ʼನನಗೆ ಟಾಕ್ಸಿಕ್ ರಿಲೇಶನ್‌ಶಿಪ್ ಇತ್ತು, ಈಗ ನಾನು ಅರೇಂಜ್ ಮ್ಯಾರೇಜ್ ಆಗ್ತೀನಿʼ ಎಂದು ʼಲಕ್ಷ್ಮೀ ನಿವಾಸʼ ಧಾರಾವಾಹಿ ನಟಿ ರೂಪಿಕಾ ಹೇಳಿದ್ದಾರೆ.
ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಸಿಂಚನಾ ಪಾತ್ರದಲ್ಲಿ ನಟಿಸಿದ್ದ ರೂಪಿಕಾ ಅರೇಂಜ್ ಮ್ಯಾರೇಜ್ ಆಗಲಿದ್ದಾರಂತೆ. ಅಷ್ಟೇ ಅಲ್ಲದೆ ಈ ಹಿಂದೆ ಟಾಕ್ಸಿಕ್ ರಿಲೇಶನ್‌ಶಿಪ್‌ನಲ್ಲಿದ್ದೆ ಎಂದು ಕೂಡ ಅವರು ಹೇಳಿದ್ದಾರೆ. ಇನ್ನು ಚಿತ್ರರಂಗದಲ್ಲಿರುವ ಗಾಸಿಪ್, ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸ್ತಾರೆ..!
“ನನಗೆ ಬರಬೇಕಾಗಿದ್ದ ಅವಕಾಶಗಳು ಬೇರೆಯವರಿಗೆ ಸಿಕ್ಕಿದೆ. ತಪ್ಪು ಕಲ್ಪನೆಯಿಂದ ನನಗೆ ಸಿಗಬೇಕಾಗಿದ್ದ ಸಂಭಾವನೆ ಕೂಡ ಸಿಕ್ಕಿಲ್ಲ. ಯಾರೋ ಎಲ್ಲೋ ಕೂತವರು ರೂಪಿಕಾ ಬಜೆಟ್ ಜಾಸ್ತಿ, ತುಂಬ ಬ್ಯುಸಿ ಅಂತ ಸುದ್ದಿ ಹಬ್ಬಿಸುತ್ತಾರೆ. ಕಾಂಟ್ಯಾಕ್ಟ್ ನಂಬರ್ ಆರಾಮಾಗಿ ಸಿಗುತ್ತದೆ. ನಮ್ಮನ್ನು ಡೈರೆಕ್ಟ್ ಆಗಿ ಕೇಳೋದಿಲ್ಲ, ಬೇರೆಯವರಿಂದ ಮಾಹಿತಿ ತಗೊಂಡು ಫಿಕ್ಸ್ ಆಗಿಬಿಡುತ್ತಾರೆ. ಕಲಾವಿದರಿಗೆ ಇಂತಿಷ್ಟೇ ಎಂದು ಸಂಭಾವನೆ ಇರೋದಿಲ್ಲ. ಒಂದು ಪ್ರಾಜೆಕ್ಟ್‌ಗೆ ಕಡಿಮೆ ಸಂಭಾವನೆ, ಹೆಚ್ಚು ಸಂಭಾವನೆ ಇರುತ್ತದೆ. ಇನ್ನು ಸ್ನೇಹಕ್ಕೋಸ್ಕರವೋ, ಕಥೆಗೋಸ್ಕರವೋ ಸಂಭಾವನೆ ಪಡೆಯದೇ ನಟಿಸಿರುತ್ತೇವೆ. ಹಾಗಾಗಿ ಎಲ್ಲರೂ ಕಲಾವಿದರನ್ನು ನೇರವಾಗಿ ಕಾಂಟ್ಯಾಕ್ಟ್ ಮಾಡಿ” ಎಂದು ರೂಪಿಕಾ ಹೇಳಿದ್ದಾರೆ.
