೆಸ್​ ಸರಿಮಾಡ್ಕೋತ್ಯಾ? ತುಪ್ಪದ ಬೆಡಗಿ ರಾಗಿಣಿ ಟ್ರೋಲ್​- ವಿಡಿಯೋ ವೈರಲ್​

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ತಮ್ಮ ಚೋಟುದ್ದ ಡ್ರೆಸ್​ನಿಂದ ಸಕತ್​ ಟ್ರೋಲ್​ಗೆ ಒಳಗಾಗಿದ್ದಾರೆ. ವೇದಿಕೆ ಮೇಲೆ ಆಗಿದ್ದೇನು ನೋಡಿ...
 

Tuppada Bedagi Actress Ragini Dwivedi has been trolled for her dress video gone viral suc

ಚಿತ್ರ ನಟಿಯರು ಎಂದರೆ ಹಾಗೆ ಅಲ್ವೆ? ಫಂಕ್ಷನ್​ಗಳಿಗೆ ಹೋಗುವಾಗ ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್​ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್​ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಕೆಲವೊಮ್ಮೆ ಹೀಗೆ ಆದರೆ ಟ್ರೋಲ್​ ಆಗಿ ಸಕತ್​ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್​ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ. ಡ್ರೆಸ್​ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.

ಇದೀಗ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸರದಿ. ಸ್ಲಿಟ್​ ಡ್ರೆಸ್​​ ಹಾಕಿಕೊಂಡು ಬಂದಿರುವ ನಟಿ ಕಾಲ ಮೇಲೆ ಕಾಲು ಹಾಕಿಕೊಂಡು ಫಂಕ್ಷನ್​ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಒಳಉಡುಪು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಪಾಪರಾಜಿಗಳು ಸುಮ್ಮನೇ ಇರ್ತಾರಾ? ಝೂಮ್​ ಮಾಡಿ ತೋರಿಸಿದ್ದಾರೆ. ಆದರೆ ರಾಗಿಣಿಗೆ ಇದರ ಅರಿವೇ ಇಲ್ಲ. ಇದ್ದರೂ ಏನೂ ಮಾಡುತ್ತಿರಲಿಲ್ಲ ಬಿಡಿ, ಇದೇನು ನಟಿಯರಿಗೆ ಹೊಸ ವಿಷಯವೇನಲ್ಲ. ಆದರೂ ರಾಗಿಣಿ ಡ್ರೆಸ್​ ಅನ್ನು ಕೈಯಿಂದ ಸರಿ ಮಾಡಿಕೊಳ್ಳಲು ಒದ್ದಾಡಿದರು. ಇರೋದೇ ತುಂಡು ಡ್ರೆಸ್​, ಇನ್ನೆಲ್ಲಿ ಸರಿ ಮಾಡಿಕೊಳ್ಳೋದು? ಇದರ ವಿಡಿಯೋ ವೈರಲ್​ ಆಗಿದೆ. ಬಿಸಿಬಿಸಿ ತುಪ್ಪ ಎಂದು ಕ್ಯಾಪ್ಷನ್​ ಕೊಡಲಾಗಿದೆ. ಇನ್ನು ಟ್ರೋಲಿಗರು ಕೇಳಬೇಕೆ? ಈಕೆ ಈಗಾಗಲೇ ಏನು ಬೇಡವೋ ಎಲ್ಲವೂ ತೋರಿಸಿಯಾಗಿದೆ ಬಿಡಿ, ಇದೇನೂ ಹೊಸತಲ್ಲ. ಸದ್ಯ ಒಳ ಉಡುಪು ಹಾಕಿಕೊಂಡಿರೋದೇ ಪುಣ್ಯ ಎಂದಿದ್ದಾರೆ. ಮತ್ತೆ ಕೆಲವರು ವೇದಿಕೆಯ ಮೇಲೆ ಬರುವಾಗ ಯಾವ ರೀತಿಯ ಶಿಸ್ತು ಇರಬೇಕು ಎನ್ನುವ ಪಾಠ ಮಾಡಿದ್ದಾರೆ. ಅದೇನೇ ಇದ್ದರೂ, ನಟಿಯರು ಅಟೆನ್ಷನ್​ಗೋಸ್ಕರವೇ ಈ ರೀತಿ ಮಾಡುವುದು ಎನ್ನುವ ಸತ್ಯವೇನೂ ಗುಟ್ಟಾಗಿ ಉಳಿದಿಲ್ಲ.

Latest Videos

ಅತ್ತ ಸ್ವರಾ- ಇತ್ತ ಸೋನಾಕ್ಷಿ... ಬಣ್ಣರಹಿತ ಗಂಡಂದಿರು! ಟ್ರೋಲಿಗರ ಬಾಯಿ ಮುಚ್ಚಿಸಲು ಹೋಗಿ ಇದೇನಾಗೋಯ್ತು?

ಇನ್ನು ನಟಿ ರಾಗಿಣಿ ಕುರಿತು ಹೇಳುವುದಾದರೆ, ಆಗಾಗ್ಗೆ ಇವರು ಹಾಟ್​ ಫೋಟೋಶೂಟ್​ ಮಾಡಿಸುತ್ತಲೇ ಇರುತ್ತದೆ.  ತುಪ್ಪ ಬೇಕಾ ತುಪ್ಪ ಅನ್ನೋ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಸ್ಯಾಂಡಲ್​ವುಡ್​ ಚೆಲುವೆ ಈಕೆ.  ರಾಗಿಣಿ ಅಂದ್ರೆ ಸಾಕು ಪಡ್ಡೆ ಹುಡುಗರು ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಾರೆ.  ಏಕಾಏಕಿ ದಪ್ಪ ಆಗಿ ಸ್ವಲ್ಪ ಸಮಯ ಸಿನಿಮಾಗಳಿಂದ ದೂರ ಉಳಿದು ಸಮಾಜ ಸೇವೆ ಮಾಡಿಕೊಂಡು ಇದ್ದ ನಟಿ,  ಪುನಃ ತೂಕ ಇಳಿಸಿಕೊಂಡು ಸಿನಿಮಾಗಳಲ್ಲಿ ಬಿಜಿ ಆಗಿದ್ದಾರೆ. ಹಾಟ್​ ಫೋಟೋಶೂಟ್​ ಮಾಡಿಕೊಂಡು ಮತ್ತೆ ಯುವ ಹೃದಯಗಳಲ್ಲಿ ಕಚಗುಳಿ ಇಡುತ್ತಿದ್ದಾರೆ.  ಇದರ ಜೊತೆಗೆ ಯೋಗ, ಧ್ಯಾನದಲ್ಲಿಯೂ ತೊಡಗಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾಗಳ ಜೊತೆಗೆ  ರಾಜಕೀಯದಲ್ಲಿಯೂ ಗುರುತಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎನ್ನಲಾಗಿದೆ.  

ಕೆಲ ದಿನಗಳ ಹಿಂದೆ ಇವರು ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ಸಮಾಜಕ್ಕೆ, ಬಡವರಿಗೆ ಆದಷ್ಟು ಸಹಾಯ ಮಾಡಬೇಕು ಅನ್ನೋ ಮನಸ್ಥಿತಿ ಇರೋ ನಟಿಗೆ ಮದುವೆಯಾಗುವ ಆಸೆ ಇದ್ಯಾ? ಇವರ ಮದ್ವೆ ಯಾವಾಗ? ಈ ಬಗ್ಗೆ ಪ್ರತಿಬಾರಿಯೂ ಪ್ರಶ್ನೆಗಳ ಸುರಿಮಳೆಯೇ ಆಗ್ತಿದ್ದು ಅದಕ್ಕೆ ಉತ್ತರಿಸಿದ್ದರು.  ಅಂದಹಾಗೆ ನಟಿಗೆ 34 ವರ್ಷ ವಯಸ್ಸು. ನಿಮ್ಮ ವಯಸ್ಸಿನವರು ಅಥವಾ ಸ್ನೇಹಿತರು ಮದುವೆಯಾಗಿ, ಮಕ್ಕಳು ಮಾಡಿಕೊಂಡು ಸೆಟ್ಲ್​ ಆದಾಗ ನಿಮಗೂ ಹಾಗೆಯೇ ಅನ್ನಿಸುತ್ತಾ ಎಂದು ಪ್ರಶ್ನಿಸಿದಾಗ ರಾಗಿಣಿ ಅವರು, ಅದು ನನಗೆ ತುಂಬಾ ಖುಷಿ ಕೊಡುತ್ತದೆ. ಮದುವೆಯಾಗುವುದು, ಮಕ್ಕಳು ಮಾಡಿಕೊಳ್ಳುವುದು ಖುಷಿಯ ವಿಚಾರ. ನನಗೂ ಮದುವೆ ಎಂದರೆ ಇಷ್ಟನೇ. ಹಾಗೆಂದು ಅವರು ಮದ್ವೆಯಾಗ್ತಿದ್ದಾರೆ, ಇವರು ಆಗ್ತಿದ್ದಾರೆ ಎಂದು ನಾವು ಆಗಬಾರದು. ಅದು ನ್ಯಾಚುರಲ್​  ಆಗಿ ಆಗಬೇಕು. ಬೇರೆಯವರು ಫೋರ್ಸ್​ ಮಾಡ್ತಾ ಇದ್ದಾರೆ ಎಂದು ಆದರೆ ಎಡವಟ್ಟು ಆಗುತ್ತದೆ ಎಂದಿದ್ದರು.  ಯಾರ ಡೆಸ್ಟಿನಿ ಹೇಗೋ ಗೊತ್ತಿಲ್ಲ. ಮದುವೆಯಾಗಿ ಒಂದರೆಡು ವರ್ಷಗಳಲ್ಲಿ ಬ್ರೇಕಪ್​, ಡಿವೋರ್ಸ್​ ಆಗ್ತಿದೆ. ಕೆಲವು ಸಂದರ್ಭಗಳಲ್ಲಿ ಸಂಗಾತಿ ಬೆಸ್ಟ್​ ಆಗಿದ್ದರೂ ಯಾರೋ ವರ್ಕ್​ಔಟ್​ ಆಗಲ್ಲ. ಆದ್ದರಿಂದ ಮದುವೆಗೆ ಗಡಿಬಿಡಿ ಮಾಡಬಾರದು ಅದು ಫ್ಲೋನಲ್ಲಿಯೇ ಆಗಬೇಕು ಎಂದಿದ್ದರು.  

ಅರೆಬರೆ ಡ್ರೆಸ್​ನಲ್ಲಿ ಪೆಟ್ರೋಲ್​ ತುಂಬಿಸೋದ ತಿಳಿಸಿದ ಯೂಟ್ಯೂಬರ್​: ಕರಿಮಣಿ ಮಾಲೀಕನ ಹುಡುಕಾಟದಲ್ಲಿ ನೆಟ್ಟಿಗರು!

vuukle one pixel image
click me!