ವಿಯೆಟ್ನಾಂನಲ್ಲಿ ಲಕ್ಷ್ಮೀ ನಿವಾಸ ಚೆಲುವೆ ಬೊಂಬಾಟ್ ಲುಕ್
ಆದಷ್ಟು ಬೇಗ ಮದುವೆ ಆಗುವೆ
“ನನಗೆ ಲವ್ ಆಗಿ ಬ್ರೇಕಪ್ ಆಗಿದೆ. ಅದು ಟಾಕ್ಸಿಕ್ ರಿಲೇಶನ್‌ಶಿಪ್ ಆಗಿತ್ತು. ಅದು ಜಾಸ್ತಿ ದಿನ ಉಳಿದಿರಲಿಲ್ಲ. ಅದೀಗ ಮುಗಿದು ಹೋಗಿದೆ. ಹೇಳಿಕೊಳ್ಳುವಂತಹ ರಿಲೇಶನ್‌ಶಿಪ್ ಅದಾಗಿರಲಿಲ್ಲ. ನನಗೆ ರಿಲೇಶನ್‌ಶಿಪ್ ಇರಲಿಲ್ಲ ಅಂತ ಸುಳ್ಳು ಹೇಳೋದಿಲ್ಲ, ಇಂದು ಎಲ್ಲರಿಗೂ ಪ್ರೀತಿ ವಿಷಯದಲ್ಲಿ ಒಂದು ಅನುಭವ ಆಗಿರುತ್ತದೆ. ನಾನು ನಟನೆಯಿಂದ ಒಂದು ವರ್ಷ ದೂರ ಆದಾಗ ವಿದೇಶದಲ್ಲಿ ಸೆಟಲ್ ಆಗ್ತೀನಿ ಅಂತ ಸುದ್ದಿ ಹಬ್ಬಿಸಿದ್ದರು. ನಮ್ಮ ಮನೆಯಲ್ಲಿ ನನಗೆ ಹುಡುಗನನ್ನು ನೋಡ್ತಿದ್ದಾರೆ, ಪಕ್ಕಾ ಅರೇಂಜ್ ಮ್ಯಾರೇಜ್ ಆಗಿರತ್ತೆ. ಎಲ್ಲರಿಗೂ ಹೇಳಿ ಮದುವೆ ಆಗ್ತೀನಿ. ತಾತ-ಅಜ್ಜಿ, ಅತ್ತೆ-ಮಾವ ಎಲ್ಲರೂ ಇರುವ ಹುಡುಗ ಸಿಕ್ಕರೆ ತುಂಬ ಖುಷಿ. ಜನರಿಲ್ಲ ಅಂದ್ರೆ ತುಂಬ ಭಯ ಆಗುತ್ತದೆ, ಇನ್ನು ನನ್ನ ವೃತ್ತಿಯನ್ನು ಗೌರವಿಸುವ ಹುಡುಗ ಬೇಕು. ಇಬ್ಬರೂ ಪರಸ್ಪರ ಅರ್ಥಮಾಡಿಕೊಂಡು ಹೋದರೆ ಎಲ್ಲವೂ ಚೆನ್ನಾಗಿರುತ್ತದೆ” ಎಂದು ನಟಿ ರೂಪಿಕಾ ಹೇಳಿದ್ದಾರೆ.
ನಟಿ ರೂಪಿಕಾ ಅವರು ʼಚೆಲುವಿನ ಚಿಲಿಪಿಲಿʼ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಕೆಲ ಸಿನಿಮಾಗಳಲ್ಲಿ ಅವರು ನಟಿಸಿದ್ದು, ಯಾವ ಚಿತ್ರವೂ ಅಷ್ಟು ಯಶಸ್ಸು ತಂದುಕೊಟ್ಟಿಲ್ಲ. ಸದ್ಯ ಅವರೀಗ ಧಾರಾವಾಹಿಯಲ್ಲಿ ನಟಿಸುತ್ತ, ಡ್ಯಾನ್ಸ್ ಅಕಾಡೆಮಿ ಕೂಡ ನಟಿಸುತ್ತಿದ್ದಾರೆ.